Asianet Suvarna News Asianet Suvarna News

ಸಂಕ್ರಾಂತಿ ಹಬ್ಬದಂದು ಈ ರಾಶಿಯವರು ಖರ್ಚಿನಲ್ಲಿ ಮಿತಿ ಇದ್ದರೆ ಒಳಿತು

ಬುಧವಾರ, ಜನವರಿ 15 ಇಂದು ನಿಮ್ಮ ರಾಶಿಗಳ ಫಲಾ ಫಲ ಹೇಗಿದೆ..? 
 

Daily Astrology in Kannada 15 Jan 2020 Horoscope
Author
Bengaluru, First Published Jan 15, 2020, 7:06 AM IST

ಮೇಷ: ಪಾಲಿಗೆ ಬಂದುದ್ದರಲ್ಲಿ ತೃಪ್ತಿ ಹೊಂದುವ ಗುಣದಿಂದಲೇ ಆತ್ಮ ಸಂತೋಷ ಹೊಂದಲಿದ್ದೀರಿ. ಆಸೆಪಟ್ಟ ವಸ್ತು ಇಂದು ಕೈ ಸೇರಲಿದೆ.

ವೃಷಭ: ಮುಖ್ಯ ವಿಚಾರಗಳಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಸಹೋದರಿ ವಿಚಾರದಲ್ಲಿ ಆರ್ಥಿಕ ಸಹಾಯ ಮಾಡುವಿರಿ. ಶುಭ ಫಲ.

ಮಿಥುನ: ಆಪ್ತ ಸ್ನೇಹಿತರೊಂದಿಗೆ ಇಡೀ ದಿನ ಕಳೆಯಲಿದ್ದೀರಿ. ಮನೆಗೆ ಬಂಧು ಬಳಗದ ಆಗಮನವಾಗಲಿದೆ. ಈ ದಿನ ಸಂತೋಷವಾಗಿರುವಿರಿ.

ಕಟಕ: ಚಾಡಿ ಮಾತುಗಳಿಗೆ ಹೆಚ್ಚು ಕಿವಿಗೊಡುವುದು ಬೇಡ. ಸ್ವ ಅನುಭವಕ್ಕೆ ಬಂದ ವಿಚಾರಗಳ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿ. ಮೌನವಿರಲಿ.

ಒಂದು ರಾಶಿಗೆ ಲಾಭದೊಂದಿಗೆ ಒಳ್ಳೆಯ ವಿಚಾರ ಕಾದಿದೆ : ವಾರ ಭವಿಷ್ಯ

ಸಿಂಹ: ಸಂತಸಕ್ಕೆ ಕಾರಣಗಳು ಬೇಕು ಎಂದೇನಿಲ್ಲ. ನೀವು ಇರುವ ಜಾಗ ಲವಲವಿಕೆಯಿಂದ ಕೂಡಿರಲಿದೆ. ಸಾಮರಸ್ಯ ಹೆಚ್ಚಾಗಲಿ.

ಕನ್ಯಾ: ವಿದ್ಯಾರ್ಥಿಗಳ ಪಾಲಿಗೆ ಇದು ಶುಭ ದಿನ. ಇಡೀ ದಿನ ಮನೆಯಲ್ಲಿಯೇ ಕಳೆಯುವಿರಿ. ಮಹಿಳೆಯರ ಪಾಲಿಗೆ ಕೆಲಸ ಹೆಚ್ಚಲಿದೆ.

ತುಲಾ: ತಂದೆ ತಾಯಿಯ ಬೆಂಬಲ ನಿಮ್ಮಲ್ಲಿ ಆತ್ಮ ಶಕ್ತಿ ಹೆಚ್ಚಿಸಲಿದೆ. ದೂರದ ಊರುಗಳಿಗೆ ಕೆಲಸ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು.

ವೃಶ್ಚಿಕ: ಈ ಹಿಂದೆ ಅಂದುಕೊಂಡಿದ್ದ ಕಾರ್ಯಗಳು ಇಂದು ನೆರವೇರಲಿವೆ. ಹೆಚ್ಚು ಆದಾಯ ಬರಲಿದೆ. ಖರ್ಚಿನಲ್ಲಿ ಮಿತಿ ಇದ್ದರೆ ಒಳಿತು.

ಧನಸ್ಸು: ಸಣ್ಣ ಪುಟ್ಟ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದು ಬೇಡ. ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ.

ಮಕರ: ಪರೋಪಕಾರಕ್ಕೆ ಮುಂದಾಗುವಿರಿ. ಸಮಸ್ಯೆ ಮೂಲ ಅರಿತುಕೊಂಡು ಪರಿಹಾರ ಕಂಡುಕೊಳ್ಳಿ. ಸಂತೋಷ ಹೆಚ್ಚಾಗಲಿದೆ.

ಕುಂಭ: ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಮಾಡುವ ಕೆಲಸಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ನಿಮ್ಮ ಆಪ್ತರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮೀನ: ಕುಟುಂಬ ಸಮೇತ ಯಾತ್ರಾ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ಬಂದ ಕಷ್ಟವನ್ನು ನಗು ನಗುತ್ತಲೇ ಎದುರಿಸುವಿರಿ. ಶುಭಫಲವಿದೆ.

Follow Us:
Download App:
  • android
  • ios