Published : Aug 20, 2026, 07:25 AM ISTUpdated : Aug 20, 2026, 11:33 PM IST

Karnataka News Live: ಸೆಲ್ಫ್ ಮೇಡ್ ಶೆಹಜಾದ ಯಶ್ - ‘ಟಾಕ್ಸಿಕ್’ ನೋಡೋ ಮುನ್ನ ಈ ವಿಷಯ ತಿಳಿದುಕೊಳ್ಳಿ!

ಸಾರಾಂಶ

ಮಹರ್ಷಿ ವಾಲ್ಮೀಕಿ ನಿಗಮದಡಿ ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣದಲ್ಲಿ ಸಚಿವ ನಾಗೇಂದ್ರ ಅವರು ₹187 ಕೋಟಿ ಹಗರಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಇಂತಹ ಪ್ರಕರಣದ ಆರೋಪಿಯನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಧೋರಣೆಗೆ ಸಾಕ್ಷಿಯಾಗಿದೆ. ಸಚಿವ ಬಿ.ನಾಗೇಂದ್ರ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಆಗ್ರಹಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಿಜೆಪಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ರಾಜೀನಾಮೆ ಕೊಡುವವರೆಗೂ ಧರಣಿ ಮುಂದುವರೆಸುವುದಾಗಿ ವಿಪಕ್ಷ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ನಿವಾಸ ಸೇರಿ ರಾಜ್ಯಾದ್ಯಂತ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ಇದೀಗ ಶಿವಶಂಕರಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಹಲವು ಸತ್ಯಾಂಶಗಳು ಹೊರಬೀಳುವ ಸಾಧ್ಯತೆಗಳಿವೆ.

11:33 PM (IST) Aug 20

ಸೆಲ್ಫ್ ಮೇಡ್ ಶೆಹಜಾದ ಯಶ್ - ‘ಟಾಕ್ಸಿಕ್’ ನೋಡೋ ಮುನ್ನ ಈ ವಿಷಯ ತಿಳಿದುಕೊಳ್ಳಿ!

ಯಶ್ ಅವರನ್ನು ಯಾಕೆ ನಿರ್ದೇಶನಕ್ಕೆ ಆರಿಸಿಕೊಂಡರು ಅನ್ನುವುದಷ್ಟೇ ಆ ಹೊತ್ತಿನ ಕುತೂಹಲ. ಸಿನಿಮಾ ತಡವಾಗುತ್ತಿದ್ದಂತೆ ಊಹಾಪೋಹಗಳು ಕೇಳಿಬಂದವು. ಯಶ್ ಇಡೀ ಸಿನಿಮಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

Read Full Story

11:18 PM (IST) Aug 20

Mobile - ಕೊಂಡುಕೊಳ್ಳೋ ಮುನ್ನ ಈ 5 ವಿಷಯ ಗೊತ್ತಿರಲಿ! ಇಲ್ಲವಾದ್ರೆ ದೊಡ್ಡ ನಷ್ಟ ಖಚಿತ? ಶಾಕ್ ಕೊಡಲಿದೆ ಈ ಮಾಹಿತಿ

ನವೀಕರಿಸಿದ (Refurbished) ಫೋನ್‌ಗಳು ಕಡಿಮೆ ಬೆಲೆಯಲ್ಲಿ ಉತ್ತಮ ಆಯ್ಕೆಯಾಗಿದ್ದು, ಇವು ಸಾಮಾನ್ಯ ಸೆಕೆಂಡ್ ಹ್ಯಾಂಡ್ ಫೋನ್‌ಗಳಿಗಿಂತ ಭಿನ್ನವಾಗಿವೆ. ಇವುಗಳನ್ನು ಖರೀದಿಸುವಾಗ ವಿಶ್ವಾಸಾರ್ಹ ಮಾರಾಟಗಾರ, ಫೋನ್‌ನ ಸ್ಥಿತಿ, ಬ್ಯಾಟರಿ ಆರೋಗ್ಯ ಮತ್ತು ವಾರಂಟಿಯಂತಹ ಪ್ರಮುಖ ಅಂಶಗಳನ್ನು ಪರಿಶೀಲಿಸುವುದು ಅತ್ಯಗತ್ಯ.
Read Full Story

10:50 PM (IST) Aug 20

ಹಸು ಕಟ್ಟುವ ವಿಚಾರಕ್ಕೆ ಅಪ್ಪನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ದುಷ್ಟರು.. ಹೆದರಿದ ಅಪ್ರಾಪ್ತ ಪುತ್ರ, ದುರಂತ ಅಂತ್ಯ

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿಂಗಾರಿಪುರದಲ್ಲಿ ಹಸು ಕಟ್ಟುವ ವಿಚಾರದ ಗಲಾಟೆಗೆ ಹೆದರಿ ನಾಗೇಂದ್ರ ಎಂಬ ಅಪ್ರಾಪ್ತ ಬಾಲಕ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..

Read Full Story

10:46 PM (IST) Aug 20

‘ಟಾಕ್ಸಿಕ್’ ಸ್ವಾಗತಕ್ಕೆ ಹೇಗಿದೆ ಸಿದ್ಧತೆ? ಯಶ್ ಕಟೌಟ್‌ಗಳು ಹೇಳುತ್ತಿವೆ ರಾಕಿಂಗ್ ಸ್ಟಾರ್ ಕ್ರೇಜ್‌ನ ಕಥೆ!

Yash Cutouts: ‘ಟಾಕ್ಸಿಕ್’ ಸ್ವಾಗತಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲೂ ಚಿತ್ರತಂಡ ಹಾಗೂ ಅಭಿಮಾನಿಗಳಿಂದ ಭರ್ಜರಿ ತಯಾರಿ ನಡೆಯುತ್ತಿದೆ.

Read Full Story

10:04 PM (IST) Aug 20

Cricket - ಟೀಮ್ ಇಂಡಿಯಾದಲ್ಲಿ ಏಕಾಏಕಿ ದೊಡ್ಡ ಬದಲಾವಣೆ! ಸ್ಟಾರ್‌ ಪ್ಲೇಯರ್‌ ಔಟ್? 2ನೇ ಟೆಸ್ಟ್‌ಗೆ ಭಾರತದ ಸರ್ಪ್ರೈಸ್ 'ಪ್ಲೇಯಿಂಗ್ 11

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಗೆದ್ದರೂ, ಭಾರತ ತಂಡವು ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಆಡುವ XI ನಲ್ಲಿ ಬದಲಾವಣೆ ಮಾಡಲು ಯೋಜಿಸುತ್ತಿದೆ. ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಆಲ್‌ರೌಂಡರ್ ಸರಾನ್ಶ್ ಜೈನ್ ಚೊಚ್ಚಲ ಪ್ರವೇಶ ಮಾಡುವ ಸಾಧ್ಯತೆಯಿದ್ದು, ಧ್ರುವ್ ಜುರೆಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
Read Full Story

09:43 PM (IST) Aug 20

ಶ್ರೀರಂಗನಾಥನಿಗೆ ಬಂಗಾರದ ಕಳಸ ನೀಡಿದ TVS ಉದ್ಯಮಿ.. ಅಷ್ಟಲಕ್ಷ್ಮಿ ಕತೆಯುಳ್ಳ ಗಿಫ್ಟ್ ಸಮರ್ಪಣೆ

ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇಗುಲಕ್ಕೆ ಟಿವಿಎಸ್ ಕಂಪನಿ ಎಂಡಿ ವೇಣು ಶ್ರೀನಿವಾಸನ್ ಅವರು 66 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ತೂಕದ ಚಿನ್ನದ ಅಷ್ಟಲಕ್ಷ್ಮಿ ಕಳಶವನ್ನು ಕಾಣಿಕೆಯಾಗಿ ನೀಡಿದ್ದಾರೆ. ಪಂಚರಂಗ ಕ್ಷೇತ್ರಗಳಲ್ಲಿ ಮೊದಲನೆಯದಾದ 'ಆದಿ ರಂಗ' ಖ್ಯಾತಿಯ ಈ ಪುರಾತನ ದೇಗುಲಕ್ಕೆ ಉದ್ಯಮಿ ನೀಡಿದ ಕೊಡುಗೆಯು ಭಕ್ತರ ಶ್ಲಾಘನೆಗೆ ಪಾತ್ರವಾಗಿದೆ.

Read Full Story

09:27 PM (IST) Aug 20

ಸುದೀಪ್‌ ಹಾಡಿದ ಶಾರುಖ್‌ ಹಾಡು ಕೇಳಿದ್ರಾ? ಮದುವೆ ಸಮಾರಂಭದಲ್ಲಿ ಕಿಚ್ಚನ ಮ್ಯೂಸಿಕಲ್‌ ಟ್ರೀಟ್‌

Kichcha Sudeep Viral Video: ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಂದ್ರೆ ಬರೀ ಅಭಿನಯ ಮಾತ್ರವಲ್ಲ, ಅವರ ಸ್ಟೈಲ್‌, ಸ್ಟೇಜ್‌ ಪ್ರೆಸೆನ್ಸ್‌ ಹಾಗೂ ಸಂಗೀತದ ಮೇಲಿನ ಆಸಕ್ತಿಗೂ ಪ್ರತ್ಯೇಕ ಅಭಿಮಾನಿ ಬಳಗವಿದೆ.

Read Full Story

08:51 PM (IST) Aug 20

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಂದಿನ ಸಿನಿಮಾಗೆ ಹೊಸ ಟ್ವಿಸ್ಟ್ - ‘ತತ್ಸಮ ತದ್ಭವ’ ನಿರ್ದೇಶಕನ ಜೊತೆ ಮಾತುಕತೆ!

Dhruva Sarja New Movie: ‘ತತ್ಸಮ ತದ್ಭವ’ ಸಿನಿಮಾ ಮೂಲಕ ನಿರ್ದೇಶಕರಾಗಿ ಗಮನ ಸೆಳೆದ ವಿಷಾಲ್‌ ಆತ್ರೇಯ ಹಾಗೂ ಧ್ರುವ ಸರ್ಜಾ ಹೊಸ ಸಿನಿಮಾಗಾಗಿ ಕೈಜೋಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Read Full Story

08:30 PM (IST) Aug 20

ಫ್ರೀ ಆದಾಗ ತಿಳಿಸು, ಜೊತೆಯಲ್ಲಿ ಕಳೆಯೋಣ ಎಂದು ಕಿಸ್‌ ಕೊಟ್ಟ - ವಿದ್ಯಾರ್ಥಿನಿ ಜೊತೆ ಮನೆ ಮಾಲೀಕ ಪೋಲಿ ಆಟ

ಬೆಂಗಳೂರಲ್ಲಿ ಯಾರನ್ನ ನಂಬಬೇಕು? ನಂಬಬಾರದು ಎಂಬುದೇ ಗೊತ್ತಾಗಲ್ಲ. 20 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಮನೆ ಮಾಲೀಕನ ಕೆಟ್ಟ ಕಣ್ಣು ಬಿದ್ದು ಏನೆಲ್ಲ ಆಗೋಯ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

08:14 PM (IST) Aug 20

ಸ್ಟಾರ್‌ ನಟಿಯಾಗಿದ್ದರೂ ಹಣ-ಖ್ಯಾತಿಗಿಂತ ಇದಕ್ಕೆ ಹೆಚ್ಚು ಬೆಲೆ ಕೊಡ್ತಾರಂತೆ ಶ್ರೀಲೀಲಾ - ಕಾರಣವೇನು?

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತಮ್ಮ ನೃತ್ಯ ಮತ್ತು ಅಭಿನಯದ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ಶ್ರೀಲೀಲಾ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Read Full Story

07:54 PM (IST) Aug 20

ಅಯ್ಯೋ! ಇಷ್ಟೊಂದು ಸುಲಭವಾಗಿ ಇಲಿಗಳನ್ನು ಮನೆಯಿಂದ ಓಡಿಸಬಹುದಾ? ಇಷ್ಟು ದಿನ ಇಷ್ಟೆಲ್ಲಾ ಕಷ್ಟಪಟ್ಟಿದ್ದೇಕೆ!

ಮಳೆಗಾಲದಲ್ಲಿ ಮನೆಗೆ ಇಲಿಗಳ ಕಾಟ ಹೆಚ್ಚಾಗುತ್ತಿದೆಯೇ? ಪುದೀನಾ, ಬೆಳ್ಳುಳ್ಳಿ, ಲವಂಗ ಸೇರಿದಂತೆ ಕೆಲವು ನೈಸರ್ಗಿಕ ಮನೆಮದ್ದುಗಳ ಬಗ್ಗೆ ತಿಳಿಯಿರಿ. ಜೊತೆಗೆ ಇಲಿಗಳ ಕಾಟ ತಪ್ಪಿಸಲು ಸುರಕ್ಷಿತ ಕ್ರಮಗಳನ್ನೂ ನೋಡಿ.

Read Full Story

07:34 PM (IST) Aug 20

ಸಮಾಜ ಸೇವೆ ಹೆಸರಲ್ಲಿ ಮಹಿಳೆಗೆ ಲೈಂ*ಕ ಕಿರುಕುಳ ಆರೋಪ; ಪ್ರಜಾ ಪ್ರಬುದ್ಧ ವೇದಿಕೆ ಸಂಸ್ಥಾಪಕ ಅರೆಸ್ಟ್

ಜಮೀನು ವಿವಾದ ಬಗೆಹರಿಸಿಕೊಡುವುದಾಗಿ ನಂಬಿಸಿ ಮಹಿಳೆಯಿಂದ ಹಣ, ಬಂಗಾರ ಪಡೆದು ಲೈಂ*ಕ ಕಿರುಕುಳ ನೀಡಿದ್ದ ಹೋರಾಟಗಾರ ಶ್ರೀನಾಥ್‌ನನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.

Read Full Story

07:04 PM (IST) Aug 20

ಒಂದು ರೂಪಾಯಿ ಖರ್ಚಿಲ್ಲದೆ ಬಾತ್‌ರೂಮ್‌ ವಾಸನೆ, ಜಿರಳೆ ಕಾಟ ತಪ್ಪಿಸಬಹುದು? ಈ ಟಿಪ್ಸ್‌ ತಿಳಿಯಿರಿ!

ಮನೆಯ ಡ್ರೈನೇಜ್ ದುರ್ವಾಸನೆ ಮತ್ತು ಕಿಚನ್‌ನ ಜಿರಳೆ ಸಮಸ್ಯೆಗೆ ಎಕ್ಸ್‌ಪೈರ್ ಆದ ಮಾತ್ರೆ ಬಳಸುವ ವೈರಲ್ ಟಿಪ್ಸ್‌ ಬಗ್ಗೆ ಎಚ್ಚರ. ಡ್ರೈನೇಜ್ ಸ್ವಚ್ಛತೆ, ಕಿಚನ್ ಹೈಜೀನ್ ಹಾಗೂ ಸುರಕ್ಷಿತ ಪೆಸ್ಟ್ ಕಂಟ್ರೋಲ್ ವಿಧಾನಗಳ ಬಗ್ಗೆ ತಿಳಿಯಿರಿ.

Read Full Story

06:57 PM (IST) Aug 20

KEA - 141 ಓಎಂಆರ್‌ ನಾಪತ್ತೆಗೆ ಹೊಣೆ ಯಾರು? ಕೆಇಎನಾ ಅಥವಾ ವಿದ್ಯಾರ್ಥಿಗಳಾ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್

ವಿಜಯಪುರದ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ, ಪ್ರಶ್ನೆಪತ್ರಿಕೆ ಮತ್ತು ಓಎಂಆರ್ ಶೀಟ್ ಸರಣಿ ಸಂಖ್ಯೆ ತಾಳೆಯಾಗದ ಕಾರಣ ಗೊಂದಲ ಸೃಷ್ಟಿಯಾಗಿತ್ತು. ಕೆಇಎಯ ಹೊಸ ನಿಯಮದ ಬಗ್ಗೆ ಮಾಹಿತಿ ಕೊರತೆಯಿಂದ ಆತಂಕಗೊಂಡ 141 ಅಭ್ಯರ್ಥಿಗಳು ತಮ್ಮ ಓಎಂಆರ್ ಶೀಟ್‌ಗಳೊಂದಿಗೆ ಪರೀಕ್ಷಾ ಕೇಂದ್ರದಿಂದ ಹೊರನಡೆದಿದ್ದು, ಈ ಘಟನೆಗೆ ಯಾರು ಹೊಣೆ ಎಂಬುದನ್ನು ಈ ವರದಿ ವಿಶ್ಲೇಷಿಸುತ್ತದೆ.
Read Full Story

06:33 PM (IST) Aug 20

ಅಪ್ಪ-ಅಮ್ಮನ ನಡುವೆ ಹಾಯಾಗಿ ನಿದ್ರಿಸಿದ ವಿಜಯ್ ದೇವರಕೊಂಡ - ಫೋಟೋ ತೆಗೆದಿದ್ದು ಮಾತ್ರ ಸ್ಪೆಷಲ್ ವ್ಯಕ್ತಿ!

ವಿಜಯ್ ದೇವರಕೊಂಡ ಅಪ್ಪ-ಅಮ್ಮನ ನಡುವೆ ನೆಮ್ಮದಿಯಾಗಿ ನಿದ್ರಿಸುತ್ತಿರುವ ಕ್ಯೂಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಸ್ಪೆಷಲ್ ವ್ಯಕ್ತಿ ಕ್ಲಿಕ್ ಮಾಡಿದ್ದಾರೆ.

Read Full Story

06:20 PM (IST) Aug 20

ರನ್‌ಟೈಮ್‌ ಉದ್ದವಾದ್ರೆ ಏನಂತೆ? - ‘ಪುಷ್ಪ 2’, ‘ಅನಿಮಲ್’ ಬಳಿಕ ‘ಟಾಕ್ಸಿಕ್’ ಮೇಲೆ ಭಾರೀ ನಿರೀಕ್ಷೆ

ಯಶ್‌ ಅಭಿನಯದ ‘ಟಾಕ್ಸಿಕ್’ ಸಿನಿಮಾ 3 ಗಂಟೆಗೂ ಹೆಚ್ಚು ರನ್‌ಟೈಮ್‌ನೊಂದಿಗೆ ಬರಲಿದೆ ಎಂಬ ಚರ್ಚೆ ಶುರುವಾಗಿದೆ. ‘ಪುಷ್ಪ 2’, ‘ಅನಿಮಲ್’, ‘ಧುರಂಧರ್’ ಬಳಿಕ ಲಾಂಗ್ ರನ್‌ಟೈಮ್‌ ಸಿನಿಮಾಗಳ ಟ್ರೆಂಡ್‌ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

06:13 PM (IST) Aug 20

ಸತ್ತವನು ಬದುಕಿ ಬಂದ! 11 ವರ್ಷಗಳ ನಂತರ ಸಿಕ್ಕಿಬಿದ್ದಿದ್ದು ಹೇಗೆ? 'ದೃಶ್ಯಂ' ಮೀರುಸುವಂತಿದೆ ಕೋಲಾರದ ಈ ಕತೆ

ಸಾಲ ತೀರಿಸಲು ಸ್ಮಶಾನದ ಹೆಣವನ್ನು ಸುಟ್ಟು ತನ್ನದೇ ಸಾವಿನ ನಾಟಕವಾಡಿದ್ದ ಕೋಲಾರದ ಅರುಣ್ ರೆಡ್ಡಿ, 11 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆಧಾರ್ ಕಾರ್ಡ್ ಸುಳಿವು ಮತ್ತು ಪೊಲೀಸರ ಚಾಣಾಕ್ಷತನದಿಂದಾಗಿ 'ದೃಶ್ಯಂ' ಶೈಲಿಯ ನಾಟಕ ಬಯಲಾಗಿದ್ದು, ಆರೋಪಿ ಈಗ ಜೈಲು ಪಾಲಾಗಿದ್ದಾನೆ.

Read Full Story

06:00 PM (IST) Aug 20

ಕೊಡಗಿನಲ್ಲಿ ಆನೆ ಹಾವಳಿ ತೀವ್ರ - ವಿರಾಜಪೇಟೆ ಭಾಗದಲ್ಲಿ ಬಂದ್‌ಗೆ ರೈತ-ಕಾರ್ಮಿಕ ಸಂಘಟನೆಗಳ ಕರೆ

ಕೊಡಗಿನಲ್ಲಿ ಮಾನವ-ಆನೆ ಸಂಘರ್ಷ ತೀವ್ರಗೊಂಡಿದ್ದು, ಆನೆ ದಾಳಿ ನಿಯಂತ್ರಣಕ್ಕೆ ವೈಜ್ಞಾನಿಕ ಯೋಜನೆ ಆಗ್ರಹಿಸಿ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಸೇರಿದಂತೆ ಹಲವೆಡೆ ಬಂದ್‌ಗೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.

Read Full Story

05:43 PM (IST) Aug 20

‘ಸರ್ಕಲ್‌ಗೆ ಎರಡು ಸೈಡ್‌’ ಎಂದಿದ್ದಕ್ಕೆ ಭಾರೀ ಟ್ರೋಲ್ - ‘ನಾನು ಕ್ಯಾರೇ ಎನ್ನಲ್ಲ’ ಎಂದ ವಿನಯ್‌ ಗೌಡ!

ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ‘ಸರ್ಕಲ್‌ಗೆ ಎಷ್ಟು ಸೈಡ್ಸ್‌?’ ಎಂಬ ಪ್ರಶ್ನೆಗೆ ವಿನಯ್‌ ಗೌಡ ನೀಡಿದ್ದ ಉತ್ತರ ವೈರಲ್ ಆಗಿತ್ತು. ಟ್ರೋಲ್‌ಗಳ ಬೆನ್ನಲ್ಲೇ ಜೋರ್ಡನ್ ಕರ್ವ್ ಸಿದ್ಧಾಂತ ಉಲ್ಲೇಖಿಸಿ ನಟ ಸ್ಪಷ್ಟನೆ ನೀಡಿದ್ದಾರೆ.

Read Full Story

05:35 PM (IST) Aug 20

Viral - ಸತ್ತ ಸಂಬಂಧಿ ಕನಸಿನಲ್ಲಿ ಬಂದು ಮಾತನಾಡಿದ್ರೆ ಏನರ್ಥ? ಅದೃಷ್ಟದ ಸಂಕೇತನಾ ಅಥವಾ ಅಪಾಯದ ಎಚ್ಚರಿಕೆಯಾ?

ಕನಸಿನಲ್ಲಿ ಸತ್ತವರು ಕಾಣಿಸಿಕೊಂಡರೆ ಭಯಪಡುವುದು ಸಾಮಾನ್ಯ, ಆದರೆ ಇದು ಯಾವಾಗಲೂ ಅಶುಭ ಸಂಕೇತವಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕನಸುಗಳು ಜೀವನದಲ್ಲಿ ಬರಲಿರುವ ಬದಲಾವಣೆಗಳನ್ನು ಸೂಚಿಸುತ್ತವೆ. ಸತ್ತವರು ನಗುತ್ತಾ, ಅಳುತ್ತಾ ಅಥವಾ ಮಾತನಾಡುತ್ತಾ ಕಾಣಿಸಿಕೊಳ್ಳುವುದರ ಹಿಂದೆ ಬೇರೆ ಬೇರೆ ಅರ್ಥಗಳಿವೆ.

Read Full Story

05:14 PM (IST) Aug 20

ತೀರಾ ಮಂದಗತಿಯಲ್ಲಿ ಕಾಮಗಾರಿ, ಜೂನ್‌ 2027ಕ್ಕೂ ಹೆಬ್ಬಾಳ-ಏರ್‌ಪೋರ್ಟ್‌ ಮೆಟ್ರೋ ಲಿಂಕ್‌ ಅನುಮಾನ!

ಹೆಬ್ಬಾಳ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ನಮ್ಮ ಮೆಟ್ರೋ ಸಂಪರ್ಕವು ನಿಧಾನಗತಿಯ ಕಾಮಗಾರಿಯಿಂದಾಗಿ 2027ರ ಜೂನ್ ಗಡುವು ತಪ್ಪುವ ಸಾಧ್ಯತೆಯಿದೆ. ಗುತ್ತಿಗೆದಾರ ಸಂಸ್ಥೆಯು ಮೂರನೇ ಬಾರಿಗೆ ಗಡುವು ವಿಸ್ತರಣೆ ಕೋರಿದೆ.

Read Full Story

05:11 PM (IST) Aug 20

ರಿಷಿಕಾ ಟೀಕೆಗೆ ತಂದೆಯ ತಿರುಗೇಟು - ಯಶ್‌ ‘ಕೊಹಿನೂರ್ ವಜ್ರ’ ಎಂದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

‘ಟಾಕ್ಸಿಕ್’ ಸಿನಿಮಾ ಕುರಿತು ರಿಷಿಕಾ ಸಿಂಗ್ ಟೀಕಿಸಿದ ಬೆನ್ನಲ್ಲೇ ತಂದೆ ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯಿಸಿದ್ದಾರೆ. ಯಶ್‌ ಅವರನ್ನು ಕನ್ನಡ ಚಿತ್ರರಂಗದ ‘ಕೊಹಿನೂರ್ ವಜ್ರ’ ಎಂದು ಹೊಗಳಿರುವ ಅವರು, ಮಗಳ ಅಭಿಪ್ರಾಯ ವೈಯಕ್ತಿಕ ಎಂದಿದ್ದಾರೆ.

Read Full Story

04:57 PM (IST) Aug 20

EPFO ಅಪ್‌ಡೇಟ್! ಬಂತು ನ್ಯೂ ಕ್ಯಾಲ್ಕುಲೇಟರ್‌, ನಿವೃತ್ತಿ ವೇಳೆಗೆ ಎಷ್ಟು PF, ಪಿಂಚಣಿ ಹಣ ಸಿಗಲಿದೆ? ಕ್ಷಣಾರ್ಧದಲ್ಲಿ ನೀವೇ ಲೆಕ್ಕ ಹಾಕಿ!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಪಾಸ್‌ಬುಕ್ ಪೋರ್ಟಲ್‌ನಲ್ಲಿ 'ನಿವೃತ್ತಿ ಕ್ಯಾಲ್ಕುಲೇಟರ್' ಎಂಬ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಇದರ ಮೂಲಕ ಉದ್ಯೋಗಿಗಳು ತಮ್ಮ ನಿವೃತ್ತಿಯ ಸಮಯದಲ್ಲಿ ಸಿಗಬಹುದಾದ ಪಿಎಫ್ ಮೊತ್ತ ಮತ್ತು ಮಾಸಿಕ ಪಿಂಚಣಿಯನ್ನು ಸುಲಭವಾಗಿ ಅಂದಾಜು ಮಾಡಬಹುದು. ಈ ಲೆಕ್ಕಾಚಾರವು ಬಡ್ಡಿದರ, ವೇತನ ಹೆಚ್ಚಳ ಮತ್ತು ಸೇವಾ ಅವಧಿಯಂತಹ ಅಂಶಗಳನ್ನು ಅವಲಂಬಿಸಿರುತ್ತದೆ.
Read Full Story

04:42 PM (IST) Aug 20

‘ರಾಮಾಯಣ’ದಲ್ಲಿ ರಾವಣನ ಗರ್ಜನೆ ಯಾರದ್ದು? ಯಶ್ ವಾಯ್ಸ್ ಬಗ್ಗೆ ಪ್ರಜ್ವಲ್ ದೇವರಾಜ್ ಕೊಟ್ರು ಸ್ಪಷ್ಟನೆ!

Yash Ravana Voice: ‘ರಾಮಾಯಣ’ ಟ್ರೇಲರ್‌ನಲ್ಲಿ ರಾವಣನಾಗಿ ಯಶ್ ಅವರ ಗಂಭೀರ ಧ್ವನಿ ಕೇಳಿಬಂದಿತ್ತು. ಈ ಧ್ವನಿ ದೇವರಾಜ್ ಅವರದ್ದು ಎಂಬ ವದಂತಿಗೆ ಪ್ರಜ್ವಲ್ ದೇವರಾಜ್ ಸ್ಪಷ್ಟನೆ ನೀಡಿದ್ದಾರೆ.

Read Full Story

04:29 PM (IST) Aug 20

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಂಚಲನಕಾರಿ ಸಂಶೋಧನೆ.. 'ಹೊಸ ವ್ಯಾಕ್ಸಿನ್'ನಿಂದ ಸಿಕ್ಕಿದೆ ಗುಡ್‌ನ್ಯೂಸ್

Moderna ಮತ್ತು ಮರ್ಕ್ ಕಂಪನಿಗಳ ಪರ್ಸನಲೈಸ್ಡ್ mRNA ಕ್ಯಾನ್ಸರ್ ವ್ಯಾಕ್ಸಿನ್ ಚರ್ಮದ ಕ್ಯಾನ್ಸರ್ ವಿರುದ್ಧದ ಮೂರನೇ ಹಂತದ ಪ್ರಯೋಗದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಈ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯ ನಂತರ ಕ್ಯಾನ್ಸರ್ ಮತ್ತೆ ಬರುವ ಮತ್ತು ಹರಡುವ ಅಪಾಯವನ್ನು ಗಣನೀಯವಾಗಿ ತಗ್ಗಿಸಿದೆ ಎಂದು ವರದಿಯಾಗಿದೆ.

Read Full Story

04:23 PM (IST) Aug 20

Viral - ಅಮೆರಿಕದಲ್ಲಿ H-1B ಜಾಬ್ ಹೋದ ಬೆನ್ನಲ್ಲೇ ಭಾರತೀಯನ ಜೀವನವೇ ಬದಲಾಯ್ತು; ಬದುಕು, ಬವಣೆ, ನಿರಾಶೆ ನಡುವೆ ದೊರೆಯಿತು ನೆಮ್ಮದಿ!

ಅಮೆರಿಕದಲ್ಲಿ H-1B ವೀಸಾದಡಿ ಕೆಲಸ ಮಾಡುತ್ತಿದ್ದ ಇಂದೋರ್ ಮೂಲದ ವಿನಯ್ ಮಹೇಶ್ವರಿ, 15 ನಿಮಿಷಗಳ ಫೋನ್ ಕರೆಯಿಂದಾಗಿ ಉದ್ಯೋಗ ಕಳೆದುಕೊಳ್ಳುತ್ತಾರೆ. 60 ದಿನಗಳ ಗಡುವಿನಲ್ಲಿ ಹೊಸ ಕೆಲಸ ಸಿಗದೆ, ಉಳಿತಾಯ ಖಾಲಿಯಾಗಿ, ಅವರು ಹಾಸ್ಟೆಲ್‌ನಲ್ಲಿ ಕೆಲಸ ಮಾಡುವ ಸ್ಥಿತಿಗೆ ತಲುಪುತ್ತಾರೆ. ಈ ಅನುಭವವು ಅವರನ್ನು 'ರೀರೌಟೆಡ್' ಎಂಬ ಪುಸ್ತಕ ಬರೆಯಲು ಮತ್ತು ಭಾರತಕ್ಕೆ ಮರಳಲು ಪ್ರೇರೇಪಿಸುತ್ತದೆ.
Read Full Story

04:20 PM (IST) Aug 20

ಬೆಂಗಳೂರಿನ ಪ್ರವಾಸಿ ತಾಣಗಳಿಗೆ ಹೈಟೆಕ್ ಲುಕ್ - ಮಯೂರ ಹೋಟೆಲ್‌ಗೆ 2 ಕೋಟಿ ಅನುದಾನ, 6 ತಿಂಗಳಲ್ಲಿ ಮ್ಯೂಸಿಯಂ ನವೀಕರಣ ಪೂರ್ಣ!

ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ, ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಾದ ಕೆಎಸ್‌ಟಿಡಿಸಿ ಮಯೂರ ಹೋಟೆಲ್, ಸರ್ಕಾರಿ ವಸ್ತುಸಂಗ್ರಹಾಲಯ, ಮತ್ತು ವೆಂಕಟಪ್ಪ ಆರ್ಟ್ ಗ್ಯಾಲರಿಗಳು ಶೀಘ್ರದಲ್ಲೇ ನವೀಕರಣಗೊಳ್ಳಲಿವೆ.

Read Full Story

04:18 PM (IST) Aug 20

‘ಹಳ್ಳಿಕಾರ್ ಒಡೆಯ’ ವರ್ತೂರು ಸಂತೋಷ್‌ಗೆ 2ನೇ ಮದುವೆ - ಪ್ರೀತಿಯ ಕಥೆ ಬಿಚ್ಚಿಟ್ಟ ಬಿಗ್ ಬಾಸ್ ಸ್ಟಾರ್

‘ಬಿಗ್ ಬಾಸ್ ಕನ್ನಡ ಸೀಸನ್‌ 10’ ಮೂಲಕ ರಾಜ್ಯದ ಮನೆಮಾತಾಗಿರುವ ‘ಹಳ್ಳಿಕಾರ್ ಒಡೆಯ’ ವರ್ತೂರು ಸಂತೋಷ್‌ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಹತ್ವದ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

Read Full Story

03:59 PM (IST) Aug 20

Karnataka Rains - ದೀರ್ಘ ಬರಗಾಲದ ಬಳಿಕ ರಾಜ್ಯದಲ್ಲಿ ವ್ಯಾಪಕ ಮಳೆ; ಈ ಪ್ರದೇಶಗಳಲ್ಲಿ ಗಂಟೆಗೆ 60KM ವೇಗದಲ್ಲಿ ಗಾಳೆ, ಮಳೆಯ ಎಚ್ಚರಿಕೆ

ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಮುಂಬರುವ 24 ಗಂಟೆಯಲ್ಲಿ ಗುಡುಗು, ಭಾರೀ ಗಾಳಿಯೊಂದಿಗೆ ಕುಡಿದ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಪ್ರಮುಖವಾಗಿ ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

Read Full Story

01:45 PM (IST) Aug 20

Minister B Nagendra - ವಾಲ್ಮೀಕಿ ನಿಗಮ ಹಗರಣ, ಸಚಿವ ಬಿ ನಾಗೇಂದ್ರಗೆ ಬಿಗ್ ರಿಲೀಫ್; ಹೈಕೋರ್ಟ್ ಮಹತ್ವದ ಆದೇಶ

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ ಅವರಿಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ. ಜಾಮೀನು ನೀಡುವಾಗ ವಿಧಿಸಿದ್ದ, ರಾಜ್ಯ ಬಿಟ್ಟು ತೆರಳದಂತೆ ಇದ್ದ ಷರತ್ತನ್ನು ನ್ಯಾಯಾಲಯ ರದ್ದುಗೊಳಿಸಿದ್ದು, ದೇಶ ಬಿಟ್ಟು ತೆರಳದಂತೆ ಸೂಚಿಸಿದೆ. ಆದರೆ, ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳು ಸದನದಲ್ಲಿ ತಮ್ಮ ಹೋರಾಟವನ್ನು ಮುಂದುವರೆಸಿವೆ.
Read Full Story

12:40 PM (IST) Aug 20

ವಿಶೇಷ ರಾಜ ಮಾಳಿಗೈ ಧನಯೋಗದಿಂದ 4 ರಾಶಿಗೆ ಆಸ್ತಿ, ಮನೆ ಖರೀದಿಸುವ ಕೋಟ್ಯಧಿಪತಿ ಯೋಗ

ಸೆಪ್ಟೆಂಬರ್ ತಿಂಗಳಲ್ಲಿ ಗ್ರಹಗಳ ಸಂಯೋಗದಿಂದ 'ರಾಜ ಮಾಳಿಗೈ ಧನಯೋಗ' ಉಂಟಾಗುತ್ತಿದ್ದು, ಇದು ಕೆಲವು ರಾಶಿಗಳ ಧನ ಸ್ಥಾನವನ್ನು ಪ್ರಚೋದಿಸಲಿದೆ. ಈ ಯೋಗದ ಪ್ರಭಾವದಿಂದ 4 ರಾಶಿಯವರಿಗೆ ದಿಢೀರ್ ಧನಲಾಭ, ಆಸ್ತಿ ಸಂಪಾದನೆ ಮತ್ತು ವೃತ್ತಿಯಲ್ಲಿ ಉನ್ನತಿಯ ಯೋಗವಿದೆ.

Read Full Story

12:34 PM (IST) Aug 20

ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ - ಆರ್‌ಎಸ್‌ಎಸ್‌, ಬಿಜೆಪಿಗೆ ಹರಿಪ್ರಸಾದ್ ಸವಾಲು!

ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್, ವಂದೇ ಮಾತರಂ ವಿಚಾರವಾಗಿ ರಾಜಕೀಯ ಮಾಡುವ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಗೆ ತಮ್ಮ ಶಾಖೆಗಳಲ್ಲಿ ರಾಷ್ಟ್ರಗೀತೆ ಹಾಡುವಂತೆ ಸವಾಲು ಹಾಕಿದ್ದಾರೆ. ಇವರು ದೇಶದ್ರೋಹಿಗಳು ಮತ್ತು ದಲಿತ ವಿರೋಧಿಗಳು ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.
Read Full Story

12:20 PM (IST) Aug 20

Chikkamagaluru - 'ನಾವು ಅಕ್ಕ-ತಮ್ಮ, ನಮ್ಮ ಸಂಬಂಧಕ್ಕೆ ಕಳಂಕ ಹಚ್ಚಬೇಡಿ'; ರೈಲಿಗೆ ತಲೆಕೊಟ್ಟ ಯುವಕ-ಯುವತಿ

ಚಿಕ್ಕಮಗಳೂರಿನ ಕಡೂರು ಬಳಿ ಯುವಕ-ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಅಕ್ಕ-ತಮ್ಮನ ಸಂಬಂಧವನ್ನು ಪ್ರೀತಿ ಎಂದು ತಪ್ಪಾಗಿ ಭಾವಿಸಿದ ಸಂಬಂಧಿಕರ ಚುಚ್ಚುಮಾತಿನಿಂದ ನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
Read Full Story

11:52 AM (IST) Aug 20

ಬೆಂಗಳೂರಿಗರೇ ಇನ್ಮುಂದೆ ಬೆಳ್ಳಂಬೆಳಗ್ಗೆ ಸಿಗಲ್ಲ ಹೊಸಕೋಟೆ ಬಿರಿಯಾನಿ; ನ್ಯೂ ಟೈಂ ಇಲ್ಲಿದೆ

ಹೊಸಕೋಟೆಯ ಪ್ರಸಿದ್ಧ ಬಿರಿಯಾನಿ ಮಾರಾಟದ ಸಮಯವನ್ನು ಬದಲಾಯಿಸಲಾಗಿದೆ. ಬೆಳಗಿನ ಜಾವ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆ, ಅಪಘಾತಗಳು ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹೊಸಕೋಟೆ ಬಿರಿಯಾನಿ ಸಮಯ ಈ ಕೆಳಗಿನಂತಿದೆ.

Read Full Story

11:39 AM (IST) Aug 20

World Mosquito Day 2026 - ಸೊಳ್ಳೆಗಳ ಸಾಮ್ರಾಜ್ಯದತ್ತ ಇಣುಕು ನೋಟ ವಿಶ್ವ ಸೊಳ್ಳೆಗಳ ದಿನ –ಆಗಸ್ಟ್20

ಆಗಸ್ಟ್ 20 ರ ವಿಶ್ವ ಸೊಳ್ಳೆಗಳ ದಿನ, ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ ಎಂದು ಕಂಡುಹಿಡಿದ ಸರ್ ರೋನಾಲ್ಡ್ ರೋಸ್ ಅವರನ್ನು ಸ್ಮರಿಸುತ್ತದೆ. ಈ ಲೇಖನವು ಮಲೇರಿಯಾ, ಡೆಂಘಿ, ಚಿಕೂನ್‌ಗೂನ್ಯಾದಂತಹ ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳು ಸಂತಾನೋತ್ಪತ್ತಿ ನಿಯಂತ್ರಿಸುವ ಕ್ರಮಗಳ ಬಗ್ಗೆ ವಿವರಿಸುತ್ತದೆ.

Read Full Story

11:23 AM (IST) Aug 20

Yadagiri - ಮಕ್ಕಳನ್ನು ಕೊಂದು ವಿಚಿತ್ರ ಹೇಳಿಕೆ ಕೊಟ್ಟ ತಂದೆ; 24 ಗಂಟೆಗಳ ಬಳಿಕ ಮಕ್ಕಳ ಮೃತದೇಹ ಪತ್ತೆ

ಯಾದಗಿರಿಯ ಶಹಾಪುರ ತಾಲೂಕಿನಲ್ಲಿ ಪತ್ನಿಯೊಂದಿಗೆ ಜಗಳವಾಡಿದ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಬಸವಸಾಗರ ಜಲಾಶಯದ ಕಾಲುವೆಗೆ ಎಸೆದು ಕೊಲೆ ಮಾಡಿದ್ದಾನೆ. 24 ಗಂಟೆಗಳ ನಿರಂತರ ಶೋಧದ ನಂತರ, ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Read Full Story

11:17 AM (IST) Aug 20

ರಾಜ್ಯಕ್ಕೆ ವರಮಹಾಲಕ್ಷ್ಮಿ ಗಿಫ್ಟ್ - ಪಿಂಚಣಿದಾರರ ಆದಾಯ ಮಿತಿ ₹1.20 ಲಕ್ಷಕ್ಕೆ ಹೆಚ್ಚಳ, ಸ್ಥಗಿತಗೊಂಡಿದ್ದ ಪಿಂಚಣಿ ಮರುಜಾರಿ!

ರಾಜ್ಯ ಸರ್ಕಾರವು ಸಾಮಾಜಿಕ ಭದ್ರತಾ ಪಿಂಚಣಿಯ ವಾರ್ಷಿಕ ಕುಟುಂಬ ಆದಾಯ ಮಿತಿಯನ್ನು ₹32,000 ದಿಂದ ₹1,20,000 ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ, ಆದಾಯದ ಕಾರಣಕ್ಕೆ ಪಿಂಚಣಿ ಕಳೆದುಕೊಂಡಿದ್ದ ಲಕ್ಷಾಂತರ ವೃದ್ಧರು, ವಿಧವೆಯರು ಹಾಗೂ ವಿಕಲಚೇತನರಿಗೆ ಮತ್ತೆ ಮಾಸಿಕ ಪಿಂಚಣಿ ಲಭಿಸಲಿದೆ.
Read Full Story

11:14 AM (IST) Aug 20

ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂದ ವಿದ್ಯಾರ್ಥಿಗೆ ಬೆದರಿಕೆ ಆರೋಪ, ಶಾಹೀನ್ ಶಾಲೆ ಪ್ರಾಂಶುಪಾಲ ವಿರುದ್ಧ FIR

ಬೀದರ್‌ನ ಚಿಟಗುಪ್ಪಾ ಪಟ್ಟಣದ ಶಾಹೀನ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು 'ವಂದೇ ಮಾತರಂ' ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗೆ ಪ್ರಾಂಶುಪಾಲರೇ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿದ್ಯಾರ್ಥಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್.

Read Full Story

10:47 AM (IST) Aug 20

ಹನೂರು ಎನ್‌ಕೌಂಟರ್ ಸೇಡು - ಕಾಡಿಗೆ ಬೆಂಕಿ ಹಚ್ಚಿ, ಶಿಬಿರಗಳನ್ನೇ ಸ್ಫೋಟಿಸಿದ ಕಳ್ಳಬೇಟೆಗಾರರು; ಅರಣ್ಯ ಇಲಾಖೆಗೆ ಆತಂಕ!

ಹನೂರು ಎನ್‌ಕೌಂಟರ್ ಬಳಿಕ, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜಿಲೆಟಿನ್ ಬಳಸಿ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸುತ್ತಿದ್ದು, 10 ಎಕರೆ ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಈ ಕೇಸಿನ ತನಿಖೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ಬರಬಹುದು.

Read Full Story

10:37 AM (IST) Aug 20

Gruha Lakshmi Scheme - ಗೃಹಲಕ್ಷ್ಮೀ ಯೋಜನೆಯ ಬಿಗ್ ಅಪ್‌ಡೇಟ್ ಕೊಟ್ಟ ಸಿಎಂ ಡಿಕೆ ಶಿವಕುಮಾರ್

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಈ ಪ್ರಕ್ರಿಯೆಗಾಗಿ ಬಯೋಮೆಟ್ರಿಕ್/ಫೇಸ್ ಅಥೆಂಟಿಕೇಶನ್ ಬಳಸಲಾಗುವುದು ಎಂದು ಹೇಳಿದ್ದಾರೆ.

Read Full Story

More Trending News