Asianet Suvarna News Asianet Suvarna News

ಒಂದು ರಾಶಿಗೆ ಒಳ್ಳೆಯ ಲಾಭ, ಇನ್ನೊಂದಕ್ಕೆ ಹಣ ಒದಗಲಿದೆ : ಉಳಿದ ರಾಶಿ?

ಹೊಸ ವರ್ಷದ ಎರಡನೇ ದಿನವಾದ ಇಂದು ನಿಮ್ಮ ರಾಶಿಗಳ ಫಲಾ ಫಲ ಹೇಗಿರಲಿದೆ.? 

Daily Astrology in Kannada 02 Jan 2019 horoscope
Author
Bengaluru, First Published Jan 2, 2020, 7:11 AM IST

ಒಂದು ರಾಶಿಗೆ ಒಳ್ಳೆಯ ಲಾಭ, ಇನ್ನೊಂದಕ್ಕೆ ಹಣ ಒದಗಲಿದೆ : ಉಳಿದ ರಾಶಿ? 

ಮೇಷ
ನಿಮ್ಮ ಪತ್ನಿಯ ಸಹಕಾರದಿಂದ ಕಷ್ಟ ಕಾಲಕ್ಕೆ
ಎಂದು ಕೂಡಿಟ್ಟ ಹಣವು ಈಗ ಉಪಯೋಗಕ್ಕೆ
ಬರಲಿದೆ. ವೃಥಾ ಖರ್ಚು ಒಳ್ಳೆಯದಲ್ಲ.

ವೃಷಭ
ಪುಟ್ಟ ಹೊಟೇಲ್ ವ್ಯಾಪಾರಿಗಳಿಗೆ ಈ ಕಾಲ
ಉತ್ತಮವಾಗಿವೆ. ಉದ್ದಿಮೆಯಲ್ಲಿ ಹೆಚ್ಚಿನ
ಲಾಭ ಸಿಗಲಿದೆ. ರೈತರಿಗೂ ಆದಾಯವಿದೆ.

ಮಿಥುನ
ಸ್ವಉದ್ಯೋಗದವರಿಗೆ ಉತ್ತಮ ಆದಾಯ.
ವಾಹನಗಳ ವ್ಯಾಪಾರಿಗಳಿಗೂ ಒಳ್ಳೆಯ ಲಾಭ.
ಸರಕಾರಿ ಹಣವು ನಿಮ್ಮ ಖಾತೆಗೆ ಸೇರಲಿದೆ.

ಕಟಕ
ಕೃಷಿಕರು ಯೋಚಿಸಿ ನಿರ್ಧಾರಗಳನ್ನು ತೆಗೆದು
ಕೊಂಡರೆ ಒಳಿತು. ಒಳ್ಳೆಯ ದಿನಗಳು ಆದಷ್ಟು
ಬೇಗ ಬರಲಿವೆ. ತಾಳ್ಮೆಯಿಂದ ಕಾಯಬೇಕಷ್ಟೆ.

2020 ರ ನ್ಯೂಮರಾಲಜಿ; ನಿಮ್ಮ ಸಂಖ್ಯೆ ಯಾವುದು? ಹೀಗೆ ತಿಳಿಯಿರಿ!...

ಸಿಂಹ
ಇಂದಿನ ಸಮಯ ಅನುಕೂಲಕರವಾಗಿದೆ.
ಸಹಾಯಗಳು ತಂತಾನೇ ಒದಗಿ ಬರಲಿವೆ.
ಆರೋಗ್ಯದತ್ತ ಗಮನಹರಿಸುವುದು ಸೂಕ್ತ.

ಕನ್ಯಾ
ಗೆಳೆಯನ ಒಂದು ಸಣ್ಣ ಮಾತು ನಿಮ್ಮ
ಜೀವನದಲ್ಲಿ ಹೊಸ ಹುರುಪನ್ನು ತರಲಿದೆ.
ಸುಳ್ಳು ಆರೋಪಗಳಿಗೂ ಒಳಗಾಗುವಿರಿ.

ತುಲಾ 
ಸಣ್ಣ-ಪುಟ್ಟ ಕರಕುಶಲ ಕೆಲಸ ಮಾಡುವ
ವರಿಗೂ ದೊಡ್ಡ ಹೆಸರು ಬರುವ ದಿನವಿದು.
ನಿಮ್ಮ ಕಾರ್ಯದಕ್ಷತೆಯೇ ನಿಮಗೆ ಶ್ರೀರಕ್ಷೆ.

ವೃಶ್ಚಿಕ
ವಾಸ್ತು ದೋಷದ ಬಗ್ಗೆ ಹೆಚ್ಚು ಚಿಂತೆ ಬೇಡ.
ಸುಖಾಸುಮ್ಮನೆ ಖರ್ಚು ಮಾಡಬೇಡಿ. ಸಾಧ್ಯ
ವಾದಲ್ಲಿ ಒಂದಿಷ್ಟು ಜನರಿಗೆ ಒಳಿತು ಮಾಡಿರಿ. 

ಧನುಸ್ಸು
ಸುಖವೆಂದರೇನೆಂದು ತಿಳಿಯುವ ದಿನಗಳಿವು.
ನಿಮಗೇ ಗೊತ್ತಿಲ್ಲದೆಯೇ ನಿಮಗಾಗಿ ಎಲ್ಲಾ
ದಾರಿಗಳು ತಂತಾನೆ ತೆರೆದುಕೊಳ್ಳುವ ದಿನ.

ಮಕರ
ಪ್ರೀತಿಪಾತ್ರರ ಜೊತೆ ವಿವಾದಗಳಿಗೆ ಅವಕಾಶ
ನೀಡದಿರಿ. ಅವರನ್ನು ಗೌರವದಿಂದ ಕಾಣಿರಿ.
ಚಿಕ್ಕವರೊಂದಿಗೂ ಪ್ರೀತಿ-ಪ್ರೇಮಗಳಿಂದಿರಿ.

ಕುಂಭ
ಪ್ರಯಾಣವಿದೆ. ಹೊಸ ಸ್ಥಳಗಳಿಗೆ ಭೇಟಿ.
ಪ್ರಮುಖರೊಡನೆ ಮಾತುಕತೆ ನಡೆಸಲಿದ್ದೀರಿ.
ವ್ಯವಹಾರದಲ್ಲಿ ಪ್ರಗತಿ ಕಾಣುವ ದಿನವಿದು.

ಮೀನ 
ಜಮೀನಿನ ವ್ಯಾಜ್ಯಗಳು ಸರಿಯಾಗಲಿವೆ.
ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಬಂಧು
ಗಳೊಂದಿಗೆ ವ್ಯವಹಾರ ಬೇಡ. ಶುಭಫಲ.

Follow Us:
Download App:
  • android
  • ios