ಒಳ್ಳೆಯ ದಿನ : ಭರ್ಜರಿ ಹಣದ ಲಾಭ : ರಾಶಿಗಳ ಫಲಾ ಫಲ

ಮೇಷ
ಅತಿಯಾದ ಉತ್ಸಾಹ ಒಳ್ಳೆಯದಲ್ಲ. ನಿಮ್ಮ
ಬಗ್ಗೆ ನಿಮಗೆ ವಿಶ್ವಾಸ ಇದ್ದರೆ ಮಿಕ್ಕವರ
ಮೇಲೂ ವಿಶ್ವಾಸ ಬೆಳೆಯುತ್ತದೆ. ಶುಭಫಲ.

ವೃಷಭ
ಇಲ್ಲಿಯವರೆಗೂ ಇದ್ದ ಜಲಕಂಟಕ ದೂರ
ವಾಗಲಿದೆ. ಶುಭ ಕಾರ್ಯಕ್ಕೆ ಮುಂದಡಿ
ಇಡುವಿರಿ. ಆತ್ಮೀಯರೊಂದಿಗೆ ಮಾತುಕತೆ.

ಮಿಥುನ
ಮನಸ್ಸು ನಿಯಂತ್ರಣದಲ್ಲಿ ಇರಲಿದೆ.
ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವುದು
ಬೇಡ. ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧ್ಯ.

ಕಟಕ
ದೊಡ್ಡ ಮಟ್ಟದ ವ್ಯವಹಾರಕ್ಕೆ ಕೈ ಹಾಕಿ ನಷ್ಟ
ಮಾಡಿಕೊಳ್ಳುವುದು ಬೇಡ. ನಿಮ್ಮ ಮಿತಿ
ಯನ್ನು ಅರಿತುಕೊಂಡು ಮುಂದೆ ಸಾಗಿ.

ಸಿಂಹ
ಕಾಲ ಎಲ್ಲದಕ್ಕೂ ಸರಿಯಾದ ಉತ್ತರವನ್ನೇ
ಕೊಡುತ್ತದೆ. ನೀವು ಮೌನವಾಗಿ ಇರುವುದು
ಲೇಸು. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಿದು

ಸುಖ, ಸಂಪತ್ತಿಗೆ ದಾರಿ ಮಾಡಿ ಕೊಡೋ ಹೆಬ್ಗಾಗಿಲ ವಾಸ್ತು ಟಿಪ್ಸ್...

ಕನ್ಯಾ
ದೇವಿಯ ಆರಾಧನೆ ಮಾಡಿರಿ. ಶುಭಕಾರ್ಯ
ಕ್ಕೆ ಅವಸರ ಬೇಡ. ಸಹೋದ್ಯೋಗಿಗಳೊಂದಿಗೆ
ಉತ್ತಮ ಬಾಂಧವ್ಯ ಇಟ್ಟುಕೊಳ್ಳಿರಿ. ಶುಭಫಲ.

ತುಲಾ 
ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ.
ಅದರಿಂದ ನಿಮಗೆ ಆರ್ಥಿಕ ಲಾಭವೂ ಆಗ
ಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ.

ವೃಶ್ಚಿಕ
ಇರುವ ಸೌಲಭ್ಯಗಳನ್ನು ಸರಿಯಾಗಿ ಬಳಕೆ
ಮಾಡಿಕೊಳ್ಳಿ. ಸಮಯ ವ್ಯರ್ಥ ಮಾಡುವುದು
ಬೇಡ. ಕಾಯಕದಲ್ಲಿ ಏಕಾಗ್ರತೆ ಹೆಚ್ಚಾಗಲಿದೆ. 

ಧನುಸ್ಸು
ಒಪ್ಪಿಕೊಂಡ ಕಾರ್ಯಗಳನ್ನು ಕಾಲಮಿತಿ
ಯೊಳಗೆ ಮಾಡಿ ಮುಗಿಸಿ. ಸಹೋದರನಿಂದ
ಆರ್ಥಿಕ ಸಹಕಾರ. ನೆಮ್ಮದಿ ಹೆಚ್ಚಾಗಲಿದೆ.

ಮಕರ
ಪರ ನಿಂದನೆ ಬೇಡ. ನಿಮ್ಮ ಪಾಡಿಗೆ ನೀವು
ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ
ದೊರೆಯುತ್ತದೆ. ಮಹಿಳೆಯರಿಗೆ ಶುಭಫಲ.

ಕುಂಭ
ಹಳೆಯ ಸ್ನೇಹಿತರ ಸಂಪರ್ಕ ಮತ್ತೆ ಏರ್ಪಡ
ಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ
ಇರಲಿ. ಆರೋಗ್ಯದಲ್ಲಿ ತುಸು ಏರುಪೇರು.

ಮೀನ 
ಕಷ್ಟ ಎಂದು ಬಳಿ ಬಂದವರಿಗೆ ಸಾಧ್ಯವಾದಷ್ಟು
ಸಹಾಯ ಮಾಡಿರಿ. ಸಂಬಂಧಗಳು ಕೆಡದಂತೆ
ನೋಡಿಕೊಳ್ಳಿ. ಎಲ್ಲರೊಂದಿಗೂ ಬೆರೆಯಿರಿ.