ಮನೆಯಲ್ಲಿ ಸಂತೋಷ ಮತ್ತು ಶಕ್ತಿ ತುಂಬಿರಬೇಕು. ವಾಸ್ತುವಿನಲ್ಲಿ ಬಣ್ಣಕ್ಕೆ ಹೆಚ್ಚಿನ ಮಹತ್ವವಿದ್ದು, ಯಾವ ರೂಮಿನಲ್ಲಿ ಯಾವ ಬಣ್ಣ ಇದ್ದರೆೊಳಿತು?

ಕೆಂಪು: ಬೋಲ್ಡ್ ಮತ್ತು ಬ್ಯುಟಿಫುಲ್ ಬಣ್ಣವಾದ ಕೆಂಪು ಪ್ರೇಮ, ಉತ್ಸಾಹ ಮತ್ತು ಸಾಹಸದ ಸಂಕೇತ. ಈ ಬಣ್ಣವನ್ನು ಬೆಡ್‌ರೂಮಿನಲ್ಲಿ ಬಳಸಿದರೊಳಿತು. ಕೆಂಪು ಬಣ್ಣದ ದಿಂಬು, ಬೆಡ್ ಕವರ್ ಮತ್ತು ಶೋ ಪೀಸ್ ಇಡಿ. ಈ ಬಣ್ಣ ವ್ಯಕ್ತಿಗಳನ್ನು ತಮ್ಮೆಡೆಗೆ ಬೇಗ ಸೆಳೆಯುತ್ತದೆ. ಜೊತೆಗೆ ಸ್ಪೂರ್ತಿ ತುಂಬುತ್ತದೆ. 

ಕೇಸರಿ ಬಣ್ಣ: ಖುಷಿ, ಆಶಾವಾದಿ, ಸಫಲತೆಯ ಸಂಕೇತ ಕೇಸರಿ. ಯಾವ ಜಾಗದಲ್ಲಿ ಕ್ರಿಯೇಟಿವ್ ಮತ್ತು ಎನರ್ಜಿಟಿಕ್ ಕೆಲಸ ಮಾಡುತ್ತೀರೋ, ಆ ಜಾಗದಲ್ಲಿ ಕೇಸರಿ ಬಣ್ಣ ಹಚ್ಚಿ. ಡೈನಿಂಗ್ ಏರಿಯಾದಲ್ಲಿ ಕೇಸರಿ ಬಣ್ಣದ ವಸ್ತುಗಳನ್ನಿಡಿ. 

ಹಳದಿ: ಇದು ವ್ಯಕ್ತಿಯ ರಚನಾತ್ಮಕ ಕ್ಷಮತೆ, ಜ್ಞಾನ, ವಿದ್ಯೆ, ಆತ್ಮವಿಶ್ವಾಸ, ಬುದ್ಧಿವಂತಿಕೆ, ಭಯ ಮತ್ತು ನಿರಾಸೆಯಂಥ ಗುಣ ದೋಷವನ್ನು ನಿಯಂತ್ರಿಸುತ್ತದೆ. ಹಳದಿ ಬಣ್ಣದ ವಸ್ತು ಡೈನಿಂಗ್ ಟೇಬಲ್ ಮೇಲಿಡಿ. 

ಹಸಿರು: ಸ್ಫೂರ್ತಿ ಮತ್ತು ಸಮೃದ್ಧಿಯ ಸಂಕೇತ ಹಸಿರು. ಪ್ರಕೃತಿ ಮತ್ತು ಅಧ್ಯಾತ್ಮದ ಬಣ್ಣವಿದು. ಸಮತೋಲನದ ಬಣ್ಣವೂ ಹೌದು. ಇದು ಮನಸ್ಸಿನ ಸಮತೋಲನ  ಕಾಪಾಡುತ್ತದೆ. ಎಲ್ಲಾ ರೂಮ್ ಜೊತೆ ಲಿವಿಂಗ್ ರೂಮ್‌ನಲ್ಲೂ ಹಸಿರು ಬಣ್ಣವಿರಲಿ. 

ನೀಲಿ: ಶಕ್ತಿ, ಬುದ್ಧಿವಂತಿಕೆ, ಗೌರವ, ನಮ್ರತೆ, ಶಾಂತಿಯ ಸಂಕೇತ ನೀಲಿ. ಮನೆಯಲ್ಲಿ ನೆಮ್ಮದಿ ನೆಲೆಸುವಂತೆ ಮಾಡುವುದಲ್ಲದೇ, ಖಿನ್ನತೆಯನ್ನೂ ದೂರ ಮಾಡುವ ಶಕ್ತಿ ಈ ಬಣ್ಣಕ್ಕಿದೆ. 

ಸಂತೋಷ ಸಮೃದ್ಧಿಗೆ ಪೂಜಾ ಗೃಹಕ್ಕೆ ವಾಸ್ತು ಟಿಪ್ಸ್...