LIVE NOW
Published : Jul 09, 2026, 06:49 AM ISTUpdated : Jul 09, 2026, 10:42 PM IST

Karnataka News Live: ದಾನ್ಯ ತುಂಬಿದ ಡಬ್ಬಿಯಲ್ಲಿ ಹುಳುಗಳಾಗುತ್ತಿವೆಯಾ? ಈ 2 ಎಲೆಗಳಿಂದ ಒಂದೇ ದಿನದಲ್ಲಿ ನೀಡಿ ಶಾಶ್ವತ ಮುಕ್ತಿ!

ಸಾರಾಂಶ

ನವದೆಹಲಿ: ರಾಜ್ಯದ ಜನರಿಗೆ ಇಂದಿರಾ ಕಿಟ್ ವಿತರಿಸುವ ಯೋಜನೆಯ ಟೆಂಡರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಆದಷ್ಟು ಬೇಗ ಈ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ದೆಹಲಿಯಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ರಾಜ್ಯಕ್ಕೆ ಬರಬೇಕಾದ ₹1902 ಕೋಟಿ ಹಣವನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ರಾಜ್ಯದಿಂದ ಅಡಿಟ್ ವರದಿ ನೀಡಲಾಗಿದೆ. 

ಬಾಕಿ ಹಣವನ್ನು ಕೇಂದ್ರ ಸರ್ಕಾರ ಬೇಗ ನೀಡಿದರೆ ರೈತರಿಗೆ ತಲುಪಿಸಲು ಸಹಾಯ ಆಗುತ್ತದೆ. ಮೊದಲ ಹಂತದಲ್ಲಿ ₹190 ಕೋಟಿ ಕೇಂದ್ರ ಬಿಡುಗಡೆ ‌ಮಾಡಿದ್ದು, ಉಳಿದಂತೆ ಎಂಎಸ್‌ಪಿ ಅಡಿ ನೀಡುವ ಅನುದಾನ ಬಿಡುಗಡೆಯಾಗಬೇಕಿದೆ ಎಂದು ತಿಳಿಸಿದರು.

10:42 PM (IST) Jul 09

ದಾನ್ಯ ತುಂಬಿದ ಡಬ್ಬಿಯಲ್ಲಿ ಹುಳುಗಳಾಗುತ್ತಿವೆಯಾ? ಈ 2 ಎಲೆಗಳಿಂದ ಒಂದೇ ದಿನದಲ್ಲಿ ನೀಡಿ ಶಾಶ್ವತ ಮುಕ್ತಿ!

ಮಳೆಗಾಲದ ತೇವಾಂಶದಿಂದ ದ್ವಿದಳ ಧಾನ್ಯಗಳಲ್ಲಿ ಕೀಟಗಳು ಬರುವುದು ಸಾಮಾನ್ಯ. ಈ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲದೇ, ದಾನ್ಯಗಳ ಸಂಗ್ರಹಣೆ, ಮತ್ತು ಅವುಗಳ ಶುಚಿತ್ವವಾಗಿಡುವುದು ಹೇಗೆಂದು ಈ ಸ್ಟೋರಿ ನೀಡಲಾಗಿದೆ.  

Read Full Story

10:31 PM (IST) Jul 09

Tabaahi Song ಟ್ರೆಂಡಿಂಗ್‌ನಲ್ಲಿ ನಂ.1 - ಯಶ್ ಸ್ವ್ಯಾಗ್ ಜೊತೆ ಯೋಗರಾಜ್ ಭಟ್ ಮ್ಯಾಜಿಕ್ ಏನು?

Toxic Tabaahi Song: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಮೊದಲ ವಿಡಿಯೊ ಹಾಡು 'ತಬಾಹಿ' ಬಿಡುಗಡೆಯಾದ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

Read Full Story

10:05 PM (IST) Jul 09

Investment - ಕೇವಲ 67 ರೂಪಾಯಿಯಿಂದ ಕೋಟಿ ಕೋಟಿ ಸಂಪಾದನೆ ಸಾಧ್ಯನಾ? ಈ ಸೂತ್ರ ನಿಮಗಾಗಿ!

ವ್ಯವಸ್ಥಿತವಾಗಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ₹1 ಕೋಟಿ ಸಂಪತ್ತು ಸೃಷ್ಟಿಸಬಹುದು. ಚಕ್ರಬಡ್ಡಿಯ ಲಾಭ, ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುವುದು ಮತ್ತು ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಈ ಗುರಿಯನ್ನು ತಲುಪಲು ಪ್ರಮುಖ ಅಂಶಗಳಾಗಿವೆ. ಕೋಟಿ ಸೂತ್ರ ಫಾರ್ಮುಲಾ ಇಲ್ಲಿದೆ ನೋಡಿ!

Read Full Story

10:00 PM (IST) Jul 09

'ಬೆಂಗಳೂರು ಅಂದ್ರೆ ದೇವರ ಎಸಿ ರೂಮ್‌..' ಉದ್ಯಾನನಗರಿಯ ವೆದರ್‌ಗೆ ಫಿದಾ ಆದ ನಟಿ ಗಿರಿಜಾ ಓಕ್‌

ಬಾಲಿವುಡ್ ನಟಿ ಗಿರಿಜಾ ಓಕ್ ಅವರು ತಮ್ಮ ಮೊದಲ ಬೆಂಗಳೂರು ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ರೈಲಿನಿಂದ ಇಳಿಯುತ್ತಿದ್ದಂತೆ ನಗರದ ತಂಪಾದ ಹವಾಮಾನವು ಎಸಿ ಆನ್ ಮಾಡಿದಂತೆ ಭಾಸವಾಯಿತು ಎಂದ ಅವರು, ನಗರದ ಮಧ್ಯದಲ್ಲಿರುವ ಉದ್ಯಾನವನಗಳ ಸೌಂದರ್ಯ ಮತ್ತು ಅಲ್ಲಿನ ಪ್ರಶಾಂತ ವಾತಾವರಣವನ್ನು ಕೊಂಡಾಡಿದ್ದಾರೆ.
Read Full Story

09:12 PM (IST) Jul 09

High Court - ನಿಮ್ಮ ಪತಿ ಸಾಲ ಮಾಡಿ ತೀರಿ ಹೋಗಿದ್ದಾರಾ? ಆ ಸಾಲ ಅವರ ಪತ್ನಿಯರು ತೀರಿಸಬೇಕಿಲ್ಲ! ಹೈಕೋರ್ಟ್ ಇತಿಹಾಸದಲ್ಲೇ ಅಪರೂಪದ ತೀರ್ಪು!

ಪತಿ ಮಾಡಿದ ಸಾಲಕ್ಕೆ ಪತ್ನಿ ನೇರ ಕಾರಣವಗುತ್ತಾಳಾ? ಮೃತ ವ್ಯಕ್ತಿ ಸಾಲ ಯಾರಿಂದ ವಸೂಲಿ ಮಾಡಬಹುದೆಂದದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

08:39 PM (IST) Jul 09

ಟೀಮ್ ಇಂಡಿಯಾದಲ್ಲಿ ನಡೀತಿದೆಯಾ ನೆಪೋಟಿಸಂ? ಇಬ್ಬರು ಪ್ಲೇಯರ್ಸ್, ಆ 3 ತಪ್ಪುಗಳೇನು?

ಟೀಮ್ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ನಡೆ ನೆಪೋಟಿಸಂ ಚರ್ಚೆಗೆ ಕಾರಣವಾಗಿದೆ. ಕಳಪೆ ಪ್ರದರ್ಶನದ ಹೊರತಾಗಿಯೂ ಈ ಆಟಗಾರರಿಗೆ ಮಣೆ ಹಾಕುತ್ತಿರುವುದು ತಂಡದ ಸೋಲಿಗೆ ಕಾರಣವಾಗಬಹುದೇ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಈ ಕುರಿತು

Read Full Story

08:18 PM (IST) Jul 09

Mysaa - ನೀರಿನೊಳಗೆ ರಶ್ಮಿಕಾ ಮಂದಣ್ಣ ಭರ್ಜರಿ ಫೈಟಿಂಗ್! 'ಮೈಸಾ' ಚಿತ್ರಕ್ಕಾಗಿ 20 ಗಂಟೆ ಡೇಂಜರಸ್ ಸ್ಟಂಟ್

ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ 'ಮೈಸಾ' ಚಿತ್ರಕ್ಕಾಗಿ ಒಂದು ದೊಡ್ಡ ಅಂಡರ್‌ವಾಟರ್ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮುಗಿಸಿದ್ದಾರೆ. ಇದು ಭಾರತದಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರು ಮಾಡಿದ ನೀರೊಳಗಿನ ಫೈಟ್ ಎಂದು ಹೇಳಲಾಗುತ್ತಿದೆ.

Read Full Story

07:37 PM (IST) Jul 09

SIM Card - ಸಿಮ್ ಕಾರ್ಡ್ ಯಾಕೆ ಬೇಕು? ಇದು ಹೇಗೆ ಕೆಲಸ ಮಾಡುತ್ತೆ? ಇದರ ಅಸಲಿ ಕೆಲಸ 90% ಜನರಿಗೆ ಗೊತ್ತೇ ಇಲ್ಲ!

SIM ಎಂದರೆ ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್ (Subscriber Identity Module). ಇದೊಂದು ಚಿಕ್ಕ ಚಿಪ್ ಆಗಿದ್ದು, ನಮ್ಮ ಮೊಬೈಲ್ ಅನ್ನು ಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕಿಸುತ್ತದೆ.

Read Full Story

07:31 PM (IST) Jul 09

₹80 ಲಕ್ಷ ಇದ್ದರೆ ರಿಟೈರ್ಮೆಂಟ್ ಸಾಧ್ಯನಾ? ನೆಮ್ಮದಿಗಾಗಿ 'ಸರ್ಕಾರಿ ಕೆಲಸ' ಬಿಡಲು ಹೊರಟ ಮಹಿಳೆಯ ವೈರಲ್ ಪೋಸ್ಟ್!

ಅತಿಯಾದ ಕೆಲಸದ ಒತ್ತಡ ಹಾಗೂ ಬರ್ನೌಟ್‌ನಿಂದ ಬೇಸತ್ತ 31 ವರ್ಷದ ಪಿಎಸ್‌ಯು ಮಹಿಳಾ ಉದ್ಯೋಗಿಯೊಬ್ಬರು, ನೆಮ್ಮದಿಗಾಗಿ ತಮಗಿದ್ದ ಸರ್ಕಾರಿ ಕೆಲಸ ಬಿಡಲು ನಿರ್ಧರಿಸಿದ್ದಾರೆ. ತಮ್ಮಲ್ಲೇ ₹80 ಲಕ್ಷದ ಹೂಡಿಕೆ ನಿಧಿ ಇಟ್ಟುಕೊಂಡು ನಿವೃತ್ತಿ ಹೊಂದಲು ಬಯಸಿದ ಅವರ ವೈರಲ್ ರೆಡ್ಡಿಟ್ ಪೋಸ್ಟ್, ಆರ್ಥಿಕ ಭದ್ರತೆಗಿಂತ ಮಾನಸಿಕ ನೆಮ್ಮದಿ ಮುಖ್ಯವೇ ಎಂಬ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

07:18 PM (IST) Jul 09

Ramayana Trailer - 4000 ಕೋಟಿ ಸಿನಿಮಾದ ಟ್ರೇಲರ್ ಡೇಟ್ ಫಿಕ್ಸ್? ರಾವಣನಾಗಿ ಯಶ್ ಲುಕ್ ರಿವೀಲ್ ಆಗುತ್ತಾ?

Ramayana Trailer Release Date: ಭಾರತೀಯ ಚಿತ್ರರಂಗದಲ್ಲೇ ಬಹುನಿರೀಕ್ಷೆ ಹುಟ್ಟಿಸಿರುವ ರಣಬೀರ್ ಕಪೂರ್ ಅವರ 'ರಾಮಾಯಣ' ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ.

Read Full Story

07:08 PM (IST) Jul 09

Electoion - ಪಂಚಾಯಿತಿ ಫೈಟ್; ನಡೆದಿದೆಯಾ ವಾರ್ಡ್ ಮೀಸಲಾತಿಯಲ್ಲಿ ತಾರತಮ್ಯ? ಇಲ್ಲಿದೆ ಆಕ್ಷೇಪಣೆ ಅರ್ಜಿ ಮಾಹಿತಿ!

ಗ್ರಾಮ ಪಂಚಾಯತ್ ಚುನಾವಣೆಯ ಕರಡು ಮೀಸಲಾತಿ ಪಟ್ಟಿಯಲ್ಲಿನ ದೋಷಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಈ ಸ್ಟೋರಿ ಮಾರ್ಗದರ್ಶನವಾಗಲಿದೆ. ಅರ್ಜಿಯನ್ನು ಹೇಗೆ ಸಿದ್ಧಪಡಿಸಬೇಕು, ಯಾವ ಕಾರಣಗಳನ್ನು ನೀಡಬೇಕು, ಮತ್ತು ನಿಗದಿತ ಸಮಯದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ ಇದು ವಿವರಿಸುತ್ತದೆ.   

Read Full Story

07:01 PM (IST) Jul 09

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಮಾಜಿ ಪ್ರಿಯತಮನಿಂದ ಚಾಕು ಇರಿತ - ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ

ಪ್ರೀತಿಯನ್ನು ನಿರಾಕರಿಸಿ, ಕುಟುಂಬದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದ ಯುವತಿಗೆ ಆಕೆಯ ಮಾಜಿ ಪ್ರಿಯತಮನೇ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ.

Read Full Story

06:05 PM (IST) Jul 09

ಹರಿಪ್ರಸಾದ್‌ಗೆ ಸಿಗುತ್ತಾ ಸಚಿವ ಸ್ಥಾನ? ಇತ್ತ ಸತೀಶ ತೀವ್ರ ಅಸಮಾಧಾನ! ಬಿಕೆ ಮಿನಿಸ್ಟರ್‌ ಕುರಿತು ಮಾಜಿ ಸಿಎಂ ಹೇಳಿದ್ದಿಷ್ಟೇ!

ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಕೆ ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡಲು ತೀವ್ರ ಒಲವು ತೋರಿದ್ದಾರೆ. ಈ ಬೆಳವಣಿಗೆಯು ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ಅಸಮಾಧಾನವನ್ನು ಉಂಟುಮಾಡಿದ್ದು, ಇಬ್ಬರ ನಡುವೆ ಮುನಿಸು ಮೂಡಿದೆ ಎನ್ನಲಾಗಿದೆ.

Read Full Story

06:00 PM (IST) Jul 09

ಕರ್ನಾಟಕದ ಜಲಾಶಯಗಳಿಗೆ ಹರಿದುಬಂದ ಜಲರಾಶಿ - ಒಂದೇ ದಿನದಲ್ಲಿ ಆಲಮಟ್ಟಿಗೆ 11 ಟಿಎಂಸಿ ನೀರು

ಮಹಾರಾಷ್ಟ್ರ ಮತ್ತು ಕರ್ನಾಟಕದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ರಾಜ್ಯದ ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳಲ್ಲಿ 20 ಟಿಎಂಸಿ ನೀರು ಹರಿದುಬಂದಿದೆ. ಕೃಷ್ಣಾ ಕೊಳ್ಳದ ಆಲಮಟ್ಟಿ, ಘಟಪ್ರಭಾ ಜಲಾಶಯಗಳು ಗಣನೀಯ ಪ್ರಮಾಣದ ನೀರನ್ನು ಪಡೆದಿದೆ.

Read Full Story

05:51 PM (IST) Jul 09

'ಕರಾವಳಿ' ಡಬ್ಬಿಂಗ್ ವಿವಾದ - ನಿರ್ದೇಶಕ ಗುರುದತ್‌ಗೆ ಪ್ರಶ್ನೆಗಳ ಸುರಿಮಳೆಗೈದ ಪನ್ನಗಾಭರಣ

Karavali Dubbing Controversy: ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ವಿವಾದದ ಕೇಂದ್ರಬಿಂದುವಾಗಿದೆ.

Read Full Story

05:49 PM (IST) Jul 09

India vs England 4th T20I - ಒಂದು ಪೈಸೆ ಖರ್ಚಿಲ್ಲದೇ ಫ್ರೀ ಆಗಿ ಲೈವ್ ಮ್ಯಾಚ್ ನೋಡೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಬ್ರಿಸ್ಟೊಲ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯವನ್ನು ನೀವು ಯಾವುದೇ ರೀಚಾರ್ಜ್ ಇಲ್ಲದೇ ಉಚಿತವಾಗಿ ವೀಕ್ಷಿಸಬಹುದು. ಅದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.

 

Read Full Story

05:31 PM (IST) Jul 09

ಬೆಂಗಳೂರಿನ Manyata Tech Park ಸಮೀಪ ವಂದೇ ಭಾರತ್‌ ಸ್ಲೀಪರ್‌ ರೈಲಿನ ಡಿಪೋ, 14 ಹೆಕ್ಟೇರ್‌ ಭೂಸ್ವಾಧೀನ ಆರಂಭಿಸಿದ ರೈಲ್ವೇಸ್‌

ಬೆಂಗಳೂರಿನ ಥಣಿಸಂದ್ರದಲ್ಲಿ 'ವಂದೇ ಭಾರತ್ ಸ್ಲೀಪರ್' ರೈಲುಗಳ ನಿರ್ವಹಣೆಗಾಗಿ ಬೃಹತ್ ಡಿಪೋ ನಿರ್ಮಿಸಲು SWR ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ. ಈ ಯೋಜನೆಯು ಅತ್ಯಾಧುನಿಕ ವರ್ಕ್‌ಶಾಪ್‌ಗಳು ಮತ್ತು ರೈಲು ನಿಲುಗಡೆ ಹಳಿಗಳನ್ನು ಒಳಗೊಂಡಿರಲಿದ್ದು, ಇದರ ನಿರ್ಮಾಣಕ್ಕೆ ಈಗಾಗಲೇ ಗುತ್ತಿಗೆಯನ್ನೂ ನೀಡಲಾಗಿದೆ.

Read Full Story

05:11 PM (IST) Jul 09

ಟೀಚರ್ ಬೈದ್ರು ಎಂದು ದುರಂತ ಅಂತ್ಯಕಂಡ ವಿದ್ಯಾರ್ಥಿನಿ.. ಕಣ್ಣಾಲೆಗಳ ಒದ್ದೆ ಮಾಡ್ತಿವೆ ಆಕೆಯ ವಿದಾಯದ ಸಾಲುಗಳು..

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ ಎಳೆಯ ಮನಸ್ಸೊಂದು ಶಿಕ್ಷಕಿಯ ನಿರ್ಲಕ್ಷ್ಯ ಮತ್ತು ಅವಮಾನಕ್ಕೆ ಬಲಿಯಾಗಿದೆ. ಮರಸೂರು ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮಧುಶ್ರೀ (14) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದ್ದು, ಬಾಲಕಿ ಬರೆದಿಟ್ಟ ಚೀಟಿಯು ಕಣ್ಣಂಚನ್ನು ತೇವಗೊಳಿಸಿದೆ

Read Full Story

05:00 PM (IST) Jul 09

Cricket - ಸಚಿನ್, ದ್ರಾವಿಡ್ ನಂತರ, ಅಂಡರ್-19 ತಂಡಕ್ಕೆ ಮತ್ತೊಬ್ಬ ದಿಗ್ಗಜನ ಪುತ್ರ ಎಂಟ್ರಿ!

ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಪುತ್ರರ ನಂತರ, ಇದೀಗ ಮತ್ತೊಬ್ಬ ದಿಗ್ಗಜನ ಪುತ್ರ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿರುವ ಅವರು, ಕ್ರಿಕೆಟ್‌ ಲೋಕದಲ್ಲಿ ಸದ್ದು ಮಾಡುತ್ತಿದ್ದಾರೆ.  

Read Full Story

04:44 PM (IST) Jul 09

'40 ವರ್ಷ ಆಗುವವರೆಗೂ ಮಗನಿಗೆ ಮದುವೆ ಮಾಡಲ್ಲ' - ಬಿಗ್ ಬಾಸ್ ಡಾಗ್ ಸತೀಶ್ ಹೇಳಿಕೆ ವೈರಲ್

'ಬಿಗ್ ಬಾಸ್ ಕನ್ನಡ ಸೀಸನ್ 12' ಖ್ಯಾತಿಯ ಡಾಗ್ ಸತೀಶ್ ಮತ್ತೊಮ್ಮೆ ತಮ್ಮ ಮಾತುಗಳಿಂದ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಬಾರಿ ಅವರು ಮಗನ ಸಿನಿಮಾ ಪ್ರವೇಶ, ಮದುವೆ ಹಾಗೂ ತಮ್ಮ ವೈಯಕ್ತಿಕ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.

Read Full Story

04:36 PM (IST) Jul 09

ಮದ್ಯಪ್ರಿಯರ ಶೈಲಿ ಬದಲಿಸಿದ ಹೊಸ AIB ನೀತಿ - ಮೊದಲ ತ್ರೈಮಾಸಿಕದಲ್ಲೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದಾಖಲೆಯ ಆದಾಯ!

ರಾಜ್ಯದಲ್ಲಿ ಜಾರಿಗೆ ಬಂದಿರುವ ಹೊಸ 'ಆಲ್ಕೋಹಾಲ್ ಇನ್ ಬೆವರೇಜ್' (AIB) ತೆರಿಗೆ ನೀತಿಯು ಸೌಮ್ಯ ಬಿಯರ್‌ಗಳ ದರವನ್ನು ಗಣನೀಯವಾಗಿ ಇಳಿಸಿದೆ. ಇದರ ಪರಿಣಾಮವಾಗಿ, ಬಿಯರ್ ಮಾರಾಟದಲ್ಲಿ ದಾಖಲೆಯ ಏರಿಕೆಯಾಗಿದ್ದು, ಸರ್ಕಾರದ ಆದಾಯ ಹೆಚ್ಚಳವಾಗಿದೆ ಮತ್ತು ಗ್ರಾಹಕರು ಸ್ಟ್ರಾಂಗ್ ಮದ್ಯದಿಂದ ಮೈಲ್ಡ್ ಬಿಯರ್‌ನತ್ತ ಆಕರ್ಷಿತರಾಗುತ್ತಿದ್ದಾರೆ.
Read Full Story

04:23 PM (IST) Jul 09

ಅಭಿಷೇಕ್ ಶರ್ಮಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ಹೈಕೋರ್ಟ್‌ನಿಂದ ಸಮನ್ಸ್ ಜಾರಿ

ಕೆಲವು ಆನ್‌ಲೈನ್ ವೇದಿಕೆಗಳು ಟೀಂ ಇಂಡಿಯಾ ಸ್ಟಾರ್ ಅಭಿಷೇಕ್ ಶರ್ಮಾ ಅವರ ನಿದ್ದೆಗೆಡಿಸಿದ್ದವು. ಅವುಗಳ ವಿರುದ್ಧ ಕಾನೂನು ಸಮರ ಸಾರಿದ್ದ ಅಭಿಷೇಕ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಏನಿದು ಕೇಸ್ ಅನ್ನೋ ವಿವರ ಇಲ್ಲಿದೆ.. 

Read Full Story

04:17 PM (IST) Jul 09

'ಹುಡುಗಿಯರ ಜೊತೆ ಇದ್ದರೆ ಮಾತ್ರ ಬಾಂಡ್ ಅಲ್ಲ' - ಶಿವಣ್ಣ ಮಾತು ವೈರಲ್

‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಶಿವರಾಜ್‌ಕುಮಾರ್‌, ಡಾಲಿ ಧನಂಜಯ ಕಾಂಬಿನೇಶನ್‌ನ ಈ ಚಿತ್ರವನ್ನು ಹೇಮಂತ್‌ ರಾವ್‌ ನಿರ್ದೇಶಿಸಿದ್ದು, ವೈಶಾಖ್ ನಿರ್ಮಿಸಿದ್ದಾರೆ.

Read Full Story

04:14 PM (IST) Jul 09

ಪೋಸ್ಟ್ ಆಫೀಸ್ ಬಿಗ್‌ ಸ್ಕೀಮ್; ಕೇವಲ 2,000 ರೂ. ಠೇವಣಿ ಇಟ್ಟರೆ ಲಕ್ಷಾಂತರ ರೂ, ನಿಮ್ಮ ಕೈಸೇರುತ್ತದೆ! ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ!

ಅಂಚೆ ಕಚೇರಿ ಯೋಜನೆ ಎನ್ನುವದು ಸರ್ಕಾರಿ ಗ್ಯಾರಂಟಿಯೊಂದಿಗೆ ಬರುವ ಸುರಕ್ಷಿತ ಹೂಡಿಕೆಯಾಗಿದೆ. ಪ್ರತಿ ತಿಂಗಳು ₹2,000 ದಂತಹ ಸಣ್ಣ ಮೊತ್ತ 5 ವರ್ಷಗಳ ಕಾಲ ಹೂಡಿಕೆ ಮಾಡುವ ಮೂಲಕ, 6.7% ಬಡ್ಡಿದರದಲ್ಲಿ ಗಮನಾರ್ಹವಾದ ನಿಧಿ ಹೇಗೆ ಸೃಷ್ಟಿಸಬಹುದು ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ! 

Read Full Story

03:45 PM (IST) Jul 09

ಕೋಟಿ ಕೋಟಿ ಆಫರ್ ಬದಿಗಿಟ್ಟು ರಿಸ್ಕ್ ತಗೊಂಡ ಐಐಟಿ ಉದ್ಯೋಗಿ! ಜುಕರ್‌ಬರ್ಗ್ ಆಫರ್ ತಿರಸ್ಕರಿಸಿದ ರಿಷಭ್ ಅಗರ್ವಾಲ್

ಸ್ವಂತ ಎಐ ಸ್ಟಾರ್ಟ್‌ಅಪ್ ಕಟ್ಟುವ ಉದ್ದೇಶದಿಂದ ಐಐಟಿ ಬಾಂಬೆ ಪದವೀಧರ ರಿಷಭ್ ಅಗರ್ವಾಲ್ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ನೀಡಿದ ₹8.5 ಕೋಟಿ (1M$) ಸಂಬಳದ ಆಫರ್ ತಿರಸ್ಕರಿಸಿದ್ದಾರೆ. ಕೋಟಿ ಆಫರ್ ಬದಿಗಿಟ್ಟು ಭಾರತದಲ್ಲೇ ತಂತ್ರಜ್ಞಾನ ಕ್ರಾಂತಿ ಮಾಡಲು ಹೊರಟಿರುವ ಯುವಕನ ಧೈರ್ಯಕ್ಕೆ ಟೆಕ್ ಲೋಕ ಮೆಚ್ಚುಗೆ ವ್ಯಕ್ತಪಡಿಸಿದೆ.

Read Full Story

03:23 PM (IST) Jul 09

ಪ್ರಯಾಣಿಕರ ಗಮನಕ್ಕೆ - ಬೆಂಗಳೂರು-ಚೆನ್ನೈ ಮಾರ್ಗದ ಹಲವು ರೈಲುಗಳ ಸಂಚಾರ ಭಾಗಶಃ ರದ್ದು!

ರೈಲ್ವೆ ಹಳಿಗಳ ನಿರ್ವಹಣಾ ಕಾಮಗಾರಿಯಿಂದಾಗಿ ಜುಲೈ 2026ರ ನಿರ್ದಿಷ್ಟ ದಿನಾಂಕಗಳಲ್ಲಿ ಬೆಂಗಳೂರು ಮತ್ತು ಚೆನ್ನೈ ನಡುವಿನ ಹಲವು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಲಾಲ್‌ಬಾಗ್ ಎಕ್ಸ್‌ಪ್ರೆಸ್ ಮತ್ತು ಜೋಲಾರ್‌ಪೇಟೆ ಮೆಮು ಸೇರಿದಂತೆ ಕೆಲವು ರೈಲುಗಳ ಸಂಚಾರವನ್ನು ಮೊಟಕುಗೊಳಿಸಲಾಗಿದ್ದು, ಪ್ರಯಾಣಿಕರು NTES ಮೂಲಕ ನೈಜ-ಸಮಯದ ಸ್ಥಿತಿಗತಿ ಪರಿಶೀಲಿಸಲು ರೈಲ್ವೆ ಇಲಾಖೆ ಸೂಚಿಸಿದೆ.
Read Full Story

02:48 PM (IST) Jul 09

ಹಾಸನ - ಮನೆ ಮುಂದೆ ಜಾನುವಾರು ಕಟ್ಟುವಾಗ ಕಾಡಾನೆ ದಾಳಿ! ಸೊಂಡಿಲಿನಿಂದ ಎತ್ತಿ ಬಿಸಾಡಿದ ಸಲಗ, ರೈತ ಗಂಭೀರ ಗಾಯ!

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ, ಮನೆಯ ಮುಂದೆ ಜಾನುವಾರು ಕಟ್ಟುತ್ತಿದ್ದ ಸಿದ್ದಶೆಟ್ಟಿ ಎಂಬ ರೈತನ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಆನೆಯು ಸೊಂಡಿಲಿನಿಂದ ಎತ್ತಿ ಬಿಸಾಡಿದ್ದರಿಂದ ತೀವ್ರವಾಗಿ ಗಾಯಗೊಂಡ ರೈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

02:43 PM (IST) Jul 09

ಬೆಂಗಳೂರು ಮೂಲಸೌಕರ್ಯಕ್ಕೆ ₹1.5 ಲಕ್ಷ ಕೋಟಿ - ಮೆಟ್ರೋ ಜಾಲ 500 ಕಿ.ಮೀ.ಗೆ ವಿಸ್ತರಣೆ ಗುರಿ, ಎಐ ವಿವಿ ಸ್ಥಾಪನೆ!

'ಟಾರ್ಗೆಟ್ ಇಂಡಿಯಾ' ಕಾರ್ಯಕ್ರಮದಲ್ಲಿ,  ಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು 1.50 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಲ್ಲಿ 500 ಕಿ.ಮೀ. ಮೆಟ್ರೋ ವಿಸ್ತರಣೆ, 40 ಕಿ.ಮೀ. ಸುರಂಗ ರಸ್ತೆ ನಿರ್ಮಾಣ  ಸೇರಿವೆ.

Read Full Story

02:38 PM (IST) Jul 09

ಕೋಟಿ ಕೋಟಿ ಆಫರ್ ಬದಿಗಿಟ್ಟು ರಿಸ್ಕ್ ತಗೊಂಡ ಐಐಟಿ ಉದ್ಯೋಗಿ! ಜುಕರ್‌ಬರ್ಗ್ ಆಫರ್ ತಿರಸ್ಕರಿಸಿದ ರಿಷಭ್ ಅಗರ್ವಾಲ್

ಸ್ವಂತ ಎಐ ಸ್ಟಾರ್ಟ್‌ಅಪ್ ಕಟ್ಟುವ ಉದ್ದೇಶದಿಂದ ಐಐಟಿ ಬಾಂಬೆ ಪದವೀಧರ ರಿಷಭ್ ಅಗರ್ವಾಲ್ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ನೀಡಿದ ₹8.5 ಕೋಟಿ (1M$) ಸಂಬಳದ ಆಫರ್ ತಿರಸ್ಕರಿಸಿದ್ದಾರೆ. ಕೋಟಿ ಆಫರ್ ಬದಿಗಿಟ್ಟು ಭಾರತದಲ್ಲೇ ತಂತ್ರಜ್ಞಾನ ಕ್ರಾಂತಿ ಮಾಡಲು ಹೊರಟಿರುವ ಯುವಕನ ಧೈರ್ಯಕ್ಕೆ ಟೆಕ್ ಲೋಕ ಮೆಚ್ಚುಗೆ ವ್ಯಕ್ತಪಡಿಸಿದೆ.

Read Full Story

02:16 PM (IST) Jul 09

'ಬರ್ತೀನಿ ಅಂದ್ರೆ..' ರಾಜ್ಯ ರಾಜಕಾರಣಕ್ಕೆ ಎಂಟ್ರಿ ಬಗ್ಗೆ ಕುಮಾರಸ್ವಾಮಿ ಮಹತ್ವದ ಹೇಳಿಕೆ

ಕುಮಾರಸ್ವಾಮಿ ಅವರು ತಾವು ದೆಹಲಿಯಲ್ಲಿದ್ದರೂ ಕರ್ನಾಟಕದ ಪ್ರತಿ ಬೆಳವಣಿಗೆಯ ಮೇಲೆ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾಗುವ ಮುನ್ಸೂಚನೆ ನೀಡಿದ್ದಾರೆ. ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಅನ್ನೋದ್ರ ವಿವರ ಇಲ್ಲಿದೆ.

Read Full Story

02:00 PM (IST) Jul 09

ದೇಶದ ಗಮನ ಸೆಳೆದ ಬೆಂಗಳೂರ 5 ರೂ. ಇಡ್ಲಿ - 60 ವರ್ಷದಿಂದ ಅದೇ ಟೇಸ್ಟ್​- ಅಜ್ಜನ ಕೈರುಚಿಗೆ ಜನರು ಫಿದಾ

ಕನಕಪುರದಲ್ಲಿ 70 ವರ್ಷದ ರಾಮಚಂದ್ರ ಅವರು ತಮ್ಮ ತಂದೆ ಸ್ಥಾಪಿಸಿದ 5 ದಶಕಗಳಷ್ಟು ಹಳೆಯದಾದ 'ಕೋಟೆ ಮನೆ ಇಡ್ಲಿ' ಅಂಗಡಿಯನ್ನು ನಡೆಸುತ್ತಿದ್ದಾರೆ. ಪ್ರತಿದಿನ ಉರುವಲು ಒಲೆಯ ಮೇಲೆ ತಯಾರಿಸಿದ 1500 ಇಡ್ಲಿಗಳನ್ನು ಕೇವಲ 5 ರೂಪಾಯಿಗೆ ಮಾರಾಟ ಮಾಡುವ ಮೂಲಕ, ಅವರು ತಮ್ಮ ಕುಟುಂಬದ ಪರಂಪರೆಯನ್ನು ಉತ್ಸಾಹದಿಂದ ಮುಂದುವರಿಸುತ್ತಿದ್ದಾರೆ.
Read Full Story

01:16 PM (IST) Jul 09

ಅಮೆರಿಕದಲ್ಲಿ ಕಮರಿ ಹೋಯಿತು ಆಂಧ್ರ ವಿದ್ಯಾರ್ಥಿನಿಯ ಕನಸು.. ಕಣ್ಣೀರಲ್ಲಿ ಮುಳುಗಿದ ಹೆತ್ತವರು

ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮುಗಿಸಿ ಕುಟುಂಬಕ್ಕೆ ಆಧಾರವಾಗಬೇಕಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಪ್ರಸನ್ನ ಅಟ್ಲೂರಿ, ನ್ಯೂಯಾರ್ಕ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರೈತ ಕುಟುಂಬದ ಮಗಳಾಗಿದ್ದ ಅವರ ಕನಸು ನುಚ್ಚುನೂರಾಗಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಕುಟುಂಬ ಆರ್ಥಿಕ ನೆರವಿಗಾಗಿ ಮನವಿ ಮಾಡಿದೆ.
Read Full Story

12:58 PM (IST) Jul 09

ಬಿಡದಿ ಟೌನ್ ಶಿಪ್ ವಿರುದ್ಧದ ಹೋರಾಟಕ್ಕೆ ಆನೆಬಲ; ಪ್ರತಿಭಟನೆಗೆ ಧುಮುಕಿದ ಸಂತೋಷ್ ಹೆಗ್ಡೆ

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ 485 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿದೆ. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರ ಭೂಮಿ ಉಳಿಸುವ ನ್ಯಾಯಯುತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
Read Full Story

12:58 PM (IST) Jul 09

ಬಿಡದಿ ಟೌನ್‌ಶಿಪ್ ವಿವಾದದ ಬೆನ್ನಲ್ಲೇ ಮತ್ತೊಂದು ಸಮಗ್ರ ಟೌನ್‌ಶಿಪ್‌ಗೆ ಟೆಂಡರ್ ಕರೆದ ರಾಜ್ಯ ಸರ್ಕಾರ!

ರಾಜ್ಯ ಸರ್ಕಾರವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಜಿಎಫ್ ಸಮಗ್ರ ಟೌನ್‌ಶಿಪ್ ಯೋಜನೆಗೆ ಮರುಜೀವ ನೀಡಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) ನಿರ್ಮಾಣವಾಗಲಿರುವ ಈ ಯೋಜನೆಯು, ಬೆಂಗಳೂರಿಗೆ ವಲಸೆ ತಡೆಯುವ ಮತ್ತು ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಬಳಿ ಹೊಸ ಆರ್ಥಿಕ ವಲಯ ಸೃಷ್ಟಿಸುವ ಗುರಿ ಹೊಂದಿದೆ. ಇದಕ್ಕಾಗಿ KUIDFC ಸಲಹೆಗಾರರ ನೇಮಕಕ್ಕೆ ಟೆಂಡರ್ ಕರೆದಿದೆ.
Read Full Story

12:16 PM (IST) Jul 09

ಬೆಂಗಳೂರಿನ ಬನಶಂಕರಿಯಲ್ಲಿ 280 ಮೀ. ಉದ್ದ, 6 ಮೀ. ಅಗಲದ ಸ್ಕೈವಾಕ್; ಹೊಸ ಫ್ಲೈಓವರ್

ಬೆಂಗಳೂರಿನ ಬನಶಂಕರಿ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಮತ್ತು ಫ್ಲೈಓವರ್ ನಿರ್ಮಾಣದ ಕುರಿತು ಸಭೆ ನಡೆದಿದೆ. ಮೆಟ್ರೋ ಮತ್ತು ಬಸ್ ನಿಲ್ದಾಣವನ್ನು ಸಂಪರ್ಕಿಸುವ ಈ ಯೋಜನೆಯು ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಅಂತಿಮ ನಿರ್ಧಾರಕ್ಕಾಗಿ ವಿಸ್ತೃತ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ.
Read Full Story

12:05 PM (IST) Jul 09

ಕಾಪಾಡಿ, ಕಾಪಾಡಿ ಎಂದು ಕಂಬದ ಮೇಲೆಯೇ ಪ್ರಾಣಬಿಟ್ಟ ಕಾರ್ಮಿಕ ; ಹೃದಯ ವಿದ್ರಾವಕ ಘಟನೆ

ಬಳ್ಳಾರಿಯ ಸಂಗನಕಲ್ ಗ್ರಾಮದ ಬಳಿ, ಜೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಹುಲಗಪ್ಪ ಎಂಬ 22 ವರ್ಷದ ಯುವಕ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಸುರಕ್ಷತಾ ಕ್ರಮಗಳಿಲ್ಲದೆ, ಲೈನ್ ಕ್ಲಿಯರೆನ್ಸ್ ಪಡೆಯದೆ ಕಂಬ ಹತ್ತಿಸಿದ್ದರಿಂದ, ಆತ ಸುಮಾರು 15 ನಿಮಿಷಗಳ ಕಾಲ ನರಳಾಡಿ ಪ್ರಾಣ ಬಿಟ್ಟಿದ್ದಾನೆ.

Read Full Story

11:46 AM (IST) Jul 09

ಮಳೆಗಾಲದಲ್ಲಿ ಕೆಲಸ ಮಾಡೋ ಚೆಸ್ಕಾಂ ಸಿಬ್ಬಂದಿಗೆ ಕಾಡಾನೆಗಳಿಂದ ಜೀವಭಯ! ಈ ದೃಶ್ಯ ನೋಡಿದ್ರೆ ಜೀವ ಬಾಯಿಗೆ ಬರುತ್ತೆ!

ಸಕಲೇಶಪುರ ತಾಲೂಕಿನ ಲಕ್ಕುಂದ ಗ್ರಾಮದ ಬಳಿ ಲೈನ್ ದುರಸ್ತಿ ಮುಗಿಸಿ ವಾಪಸಾಗುತ್ತಿದ್ದ ಚೆಸ್ಕಾಂ ಸಿಬ್ಬಂದಿಯ ವಾಹನದ ಮೇಲೆ ಒಂಟಿ ಸಲಗವೊಂದು ದಾಳಿಗೆ ಯತ್ನಿಸಿದೆ. ತಡರಾತ್ರಿ ನಡೆದ ಈ ಘಟನೆ ವಾಹನದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಬ್ಬಂದಿ ಅದೃಷ್ಟವಶಾತ್ ಪಾರಾಗಿದ್ದಾರೆ.

Read Full Story

11:01 AM (IST) Jul 09

ಹಾರೋಹಳ್ಳಿಯಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ? ಹೊಸ ಸ್ಥಳದತ್ತ ಸರ್ಕಾರದ ಚಿಂತನೆ

ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಸಂಭಾವ್ಯ ಸ್ಥಳವಾಗಿ ಹಾರೋಹಳ್ಳಿಯನ್ನು ಪರಿಗಣಿಸುವಂತೆ CM ಸೂಚಿಸಿದ್ದಾರೆ. ಈಗಾಗಲೇ ಶಾರ್ಟ್‌ಲಿಸ್ಟ್ ಮಾಡಲಾಗಿರುವ ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ ಜೊತೆಗೆ, ಕಡಿಮೆ ಭೂಸ್ವಾಧೀನ ವೆಚ್ಚ ಹಾಗೂ ಗ್ರಾಮಗಳ ಸ್ಥಳಾಂತರ ತಪ್ಪಿಸುವ ಸ್ಥಳಕ್ಕೆ ಸರ್ಕಾರ ಆದ್ಯತೆ ನೀಡಲಿದೆ.

Read Full Story

10:46 AM (IST) Jul 09

ಹಾಸನದ ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವ ದೇಗುಲದಲ್ಲೂ ದೇಣಿಗೆ ಕಳವು! ವಿಡಿಯೋಗ್ರಾಫರ್ ಪೊಲೀಸರ ವಶಕ್ಕೆ

ಹಾಸನ ಪಟ್ಟಣದ ಶ್ರೀ ಚನ್ನಕೇಶವ ದೇಗುಲದ ಹುಂಡಿ ಹಣ ಎಣಿಕೆ ಮಾಡುವ ವೇಳೆ ₹1.98 ಲಕ್ಷ ನಗದು ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಗ್ರಾಫರ್ ನೀಲಕಂಠ ಸಿಕ್ಕಿಬಿದ್ದಿದ್ದು ಹೇಗೆ?

Read Full Story

10:45 AM (IST) Jul 09

ಬೆಂಗಳೂರು ನಿವಾಸಿಗಳೇ ಗಮನಿಸಿ, ಬಿಡಾಡಿ ವಾಹನಗಳ ತೆರವಿಗೆ ಜಿಬಿಎ ಮಹಾ ಕಾರ್ಯಾಚರಣೆ, ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಿ

ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಲು ಜಿಬಿಎ ಮತ್ತು ಸಂಚಾರಿ ಪೊಲೀಸರು ಜುಲೈ 10 ರಿಂದ ಜಂಟಿ ಕಾರ್ಯಾಚರಣೆ ಆರಂಭಿಸಲಿದ್ದಾರೆ. 7 ದಿನಗಳ ನೋಟಿಸ್ ನೀಡಿದ ನಂತರವೂ ತೆರವುಗೊಳಿಸದ ವಾಹನಗಳನ್ನು ಜಪ್ತಿ ಮಾಡಿ ಹರಾಜು ಹಾಕಲಾಗುವುದು, ಸಾರ್ವಜನಿಕರು 'Public Eye' ಆಪ್ ಮೂಲಕ ದೂರು ನೀಡಬಹುದು.
Read Full Story

More Trending News