Asianet Suvarna News Asianet Suvarna News

ದಿನಾಂತ್ಯಕ್ಕೆ ಶುಭ ಸುದ್ದಿ : ಲಾಭವೂ ಉಂಟು

ಯಾವ ರಾಶಿಗೆ ಯಾವ ಫಲ, ಹೇಗಿದೆ ಗುರುವಾರದ ಭವಿಷ್ಯ

Daily Astrology in Kannada 23  Jan 2020 horoscope
Author
Bengaluru, First Published Jan 23, 2020, 7:11 AM IST
  • Facebook
  • Twitter
  • Whatsapp

ದಿನಾಂತ್ಯಕ್ಕೆ ಶುಭ ಸುದ್ದಿ : ಲಾಭವೂ ಉಂಟು 

ಮೇಷ
ಸ್ನೇಹಿತರ ಸಹಕಾರದಿಂದ ವ್ಯವಹಾರದಲ್ಲಿ
ಪ್ರಗತಿ ಸಾಧ್ಯವಾಗಲಿದೆ. ನಿಮ್ಮ ಬೆನ್ನನ್ನು
ನೀವೇ ತಟ್ಟಿಕೊಳ್ಳುವುದು ಬೇಡ. ತಾಳ್ಮೆ ಇರಲಿ.

ವೃಷಭ
ಪ್ರತಿಭೆಗೆ ತಕ್ಕ ಅವಕಾಶಗಳು ದೊರೆಯಲಿವೆ.
ಹೊಸ ಮನೆಯ ಕೆಲಸ ಕಾರ್ಯಗಳು ವೇಗ
ಪಡೆದುಕೊಳ್ಳಲಿವೆ. ಸಹಕಾರದ ಕೊರತೆ.

ಮಿಥುನ
ನಿಮ್ಮ ವಿರುದ್ಧದ ಆರೋಪಗಳಿಗೆ ತೆರೆ
ಬೀಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ
ಆಸಕ್ತಿ ಹೆಚ್ಚಾಗಲಿದೆ. ಪ್ರಯತ್ನ ಹೆಚ್ಚಲಿದೆ.

ಕಟಕ
ಮಹಿಳೆಯರ ಹೆಗಲ ಮೇಲೆ ಹೆಚ್ಚು
ಜವಾಬ್ದಾರಿಗಳು ಬೀಳಲಿವೆ. ವ್ಯವಹಾರದಲ್ಲಿ
ನಿರೀಕ್ಷಿತ ಪ್ರಗತಿ ಕಷ್ಟ. ಪರಿಶ್ರಮಕ್ಕೆ ತಕ್ಕ ಫಲ.

ಎಷ್ಟು ಓದಿದರೂ ಕೆಲವರಿಗೆ ತಲೆಗೆ ಹತ್ತೋಲ್ಲ, ಅವರ ಜಾತಕದಲ್ಲಿ ಈ ದೋಷವಿರುತ್ತೆ!..

ಸಿಂಹ
ಬೆಂಕಿ ಬಗ್ಗೆ ಎಚ್ಚರ ಇರಲಿ. ಮನಸ್ಸಲ್ಲಿ ಭಯ,
ಆತಂಕವಿದ್ದಲ್ಲಿ ಅದನ್ನು ಧ್ಯಾನದಿಂದ ಮಾತ್ರ
ದೂರಾಗಿಸಲು ಸಾಧ್ಯ. ಮಕ್ಕಳಿಗೆ ಶುಭದಿನ.

ಕನ್ಯಾ
ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡದಿರಿ. ಅತಿಯಾದ
ಸಿಟ್ಟಿನಿಂದ ಸಂಬಂಧದಲ್ಲಿ ಬಿರುಕು ಸಾಧ್ಯ.
ಆದಷ್ಟು ಸಂಗೀತ ಕೇಳಿ ನಿರಾಳರಾಗಿ.

ತುಲಾ 
ಹೊಗಳಿಕೆಯ ಮಾತುಗಳಿಗೆ ಕಿವಿಯಾಗಲಿದಿರಿ.
ನಿಮ್ಮ ಬುದ್ದಿ ನಿಮ್ಮ ಕೈಯಲ್ಲಿ ಇರಲಿ. ಕಿರಿಕಿರಿ
ಯಾದರೂ ದಿನಾಂತ್ಯಕ್ಕೆ ಶುಭ ಸುದ್ದಿ.

ವೃಶ್ಚಿಕ
ಕೆಲಸ ಕಾರ್ಯಗಳಲ್ಲಿ ಗಡಿಬಿಡಿ ಬೇಡ. ಎಲ್ಲಾ
ಕಾರ್ಯ ಸುಗಮವಾಗಿ ಆಗಲಿದೆ. ತಲೆಕೆಡಿಸಿ
ಕೊಂಡರೆ ಆರೋಗ್ಯದಲ್ಲಿ ಏರುಪೇರಾಗಲಿದೆ. 

ಧನುಸ್ಸು
ನಿಮ್ಮ ಜ್ಞಾಪಕ ಶಕ್ತಿಗೆ ಸಹೋದ್ಯೋಗಿಗಳಿಂದ
ಮೆಚ್ಚುಗೆ ದೊರೆಯಲಿದೆ. ಮುಖ್ಯವಾದ
ಕಾರ್ಯದ ನಾಯಕತ್ವ ವಹಿಸಲಿದ್ದೀರಿ.

ಮಕರ
ಮನುಷ್ಯನೂ ವಿಷ ಜಂತುವಿದ್ದಂತೆ. ಹಾಗಾಗಿ
ತಕ್ಷಣ ಯಾರನ್ನೂ ನಂಬದಿರುವುದು ಒಳಿತು.
ಮನೆಯಲ್ಲಿ ನೆಮ್ಮದಿ ಇರಲಿದೆ. ಶುಭಫಲ.

ಕುಂಭ
ಗೆಲುವು ನೀವು ಅಂದುಕೊಂಡಷ್ಟು ಸುಲಭಕ್ಕೆ
ಸಿಕ್ಕುವುದಿಲ್ಲ. ಎರಡು ಮನಸ್ಸು ಬೇಡ.
ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಿ. ಶಾಂತಿ ಇರಲಿ.

ಮೀನ 
ಇಷ್ಟು ದಿನ ನೀವು ಪ್ರಯತ್ನಿಸುತ್ತಿದ್ದ ವಿಷಯ
ದಲ್ಲಿ ಸಫಲರಾಗುವಿರಿ. ಮನೆಯವರಿಂದ
ಪ್ರಶಂಸೆಗೆ ಪಾತ್ರರಾಗುವಿರಿ. ತಾಳ್ಮೆ ಇರಲಿ.

Follow Us:
Download App:
  • android
  • ios