ಕದನ ವಿರಾಮದ ನಡುವೆಯೂ ಇಸ್ರೇಲ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಹೈಫಾದಲ್ಲಿ ಪಾದಾಚಾರಿಗಳ ಮೇಲೆ ಕಾರು ನುಗ್ಗಿಸಿ, ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಲಾಗಿದೆ. ಘಟನೆಯಲ್ಲಿ 8 ನಾಗರಿಕರು ಗಾಯಗೊಂಡಿದ್ದು, ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ.
ಇಸ್ರೇಲ್ (ಫೆ.27): ಕದನ ವಿರಾಮದ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಮತ್ತೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸುಮಾರು 8 ಇಸ್ರೇಲಿ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್‌ನ ಹೈಫಾದಲ್ಲಿ ನಡೆದ ನಡೆದ ದಾಳಿಯಲ್ಲಿ ಭಯೋತ್ಪಾದಕರು ಪಾದಾಚಾರಿಗಳ ಮೇಲೆ ಕಾರು ನುಗ್ಗಿಸಿ ಹತ್ಯೆಗೆ ಯತ್ನಿಸಿದ್ದಾರೆ ಎಂದು ಅಂಗ್ಲಮಾಧ್ಯಮಗಳು ವರದಿ ಮಾಡಿವೆ. ಡೈಲಿ ಮೇಲ್ ವರದಿ ಪ್ರಕಾರ, ಪೊಲೀಸರು ಇದೊಂದು ಭಯೋತ್ಪಾದಕ ದಾಳಿ ಎಂದು ಕರೆದಿದ್ದಾರೆ. ಹೈಫಾ ನಗರದ ದಕ್ಷಿಣದಲ್ಲಿರುವ ಕರ್ಕೂರ್‌ನಲ್ಲಿ ಭದ್ರತಾ ಪಡೆಗಳು ಈಗಾಗಲೇ ಶಂಕಿತ ಆರೋಪಿಯನ್ನು ಬಂಧಿಸಿವೆ.
ನಾಗರಿಕರ ಮೇಲೆ ಚಾಕುವಿನಿಂದ ದಾಳಿ:
ಭಯೋತ್ಪಾದಕರು ಮೊದಲು ಬಸ್ ನಿಲ್ದಾಣದಲ್ಲಿ ಹಲವಾರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾರೆ, ನಂತರ ಇತರ ಜನರ ಮೇಲೆ ಚಾಕು ತಿವಿದು ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ರೇಲ್‌ನ ತುರ್ತು ವೈದ್ಯಕೀಯ ಸೇವೆಗಳ ಅಧಿಕಾರಿ ಮ್ಯಾಗೆನ್ ಡೇವಿಡ್ ಮೊದಲ ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ಸುಮಾರು ಹತ್ತು ಜನರು ಗಾಯಗೊಂಡಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಗೊಳಗಾದವರಲ್ಲಿ ಬಾಲಕಿ ಸೇರಿದ್ದಾಳೆ. ಗಾಯಾಳು ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
Suspected Terror Attack in Pardes Hanna-Karkur:
— Israel Police (@israelpolice) February 27, 2025
Police have launched an investigation into a ramming attack at Karkur Junction, where several civilians waiting at a bus stop were injured.
Officers swiftly intercepted the vehicle and neutralized the suspect
