ಬೆಂಗಳೂರು: ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದೆಲ್ಲ ಸುಳ್ಳು. ಅದೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಯಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಹುಟ್ಟಾ ಕಾಂಗ್ರೆಸಿಗ, ಆದರೂ, ನನ್ನ ವೈಯಕ್ತಿಕ ನಂಬಿಕೆ ನಾನು ಪಾಲಿಸುತ್ತೇನೆ. ನಾನು ಎಲ್ಲ ಧರ್ಮವನ್ನೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನಾನು ಜನ್ಮತಃ ಹಿಂದುವಾಗಿದ್ದು, ಹಿಂದುವಾಗಿಯೇ ಜೀವಿಸಿ, ಹಿಂದುವಾಗಿಯೇ ಸಾಯುತ್ತೇನೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ ಅವರು ಶಿವರಾತ್ರಿ ಕಾರ್ಯಕ್ರಮಕ್ಕೆ ಆಹ್ವಾನಿಸಲು ಭೇಟಿಯಾಗಿದ್ದರು. ಅದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಪಾಲ್ಗೊಳ್ಳುತ್ತಿದ್ದಾರೆ. ಹಾಗೆಯೇ ನಾನು ಇತ್ತೀಚೆಗೆ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದೆ ಈ ಎಲ್ಲಾ ಕಾರಣದಿಂದಾಗಿ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದೆಲ್ಲಾ ಸುಳ್ಳು ಎಂದು ಹೇಳಿದರು

11:51 PM (IST) Feb 27
ವಿಕ್ಕಿ ಕೌಶಲ್ ಇನ್ನೂ ಬಾಲಿವುಡ್ ಸಿನಿಮಾದಲ್ಲಿ ಚಾನ್ಸ್ ಪಡೆಯುವ ಮೊದಲೇ ನಟಿ ಕತ್ರಿನಾ ಕೈಫ್ ಬಿಗ್ ಸ್ಟಾರ್. ಬ್ರಿಟಿಷ್ ಮೂಲದ ಕತ್ರಿನಾ ಕೈಫ್ ದೊಡ್ಡ ನಟಿಯಾಗಿದ್ದಾಗ ಒಮ್ಮೆ ಸಂದರ್ಶನ ಮಾಡುತ್ತಾ ನಟ ವಿಕ್ಕಿ ಕೌಶಲ್ ಅವರು 'ನೀವು ವಿಕ್ಕಿ ಕೌಶಲ್ ಅವರನ್ನು..
ಪೂರ್ತಿ ಓದಿ11:44 PM (IST) Feb 27
ಕದನ ವಿರಾಮದ ನಡುವೆಯೂ ಇಸ್ರೇಲ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಹೈಫಾದಲ್ಲಿ ಪಾದಾಚಾರಿಗಳ ಮೇಲೆ ಕಾರು ನುಗ್ಗಿಸಿ, ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಲಾಗಿದೆ. ಘಟನೆಯಲ್ಲಿ 8 ನಾಗರಿಕರು ಗಾಯಗೊಂಡಿದ್ದು, ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ.
ಪೂರ್ತಿ ಓದಿ10:59 PM (IST) Feb 27
ಯುಟ್ಯೂಬರ್ ಗಗನ್ ಹೊಸ ವಿಡಿಯೋ ಹಂಚ್ಕೊಂಡಿದ್ದಾರೆ. ವಿಡಿಯೋದಲ್ಲಿ ಸ್ಪೇಷಲ್ ದೇವಸ್ಥಾನದ ಜೊತೆ ಅದ್ರ ಮಹತ್ವ, ಜೀವನದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
10:44 PM (IST) Feb 27
ನಟ ವಿಕ್ಕಿ ಕೌಶಲ್ ಬಗ್ಗೆ ಈಗ ಬಹಳಷ್ಟು ಸುದ್ದಿಗಳು ಓಡಾಡುತ್ತಿವೆ. ಬಾಲ್ಯದಲ್ಲೇ ತಂದೆಯ ಜೊತೆಗೆ ಶೂಟಿಂಗ್ ಸೆಟ್‌ಗೆ ಹೋಗುತ್ತಿದ್ದರು. Childhoodನಲ್ಲೇ ಬಾಲಿವುಡ್ ಹೀರೋ ಆಗುವ ಕನಸು ಕಂಡಿದ್ದರು ಈ ವಿಕ್ಕಿ. ವಿಕ್ಕಿ ಕೌಶಲ್ ತಮ್ಮ ಭವಿಷ್ಯವನ್ನು ಮೊದಲೇ ತಿಳಿದಿದ್ರಾ? ಹೌದು, ಅಂತಿವೆ ಅವರ ಆಪ್ತರ ಬಳಗ..
ಪೂರ್ತಿ ಓದಿ10:29 PM (IST) Feb 27
ದೆಹಲಿಯಲ್ಲಿ ಕಾಂಗ್ರೆಸ್ ಸತತ ಸೋಲಿನಿಂದ ಅಧಿಕಾರಕ್ಕೆ ಬರುವುದು ಕಷ್ಟವೆಂದು ಶಶಿ ತರೂರ್ ಹೇಳಿದ್ದಾರೆ. ಮೈತ್ರಿ ಮಾಡಿಕೊಂಡರೆ ಮಾತ್ರ ಅಧಿಕಾರ ಸಾಧ್ಯವೆಂದೂ, ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಶಕ್ತಿ ತೋರಿಸಬಹುದು ಎಂದಿದ್ದಾರೆ.
ಪೂರ್ತಿ ಓದಿ10:02 PM (IST) Feb 27
ಸೊಳ್ಳೆ ಕಚ್ಚಿದಾಗ, ಗಾಯವಾದಾಗ ತುರಿಕೆಯಾಗುತ್ತೆ. ಗೊತ್ತಿಲ್ದೆ ಗಾಯದ ಮೇಲೆ ಕೈ ಹೋಗುತ್ತೆ. ಗಾಯ ತುರಿಸಿಕೊಂಡ್ರೆ ಏನಾಗುತ್ತೆ ಅನ್ನೋದನ್ನು ಸಂಶೋಧಕರು ಹೇಳ್ತಿದ್ದಾರೆ.
09:46 PM (IST) Feb 27
ನಟ ವಿಕ್ಕಿ ಕೌಶಲ್ ಹುಟ್ಟಿದ್ದು ಬೆಳೆದಿದ್ದು ಸಿನಿಮಾ ಜರ್ನಿ ಎಲ್ಲವೂ ಈಗ ಟಾಕ್ ಆಫ್ ದಿ ನೇಶನ್.. ಮುಂಬೈನಲ್ಲಿ ಜನಿಸಿದ ವಿಕ್ಕಿ ಕೌಶಲ್.. ತಂದೆ ಶ್ಯಾಮ್ ಕೌಶಲ್ ಸಿನಿಮಾದಲ್ಲಿ ಆಕ್ಷನ್ ಡೈರೆಕ್ಟರ್.. ಶೂಟಿಂಗ್‌ಗೆ ಹೋಗುತ್ತಿದ್ದ ವಿಕ್ಕಿ, ತಾವು ಮುಂದೊಂದು ದಿನ ನಾಯಕರಾಗಲು.. ಅನುರಾಗ್ ಕಶ್ಯಪ್ ಜೊತೆ.. ವಿಕ್ಕಿ ಕೌಶಾಲ್& ಕತ್ರಿನಾ...
ಪೂರ್ತಿ ಓದಿ09:16 PM (IST) Feb 27
ಜೀವನ ಪೂರ್ತಿ ದುಡಿದಿದ್ದನ್ನೆಲ್ಲಾ ಹಾಕಿ ಕೆಲವರು ಆಸ್ತಿ ತಗೊಳ್ತಾರೆ. ಇದರಲ್ಲಿ ಏನಾದ್ರೂ ಮೋಸ ಆದ್ರೆ ಅವರ ಕಷ್ಟ ಎಲ್ಲಾ ವೇಸ್ಟ್ ಆಗುತ್ತೆ. ಅದಕ್ಕೆ ಆಸ್ತಿ ತಗೊಳ್ಳೋಕೆ ಮುಂಚೆ ಹತ್ತು ಸಲ ಯೋಚನೆ ಮಾಡಬೇಕು ಅಂತಾರೆ. ಆ ಪ್ರಾಬ್ಲಮ್ ಬೇಡ ಅಂದ್ರೆ, ರಿಜಿಸ್ಟ್ರೇಷನ್ ಹೇಗೆ ಮಾಡ್ಬೇಕು ಅಂತ ಸ್ಟೆಪ್ ಬೈ ಸ್ಟೆಪ್ ತಿಳ್ಕೊಳ್ಳಿ.
ಪೂರ್ತಿ ಓದಿ09:16 PM (IST) Feb 27
ಮಹಾಕುಂಭ ಮೇಳದಲ್ಲಿ ಸ್ವಚ್ಚತಾ ಕಾರ್ಯದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಫಾಯಿ ಕರ್ಮಾಚಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಬಂಪರ್ ಗಿಫ್ಟ್ ನೀಡಿದ್ದಾರೆ.
ಪೂರ್ತಿ ಓದಿ09:03 PM (IST) Feb 27
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಕುರಿತು ಬಿಜೆಪಿಯಲ್ಲಿ ಯಾವುದೇ ಚರ್ಚೆ ಇಲ್ಲ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸದ್ಗುರು ಕಾರ್ಯಕ್ರಮದಲ್ಲಿ ಡಿಕೆಶಿ ಭಾಗವಹಿಸಿದ್ದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಪೂರ್ತಿ ಓದಿ09:00 PM (IST) Feb 27
ಕೋಲ್ಕತಾದಿಂದ ಚೆನ್ನೈಗೆ ಪ್ರಯಾಣ ಸುದೀರ್ಘ. ಆದರೆ ಭಾರತದ ಹೊಸ ಸಂಶೋಧನೆಗೆ ಜಗತ್ತೆ ಬೆಚ್ಚಿ ಬಿದ್ದಿದೆ. ಕೇವಲ 3 ಗಂಟೆ, 600 ರೂಪಾಯಿಯಲ್ಲಿ ಕೋಲ್ಕತಾದಿಂದ ಚೆನ್ನೈ ತಲುಪಬಹುದು. ಈ ಸಂಶೋಧನೆಗೆ ಆನಂದ್ ಮಹೀಂದ್ರ ಕೂಡ ಬೋಲ್ಡ್ ಆಗಿದ್ದಾರೆ.
08:22 PM (IST) Feb 27
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ರವಿಚಂದ್ರನ್ ಕೊಟ್ಟ ಸಲಹೆಯಂತೆ ಕಂಠಿ ವೈರಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.
08:15 PM (IST) Feb 27
ಬೆಂಗಳೂರಿನಲ್ಲಿ ಬೈಕ್ ಟ್ಯಾಂಕ್ ಮೇಲೆ ಯುವ ಜೋಡಿಯೊಂದು ಅಪಾಯಕಾರಿಯಾಗಿ ಕುಳಿತುಕೊಂಡು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪೂರ್ತಿ ಓದಿ08:09 PM (IST) Feb 27
ಉದ್ದ ಕೂದಲು ಹೊಂದಿರುವ ಮಹಿಳೆಯರನ್ನು ಪುರುಷರು ಏಕೆ ಇಷ್ಟಪಡುತ್ತಾರೆ: ಸಂಶೋಧನೆಯ ಪ್ರಕಾರ, ಹುಡುಗರು ಉದ್ದ ಕೂದಲು ಹೊಂದಿರುವ ಹುಡುಗಿಯರನ್ನು ಹೆಚ್ಚು ಇಷ್ಟಪಡುತ್ತಾರೆ. ಇದರ ಹಿಂದಿನ ಕಾರಣವೇನು ಎಂದು ತಿಳಿಯೋಣ.
ಪೂರ್ತಿ ಓದಿ08:05 PM (IST) Feb 27
ಉದ್ಯೋಗ ಅಕಾಂಕ್ಷಿಯೊಬ್ಬ ಕೆಲಸಕ್ಕಾಗಿ ಪ್ರತಿಷ್ಠಿತ ಕಂಪನಿಯ ಸಿಇಒಗೆ ರೆಸ್ಯೂಮ್ ಕಳುಹಿಸಿದ್ದಾನೆ. ಈತನ ರೆಸ್ಯೂಮ್ ನೋಡಿದ ಸಿಇಒ ಪ್ರತಿಯಾಗಿ ಮಾಡಿದ್ದೇನು?
ಪೂರ್ತಿ ಓದಿ07:50 PM (IST) Feb 27
ರಾಜ್ಯದಲ್ಲಿ ನೀರಿನ ಸಮಸ್ಯೆ ಇದ್ದರೂ ತೆಲಂಗಾಣಕ್ಕೆ ನೀರು ಹರಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮೀರ್ ಸಾಧಿಕ್‌ನಂತೆ ಜನರಿಗೆ ದ್ರೋಹ ಬಗೆದಂತೆ ಎಂದು ಟೀಕಿಸಿದ್ದಾರೆ.
ಪೂರ್ತಿ ಓದಿ07:23 PM (IST) Feb 27
ಬೆಂಗಳೂರಿನ ದಾಸರಹಳ್ಳಿಯಲ್ಲಿರುವ IKEA ಉದ್ದಿಮೆ ಪರವಾನಗಿ ನವೀಕರಣಕ್ಕೆ 65 ಲಕ್ಷ ರೂ. ದಂಡ ಪಾವತಿಸಿದೆ. ಬಿಬಿಎಂಪಿ ತಪಾಸಣೆಯಲ್ಲಿ ಪರವಾನಗಿ ಪಡೆಯದೇ ಇರುವುದು ಕಂಡುಬಂದ ಹಿನ್ನೆಲೆ ನೋಟಿಸ್ ನೀಡಲಾಗಿತ್ತು.
ಪೂರ್ತಿ ಓದಿ07:22 PM (IST) Feb 27
103 ವರ್ಷದ ಅಜ್ಜಿ ಯೋಗಿ ಆದಿತ್ಯನಾಥ್ ಕಾನೂನು ದೇಶದಲ್ಲೆಡೆ ಬರಲೆಂದು ತಿಪಟೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ದೇಶದ ಸೈನಿಕರು ಮತ್ತು ದೇಶಕ್ಕೆ ಒಳಿತಾಗಲೆಂದು ಅಜ್ಜಿ ಪಾದಯಾತ್ರೆ ಕೈಗೊಂಡಿದ್ದಾರೆ.
ಪೂರ್ತಿ ಓದಿ07:18 PM (IST) Feb 27
'ಪುಟ್ಟಕ್ಕನ ಮಕ್ಕಳು'ಗೆ ರವಿಚಂದ್ರನ್ ಎಂಟ್ರಿ ಕೊಟ್ಟಾಗ ಶೂಟಿಂಗ್ ಸೆಟ್ನಲ್ಲಿ ಬೆಂಕಿ ಬಿದ್ದದ್ದು ಹೇಗೆ? ಶೂಟಿಂಗ್ ಸೆಟ್ನ ವಿಡಿಯೋ ವೈರಲ್ ಆಗಿದೆ.
06:56 PM (IST) Feb 27
ಮದುವೆಯಾದ ಹೊಸತರಲ್ಲಿ ಶಾರುಖ್ ಖಾನ್ ಹೇಗೆ ಪೊಸೆಸಿವ್ ಆಗಿದ್ದರು ಎಂಬ ಬಗ್ಗೆ ಪತ್ನಿ ಗೌರಿ ಖಾನ್ ಹೇಳಿದ್ದೇನು?
06:48 PM (IST) Feb 27
ಈ ಸೋಷಿಯಲ್ ಮೀಡಿಯಾದಲ್ಲಿ ಯಾರು ಯಾವಾಗ, ಎಷ್ಟೋ ವರ್ಷಗಳ ಮೇಲೆ ಮತ್ತೆ ಕಣ್ಣಿಗೆ ಬೀಳ್ತಾರೆ ಅಂತ ಹೇಳೋದಕ್ಕೆ ಆಗಲ್ಲ.. ಈಗ್ಯಾಕೆ ಈ ಸಂಗತಿ ಅಂದ್ರೆ, ನಟಿ ಶಿಲ್ಪಾ ಇದೀಗ ಸೋಷಿಯಲ್ ಮೀಡಿಯಾದಲಲ್ಲಿ ಮಲಯಾಳಂ ನಟಿಯ ವಿಡಿಯೋವೊಂದು ವೈರಲ್ ಆಗ್ತಿದೆ. ಕಾರಣ..
ಪೂರ್ತಿ ಓದಿ06:41 PM (IST) Feb 27
ಮಹಾಕುಂಭ ಕಾರ್ಯಕ್ರಮದಲ್ಲಿ 66.3 ಕೋಟಿಗಿಂತಲೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಮಹಾಕುಂಭ 2025ರ 10 ಮುಖ್ಯ ಅಂಶಗಳು, ಅಪರೂಪದ ಖಗೋಳ ಯೋಗ, ಗಣ್ಯರ ಭಾಗಿತ್ವ, ಸಾಂಸ್ಕೃತಿಕ ವೈಭವ ಮತ್ತು ಭದ್ರತಾ ಕ್ರಮಗಳ ಬಗ್ಗೆ ತಿಳಿಯಿರಿ.
ಪೂರ್ತಿ ಓದಿ06:17 PM (IST) Feb 27
ಯುವ ಗಾಯಕನೊಬ್ಬ ಡಾ.ರಾಜ್‌ಕುಮಾರ್ ಅವರ ಗಾಯನದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ಕುಪಿತಗೊಂಡ ಅಭಿಮಾನಿಗಳು ಆತನಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಪೂರ್ತಿ ಓದಿ06:12 PM (IST) Feb 27
ಮಗುವಿಗೆ ಅನಾರೋಗ್ಯವಿದ್ದ ಕಾರಣ ಹಾಲುಣಿಸುವ ರಜೆ ಕೇಳಿದ ಮಹಿಳೆಗೆ, ಹಾಲುಣಿಸುವ ಸಾಕ್ಷಿ ನೀಡುವಂತೆ ಕಂಪನಿ ಕೇಳಿದೆ. ಈ ಕುರಿತು ಮಹಿಳೆ ಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯವು ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಪೂರ್ತಿ ಓದಿ06:09 PM (IST) Feb 27
ಎರಡು ಬಾರಿ ಆಸ್ಕರ್ ವಿಜೇತ ನಟ ಜೀನ್ ಹ್ಯಾಕ್‌ಮನ್, ನ್ಯೂ ಮೆಕ್ಸಿಕೋದಲ್ಲಿ ಪತ್ನಿ ಮತ್ತು ನಾಯಿಯೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ದುಷ್ಕೃತ್ಯದ ಅನುಮಾನವಿಲ್ಲ ಎಂದು ಹೇಳಿದ್ದಾರೆ.
ಪೂರ್ತಿ ಓದಿ06:08 PM (IST) Feb 27
ಸುಧಾರಾಣಿ ಬಾಲನಟಿಯಾಗಿ ನಟಿಸಿದಾಗಿನಿಂದಲೂ ಇದೀಗ ಶ್ರೀರಸ್ತು ಶುಭಮಸ್ತುವಿನಲ್ಲಿ ಕಾಣಿಸಿಕೊಳ್ಳುತ್ತಿರುವವರೆಗೂ ನಟಿಗೆ 'ಮಾವ' ಬೆನ್ನು ಬಿಡುತ್ತಿಲ್ಲ. ಯಾರೀ ಮಾವ?
05:50 PM (IST) Feb 27
ಕೌನ್ ಬನೇಗಾ ಕರೋರ್ಪತಿಯಲ್ಲಿ ತಾವು ಪತ್ನಿ ಜಯಾ ಬಚ್ಚನ್ಗೆ ಭಯ ಪಡುವ ವಿಷಯವನ್ನು ಅಮಿತಾಭ್ ಬಚ್ಚನ್ ರಿವೀಲ್ ಮಾಡಿದ್ದು ಹೀಗೆ!
05:43 PM (IST) Feb 27
ಸಚಿವ ಎಂ.ಬಿ.ಪಾಟೀಲ್ ಅವರು ಲಿಂಗಾಯತ ಮೀಸಲಾತಿಗಾಗಿ ಉಪಜಾತಿಗಳನ್ನು ಒಂದುಗೂಡಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಜಾತಿ ಗಣತಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ, ಎಲ್ಲಾ ಉಪ ಪಂಗಡಗಳು ಒಂದೇ ಮೀಸಲಾತಿ ಅಡಿಯಲ್ಲಿ ಬರಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪೂರ್ತಿ ಓದಿ05:41 PM (IST) Feb 27
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ಆಘಾತಕಾರಿ ಸೋಲು ಕಂಡಿದೆ. ಈ ಫಲಿತಾಂಶದಿಂದ ಸೆಮಿಫೈನಲ್ ಲೆಕ್ಕಾಚಾರ ಬದಲಾಗಿದ್ದು, ಆಸ್ಟ್ರೇಲಿಯಾ, ಆಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಸೆಮೀಸ್ ರೇಸ್‌ನಲ್ಲಿವೆ.
ಪೂರ್ತಿ ಓದಿ05:40 PM (IST) Feb 27
ಹಿಮಚ್ಛಾದಿತ ದಟ್ಟ ಕಾಡನ್ನು ಹೊಂದಿದ ಪರ್ವತದಲ್ಲಿ ಕಳೆದುಹೋದ 18 ವರ್ಷದ ಯುವಕನನ್ನು 10 ದಿನಗಳ ನಂತರ ರಕ್ಷಿಸಲಾಗಿದೆ. ಈತ ಆಹಾರವಿಲ್ಲದೆ ಟೂತ್‌ಪೇಸ್ಟ್ ಮತ್ತು ಹಿಮವನ್ನು ತಿಂದು ಬದುಕಿದ್ದ ಎಂದು ಯುವಕ ಹೇಳಿದ್ದಾನೆ.
ಪೂರ್ತಿ ಓದಿ05:32 PM (IST) Feb 27
ಸಾಮಾಜಿಕ ಜಾಲತಾಣದಲ್ಲಿ ಈಗಿನ ಶಿಕ್ಷಣ ಹಾಗೂ ಆಗಿನ ಶಿಕ್ಷಣ ಎರಡನ್ನೂ ಹೋಲಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪೂರ್ತಿ ಓದಿ05:25 PM (IST) Feb 27
ಬೆಂಗಳೂರು ಮೂಲದ ಕಂಪನಿಯೊಂದು ರಿಯಲ್‌ಟೈಮ್ ಎಐ ನಿರ್ಮಾಣಕ್ಕೆ ಫುಲ್-ಸ್ಟ್ಯಾಕ್ ಎಂಜಿನಿಯರ್ ನೇಮಕಾತಿ ಮಾಡುತ್ತಿದೆ. ಯಾವುದೇ ಪದವಿ, ರೆಸ್ಯೂಮ್ ಬೇಡ. 40 ಲಕ್ಷ ವಾರ್ಷಿಕ ಪ್ಯಾಕೇಜ್ ನೀಡುತ್ತಿದೆ.
ಪೂರ್ತಿ ಓದಿ05:25 PM (IST) Feb 27
ಖ್ಯಾತ ನಟಿ ರಶ್ಮಿಕಾ ಮಂದಣ್ಣ ಈಗ ಸಲ್ಮಾನ್ ಖಾನ್ ನಟನೆಯ ʼಸಿಕಂದರ್ʼ ಸಿನಿಮಾದಲ್ಲಿ ನಾಯಕಿಯಾಗಿರೋದು ಅಧಿಕೃತವಾಗಿದೆ. ರಶ್ಮಿಕಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಟೀಸರ್ ಹಂಚಿಕೊಂಡು, ರಿಲೀಸ್ ದಿನಾಂಕ ಘೋಷಣೆ ಮಾಡಿದ್ದಾರೆ.
05:20 PM (IST) Feb 27
ಅರ್ಹತಾ ಪರೀಕ್ಷೆ ಪಾಸ್ ಆಗದ 100 ಮಂದಿಯನ್ನು ಇತ್ತೀಚೆಗೆ ಇನ್ಫೋಸಿಸ್ ಅಮಾನತು ಮಾಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅಮಾನತುಗೊಂಡಿರುವ ಈ ಉದ್ಯೋಗಿಗಳು ಪ್ರಧಾನಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ.
04:45 PM (IST) Feb 27
ಡಾ ವಿಷ್ಣುವರ್ಧನ್ ಹಾಗೂ ಭಾರತಿ ಪ್ರೀತಿಸಿ ಮದುವೆಯಾಗಿದ್ದವರು. ಇಂದು ಇವರು ಮದುವೆಯಾಗಿ 50 ವರ್ಷಗಳು ಉರುಳಿವೆ. ಈ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ04:39 PM (IST) Feb 27
ಎಲ್ಲರ ಜೀವನದಲ್ಲಿ ನಡೆಯುವಂತೆ ನಮ್ಮ ಜೀವನದಲ್ಲಿ ಒಬ್ಬ ಮಹಿಳೆಯ ಪ್ರವೇಶ ಆಯ್ತು. ಮೊದಲು ರಾಜಮೌಳಿ, ಆಮೇಲೆ ನಾನು. ನಮ್ಮದು ಒಂಥರಾ ತ್ರೀಕೋನ ಪ್ರೇಮಕಥೆ.. ರಾಜಮೌಳಿ ನನಗೆ ನಿನ್ನ ಪ್ರೀತಿಯನ್ನು ತ್ಯಾಗ ಮಾಡು ಎಂದು ಹೇಳಿದ.. ನಾನು ಮಾಡಿದೆ.. ಈಗ ನನಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟು ಬೇರೆ ಯಾವುದೇ ದಾರಿ ಇಲ್ಲ..
ಪೂರ್ತಿ ಓದಿ04:28 PM (IST) Feb 27
ಕೊಪ್ಪಳದಲ್ಲಿ ಪ್ರೀತಿಸಿ ಮದುವೆಯಾದ ನವಜೋಡಿಗೆ ಹುಡುಗಿಯ ಕಡೆಯ ಪೋಷಕರು ಜೀವ ಬೆದರಿಕೆ ಹಾಕಿದ್ದಾರೆ. ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ಪೂರ್ತಿ ಓದಿ04:20 PM (IST) Feb 27
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೆಮಿಫೈನಲ್ ತಲುಪಿದ್ದು, ದುಬೈನಲ್ಲಿ ಆಡುತ್ತಿರುವುದಕ್ಕೆ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ಭಾರತದ ವಿರುದ್ಧ ಸೋಲಿಗೆ ಇದೇ ಕಾರಣವೆಂದು ಹೇಳಿದೆ.
ಪೂರ್ತಿ ಓದಿ04:16 PM (IST) Feb 27
ನಟ ಗೋವಿಂದ ಮತ್ತು ಸುನೀತಾ ಅವರ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಸುನೀತಾ ಅವರ ವಿಡಿಯೋ ಒಂದು ವೈರಲ್ ಆಗಿದೆ, ಜೊತೆಗೆ ವಕೀಲರು ನೀಡಿರುವ ಸ್ಪಷ್ಟನೆಯೂ ಬಂದಿದೆ. ಅದೇನದು?
04:14 PM (IST) Feb 27
ಸ್ಟಾರ್‌ಬಕ್ಸ್ 1,100 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಷೇರುಗಳು ಏರಿಕೆ ಕಂಡಿವೆ. ಮಾರಾಟದ ಒತ್ತಡ ಮತ್ತು ಗ್ರಾಹಕರನ್ನು ಆಕರ್ಷಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪೂರ್ತಿ ಓದಿ