ಮೇಷ: ಆತ್ಮ ತೃಪ್ತಿಗಾಗಿಯೂ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಪರ ಹಿತಕ್ಕಾಗಿ ಹೆಚ್ಚು ಸಮಯ ಮೀಸಲಿಡುವಿರಿ. ಶುಭ ಫಲ.

ವೃಷಭ: ಸ್ವ ಪ್ರಶಂಸೆ ಬೇಡ. ಹೊಸ ಉತ್ಸಾಹ ದಿಂದ ಕೆಲಸ ಕೈಗೊಳ್ಳಲಿದ್ದೀರಿ. ಸಾಧ್ಯವಾದಷ್ಟೂ ಶಾಂತವಾಗಿರಿ. ಶುಭಫಲ ದೊರೆಯಲಿದೆ.

ಮಿಥುನ: ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಅಗತ್ಯವಿದ್ದವರಿಗೆ ನಿಮ್ಮಿಂದ ಸಹಕಾರ ದೊರೆಯಲಿದೆ. ಸಂತೋಷ ಹೆಚ್ಚಾಗಲಿದೆ.

ಕಟಕ: ನಿಮಗೊಪ್ಪಿಸಿದ ಕೆಲಸಗಳಲ್ಲಿ ಪೂರ್ಣತೆ ಸಾಧಿಸುವಿರಿ. ಎಲ್ಲರನ್ನೂ ಮೆಚ್ಚಿಸಿ ಬದುಕಲು ಮುಂದಾಗಬೇಡಿ. ಆತುರ ಬೇಡ.

ಸಿಂಹ: ಯಾವುದೇ ಕೆಲಸ ಮಾಡುವಾಗ ಆತುರ ಬೇಡ. ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಒಳ್ಳೆಯ ಪ್ರತಿಫಲ ದೊರೆಯಲಿದೆ.

ಕನ್ಯಾ: ಮತ್ತೊಬ್ಬರ ತಪ್ಪುಗಳ ಬಗ್ಗೆಯೇ ಹೆಚ್ಚು ಆರೋಪಿಸುವುದು ಬೇಡ. ನಿಮಗೆ ಸರಿ ಎನ್ನಿಸಿದ ದಾರಿಯಲ್ಲಿ ನೀವು ಸಾಗುತ್ತಿರಿ.

ಒಂದು ರಾಶಿಗೆ ಶುಭದೊಂದಿಗೆ ಲಾಭ : ಉಳಿದ ರಾಶಿಯ ವಾರ ಭವಿಷ್ಯ

ತುಲಾ: ನಿಮ್ಮಿಂದ ಮತ್ತೊಬ್ಬರಿಗೆ ನೋವಾಗದ ರೀತಿ ನಡೆದುಕೊಳ್ಳಿ. ಹೆಚ್ಚು ಮಾತನಾಡುವುದು ಬೇಡ. ನಿಮಗಿಷ್ಟವಿಲ್ಲದ ಕೆಲಸಕ್ಕೆ ಕೈ ಹಾಕಬೇಡಿ.

ವೃಶ್ಚಿಕ: ಪರಹಿತಕ್ಕಾಗಿ ದುಡಿಯುವಿರಿ. ಅದರಲ್ಲಿಯೇ ನಿಮ್ಮ ಹಿತವೂ ಅಡಗಿದೆ. ಕನಿಷ್ಠ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡು ಕೂರುವುದು ಬೇಡ.

ಧನಸ್ಸು: ಸಣ್ಣ ವಿಚಾರಗಳಿಗೂ ಹೆಚ್ಚು ಮಹತ್ವ ನೀಡಿ. ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದು ಬೇಡ. ದಿನ ಸುಂದರವಾಗಿರಲಿದೆ.

ಮಕರ: ಸಹೋದ್ಯೋಗಿಗಳಿಂದ ಆರ್ಥಿಕ ಸಹಾಯ ದೊರೆಯಲಿದೆ. ಅತಿಯಾದ ಖರ್ಚುಗಳಿಂದ ದೂರವಿರಿ. ಮಕ್ಕಳ ಆರೋಗ್ಯ ವೃದ್ಧಿ.

ಕುಂಭ: ಅಸಾಧ್ಯವೆಂದು ಸುಮ್ಮನೆ ಕೂರುವುದಕ್ಕೆ ಬದಲು ಸಾಧ್ಯವೆಂದು ಮುಂದೆ ಸಾಗಿ. ಅಲ್ಲಿಗೆ ನೀವಂದುಕೊಂಡ ಅರ್ಧ ಕೆಲಸವಾಗುತ್ತದೆ.

ಮೀನ: ನೀವು ಮಾಡಿದ ಕೆಲಸಕ್ಕೆ ಇಂದು ಸರಿಯಾದ ಪ್ರತಿಫಲ ದೊರೆಯಲಿದೆ. ನೀವಾಡುವ ಮಾತಿನಿಂದಲೇ ನಿಮ್ಮ ವ್ಯಕ್ತಿತ್ವ ಬೆಳೆಯಲಿದೆ.