Asianet Suvarna News Asianet Suvarna News

ಕಂಕಣ ಸೂರ್ಯಗ್ರಹಣ: ಯಾವ ರಾಶಿಗೆ ಯಾವ ಫಲವಿದೆ?

ಗುರುವಾರ ಡಿಸೆಂಬರ್ 26, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ

Daily Astrology in Kannada 26 Dec 2019 Horoscope
Author
Bengaluru, First Published Dec 26, 2019, 7:20 AM IST
  • Facebook
  • Twitter
  • Whatsapp

ಮೇಷ: ಕೇಡು ಬಯಸಿದವರಿಗೂ ಒಳಿತನ್ನೇ ಬಯಸುವಿರಿ. ಆತ್ಮವಿಶ್ವಾಸ ನಿಮ್ಮ ಇಡೀ ದಿನವನ್ನು ಚೇತೋಹಾರಿಯನ್ನಾಗಿಸಲಿದೆ.

ವೃಷಭ: ಸಂದರ್ಭಕ್ಕೆ ತಕ್ಕಂತೆ ವರ್ತಿಸುವುದು ಜಾಣರ ಲಕ್ಷಣ. ಎಲ್ಲಾ ಕೆಲಸಗಳನ್ನೂ ಮೈ ಮೇಲೆ ಎಳೆದುಕೊಳ್ಳುವುದು ಬೇಡ. ಶುಭ ಫಲ.

ಮಿಥುನ: ಅತಿಯಾದ ಆತ್ಮವಿಶ್ವಾಸ ಕೊಂಚ ಹಿನ್ನಡೆಯನ್ನುಂಟು ಮಾಡಲಿದೆ. ಸ್ವಾರ್ಥಿಗಳ ನಡುವಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಕಟಕ: ಹಣಕಾಸಿನ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಗ್ರಹಗತಿಗಳು ಬದಲಾಗಲಿವೆ. ಆಹಾರದಲ್ಲಿ ಮಿತಿ ಇರಲಿ.

ಸಿಂಹ: ಸ್ವಾಮಿ ಕಾರ್ಯ ಸ್ವಕಾರ್ಯ ಎನ್ನುವಂತ ಕಾಯಕ ಮಾಡಿ. ಮಹಿಳೆಯರಿಗೆ ಇದು ಶುಭ ದಿನ. ಕೆಟ್ಟವರ ಸಹವಾಸದಿಂದ ದೂರವಿರಿ.

ಕನ್ಯಾ: ಹೊಸದನ್ನು ಕಲಿಯುವುದಕ್ಕೆ ಇದು ಸಕಾಲ. ಶುಭ ಕಾರ್ಯಗಳನ್ನು ಮುಂದೂಡಿ. ಆತ್ಮೀಯರಿಂದ ಆರ್ಥಿಕ ಸಹಕಾರ ದೊರೆಯಲಿದೆ.

ತುಲಾ: ತುಂಬಾ ಸಂತೋಷದಿಂದ ಇರುವ ದಿನ ಇದು. ಬಂಧುಗಳ ಆಗಮನವಾಗಲಿದೆ. ಅಳತೆ ಮೀರಿ ಯಾವುದಕ್ಕೂ ಹೆಚ್ಚು ಪ್ರಾಧಾನ್ಯತೆ ನೀಡದಿರಿ.

ಗ್ರಹಣ ಸಂಭವಿಸುವ ಈ ವಾರ ನಿಮ್ಮ ಭವಿಷ್ಯ ಹೇಗಿದೆ..?

ವೃಶ್ಚಿಕ: ಹುಚ್ಚರೊಂದಿಗೆ ವಾದ ಬೇಡ. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಒಂದು ಗೆಲುವು ಉತ್ಸಾಹವನ್ನು ಹೆಚ್ಚಿಸಲಿದೆ.

ಧನಸ್ಸು: ಒಂದೇ ವಿಚಾರದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾ ಕೂರುವುದು ಬೇಡ. ಉದ್ಯೋಗದಲ್ಲಿ ಪ್ರಗತಿ. ಕುಟುಂಬದಲ್ಲಿ ನೆಮ್ಮದಿ.

ಮಕರ: ನಿಮ್ಮ ಮೇಲೆ ಸಣ್ಣ ಪುಟ್ಟ ಆರೋಪಗಳು ಬರುವ ಸಾಧ್ಯತೆ ಇದೆ. ಅವೆಲ್ಲಕ್ಕೂ ನಿಮ್ಮ ಕೆಲಸದಿಂದಲೇ ಉತ್ತರ ನೀಡಿ. ಮೌನ ಇರಲಿ.

ಕುಂಭ: ಕಲಬೆರಕೆ ವಸ್ತುಗಳಿಂದ ದೂರ ಇರಿ. ಆರೋಗ್ಯದಲ್ಲಿ ಸ್ಥಿರತೆ. ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಲಿದೆ. ಗೆಲುವಾಗಲಿದೆ.

ಮೀನ: ಬಂಧುಗಳೊಂದಿಗೆ ಹಣಕಾಸಿನ ವ್ಯವಹಾರ ಬೇಡ. ಶುದ್ಧ ಮನಸ್ಸಿನಿಂದ ಮಾಡಿದ ಮೀನ ಕಾರ್ಯದಲ್ಲಿ ಜಯ ಸಿಗಲಿದೆ. ಶುಭ ಫಲ.

Follow Us:
Download App:
  • android
  • ios