ಮೇಷ: ಕಳೆದುಕೊಂಡ ವಸ್ತುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಪ್ರೀತಿಯಿಂದ ಕೆಲಸ ಮಾಡಿರಿ. ಶುಭ ವಾರ್ತೆ ತಿಳಿಯಲಿದೆ.

ವೃಷಭ: ನಿಮ್ಮ ಮಿತಿಯನ್ನು ಅರಿತುಕೊಂಡು ಹೊಸ ಕೆಲಸಕ್ಕೆ ಕೈ ಹಾಕಿ. ಸಂಜೆ ವೇಳೆಗೆ ಮನಸ್ಸು ಸ್ವಲ್ಪ ಹಗುರವಾಗಲಿದೆ. ಸ್ನೇಹದಲ್ಲಿ ಬಿರುಕು.

ಮಿಥುನ: ಎಲ್ಲರಿಂದಲೂ ಸಹಾಯದ ನಿರೀಕ್ಷೆ ಇಟ್ಟುಕೊಳ್ಳದಿರಿ. ಮಾತು ಮಿತಿಯಲ್ಲಿ ಇದ್ದರೆ ಕೆಲಸ ಹೆಚ್ಚಾಗುತ್ತದೆ. ತಾಳ್ಮೆ ಹೆಚ್ಚಲಿದೆ.

ಕಟಕ: ಇಂದಿನ ಕೆಲಸಗಳನ್ನು ನಾಳೆಗೆ ಮುಂದೂಡುವುದು ಬೇಡ. ಸಾಕಷ್ಟು ಸಮಯಾವಕಾಶ ಸಿಗಲಿದೆ. ಓದಿನಲ್ಲಿ ಆಸಕ್ತಿ ಹೆಚ್ಚಲಿದೆ.

ಸಿಂಹ: ದೂರದ ಬೆಟ್ಟ ಯಾವಾಗಲೂ ನುಣ್ಣಗೇ ಕಾಣುವುದು. ಪೂರ್ಣವಾಗಿ ಸತ್ಯ ತಿಳಿದುಕೊಂಡು ನಿರ್ಧಾರ ಕೈಗೊಳ್ಳಿ. ಒಳಿತಾಗಲಿದೆ.

ಗ್ರಹಣ ಸಂಭವಿಸುವ ಈ ವಾರ ನಿಮ್ಮ ಭವಿಷ್ಯ ಹೇಗಿದೆ..?

ಕನ್ಯಾ: ದಾರಿಯಲ್ಲಿ ಕಲ್ಲು ಮುಳ್ಳು ಸಹಜ. ಹಾಗೆಂದು ನಡೆಯುವುದನ್ನು ನಿಲ್ಲಿಸಬಾರದು. ಕಷ್ಟಗಳ ನಡುವೆಯೂ ಸಂತೋಷದಿಂದ ಇರುವಿರಿ.

ತುಲಾ: ಸಂಸಾರದಲ್ಲಿನ ಜಗಳಗಳು ಕೊನೆಯಾಗಲಿವೆ. ಮಕ್ಕಳೊಂದಿಗೆ ಸುತ್ತಾಟ ಹೆಚ್ಚಲಿದೆ. ಧಾರ್ಮಿಕ ಕಾರ್ಯಕ್ರಗಳಿಗೆ ಪೂರ್ವ ಸಿದ್ಧತೆ ಆರಂಭ.

ವೃಶ್ಚಿಕ: ದುಡುಕಿನ ನಿರ್ಧಾರದಿಂದ ಯಾವುದೇ ಲಾಭವಿಲ್ಲ. ಆತ್ಮೀಯರಿಂದ ಹೆಚ್ಚಿನ ನೆರವು ದೊರೆಯಲಿದೆ. ಆತ್ಮಾಭಿಮಾನ ಹೆಚ್ಚಲಿದೆ.

ಧನಸ್ಸು: ಧನಾಗಮನವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ.

ಮಕರ: ಸಹೋದರನ ಸಹಕಾರದಿಂದ ಕಿರು ಉದ್ಯಮ ಸ್ಥಾಪನೆ ಮಾಡುವಿರಿ. ನಂಬಿಕೆಯಿಂದ ಆತ್ಮ ಶಕ್ತಿ ಹೆಚ್ಚಲಿದೆ. ಖರ್ಚಿನಲ್ಲಿ ಹಿಡಿತವಿರಲಿ.

ಕುಂಭ: ನಿಮ್ಮ ಪಾಡಿಗೆ ನೀವು ಇದ್ದು ಬಿಡಿ. ನೆರಯವರ ಕಷ್ಟಕ್ಕೆ ನೆರವಾಗುವಿರಿ. ಇಡೀ ದಿನ ಉಲ್ಲಾಸದಿಂದ ಇರುವಿರಿ. ನೆಮ್ಮದಿ ಹೆಚ್ಚಲಿದೆ.

ಮೀನ: ಸ್ನೇಹಿತರಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ. ಮೇಲಾಧಿಕಾರಿಯಿಂದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯಲಿದೆ. ಶುಭಫಲ.