LIVE NOW
Published : Jul 20, 2026, 06:13 AM ISTUpdated : Jul 20, 2026, 10:03 PM IST

Kannadiga - 14 ನಿರ್ದೇಶಕರು, 58 ಸ್ಟಾರ್ಸ್ ನಡುವೆ ಮಿಂಚಿದ್ದ ಕನ್ನಡಿಗ! ಒಂದೇ ದಿನದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿ ಗಿನಿಸ್ ರೆಕಾರ್ಡ್ ಬರೆದ ಬ್ಲಾಕ್‌ಬಸ್ಟರ್ ಚಿತ್ರ!

ಸಾರಾಂಶ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶರಾಗಿದ್ದಾರೆ. ಇಂದು ಚೆನ್ನಮ್ಮ ಪಾರ್ಥೀವ ಶರೀರ ಹಾಸನದ ಹೊಳೆನರಸೀಪುರ ತಲುಪಿದ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಳೆ ಕಾರಣದಿಂದ ಸದ್ಯ ಹೊಳೆನರಸಿಪುರದಲ್ಲಿರುವ ರೇವಣ್ಣ ಮನೆಯೊಳಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 6.30ರ ನಂತರ ಮನೆ ಹೊರಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Swayamvara

10:03 PM (IST) Jul 20

Kannadiga - 14 ನಿರ್ದೇಶಕರು, 58 ಸ್ಟಾರ್ಸ್ ನಡುವೆ ಮಿಂಚಿದ್ದ ಕನ್ನಡಿಗ! ಒಂದೇ ದಿನದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿ ಗಿನಿಸ್ ರೆಕಾರ್ಡ್ ಬರೆದ ಬ್ಲಾಕ್‌ಬಸ್ಟರ್ ಚಿತ್ರ!

ಬರೋಬ್ಬರಿ 58 ನಟ-ನಟಿಯರು ಹಾಗೂ 14 ಅನುಭವಿ ನಿರ್ದೇಶಕರ ಬೃಹತ್ ಸೈನ್ಯವನ್ನೇ ಕಟ್ಟಿಕೊಂಡು, ಸಂಪೂರ್ಣ ಸಿನಿಮಾವನ್ನು ಕೇವಲ ಒಂದೇ ದಿನದಲ್ಲಿ (24 ಗಂಟೆಗಳಲ್ಲಿ) ಶೂಟಿಂಗ್ ಮುಗಿಸಿ ಬಿಡುಗಡೆ ಮಾಡಲಾಗಿತ್ತು. ಈ ಐತಿಹಾಸಿಕ ಪವಾಡದ ನಡುವೆ ಪ್ರಮುಖ ಪಾತ್ರದಲ್ಲಿ ಕನ್ನಡಿಗನೊಬ್ಬ ಮಿಂಚಿ, ಭಾರತೀಯ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದ್ದು ಈ ಕಥೆಯ ಅತ್ಯಂತ ಕೌತುಕದ ವಿಷಯ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

09:30 PM (IST) Jul 20

'ಕರಾವಳಿ' ನನ್ನನ್ನು ಸ್ವಾರ್ಥರಹಿತ ವ್ಯಕ್ತಿಯನ್ನಾಗಿ ಮಾಡಿದೆ - ನಟಿ ಸಂಪದ ಹುಲಿವನ ಹೇಳಿದ್ದೇನು?

ಕಿರುತೆರೆಯಿಂದ ಬೆಳ್ಳಿತೆರೆಗೆ ಯಶಸ್ವಿಯಾಗಿ ಹೆಜ್ಜೆ ಇಟ್ಟಿರುವ ನಟಿ ಸಂಪದ ಹುಲಿವನ, ಅವಕಾಶಗಳಿಗಾಗಿ ಆತುರಪಡುವ ಬದಲು ಉತ್ತಮ ಕಥೆ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.

Read Full Story

09:21 PM (IST) Jul 20

Vaibhav - ಎದುರಾಗಿಲಿದೆ 4 ದಿನಗಳ ಅಗ್ನಿಪರೀಕ್ಷೆ; ಮತ್ತೆ ಕ್ರೀಸ್‌ಗಿಳಿಯಲ್ಲಿದ್ದಾರೆ ವೈಭವ್; ಈ ಬಾರಿ ಇದೆಯಂತೆ ಬೇರೆಯದ್ದೇ ಸ್ಟ್ಯಾಟರ್ಜಿ!

ಇತ್ತೀಚಿನ ಸರಣಿ ಸೋಲುಗಳ ನಂತರ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಯುವ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ವಿಶೇಷ ಬ್ಯಾಟಿಂಗ್ ಸ್ಟ್ಯಾಟರ್ಜಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

08:41 PM (IST) Jul 20

'ಗೀತರಚನಾಕಾರರಿಗೆ ಸಿಗಬೇಕಾದಷ್ಟು ಗೌರವ ಸಿಗುತ್ತಿಲ್ಲ' - 3000 ಹಾಡುಗಳ ಸೃಷ್ಟಿಕರ್ತ ನಾಗೇಂದ್ರ ಪ್ರಸಾದ್ ಬೇಸರ

V Nagendra Prasad: ಸಿನಿಮಾ ಥಿಯೇಟರ್‌ನಿಂದ ಬಂದ ಬಳಿಕವೂ ಅದರ ಹಾಡುಗಳು ವರ್ಷಗಳ ಕಾಲ ಜನಮನದಲ್ಲಿ ಉಳಿಯುತ್ತವೆ. ಕಾಲ ಕಳೆದರೂ ಅವುಗಳನ್ನು ಗುನುಗುತ್ತೇವೆ, ಸಂಭಾಷಣೆಗಳಲ್ಲಿ ಉಲ್ಲೇಖಿಸುತ್ತೇವೆ.

Read Full Story

08:03 PM (IST) Jul 20

'ಟಾಕ್ಸಿಕ್' ಹೊಸ ಹಾಡಿನಲ್ಲಿ ಯಶ್ ಜೊತೆ ತಾರಾ ಸುತಾರಿಯಾ ಮ್ಯಾಜಿಕ್? ಹೊಸ ಮಾಹಿತಿ ವೈರಲ್

Toxic Second Song: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಮೊದಲ ಸಿಂಗಲ್ 'ತಬಾಹಿ' ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.

Read Full Story

08:02 PM (IST) Jul 20

Hydrogen Train - ಭಾರತದ ಮೊದಲ ಹೈಡ್ರೋಜನ್ ರೈಲಿನ ಮೇಲೆ ಭೀಕರ ದಾಳಿ! ರಣರಂಗವಾದ ರೈಲ್ವೆ ಸ್ಟೇಷನ್, ಜೀವಭಯದಿಂದ ದಿಕ್ಕಾಪಾಲಾದ ಜನ!

ಹರಿಯಾಣದ ಜೀಂದ್-ಸೋನಿಪತ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಭಾರತದ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ದಾಳಿಯಿಂದ ರೈಲಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿ ಕಾಲ್ತುಳಿತದ ವಾತಾವರಣ ನಿರ್ಮಾಣವಾಗಿದೆ.

Read Full Story

07:23 PM (IST) Jul 20

IPL - ಮೆಡಿಕಲ್ ವಿದ್ಯಾರ್ಥಿನಿಯ ಖಾಸಗಿ ಫೋಟೋ ಇಟ್ಟು ಬ್ಲಾಕ್‌ಮೇಲ್! ಐಪಿಎಲ್ ಸ್ಟಾರ್‌ ಬಂಧನಕ್ಕೆ ಹೈಕೋರ್ಟ್‌ ಆದೇಶ!

ಖ್ಯಾತ ಕ್ರಿಕೆಟಿಗನ ವಿರುದ್ಧ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಮಾಡಿದ್ದಾರೆ. ಈ ಗಂಭೀರ ಪ್ರಕರಣದಲ್ಲಿ ಹೈಕೋರ್ಟ್ ಆ ಕ್ರಿಕೆಟಿಗನ ಬಂಧನಕ್ಕೆ ಆದೇಶಿಸಿದ್ದು, ಕ್ರೀಡಾಲೋಕದಲ್ಲಿ ಸಂಚಲನ ಸೃಷ್ಟಿಯಾಗಿದೆ.

Read Full Story

07:21 PM (IST) Jul 20

ಕರ್ಣಾಟಕ ಬ್ಯಾಂಕ್‌ಗೆ ಕಾನೂನು ಕವಚ - ನಿರ್ದೇಶಕರಾಗಿ ಹಿರಿಯ ವಕೀಲ ಡಾ. ಅರುಣಾ ಶ್ಯಾಮ್ ನೇಮಕ

ಮಂಗಳೂರು ಮೂಲದ ಕರ್ಣಾಟಕ ಬ್ಯಾಂಕ್, ಹಿರಿಯ ವಕೀಲರಾದ ಡಾ. ಎಂ. ಅರುಣಾ ಶ್ಯಾಮ್ ಅವರನ್ನು ತನ್ನ ಮಂಡಳಿಯ ಹೆಚ್ಚುವರಿ ನಿರ್ದೇಶಕರನ್ನಾಗಿ (ಕಾರ್ಯನಿರ್ವಾಹಕೇತರ, ಸ್ವತಂತ್ರ) ನೇಮಿಸಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದ ಕಾನೂನು ಅನುಭವ ಮತ್ತು ಈ ಹಿಂದೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿರುವ ಅವರ ಪರಿಣತಿಯು ಬ್ಯಾಂಕಿನ ಆಡಳಿತ ಮತ್ತು ಕಾರ್ಯತಂತ್ರದ ನಿರ್ಧಾರಗಳನ್ನು ಬಲಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.
Read Full Story

06:57 PM (IST) Jul 20

ಬೆಂಗಳೂರಲ್ಲಿ 25 ಲಕ್ಷದ ಗಡಿ ದಾಟಿದ ಖಾಸಗಿ ಕಾರುಗಳು; ವಿಶ್ವದ 2ನೇ ಅತಿ ದೊಡ್ಡ ಸಂಚಾರ ದಟ್ಟಣೆ ನಗರದ ಕಹಿ ವಾಸ್ತವಳು!

ಬೆಂಗಳೂರಿನಲ್ಲಿ ಖಾಸಗಿ ಕಾರುಗಳ ಸಂಖ್ಯೆ ಐತಿಹಾಸಿಕವಾಗಿ 25 ಲಕ್ಷದ ಗಡಿ ದಾಟಿದ್ದು, ನಗರದ ಒಟ್ಟು ವಾಹನಗಳ ಸಂಖ್ಯೆ 1.28 ಕೋಟಿಗೆ ತಲುಪಿದೆ. ಸಾರ್ವಜನಿಕ ಸಾರಿಗೆಯ ಕೊರತೆ,  ಮೆಟ್ರೋ ವಿಳಂಬ ಮತ್ತು ಬಿಎಂಟಿಸಿ ಬಸ್‌ಗಳ ಸಂಖ್ಯೆ ಇಳಿಕೆಯು ಈ ಅಪಾಯಕಾರಿ ಪ್ರವೃತ್ತಿಗೆ ಮುಖ್ಯ ಕಾರಣವೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸುರಂಗ ರಸ್ತೆಗಳ ಬದಲು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದೇ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ.

Read Full Story

06:50 PM (IST) Jul 20

CJP - ಜೆ.ಪಿ. ನಡ್ಡಾ ಮುಂದೆ ಸಿಜೆಪಿ ಇಟ್ಟ ಆ 3 ಪ್ರಮುಖ ಬೇಡಿಕೆಗಳು ಏನು? ಅದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ವಿಧಿಸಿದ ಬಿಗ್ ಷರತ್ತು ಇಲ್ಲಿದೆ!

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ, ಕಾಕ್ರೋಚ್ ಜನತಾ ಪಕ್ಷದ ನಿಯೋಗವು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ 3 ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

06:41 PM (IST) Jul 20

ನನ್ನ ತಂದೆ 'ಮೆಗಾಸ್ಟಾರ್‌' ಚಿರಂಜೀವಿ, ಉಪಾಸನಾ ಕ್ಲೋಸ್‌ ಫ್ರೆಂಡ್ಸ್,‌ ಅದು ಡೇಂಜರ್ - ‌ Ram Charan Teja

Actor Ram Charan Teja: ನಟ ರಾಮ್‌ ಚರಣ್‌ ತೇಜ ಮನೆಯಲ್ಲಿ ಎಲ್ಲರೂ ಕಲಾವಿದರು, ಉದ್ಯಮಿಗಳೇ. ಈಗ ಅವರು ತಂದೆ ಚಿರಂಜೀವಿ ಜೊತೆ ಉಪಾಸನಾ ಅವರು ಕ್ಲೋಸ್‌ ಎಂದು ಹೇಳಿಕೊಂಡಿದ್ದಾರೆ. ಇದು ತುಂಬ ಡೇಂಜರ್‌ ಎಂದು ಅವರು ಹೇಳಿದ್ದಾರೆ.

Read Full Story

06:18 PM (IST) Jul 20

ತನ್ನಿಚ್ಚೆಯಂತೆಯೇ ರಂಗನಾಥನ ತಪ್ಪಲಲ್ಲಿ ಮಣ್ಣಾದ ಚೆನ್ನಮ್ಮ, ಆಕೆ ಅನ್ನಪೂರ್ಣೆ ನಗುತ್ತಲೇ ವಿದಾಯ ಹೇಳಿದ್ದಾಳೆ - ದೇವೇಗೌಡ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯು ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತಮ್ಮ ಪತ್ನಿ 'ಅನ್ನಪೂರ್ಣೆ' ಎಂದು ಭಾವುಕರಾಗಿ ಸ್ಮರಿಸಿದ ದೇವೇಗೌಡರು, ಅವರ ಯಶಸ್ಸಿನ ಹಿಂದಿನ ಶಕ್ತಿಯನ್ನು ಕೊಂಡಾಡಿದರು. ಕುಟುಂಬಸ್ಥರು, ರಾಜಕೀಯ ಗಣ್ಯರು ಹಾಗೂ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು.
Read Full Story

06:13 PM (IST) Jul 20

ವಿನಯ್ ರಾಜ್‌ಕುಮಾರ್-ಮೋನಿಷಾ ಜೋಡಿಯ ರೊಮ್ಯಾನ್ಸ್ - 'ಕಂದಮ್ಮ ಕಂದಮ್ಮ' ಹಾಡು ನೋಡಿ

ದುನಿಯಾ ವಿಜಯ್ ಅವರ ಮೂರನೇ ನಿರ್ದೇಶನದ ಸಿನಿಮಾ 'ಸಿಟಿ ಲೈಟ್ಸ್' ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಪ್ರಚಾರ ಕಾರ್ಯಗಳು ಜೋರಾಗಿವೆ. ಈಗ ಚಿತ್ರದ 'ಕಂದಮ್ಮ ಕಂದಮ್ಮ..' ವಿಡಿಯೊ ಹಾಡು ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

Read Full Story

05:52 PM (IST) Jul 20

Team India - ಕ್ರಿಕೆಟ್ ಪ್ರಿಯರೇ ಗಮನಿಸಿ! ಭಾರತ-ಜಿಂಬಾಂಬ್ವೆ ಪಂದ್ಯ ಸೋನಿ, ಹಾಟ್‌ಸ್ಟಾರ್‌ನಲ್ಲಿ ಬರಲ್ಲ, ಮತ್ತೆಲ್ಲಿ ನೋಡಬಹುದು?ಶೇ. 99 ಪ್ಯಾನ್ಸ್‌ಗೆ ಗೊತ್ತೇ ಇಲ್ಲ!

ಸತತ ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾ, ಶ್ರೇಯಸ್ ನಾಯಕತ್ವದಲ್ಲಿ ಇದೀಗ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ಯುವ ಆಟಗಾರರಿಂದ ಕೂಡಿರುವ ಈ ತಂಡಕ್ಕೆ, ಗೆಲುವಿನ ಹಾದಿಗೆ ಮರಳಲು ಇದೊಂದು ಮಹತ್ವದ ಅವಕಾಶವಾಗಿದ್ದು, ಸರಣಿಯ ವೇಳಾಪಟ್ಟಿ ಮತ್ತು ನೇರಪ್ರಸಾರದ ವಿವರ ಇಲ್ಲಿದೆ.

Read Full Story

05:40 PM (IST) Jul 20

ಟೀಂ ಇಂಡಿಯಾ ಸೋಲಿಗೆ ಚೇಸ್‌ ಮಾಸ್ಟರ್ ವಿರಾಟ್ ಕೊಹ್ಲಿ ಮಂದಗತಿಯ ಬ್ಯಾಟಿಂಗ್ ಕಾರಣನಾ? ಇರ್ಫಾನ್ ಪಠಾಣ್ ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ 74 ರನ್ ಗಳಿಸಿದರೂ ಭಾರತ ಸೋಲನುಭವಿಸಿತು. ಕೊಹ್ಲಿಯ ಮಂದಗತಿಯ ಬ್ಯಾಟಿಂಗ್ ಸೋಲಿಗೆ ಕಾರಣವಾಯಿತೇ ಎಂಬ ಚರ್ಚೆಯ ನಡುವೆ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೊಹ್ಲಿಯ ಆಟವನ್ನು ಸಮರ್ಥಿಸಿಕೊಂಡು ಅವರ ಇನ್ನಿಂಗ್ಸ್‌ನ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ.
Read Full Story

05:36 PM (IST) Jul 20

ಶರಣ್-ನವೀನ್ ಸಜ್ಜು ಧ್ವನಿಯಲ್ಲಿ ಮೂಡಿದ 'ಚಡ್ಡಿ ಬಡ್ಡಿ' - ಏನಿದು ಯೋಗರಾಜ್ ಭಟ್ರ ಹೊಸ ಹಾಡು

Chaddi Baddy Song: ಸ್ನೇಹಿತರ ನಡುವಿನ ಬಾಂಧವ್ಯವನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುವ 'ಚಡ್ಡಿ ಬಡ್ಡಿ' ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Read Full Story

05:23 PM (IST) Jul 20

ಮನೆ ಬಾಗಿಲಿಗೆ ಬರಲಿದೆ ಜಾತಿ ಹಾಗೂ ನಿವಾಸ ಪ್ರಮಾಣ ಪತ್ರ - ಅರ್ಹತೆ ಏನು? ಏನಿದು ಹೊಸ ಯೋಜನೆ

ಕರ್ನಾಟಕ ಸರ್ಕಾರವು ಮನೆ ಮನೆಗೆ ತೆರಳಿ ಉಚಿತವಾಗಿ ಜಾತಿ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ವಿತರಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ, ಸುಮಾರು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲಾಗುವುದು. ಈ ಮೂಲಕ ಆಡಳಿತವನ್ನು ಸರಳೀಕರಿಸಿ, ನಾಗರಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
Read Full Story

05:11 PM (IST) Jul 20

ರೋಹಿಣಿ ಸಿಂಧೂರಿ ಕಡತಕ್ಕೆ ಸಿಎಂ ಅಸ್ತು, ವರ್ಷಗಳಿಂದ ಠಿಕಾಣಿ ಹೂಡಿದ್ದ 80% ಗಣಿ ಇಲಾಖೆ ಸಿಬ್ಬಂದಿಗೆ ವರ್ಗಾವಣೆ ಶಾಕ್!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 'ಮೇಜರ್ ಸರ್ಜರಿ' ಮಾಡಿದ್ದು, ದಶಕಗಳಿಂದ ಒಂದೇ ಸ್ಥಳದಲ್ಲಿದ್ದ ಸುಮಾರು 160 ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ, ಇಲಾಖೆಯ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.
Read Full Story

04:52 PM (IST) Jul 20

Parliament March - ಬಿಕ್ಕಟ್ಟು ಪರಿಹರಿಸಲು ಕೇಂದ್ರದ ರಂಗಪ್ರವೇಶ - ವಾಂಗ್ಚುಕ್ ಚಳುವಳಿಗೆ ಸಿಗಲಿದೆಯೇ ಜಯ? ಸರ್ಕಾರ ಹೇಳಿದ್ದಿಷ್ಟೇ!

ಸಿಟಿಜನ್ಸ್ ಫಾರ್ ಜಸ್ಟಿಸ್ ಆಂಡ್ ಪೀಸ್ ಸಂಘಟನೆಯು ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸಂಸತ್ ಮಾರ್ಚ್ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗೆ ಕಾರಣವಾಯಿತು. ಈ ಮಧ್ಯ ರಂಗಪ್ರವೇಶಿಸಿದ ಸರ್ಕಾರ ಹೇಳಿದ್ದೇನು ಗೊತ್ತಾ?

Read Full Story

04:51 PM (IST) Jul 20

OTT Releases - ಒಟಿಟಿಗೆ ಬಂದ ಸಸ್ಪೆನ್ಸ್ ಥ್ರಿಲ್ಲರ್, ಮಿಡಲ್ ಏಜ್ ಲವ್‌ಸ್ಟೋರಿ ಸಿನಿಮಾ; ಫುಲ್ ಮನರಂಜನೆ!

OTT release Today: ಈ ವಾರ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ-ಹಾಟ್‌ಸ್ಟಾರ್, ಸೋನಿಲಿವ್ ಮತ್ತು ಆ್ಯಪಲ್ ಟಿವಿ+ ನಂತಹ ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಹೊಸ ಸಿನಿಮಾಗಳು ಮತ್ತು ವೆಬ್ ಸೀರಿಸ್‌ಗಳು ಬಿಡುಗಡೆಯಾಗುತ್ತಿವೆ. ಅವುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

Read Full Story

04:41 PM (IST) Jul 20

ದೆಹಲಿ ಅಧಿಕೃತ ಪ್ರಧಾನಿ ನಿವಾಸದಲ್ಲಿ ಕನ್ನಡದ ಕಂಪು, ತುಳಸಿ ಕಟ್ಟೆ ಕಟ್ಟಿಸಿದ ಪ್ರಪ್ರಥಮ ಮಹಿಳೆ ಚೆನ್ನಮ್ಮ ದೇವೇಗೌಡ!

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮನವರು, 1996ರಲ್ಲಿ ದೆಹಲಿಯ ಪ್ರಧಾನಿ ನಿವಾಸದಲ್ಲಿ 'ತುಳಸಿ ಕಟ್ಟೆ' ನಿರ್ಮಿಸಿ ಮತ್ತು 'ರಾಗಿ ಮುದ್ದೆ'ಯನ್ನು ಪರಿಚಯಿಸಿ ವಿಶಿಷ್ಟ ಸಾಂಸ್ಕೃತಿಕ ಛಾಪು ಮೂಡಿಸಿದ್ದರು. ಅವರ ಈ ಸರಳತೆಯ ಹೆಜ್ಜೆಗಳು, ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಆತ್ಮವನ್ನು ಪ್ರತಿಷ್ಠಾಪಿಸಿದ ಐತಿಹಾಸಿಕ ಕ್ಷಣಗಳಾಗಿವೆ.
Read Full Story

04:30 PM (IST) Jul 20

'Kantara Chapter 1'ಗೆ ಮತ್ತೊಂದು ಕಿರೀಟ - ರಿಷಬ್ ಶೆಟ್ಟಿ 'ಬ್ರಹ್ಮಕಲಶ' ಹಾಡಿನ ದಾಖಲೆ ನೋಡಿ!

ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಸರಮಾಲೆ ನಿರ್ಮಿಸಿದ ಬಳಿಕ ಇದೀಗ ಡಿಜಿಟಲ್ ಲೋಕದಲ್ಲೂ ಮತ್ತೊಂದು ಅಪರೂಪದ ಮೈಲಿಗಲ್ಲು ಸಾಧಿಸಿದೆ.

Read Full Story

03:51 PM (IST) Jul 20

ಕಡಿಮೆ ಬೆಲೆಗೆ ಐದು ಅತ್ಯುತ್ತಮ ಬೈಕ್‌! 68 ಸಾವಿರದಿಂದ ಬೆಲೆ ಆರಂಭ, 70 ಕಿ.ಮೀ ಮೈಲೇಜ್..!

ಈ ಲೇಖನವು ಕಡಿಮೆ ಬೆಲೆಯಲ್ಲಿ ಅಧಿಕ ಮೈಲೇಜ್ ನೀಡುವ ಬಜಾಜ್ ಕಂಪನಿಯ ಜನಪ್ರಿಯ ಬೈಕ್‌ಗಳ ಬಗ್ಗೆ ಮಾಹಿತಿ ನೀಡುತ್ತದೆ. ಪ್ಲಾಟಿನಾ 100, ಸಿಟಿ 110X, ಸಿಟಿ 125X, ವಿಶ್ವದ ಮೊದಲ ಸಿಎನ್‌ಜಿ ಬೈಕ್ ಮತ್ತು ಪಲ್ಸರ್ 125 ನಂತಹ ಮಾದರಿಗಳ ಬೆಲೆ, ವೈಶಿಷ್ಟ್ಯಗಳು ಮತ್ತು ಮೈಲೇಜ್ ವಿವರಗಳನ್ನು ಇಲ್ಲಿ ನೀಡಲಾಗಿದೆ.
Read Full Story

01:54 PM (IST) Jul 20

ರಂಗನಾಥಸ್ವಾಮಿ ಸನ್ನಿಧಿಯಲ್ಲೇ ಚೆನ್ನಮ್ಮ ಅಂತ್ಯಕ್ರಿಯೆ ಏಕೆ? ಆ ಕುತೂಹಲದ ಘಟನೆ ನೆನೆದ ಡಾ.ಮಂಜುನಾಥ್​

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯು ಹಾಸನದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಈ ಭಾಗದಲ್ಲಿ ಕಳೆದಿದ್ದರಿಂದ ಮತ್ತು ಸ್ಥಳೀಯರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರಿಂದ ಈ ಸ್ಥಳವನ್ನು ಅಂತ್ಯಸಂಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರ ಅಳಿಯ ಡಾ.ಸಿ.ಎನ್ ಮಂಜುನಾಥ್ ತಿಳಿಸಿದ್ದಾರೆ.
Read Full Story

01:46 PM (IST) Jul 20

ಅಪ್ಸರೆಯರ ಆಸೆ ತೋರಿಸಿ ಹನಿಟ್ರ್ಯಾಪ್‌.. ಆಟೋದಲ್ಲಿ ಕಿಡ್ನ್ಯಾಪ್, ಆಮೇಲೆ ಬೆತ್ತಲೆಗೊಳಿಸಿ ವಿಕೃತಿ..!

ಬೇರೆಯವರ ವೀಕ್ನೆಸ್‌ ಅನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಸುಲಿಗೆ ಮಾಡ್ತಿರೋರಿಗೇನೂ ಕಮ್ಮಿ ಇಲ್ಲ. ಅದಕ್ಕೆ ಹೇಳೋದು ಯುವಕರು ಸ್ವಲ್ಪ ಎಚ್ಚರದಿಂದ ಇರಬೇಕು ಅಂತಾ. ಅಂತೆಯೇ ಬೆಂಗಳೂರಿನಲ್ಲಿ ಸೌಂದರ್ಯದ ಆಸೆ ತೋರಿಸಿ, ಪ್ರೀತಿಯ ಬಲೆ ಬೀಸಿ ನಿಮ್ಮ ಇಡೀ ಬದುಕನ್ನೇ ಬೀದಿಗೆ ತರುವ ಕಿರಾತಕರ ಗ್ಯಾಂಗ್‌ವೊಂದು ಸಕ್ರಿಯವಾಗಿದೆ, ಎಚ್ಚರ!

Read Full Story

12:44 PM (IST) Jul 20

ಗೂಗಲ್ ಮ್ಯಾಪ್ ನಂಬಿ ಕೆಟ್ಟ ಡ್ರೈವರ್.. ಕಾರು ಭೀಕರ ಅಪಘಾತ.. ಅಯ್ಯೋ ಏನಾಯ್ತು?

ಅಪರಿಚಿತ ಸ್ಥಳಗಳಿಗೆ ಹೋಗುವಾಗ ದಾರಿದೀಪವಾಗುವುದು ಗೂಗಲ್ ಮ್ಯಾಪ್. ಆದರೆ, ಅದೇ ಮ್ಯಾಪ್ ಕೆಲವೊಮ್ಮೆ ನಮ್ಮನ್ನು ಅಪಾಯಕ್ಕೆ ತಳ್ಳಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅಷ್ಟಕ್ಕೂ ಆಗಿದ್ದೇನು? ಸ್ಟೋರಿ ಓದಿ.

Read Full Story

12:43 PM (IST) Jul 20

ಲಂಚಕ್ಕೆ ಸೀರೆ, ಚಪ್ಪಲಿ, ಜೀನ್ಸ್ ಪ್ಯಾಂಟ್ ಕೇಳಿದ ಸರ್ಕಾರಿ ಅಧಿಕಾರಿ ಸಂತೋಷ್ ಕುಮಾರ್

ಕಲಬುರಗಿಯಲ್ಲಿ, ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷ್ ಕುಮಾರ್ ಲೋಕಂಡೆ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಪ್ರಕರಣವೊಂದರಲ್ಲಿ ರಾಜಿ ಅರ್ಜಿ ಸಲ್ಲಿಸಲು ₹10,000 ನಗದು ಹಾಗೂ ಸೀರೆ, ಬಟ್ಟೆ, ಚಪ್ಪಲಿಗಳಂತಹ ವಸ್ತುಗಳನ್ನು ಲಂಚವಾಗಿ ಕೇಳಿದ ಆರೋಪದ ಮೇಲೆ ಅವರನ್ನು ಬಲೆಗೆ ಬೀಳಿಸಲಾಗಿದೆ.
Read Full Story

12:26 PM (IST) Jul 20

ವೈದ್ಯಕೀಯ ರಂಗಕ್ಕೇ ಸವಾಲೊಡ್ಡಿ ಸಾವನ್ನು ಗೆದ್ದಿದ್ದ ಚೆನ್ನಮ್ಮ - ಕನ್ನಡಿಗೂ ಚಾಲೆಂಜ್ ಹಾಕಿದ್ದ ದೇವೇಗೌಡರ ಪತ್ನಿ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದ ನಂತರ, 2001ರಲ್ಲಿ ಅವರ ಮತ್ತು ಸೊಸೆ ಭವಾನಿ ರೇವಣ್ಣ ಮೇಲೆ ನಡೆದ ರಾಜಕೀಯ ಪ್ರೇರಿತ ಆ್ಯಸಿಡ್ ದಾಳಿಯ ಘೋರ ಘಟನೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ದಾಳಿಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಗೆದ್ದ ಅವರ ಧೈರ್ಯದ ಕಥೆಯನ್ನು ಅವರ ಅಳಿಯ ಡಾ.ಸಿ.ಎನ್. ಮಂಜುನಾಥ್ ವಿವರಿಸಿದ್ದಾರೆ.
Read Full Story

12:25 PM (IST) Jul 20

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ಸರ್ಕಾರ ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರ ವಾದಗಳಲ್ಲಿ ಬಲವಾದ ಕಾನೂನಾತ್ಮಕ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಎದುರಾಗಿದ್ದ ಕಾನೂನು ತೊಡಕನ್ನು ನಿವಾರಿಸಿದೆ.
Read Full Story

12:07 PM (IST) Jul 20

Karavali Premiere - ಮಂಗಳೂರಿನಲ್ಲಿ 'ಕರಾವಳಿ' ಪ್ರೀಮಿಯರ್ ಶೋ; ಮಿತ್ರ, ರಾಜ್‌ ಬಿ ಶೆಟ್ಟಿ ಪಾತ್ರಕ್ಕೆ ಪ್ರೇಕ್ಷಕರು ಫಿದಾ!

ಮಂಗಳೂರಿನ ಪ್ರೀಮಿಯರ್ ಶೋನಲ್ಲಿ ಭರ್ಜರಿ ಸಕ್ಸಸ್ ಕಂಡಿರುವ 'ಕರಾವಳಿ' ಚಿತ್ರ ಜುಲೈ 24ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಮತ್ತು ಮಿತ್ರ ಅವರ ತ್ರಿವೇಣಿ ಸಂಗಮವನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿರಸಿಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

Read Full Story

12:02 PM (IST) Jul 20

ಹಂಪಿಯಲ್ಲಿ ಬಿದ್ದಿರೋ ಖಾಲಿ ಪ್ಲಾಸ್ಟಿಕ್ ಬಾಟಲ್‌ಗೆ ದರ ನಿಗಿದಿ; ಪುರಾತತ್ವ ಇಲಾಖೆಯ ಯೋಜನೆ

ವಿಶ್ವವಿಖ್ಯಾತ ಹಂಪಿಯನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು, ಹಂಪಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆ ಹೊಸ ಯೋಜನೆ ಜಾರಿಗೆ ತಂದಿದೆ. ಪ್ರವಾಸಿಗರು ಬಳಸಿದ ಖಾಲಿ ಪ್ಲಾಸ್ಟಿಕ್‌ ಬಾಟಲಿಗಳನ್ನು ನಿಗದಿತ ಯಂತ್ರದಲ್ಲಿ ಹಾಕಿದರೆ, ಪ್ರತಿ ಬಾಟಲಿಗೆ ಹಣ ಪಡೆಯಬಹುದು. ಈ ಕ್ರಮವು ಹಂಪಿಯಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಪರಿಸರ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.

Read Full Story

11:46 AM (IST) Jul 20

ಪುನರ್ವಸು ಮಳೆಗೆ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ; ಕೃಷಿ ಚುಟುವಟಿಕೆ ಚುರುಕು

ಶೃಂಗೇರಿ ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆಯ ನಡುವೆಯೂ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಶೃಂಗೇರಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
Read Full Story

11:34 AM (IST) Jul 20

ಶಿವಮೊಗ್ಗ-ನರಸಿಂಹರಾಜಪುರ- ಕೊಪ್ಪ ಮಾರ್ಗವಾಗಿ ಶೃಂಗೇರಿ ರೇಲ್ವೆ ಮಾರ್ಗ; ಆಗುಂಬೆ ಸುರಂಗ ಮಾರ್ಗ

ಶಿವಮೊಗ್ಗದಿಂದ ಶೃಂಗೇರಿಗೆ ರೈಲು ಮಾರ್ಗ ಕಲ್ಪಿಸುವಂತೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ, ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುವ ಆತಂಕ ವ್ಯಕ್ತವಾಗಿದ್ದು, ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ರೂಪಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆಗುಂಬೆಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆದಿದೆ.
Read Full Story

11:19 AM (IST) Jul 20

ಡಿಸೈನ್ ಡಿಸೈನ್ ನಿಂದನೆ, 15 ವರ್ಷದಲ್ಲಿ ಎಷ್ಟೊಂದು ಬದಲಾವಣೆ - ವ್ಯತ್ಯಾಸ ಹೇಳಿದ ಕವಿರಾಜ್

ಗೀತ ರಚನೆಕಾರ ಕವಿರಾಜ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, 15 ವರ್ಷಗಳ ಹಿಂದೆ ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿದಾಗ ಸಿಕ್ಕ ಪ್ರತಿಕ್ರಿಯೆಗೂ, ಇಂದು ಸೋನಮ್ ವಾಂಗ್‌ಚುಕ್ ಹೋರಾಟ ಬೆಂಬಲಿಸಿದಾಗ ಸಿಗುತ್ತಿರುವ ದ್ವೇಷದ ಪ್ರತಿಕ್ರಿಯೆಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ.

Read Full Story

11:01 AM (IST) Jul 20

'ಕೀಬೋರ್ಡ್ ಶೂರರಿಗೆ ಐಶ್ವರ್ಯಾ ಸಿಂಧೋಗಿ ಖಡಕ್ ವಾರ್ನಿಂಗ್.. 'ನಕಲಿ ಫ್ರೊಫೈಲ್' ಖದೀಮರ ವಿರುದ್ಧ ಕೇಸ್!

'ನನ್ನ ಖಾಸಗಿತನಕ್ಕೆ ಧಕ್ಕೆ ತರುತ್ತಿರುವ ಈ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು" ಎಂದು ಖಡಕ್ ಆಗಿ ಹೇಳಿದ್ದಾರೆ. ಸದ್ಯ ಸಂಜಯ್ ನಗರ ಪೊಲೀಸರು FIR ದಾಖಲಿಸಿಕೊಂಡಿದ್ದು, ಸೈಬರ್ ಕ್ರೈಮ್ ತಜ್ಞರ ನೆರವಿನೊಂದಿಗೆ ಈ 'ನಕಲಿ ಫ್ರೊಫೈಲ್' ಖದೀಮರ ಜಾಲವನ್ನು ಭೇದಿಸಲು ಸಜ್ಜಾಗಿದ್ದಾರೆ ಪೊಲೀಸರು.

Read Full Story

10:43 AM (IST) Jul 20

ದಾಂಡೇಲಿ ಜಿಪ್‌ ಲೈನ್ ಅಪಘಾತ - 40 ಅಡಿ ಎತ್ತರದಿಂದ ಬಿದ್ದಾಗ ಏನಾಯಿತು? ಈಗ ಯುವಕನ ಸ್ಥಿತಿ ಏನಾಗಿದೆ?

ದಾಂಡೇಲಿಯಲ್ಲಿ ಜಿಪ್ ಲೈನ್ ಆಡುವಾಗ ತಾಂತ್ರಿಕ ದೋಷದಿಂದ 40 ಅಡಿ ಎತ್ತರದಿಂದ ಬಿದ್ದು ವಿಜಯಪುರದ ಯುವಕ ಕುಬೇರ ಸುರಪುರ ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡೂ ಕೈ-ಕಾಲುಗಳ ಮೂಳೆಗಳು ಮುರಿದು ಹಾಸಿಗೆ ಹಿಡಿದಿರುವ ಅವರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದ ರೆಸಾರ್ಟ್, ಇದೀಗ ಸ್ಪಂದಿಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Read Full Story

09:33 AM (IST) Jul 20

ರೋಹಿತ್ - ಗಂಭೀರ್ ಬಿಸಿಬಿಸಿ ಮಾತುಕತೆಯ ವಿಡಿಯೋ ವೈರಲ್.. ಇಬ್ಬರ ಮಧ್ಯೆ ನಡೆದಿದ್ದೇನು..?

ವೈರಲ್ ಆಯ್ತು ರೋಹಿತ್-ಗಂಭೀರ್ ಮಾತುಕತೆಯ ವಿಡಿಯೋ! ಇಬ್ಬರ ನಡುವೆ ವೈಮನಸ್ಸು ಎಂಬ ಸುದ್ದಿಗೆ ಲಾರ್ಡ್ಸ್ ಮೈದಾನದಲ್ಲೇ ಸಿಕ್ಕಿತು ಉತ್ತರ. ರೋಹಿತ್ ಶತಕದ ಸಂಭ್ರಮದ ನಡುವೆ ಕೋಚ್ ಜೊತೆಗಿನ ಈ ವಿಡಿಯೋ ಈಗ ಸಖತ್ ಸೌಂಡ್ ಮಾಡ್ತಿದೆ

Read Full Story

08:54 AM (IST) Jul 20

ಬಿಗ್ ಮೆಸೇಜ್ ಪಾಸ್ ಮಾಡಿದ ಸೋನಂ ವಾಂಗ್ಚುಕ್.. ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ 3 ಕಂಡೀಷನ್ಸ್

ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್, ತಮ್ಮ ಮುಷ್ಕರವನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರದ ಮುಂದೆ ಮೂರು ಕಟ್ಟುನಿಟ್ಟಿನ ಷರತ್ತುಗಳನ್ನು ಇಟ್ಟಿದ್ದಾರೆ. ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸರ್ಕಾರದ ಹೊಣೆಗಾರಿಕೆ, ಸಂಸತ್ತಿಗೆ ತೆರಳಲು ಅವಕಾಶ, ಮತ್ತು ಶಿಕ್ಷಣ ಸುಧಾರಣೆಯ ಭರವಸೆ ಈ ಷರತ್ತುಗಳಲ್ಲಿ ಸೇರಿವೆ.
Read Full Story

08:23 AM (IST) Jul 20

ಬೆಂಗಳೂರು ಜನಗಳೇ, ಅಲರ್ಟ್‌.. ಇವತ್ತು ಈ ಏರಿಯಾಗಳಲ್ಲಿ ಕರೆಂಟ್ ಇರೋದಿಲ್ಲ..!

ಕೆಪಿಟಿಸಿಎಲ್‌ನ ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜಾಲಹಳ್ಳಿ, ಸಹಕಾರನಗರ, ಜಕ್ಕೂರು ಸೇರಿದಂತೆ ವಸತಿ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.
Read Full Story

08:23 AM (IST) Jul 20

ಹೊಳೆನರಸೀಪುರದಲ್ಲಿ ಸ್ವಯಂಪ್ರೇರಿತ ಬಂದ್, ಚೆನ್ನಮ್ಮ ನಿಧನ ಹಿನ್ನಲೆಯಲ್ಲಿ ದುಃಖದಲ್ಲಿರುವ ಜನ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ ಹಿನ್ನಲೆಯಲ್ಲಿ ಹೊಳೆನರಸೀಪುರದಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಚೆನ್ನಮ್ಮ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Read Full Story

More Trending News