ಮೇಷ: ಭವಿಷ್ಯದ ಕಾರ್ಯಗಳ ಬಗ್ಗೆ ಇಂದಿನಿಂದಲೇ ಚರ್ಚೆ ಆರಂಭವಾಗಲಿದೆ. ಕೆಲಸದಲ್ಲಿ ಪ್ರಗತಿ ಕಾಣಲಿದ್ದೀರಿ. ಯಾರೊಂದಿಗೂ ವಿರಸ ಬೇಡ.

ವೃಷಭ: ಸ್ನೇಹಿತರ ಕಷ್ಟವನ್ನು ನಿಮ್ಮದೇ ಕಷ್ಟ ಎಂದು ತಿಳಿದು ಪರಿಹಾರ ಒದಗಿಸುವಿರಿ. ಹಣಕಾಸಿನ ವಿಚಾರದಲ್ಲಿ ತುಸು ಹಿಡಿತ ಸಾಧಿಸಿಕೊಳ್ಳಿ.

ಮಿಥುನ: ಮಾತು ಮಿತವಾಗಿ, ಕೆಲಸ ಅತಿಯಾಗಿ ಇರಲಿ. ನಿಮ್ಮದಲ್ಲದ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಿ ಬರಬಹುದು. ಕಾಲವೇ ಉತ್ತರ ನೀಡಲಿ.

ಕಟಕ: ಒಳ್ಳೆಯ ಮನಸ್ಸಿನಿಂದ, ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಮಾಡಿದ ಕಾರ್ಯ ಒಳ್ಳೆಯ ಫಲವನ್ನೇ ನೀಡುತ್ತದೆ. ತಾಳ್ಮೆ ಇರಲಿ.

ಸಿಂಹ: ಅವಲಂಬನೆ ಕಡಿಮೆ ಮಾಡಿಕೊಳ್ಳಿ. ನಿಮ್ಮ ಶಕ್ತಿಗೆ ಇದು ಪರೀಕ್ಷೆಯ ಕಾಲ. ಗಣೇಶನ ಆರಾಧನೆ ಮಾಡಿ. ಶುಭ ಕಾರ್ಯಕ್ಕೆ ಕಾಯಿರಿ.

ವಾರ ಭವಿಷ್ಯ: ಈ ಒಂದು ರಾಶಿಯವರ ಮನಸ್ಸಿಗೆ ಕಿರಿಕಿರಿ ಹೆಚ್ಚಿರುತ್ತೆ

ಕನ್ಯಾ: ಗೊಂದಲಗಳು ಸಹಜ. ಆದರೆ ಅವುಗಳನ್ನೇ ದೊಡ್ಡದು ಮಾಡಿಕೊಳ್ಳುವುದು ಬೇಡ. ನಿಮ್ಮ ಪಾಡಿಗೆ ನೀವು ಮುಂದೆ ಸಾಗುತ್ತಿರಿ. ಶುಭಫಲ.

ತುಲಾ: ಸಂಕಷ್ಟದಿಂದ ಪಾರಾಗಲು ಸರಿಯಾದ ದಾರಿ ಆಯ್ಕೆ ಮಾಡಿಕೊಳ್ಳಿ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು.

ವೃಶ್ಚಿಕ: ಒತ್ತಡ ಸಹಜವಾಗಿಯೇ ಹೆಚ್ಚಿರಲಿದೆ. ಸಂಜೆಯ ವೇಳೆಗೆ ನಿಮ್ಮ ಕಾರ್ಯಕ್ಕೆ ಸೂಕ್ತ ಪ್ರತಿಫಲ ದೊರೆಯುವುದು. ಶುಭಫಲ.

ಧನಸ್ಸು: ಮೆಚ್ಚುಗೆಯ ಮಾತಿಗೆ ಮರುಳಾಗದಿರಿ. ಹುಚ್ಚು ಮನಸ್ಸಿನ ಆಲೋಚನೆಗಳಿಗೆ ನಿಯಂತ್ರಣ ಹೇರಿ. ಗೊಂದಲಗೊಳ್ಳುವುದು ಬೇಡ.

ಮಕರ: ಸ್ವಾಮಿ ಕಾರ್ಯ ಸ್ವಕಾರ್ಯವೆಂದು ತಿಳಿದು ಮಾಡಿ. ಪ್ರೀತಿಪಾತ್ರರು ಮುನಿಸಿಕೊಳ್ಳಲಿದ್ದಾರೆ. ನೋವುಗಳು ಮಾಯವಾಗಲಿವೆ.

ಕುಂಭ: ಬೆಟ್ಟ ಬಗೆದು ಇಲಿ ಹಿಡಿದಂತಹ ಪರಿಸ್ಥಿತಿ ನಿಮ್ಮದಾಗಲಿದೆ. ಪ್ರಾಮಾಣಿಕತೆ ಇರಲಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮೀನ: ಎಲ್ಲಾ ಕೆಲಸಗಳನ್ನೂ ನಿಮ್ಮ ತಲೆಯ ಮೇಲೆ ಎಳೆದುಕೊಳ್ಳುವುದು ಬೇಡ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಶುಭಫಲ.