ವಾಸ್ತು ದೋಷವೂ ಕೆಲಸ ಸಿಗದಿರುವಂತೆ ಮಾಡುತ್ತದೆ. ನೀವು ಕೆಲಸ ಸಿಗಲಿಲ್ಲ ಎಂದು ತಲೆಕೆಡಿಸಿಕೊಳ್ಳುವ ಬದಲು ವಾಸ್ತು ಟಿಪ್ಸ್ ಪಾಲಿಸಿದರೆ ಬೇಗ ಕೆಲಸ ದೊರೆಯುತ್ತದೆ. 

ಕಾಲೇಜು ಮುಗಿಸಿದ ನಂತರ ಎಲ್ಲೆಡೆ ಕೆಲಸ ಹುಡುಕಿ ಹುಡುಕಿ ಸೋತು ಹೋಗಿದ್ದೀರಾ? ಈ ಬಗ್ಗೆ ಯೋಚನೆ ಬೇಡ. ಖಂಡಿತಾ ಉತ್ತಮ ಕೆಲಸ ಸಿಗುತ್ತದೆ. ಆದರೆ ಆದಕ್ಕಾಗಿ ನೀವು ಕೆಲವೊಂದಿಷ್ಟು ಕೆಲಸ ಮಾಡಬೇಕು. ಅದನ್ನು ಮಾಡಿದರೆ ಮಾತ್ರ ನೀವು ಅಂದುಕೊಂಡ ಕೆಲಸ ಸಿಗಲು ಸಾಧ್ಯ.  ಈ ವಾಸ್ತು ಟಿಪ್ಸ್ ಪಾಲಿಸಿ ನೋಡಿ, ಯಶಶ್ಸು ಕಟ್ಟಿಟ್ಟ ಬುತ್ತಿ... 

- ಪ್ರತಿದಿನ ಏಳು ರೀತಿಯ ಧಾನ್ಯ ಮಿಕ್ಸ್ ಮಾಡಿ ಪಕ್ಷಿಗಳಿ ತಿನಿಸಿ. ಜೊತೆಗೆ ಸ್ನಾನದ ನಂತರ ಗಣೇಶನ ದರ್ಶನ ಮಾಡುವುದರಿಂದ ಬೇಗ ಕೆಲಸ ಸಿಗುತ್ತದೆ. 
- ತಿಂಗಳ ಮೊದಲ ಸೋಮವಾರ ಬಿಳಿ ಬಟ್ಟೆಯಲ್ಲಿ ಅಕ್ಕಿಯನ್ನು ಕಟ್ಟಿ ಕಾಳಿ ದೇವಿಗೆ ಅರ್ಪಿಸಿ. ಇದರಿಂದ ನೌಕರಿ ಸಮಸ್ಯೆ ನಿವಾರಣೆಯಾಗುತ್ತದೆ. 
- ಇಂಟೆರ್‌ವ್ಯೂಗೆ ಹೋಗೋ ಸಮಯದಲ್ಲಿ ಹನುಮಾನ್ ಚಾಲೀಸ್ ಪಠಿಸಿ. ಇದು ಇಂಟೆರ್‌ವ್ಯೂ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. 
- ಇಷ್ಟ ಪಟ್ಟ ಕೆಲಸ ಸಿಗಲು ಅಥವಾ ಪ್ರಮೋಷನ್ ಸಿಗಲು ಶನಿವಾರ ಶನಿ ದೇವನ ದರ್ಶನ ಮಾಡಿ. ಮತ್ತು ಓಂ ಶನೈಶ್ಚರಾಯ ನಮಃ ಎಂದು 108 ಬಾರಿ ಪಠಿಸಿ. 
- ಶಿವಲಿಂಗಕ್ಕೆ ಪ್ರತಿದಿನ ಕ್ಷೀರಾಭಿಷೇಕ ಮಾಡಿ. 
- ಕೆಲಸದ ಹುಡುಕಾಟದಲ್ಲಿ ನೀವಿದ್ದರೆ ಸುಮೇರು ಪರ್ವತವನ್ನು ಕೈಯಲ್ಲಿ ಹಿಡಿದಿರುವ ಹನುಮಂತನ ಫೋಟೋವನ್ನು ದಿನಾಲೂ ಪೂಜಿಸಿ. 
- ಇಂಟರ್‌ವ್ಯೂಗೆ ಹೋಗುವಾಗ ಓಂ ಮಂತ್ರ ಪಠಿಸುತ್ತಿದ್ದರೆ, ಮನಸ್ಸಿನಲ್ಲಿ ನಕಾರಾತ್ಮಕ ಅಂಶಗಳು ನಿವಾರಣೆಯಾಗಿ ಪಾಸಿಟಿವ್ ಆಗಿ ಯೋಚನೆ ಮಾಡುವ ಶಕ್ತಿ ಬರುತ್ತದೆ.
- ಇಂಟರ್‌ವ್ಯೂ ದಿನ ಬೆಳಗ್ಗೆ ಸ್ನಾನ ಮಾಡುವ ನೀರಿಗೆ ಅರಿಶಿನ ಮಿಕ್ಸ್ ಮಾಡಿ ಸ್ನಾನ ಮಾಡಿ, ಸ್ವಲ್ಪ ನೀರು ಹಾಗೆ ಬಿಡಿ.  ಇಂಟರ್ ವ್ಯೂ ಹೋಗಿ ಬಂದು ಆ ನೀರನ್ನು ಚೆಲ್ಲಿ , ನಂತರ ದೇವರನ್ನು ಪ್ರಾರ್ಥಿಸಿ. 
- ಗೋ ಮಾತೆಗೆ ಬೆಲ್ಲ ಮತ್ತು ಗೋಧಿಯಿಂದ ಮಾಡಿದ ತಿಂಡಿ ನೀಡಿದರೆ  ಇಂಟರ್‌ವ್ಯೂ ಚೆನ್ನಾಗಿ ಆಗುತ್ತದೆ. 

ಉದ್ಯೋಗ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ