ಮೇಷ: ನಿಮ್ಮ ಆಲೋಚನೆಗೆ ತಕ್ಕಂತೆ ನಿರ್ಧಾರ ಕೈಗೊಳ್ಳಲಿದ್ದೀರಿ. ನಿರ್ಲಕ್ಷ್ಯಕ್ಕೆ ಒಳಗಾದಿರೆಂದು ಕುಗ್ಗದಿರಿ. ಸಕಾರಾತ್ಮಕ ಆಲೋಚನೆ ಇರಲಿ. 

ವೃಷಭ: ಮಣ್ಣನ್ನು ಚಿನ್ನ ಎಂದು ಭಾವಿಸುವ ನೀವು ಮಾಡಿದ ಕೆಲಸಗಳಲ್ಲಿ ಜಯ ಪಡೆಯುವಿರಿ. ಹಿತ ಶತ್ರುಗಳಿಂದಲೇ ಸಿಹಿ ಸುದ್ದಿ ಕೇಳುವಿರಿ.

ಮಿಥುನ: ಮಕ್ಕಳಲ್ಲಿ ಆರೋಗ್ಯದಲ್ಲಿ ವ್ಯತ್ಯಯ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ. ಸುತ್ತಲಿನವರ ಮುಖದಲ್ಲಿ ನಗು ಮೂಡಿಸಲಿದ್ದೀರಿ.

ಕಟಕ: ನಿಮ್ಮ ಆಸೆ ಹಾಗೂ ಕನಸುಗಳಿಗೆ ಸ್ನೇಹಿತರು ಜೊತೆಯಾಗಲಿದ್ದಾರೆ. ಮಹಿಳೆಯರ ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಮನೆಯಲ್ಲಿ ನೆಮ್ಮದಿ.

ಸಿಂಹ: ಮಾಡಿದ ಕೆಲಸದಲ್ಲಿ ಫಲಾಪೇಕ್ಷೆ ಬೇಡ. ಯಾವುದೇ ಪ್ರಶ್ನೆಗಳಿಗೂ ಉತ್ತರ ಹುಡುಕ ಬೇಡಿ. ಒಳ್ಳೆ ಸಮಯ ತಾನಾಗಿಯೇ ಬರಲಿದೆ.

ಕನ್ಯಾ: ಅಡ್ಡ ಕತ್ತರಿಯಲ್ಲಿ ಸಿಲುಕಿರುವ ನಿಮಗೆ ಮನೆಯವರಿಂದ ಸಹಕಾರ ದೊರಕಲಿದೆ. ಕಲಿಕೆಯಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಲಿದೆ.

ವಾರ ಭವಿಷ್ಯ: ಈ ಒಂದು ರಾಶಿಯವರ ಮನಸ್ಸಿಗೆ ಕಿರಿಕಿರಿ ಹೆಚ್ಚಿರುತ್ತೆ

ತುಲಾ: ಕುಟುಂಬದಲ್ಲಿನ ಮನಸ್ತಾಪ ನಿವಾರಣೆ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಕೈ ಸುಟ್ಟುಕೊಳ್ಳ ಬೇಡಿ. ಬಂಧುಗಳ ಆಗಮನ ಸಾಧ್ಯತೆ.

ವೃಶ್ಚಿಕ: ನಿಮ್ಮ ಸಂಗಾತಿ ಜೊತೆಗೆ ಮನಸ್ತಾಪ ಎದುರಾಗಬಹುದು. ಸಣ್ಣ ಗಾಯವನ್ನೂ ನಿರ್ಲಕ್ಷಿಸದಿರಿ. ಹುಮ್ಮಸ್ಸಿನಿಂದ ಕೆಲಸ ಮಾಡಲಿದ್ದೀರಿ.

ಧನಸ್ಸು: ಅನುಭವ ಹಾಗೂ ಕಠಿಣ ಶ್ರಮ ನಿಮ್ಮ ಕೈ ಹಿಡಿಯಲಿವೆ. ಶಾಂತಿಯುತ ವಾತಾವರಣಕ್ಕೆ ಹೋಗುವಿರಿ. ಎಚ್ಚರಿಕೆಯಿಂದ ಇರಿ.

ಮಕರ: ಬೆಣ್ಣೆಯ ಮಾತಿಗೆ ಕರಗದಿರಿ. ಅತಿಯಾದ ಒತ್ತಡದಿಂದ ಮನೆಯಲ್ಲಿ ಅಶಾಂತಿ. ಚಂಚಲ ಮನಸ್ಸು. ಆಲಸ್ಯ ಕೂಡಿದ ದಿನವಾಗಲಿದೆ.

ಕುಂಭ: ಕಣ್ಣಿನಲ್ಲೇ ಮಮತೆ ತೋರಿ ಸುತ್ತಲಿನವರ ಪ್ರೀತಿ ಗೆಲ್ಲುವಿರಿ. ನಿಮ್ಮ ಒಳ್ಳೆಯ ಗುಣಗಳೂ ಮೋಸದ ಕೂಪಕ್ಕೆ ದೂಡಬಹುದು, ಎಚ್ಚರ.

ಮೀನ: ಭಾವುಕತೆಗೆ ಒಳಗಾಗುವ ಸಾಧ್ಯತೆ ಇದೆ. ಮನಸ್ಸಿನಲ್ಲಿ ಕಿರಿಕಿರಿ ಎದುರಾಗಲಿದೆ. ಎದುರಾಗುವ ಸಮಸ್ಯೆಯನ್ನು ನಿಭಾಯಿಸುವಿರಿ.