ಅರ್ಹತಾ ಪರೀಕ್ಷೆ ಪಾಸ್ ಆಗದ 100 ಮಂದಿಯನ್ನು ಇತ್ತೀಚೆಗೆ ಇನ್ಫೋಸಿಸ್ ಅಮಾನತು ಮಾಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅಮಾನತುಗೊಂಡಿರುವ ಈ ಉದ್ಯೋಗಿಗಳು ಪ್ರಧಾನಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ. 

ಬೆಂಗಳೂರು(ಫೆ.27) ಇನ್ಫೋಸಿಸ್ ಇತ್ತೀಚೆಗೆ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಮಾನತು ಮಾಡಿತ್ತು. ಅರ್ಹತಾ ಪರೀಕ್ಷೆಯಲ್ಲಿ ಪಾಸ್ ಆಗದ ಈ ಉದ್ಯೋಗಿಗಳನ್ನು ಕಂಪನಿ ನಿಯಮದಂತೆ ಅಮಾನತು ಮಾಡಿತ್ತು. ಆದರೆ ಈ ನಿರ್ಧಾರ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇನ್ಪೋಸಿಸ್ ಅಮಾನತು ದೇಶಾದ್ಯಂತ ಚರ್ಚೆಯಾಗಿತ್ತು. ಹೀಗಾಗಿ ಪ್ರಕರಣ ಕಾರ್ಮಿಕ ಸಚಿವಾಲಯ ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ ನೋಟಿಸ್ ಜಾರಿ ಮಾಡಿತ್ತು. ಇದೀಗ ಅಮಾನತುಗೊಂಡಿರುವ ಉದ್ಯೋಗಿಗಳು ನೇರವಾಗಿ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದ್ದಾರೆ. ಇದರ ಪರಿಣಾಮ ಇದೀಗ ಕೇಂದ್ರ ಸರ್ಕಾರ ಇನ್ಫೋಸಿಸ್‌ಗೆ 2ನೇ ನೋಟಿಸ್ ನೀಡಿದೆ. 

ಪ್ರಧಾನಿ ಕಾರ್ಯಾಲಯದಲ್ಲಿ ಅಮಾತು ಉದ್ಯೋಗಿಗಳು ದೂರು ನೀಡಿರುವ ಹಿನ್ನಲೆಯಲ್ಲಿ ಪ್ರಕರಣ ಗಂಭೀರವಾಗುತ್ತಿದೆ. ಪ್ರಧಾನಿ ಕಾರ್ಯಾಲಯ ಈ ಪ್ರಕರಣವನ್ನು ಪರಿಶೀಲಿಸುವಂತೆ ಕೇಂದ್ರ ಕಾರ್ಮಿಕ ಆಯೋಗಕ್ಕೆ ಸೂಚಿಸಿದೆ. ಇದರಂತೆ ಕೇಂದ್ರ ಕಾರ್ಮಿಕ ಆಯೋಗ, ಕರ್ನಾಟಕ ಕಾರ್ಮಿಕ ಆಯೋಗಕ್ಕೆ ಈ ಪ್ರಕರಣದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಸತ್ಯಾಸತ್ಯತೆ ಪರಿಶೀಲಿಸುವಂತೆ ಸೂಚಿಸಿದೆ.

ಸ್ಯಾಲರಿ ಹೈಕ್ ಮರುದಿನ ಇನ್ಫೋಸಿಸ್‌ನಲ್ಲಿ ಉದ್ಯೋಗ ಕಡಿತ, ಮೈಸೂರು ಕ್ಯಾಂಪಸ್‌ನಲ್ಲಿ ನಡೆದಿದ್ದೇನು?

ಇನ್ಫೋಸಿಸ್ ಉದ್ಯೋದಿಗಳ ಅಮಾನತು ಕುರಿತು ಪ್ರಧಾನಿ ಕಾರ್ಯಾಲಯ ಹಲವು ದೂರುಗಳನ್ನು ಸ್ವೀಕರಿಸಿದೆ. ದೂರಿನಲ್ಲಿ ಅಮಾತುಗೊಂಡಿರುವ ಉದ್ಯೋಗಿಗಳು ಕೆಲ ಬೇಡಿಕೆ ಮುಂದಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಕಾರ್ಮಿಕ ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಅಮಾನತು ಗೊಂಡಿರುವ ಉದ್ಯೋಗಿಗಳನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿದ್ದಾರೆ. ಇಷ್ಟಕ್ಕೆ ಬೇಡಿಕೆ ನಿಂತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಅಮಾನತುಗಳಿಂದ ಉದ್ಯೋಗಿಗಳನ್ನು ಪಾರು ಮಾಡುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಫೆಬ್ರವರಿ 25 ರಂದು ಕೇಂದ್ರ ಕಾರ್ಮಿಕ ಸಚಿವಾಲಯ ಈ ಕುರಿತು ಪತ್ರ ಹೊರಡಿಸಿದೆ. ಈ ಪತ್ರದಲ್ಲಿ ರಾಜ್ಯ ಸರ್ಕಾರದ ಸೂಕ್ತ ಸಚಿವಾಲಯ ಈ ಪ್ರಕರಣ ಕುರಿತು ತಕ್ಷಣವೇ ಗಮನಹರಿಸಬೇಕು. ಎರಡೂ ತಂಡಗಳ ವಾದ ಆಲಿಸಿ, ಪರಾಮರ್ಶಿಸಲು ಸೂಚಿಸಿದೆ. ಈ ಪ್ರಕರಣ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. 117 ಅಭ್ಯರ್ಥಿಗಳು ಈ ಪ್ರಕರಣ ಕುರಿತು ದೂರು ನೀಡಿದ್ದಾರೆ.

ಏನಿದು ಘಟನೆ?
ಈ ತಿಂಗಳ ಆರಂಭದಲ್ಲಿ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ಸಾಮೂಹಿತ ಅಮಾನತು ನಡೆದಿತ್ತು. ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಅಮಾನತು ಮಾಡಿತ್ತು. ಇನ್ಫೋಸಿಸ್ ಕಂಪನಿ ಪ್ರಕಾರ, ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆ ಪಾಸ್ ಆಗಲು ಮೂರು ಅವಕಾಶ ನೀಡಲಾಗಿತ್ತು. ಆದರೆ ಮೂರರಲ್ಲೂ ಅಭ್ಯರ್ಥಿಗಳು ವಿಫಲರಾಗಿದ್ದಾರೆ. ಹೀಗಾಗಿ ಕಂಪನಿ ನಿಯಮದ ಪ್ರಕಾರ ಅಭ್ಯರ್ಥಿಗಳ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದಿದೆ. ಈ ಪ್ರಕ್ರಿಯೆಯು ಕಳೆದ ಎರಡು ದಶಕಗಳಿಂದ ಜಾರಿಯಲ್ಲಿದೆ ಮತ್ತು ಇದು ಅವರ ಒಪ್ಪಂದದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ ಎಂದು ಕಂಪನಿ ಹೇಳಿದೆ. ಅರ್ಹ ಮತ್ತು ಸಮರ್ಥ ಉದ್ಯೋಗಿಗಳನ್ನು ಮಾತ್ರ ಕಂಪನಿಯಲ್ಲಿ ಉಳಿಸಿಕೊಳ್ಳಲು ಇಂತಹ ಮಾನದಂಡಗಳನ್ನು ಅನುಸರಿಸುವುದು ಅಗತ್ಯ ಎಂದು ಕಂಪನಿ ವಾದಿಸಿದೆ.

ನೌಕರರಿಗೆ ವೀಕೆಂಡ್‌ನಲ್ಲಿ ಕೆಲಸ, ಬಾಸ್‌ಗೆ ಮಾತ್ರ ಟಿ20 ಕಿಕ್, ಮತ್ತೆ ನಾರಾಯಣ ಮೂರ್ತಿ ಟ್ರೋಲ್