ಮೇಷ: ಮಾತಿನ ಮೇಲೆ ನಿಗಾ ಇರಲಿ. ವಿವಾದಕ್ಕೆ ಸಿಲುಕುವ ಸಂಭವವಿದೆ. ಮಾತಿನಲ್ಲಿ ತೂಕವಿದ್ದರೆ ಕ್ಷೇಮ. ವಿನಾಕಾರಣ ಕೋಪ ಬೇಡ.

ವೃಷಭ: ಯಾರೋ ಕಳಿಸಿದ ಸಂದೇಶದಿಂದ ಆತಂಕ ಪಡದಿರಿ. ಅದು ನಿಮ್ಮನ್ನು ಕುರಿತಾಗಿದ್ದಲ್ಲ. ಅದರ ಬಗ್ಗೆ ಹೆಚ್ಚು ಯೋಚಿಸದೇ ಇದ್ದು ಬಿಡಿ.

ಮಿಥುನ: ಮಕ್ಕಳ ಮದುವೆಯ ಮಾತುಕತೆಗಳು ನಡೆಯಲಿವೆ. ಆತಂಕ ಪಡುವಂಥದ್ದೇನಿಲ್ಲ. ಹೊಸ ಸಂಬಂಧಗಳು ಕೂಡಿ ಬರಲಿದೆ.

ಕಟಕ: ಕಷ್ಟದ ದಿನಗಳೇ ಎಂದು ಇರದು ಎಂಬುದನ್ನುಅರಿಯಿರಿ. ಸಮರ್ಥವಾಗಿ ಎದುರಿಸುವವರಿಗೆ ಸವಾಲುಗಳು ಎದುರಾದಷ್ಟು ಒಳ್ಳೆಯದೆ.

ಒಂದು ರಾಶಿಗೆ ಶುಭದೊಂದಿಗೆ ಲಾಭ : ಉಳಿದ ರಾಶಿಯ ವಾರ ಭವಿಷ್ಯ

ಸಿಂಹ: ಆಸ್ತಿಯ ವಿವಾದಗಳು ಸುಲಭವಾಗಿ ಬಗೆಹರಿಯುವುದಿಲ್ಲ. ನಿರ್ಧಾರಗಳು ಖಚಿತವಾಗಿರಲಿ. ಸತ್ಯಕ್ಕೆ ಮೊದಲ ಆದ್ಯತೆ ನೀಡಿರಿ. 

ಕನ್ಯಾ: ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳಿ. ಮುನಿಸಿನಿಂದ ಏನೂ ಮಾಡಲು ಆಗುವುದಿಲ್ಲ. ಕಾರ್ಯ ಸಿದ್ಧಿಗಾಗಿ ಕಠಿಣ ಶ್ರಮ ಬೇಕಾಗುತ್ತದೆ.

ತುಲಾ: ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಾಗಿದೆ.ಅದರಿಂದ ನಿಮ್ಮ ಮನಃಶಾಂತಿಗೆ ಧಕ್ಕೆಯೂ ಬರಬಹುದು. ಹಾಗಾಗಿ ಧ್ಯಾನಾಸಕ್ತರಾಗಿ.

ವೃಶ್ಚಿಕ: ಪ್ರೀತಿಪಾತ್ರರ ಜೊತೆ ವಿವಾದಗಳಿಗೆ ಅವಕಾಶ ನೀಡದಿರಿ. ಅವರನ್ನು ಗೌರವದಿಂದ ಕಾಣಿರಿ.ಚಿಕ್ಕವರೊಂದಿಗೂ ಪ್ರೀತಿ-ಪ್ರೇಮಗಳಿದಿಂದಿರಿ.

ಧನಸ್ಸು: ಸಣ್ಣಪುಟ್ಟ ಕೆಲಸ ಮಾಡುವ ವರಿಗೂ ದೊಡ್ಡ ಹೆಸರು ಬರುವ ದಿನವಿದು. ನಿಮ್ಮ ಕಾರ್ಯ ದಕ್ಷತೆಯೆ ನಿಮಗೆ ಶ್ರೀರಕ್ಷೆ. ಶುಭಫಲವಿದೆ.

ಮಕರ: ದುಡ್ಡು-ಕಾಸಿನ ವಿಷಯದಲ್ಲಿ ತುಂಬಾನೇಶಿಸ್ತುಬದ್ಧವಾಗಿರುವುದು ಒಳಿತು. ಜುಗ್ಗ ಆಗದಿರಿ. ಅವಶ್ಯವಿದ್ದಲ್ಲಿ ಖರ್ಚು ಮಾಡಿರಿ.

ಕುಂಭ: ಮನೆಯಲ್ಲಿ ಕಲಹ-ವಿರಸಗಳು ಕಡಿಮೆ ಆಗುವ ದಿನಗಳು ಹತ್ತಿರದಲ್ಲೇ ಇವೆ. ನಿಮ್ಮ ಬಂಧು ಬಾಂಧವರ ಸಹಕಾರವೂ ಸಿಗಲಿದೆ.

ಮೀನ: ವಾಸ್ತು ದೋಷದ ಬಗ್ಗೆ ಹೆಚ್ಚು ಚಿಂತೆ ಬೇಡ. ಸುಖಾಸುಮ್ಮನೆ ಖರ್ಚು ಮಾಡಬೇಡಿ. ಸಾಧ್ಯ ಆದಲ್ಲಿ ಒಂದಿಷ್ಟು ಜನರಿಗೆ ಒಳಿತು ಮಾಡಿರಿ.