ಮನೆಯಲ್ಲಿ ಪೂಜಾ ಕೋಣೆ ಮುಖ್ಯವಾದದ್ದು. ಇಲ್ಲಿ ಬೇರೆ ಬೇರೆ ದೇವರ ಮೂರ್ತಿಯನ್ನಿಟ್ಟು ಪೂಜಿಸುತ್ತಾರೆ. ದೇವರ ಪೂಜೆ ಮಾಡಿದರೆ ಅರೋಗ್ಯ, ಐಶ್ವರ್ಯ ಮತ್ತು ಅಭಿವೃದ್ಧಿ ಉಂಟಾಗುತ್ತದೆ. ಆದರೆ ಇವೆಲ್ಲವೂ ಸರಿಯಾಗಿರಬೇಕು ಎಂದರೆ ಮನೆಯಲ್ಲಿನ ದೇವರ ಕೋಣೆ ಸರಿಯಾದ ಸ್ಥಾನದಲ್ಲಿ ಇರಬೇಕು. 

  • ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಪೂಜಾ ಗೃಹ ಇರಬೇಕು. ಬಹು ಮಹಡಿ ಮನೆ ನಿಮ್ಮದಾಗಿದ್ದರೆ ಪೂಜಾ ಗೃಹ ಕೆಳಗಿನ ಮಹಡಿಯಲ್ಲೇ ಇರಬೇಕು. 
  • ಯಾವತ್ತೂ ಕಿಚನ್ ಅಥವಾ ಬಾತ್ ರೂಮನ್ನು ಪೂಜಾ ಗೃಹಕ್ಕೆ ಅಂಟಿಕೊಂಡಂತೆ ನಿರ್ಮಿಸಬೇಡಿ. 
  • ಮನೆಯಲ್ಲಿ ಬೇರೆ ಜಾಗವಿಲ್ಲದಿದ್ದರೆ ಬೆಡ್ ರೂಮಿನಲ್ಲಿ ಪೂಜಾ ಗೃಹ ನಿರ್ಮಿಸಬಹುದು. ಆದರೆ ನಿಮ್ಮ ಕಾಲು ಆ ಜಾಗಕ್ಕೆ ಮುಖ ಮಾಡಿ ಇರದಂತೆ ನೋಡಿಕೊಳ್ಳಿ. 
  • ದೇವರ ಕೋಣೆಯಲ್ಲಿ ದೇವರ ಮೂರ್ತಿಯನ್ನಿಡುವಾಗ ಎರಡು ಫೋಟೋಗಳ ನಡುವೆ ಅಂತರ ಇರುವಂತೆ ನೋಡಿಕೊಳ್ಳಿ. ಜೊತೆಗೆ ರೂಮ್ ಸ್ವಚ್ಛವಾಗಿರಲಿ. 
  • ಪೂಜಾ ಗೃಹದಲ್ಲಿ ಯಾವತ್ತೂ ಕಪ್ಪು ಅಥವಾ ಹಸಿರು ಬಣ್ಣದ ಪೈಂಟ್ ಹಾಕಬೇಡಿ. ಬದಲಾಗಿ ಕಲರ್ ಮಾರ್ಬಲ್ ಬಳಸಿ. 

ಈ ದೇವಿ ವಿಗ್ರಹವಿದ್ದರೆ ಮನೆಯಲ್ಲಿದೆ ಸಮೃದ್ಧಿ....