ಬೆಂಗಳೂರು: ‘ಎಚ್.ಡಿ.ಕುಮಾರಸ್ವಾಮಿ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆ ಇದೆ. ಆಗುವುದಾದರೆ ಬೇಗ ವಿಲೀನವಾಗಲಿ. ಆಗ ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ ಎಂಬ ಗೊಂದಲವಿರುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ, ಜೆಡಿಎಸ್‌ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ ಎಂಬ ಗೊಂದಲ ಇರುವುದಿಲ್ಲ. ಅವರು ಬೇಗ ತೀರ್ಮಾನ ಮಾಡಿದರೆ ನಾವು ನಮ್ಮ ತೀರ್ಮಾನ ಮಾಡಿಕೊಳ್ಳಬಹುದು. ಈಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಆಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

10:13 PM (IST) Jan 09
ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಚಾಲಕನು ಸಮಯಪ್ರಜ್ಞೆ ಮೆರೆದು, ಟ್ರ್ಯಾಕ್ಟರ್ ಅನ್ನು ದೂರ ಚಲಾಯಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ. ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಯಿತು.
09:53 PM (IST) Jan 09
ಬಿಗ್‌ಬಾಸ್ ಸ್ಪರ್ಧಿ ಗಿಲ್ಲಿ ನಟನ ಅಭಿಮಾನಿಯೊಬ್ಬರು ಅವರ ಟ್ಯಾಟೂ ಹಾಕಿಸಿಕೊಳ್ಳಲು ಬಂದಿದ್ದಾರೆ. ಆದರೆ, ಟ್ಯಾಟೂ ಹಾಕುವುದು ಕಷ್ಟವಾಗುತ್ತಿದೆ ಎಂದು ಕಲಾವಿದರೊಬ್ಬರು ತಮಾಷೆಯಾಗಿ, ಬಿಗ್‌ಬಾಸ್‌ಗೆ ಮತ್ತು ಕಲರ್ಸ್ ವಾಹಿನಿಗೆ ಗಿಲ್ಲಿಗೆ ಬಾಚಣಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ.
09:47 PM (IST) Jan 09
09:14 PM (IST) Jan 09
ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿಗೆ ಹಸ್ತಾಂತರಿಸಿದೆ. ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಸೇರಿದಂತೆ ಹಲವು ನಾಯಕರ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಮುಖ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗಾಗಿ ಈ ನಿರ್ಧಾರ.
09:09 PM (IST) Jan 09
ಬಿಗ್‌ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ, 'ಗಿಲ್ಲಿ ನಟ' ವಿನ್ನರ್ ಆಗುವ ಮಾತುಗಳು ಬಲವಾಗಿವೆ. ಈ ನಡುವೆ, ಸಹ ಸ್ಪರ್ಧಿ ರಿಷಾ ಗೌಡ ಅವರು ಗಿಲ್ಲಿ ನಟನ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅವನನ್ನು ಎಲ್ಲರೂ ಮೆಟ್ಟಿಲಿನಂತೆ ಬಳಸಿಕೊಳ್ಳುತ್ತಾರೆ ಎಂದಿರೋ ರಿಷಾ ಹೇಳಿದ್ದೇನು?
09:01 PM (IST) Jan 09
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್‌ನಲ್ಲಿ ಕಾಣಿಸಿಕೊಂಡ ಉಕ್ರೇನಿಯನ್-ಅಮೇರಿಕನ್ ನಟಿ ನಟಾಲಿ ಬರ್ನ್, ಬೋಲ್ಡ್ ದೃಶ್ಯಗಳಿಂದಾಗಿ ಭಾರೀ ಸದ್ದು ಮಾಡುತ್ತಿದ್ದಾರೆ. ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ ಅವರ ಇನ್ಸ್‌ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
07:14 PM (IST) Jan 09
ಸುಜಾತಾ ಬಂಧನ ಪ್ರಕರಣಕ್ಕೆ ಸಂಬಂಧ ಕೇಂದ್ರ ಸಚಿವ ಜೋಶಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ. ಪೊಲೀಸರು ಕಾಂಗ್ರೆಸ್ ಕೈಗೊಂಬೆಯಾಗಿದ್ದು, ಹಳೆಯ ವಿಡಿಯೋ ಬಳಸಿ ರಾಜಕೀಯ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣದ ಸಿಐಡಿ ತನಿಖೆ ತಿರಸ್ಕರಿಸಿ, ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.
07:04 PM (IST) Jan 09
ದಾಂಡೇಲಿಯ ಹಿರಿಯ ವಕೀಲ ಅಜಿತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಯಲ್ಲಾಪುರ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಮುಖ ಆರೋಪಿ ಪಾಂಡುರಂಗ ಕಾಂಬಳೆಯನ್ನು ದೋಷಿ ಎಂದು ಘೋಷಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ ನಾಲ್ವರನ್ನು ಖುಲಾಸೆಗೊಳಿಸಲಾಗಿದ್ದು, ದೋಷಿಗೆ ಶಿಕ್ಷೆಯ ಪ್ರಮಾಣ ಜ.13ರಂದು ಪ್ರಕಟವಾಗಲಿದೆ.
06:42 PM (IST) Jan 09
ಮಾಜಿ ಆಟಗಾರ ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹಿಂಪಡೆದು ಮರಳಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಅನಿರೀಕ್ಷಿತವಾಗಿ ನಿವೃತ್ತಿ ಘೋಷಿಸಿದ್ದ ಕೊಹ್ಲಿಯ ನಿರ್ಧಾರವನ್ನು ಸಂಜಯ್ ಮಂಜ್ರೇಕರ್ ಟೀಕಿಸಿದ್ದರು.
06:39 PM (IST) Jan 09
ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರು ಕೊಡಗಿನಲ್ಲಿ ಫಾರ್ಮ್ ಹೌಸ್ ನಿರ್ಮಾಣದ ನೆಪದಲ್ಲಿ ಅಕ್ರಮವಾಗಿ ಬೃಹತ್ ರೆಸಾರ್ಟ್.. ಭೂ ಪರಿವರ್ತನೆ ಮಾಡದೆ, ಪರಿಸರ ಸೂಕ್ಷ್ಮ ವಲಯದ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸುತ್ತಿರುವ ಈ ಕಟ್ಟಡಕ್ಕೆ ತಹಶೀಲ್ದಾರರಿಂದ ನೋಟಿಸ್ ಜಾರಿ
06:00 PM (IST) Jan 09
ಸಚಿವ ಜಮೀರ್ ಅಹ್ಮದ್ ಖಾನ್, 2028ರ ವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆದಿದ್ದಾರೆ. ಸಿದ್ದರಾಮಯ್ಯ ನಂತರ ಡಿಕೆಶಿ ಮುಖ್ಯಮಂತ್ರಿಯಾಗಲಿದ್ದು, ಪಂಚ ಗ್ಯಾರಂಟಿಗಳ ಆಧಾರದ ಮೇಲೆ ಮುಂಬರುವ ಚುನಾವಣೆ ಎದುರಿಸುವುದಾಗಿ ತಿಳಿಸಿದರು.
05:58 PM (IST) Jan 09
ಸರ್ಕಾರಿ ಭೂಮಿ ಒತ್ತುವರಿ ಆರೋಪದ ಮೇಲೆ ಶ್ರೀ ಶ್ರೀ ರವಿಶಂಕರ್ ವಿರುದ್ಧ ದಾಖಲಾದ ಎಫ್‌ಐಆರ್ ತನಿಖೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಬೆಂಗಳೂರಿನ ಕಗ್ಗಲೀಪುರ ಗ್ರಾಮದಲ್ಲಿನ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ, ದಾಖಲೆಗಳನ್ನು ಪರಿಶೀಲಿಸದೆ ತಡೆ ನೀಡುವುದು ಸೂಕ್ತವಲ್ಲ ಎಂದಿದೆ.
05:52 PM (IST) Jan 09
ಟೀಂ ಇಂಡಿಯಾ ಕ್ರಿಕೆಟಿಗ ಇಶಾಂತ್ ಶರ್ಮಾ ಅವರು ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಕೊಪ್ಪಳದ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, 575 ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆದಿದ್ದಾರೆ.
05:45 PM (IST) Jan 09
ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಸುವರ್ಣ ನ್ಯೂಸ್‌ನ ಮಂಜುನಾಥ್ ಟಿ. ಕನ್ನಡ ಪ್ರಭ ಅನಂತ ನಾಡಿಗ್ ಸೇರಿ 30 ಪತ್ರಕರ್ತರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹಿರಿಯ ಪತ್ರಕರ್ತೆ ಸರಿತಾ ರೈ ಅವರಿಗೆ ವಿಶೇಷ ಪ್ರಶಸ್ತಿ ಘೋಷಿಸಲಾಗಿದೆ.
05:18 PM (IST) Jan 09
ಕರ್ನಾಟಕ ಸರ್ಕಾರವು 'ಶುಚಿ' ಯೋಜನೆಯಡಿ, ಮುಂದಿನ ಶೈಕ್ಷಣಿಕ ವರ್ಷದಿಂದ 9 ರಿಂದ 12ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಈ ಕ್ರಮವು, ಯಶಸ್ವಿ ಪ್ರಾಯೋಗಿಕ ಯೋಜನೆಯ ನಂತರ ಜಾರಿಯಾಗುತ್ತಿದೆ.
05:14 PM (IST) Jan 09
ಹುಬ್ಬಳ್ಳಿಯ ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರ ವರ್ತನೆಯನ್ನು ಖಂಡಿಸಿ, ಪ್ರಕರಣದ ವಿಡಿಯೋ ವೈರಲ್ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದರು. ಈ ಘಟನೆ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಆಗ್ರಹಿಸಿದರು..
05:10 PM (IST) Jan 09
05:08 PM (IST) Jan 09
ದಾಂಡೇಲಿ ಎಸಿಎಫ್ ಮದನ್ ನಾಯ್ಕ ಅವರ ಸಾವಿಗೆ ಸಂಬಂಧಿಸಿದ 14 ವರ್ಷಗಳ ಹಳೆಯ ಪ್ರಕರಣದಲ್ಲಿ ಯಲ್ಲಾಪುರ ಸಂಚಾರಿ ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. 12 ಆರೋಪಿಗಳ ಪೈಕಿ 8 ಮಂದಿಯನ್ನು ದೋಷಿಗಳೆಂದು ಘೋಷಿಸಿದ್ದು, ಮುಖ್ಯ ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
04:39 PM (IST) Jan 09
ಬಿಗ್ ಬಾಸ್ ಸೀಸನ್ 12ರ ಅಂತಿಮ ಹಂತದಲ್ಲಿ, ಸ್ಪರ್ಧಿ ಕಾವ್ಯಾ ಮಾಜಿ ಸ್ಪರ್ಧಿ ಶಿಶಿರ್ ಶಾಸ್ತ್ರಿಯೊಂದಿನ ಒಡನಾಟ ರಿವೀಲ್ ಮಾಡಿದ್ದಾರೆ. ಬಿಗ್ ಬಾಸ್ ಮನೆ ಜೀವನದ ಸಮಸ್ಯೆಗಳನ್ನು ಎದುರಿಸಲು ಧೈರ್ಯ ನೀಡುತ್ತದೆ ಎಂಬ ಶಿಶಿರ್ ಮಾತನ್ನು ಕಾವ್ಯಾ ನೆನಪಿಸಿಕೊಂಡಾಗ ಗಿಲ್ಲಿ ನಟ ಕೂಡ ಅಲ್ಲಿಯೇ ಇದ್ದರು.
04:08 PM (IST) Jan 09
ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡೆಲಿವರಿ ಬಾಯ್ ಓರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯುವತಿಯ ಕಿರುಚಾಟದಿಂದ ಹೆದರಿ ಪರಾರಿಯಾದ ಆರೋಪಿ, ಮತ್ತೆ ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
03:40 PM (IST) Jan 09
ಆನೇಕಲ್‌ನ ಚಂದಾಪುರದಲ್ಲಿ ಯಶಸ್ವಿನಿ ಎಂಬ 23 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಕಾಲೇಜು ಉಪನ್ಯಾಸಕರು ಮತ್ತು ಆಡಳಿತ ಮಂಡಳಿಯ ನಿರಂತರ ಕಿರುಕುಳ ಹಾಗೂ ಅವಮಾನವೇ ತನ್ನ ಮಗಳ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
02:58 PM (IST) Jan 09
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್‌ಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆ ಹೊರಡಿಸಿದೆ. ಜನಸಂಖ್ಯೆ ಆಧಾರದ ಮೇಲೆ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
02:25 PM (IST) Jan 09
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಯಾರು ಕಳಪೆ? ಯಾರು ಉತ್ತಮ? ಎಂಬ ಟಾಸ್ಕ್ ನಡೆದಿದೆ. ಇದು ಬಿಗ್ ಬಾಸ್ ಶೋನ ಕೊನೆಯ ವಾರದ ಕಳಪೆ, ಉತ್ತಮ ಆಗಿರಲಿದೆ. ಈಗ ರಾಶಿಕಾ ಶೆಟ್ಟಿ ಅವರು ರಕ್ಷಿತಾಗೆ ಕಳಪೆ ಕೊಟ್ಟಿದ್ದಾರೆ.
02:15 PM (IST) Jan 09
ಬೆಂಗಳೂರಿನ ಮಹದೇವಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ ದೀಪಕ್ ಮೇಲೆ ಇಬ್ಬರು ಯುವಕರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ಮಧ್ಯಪ್ರವೇಶಿಸಿ ಹಲ್ಲೆಕೋರರಿಗೆ ಧರ್ಮದೇಟು ನೀಡಿ ಡೆಲಿವರಿ ಬಾಯ್‌ನನ್ನು ರಕ್ಷಿಸಿದ್ದಾರೆ. ಆದರೆ, ಗಾಯಾಳು ದೀಪಕ್, ಬೆಂಗಳೂರು ಕೆಲಸ ಬಿಟ್ಟು ಬಿಹಾರಕ್ಕೆ ಹೋದನು.
02:03 PM (IST) Jan 09
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ತಮ್ಮ ಸ್ವಭಾವದಿಂದಲೇ ಅನೇಕರ ಮನಸ್ಸು ಗೆದ್ದಿದ್ದಾರೆ. ಕೆಲವೊಮ್ಮೆ ಇವರ ನಿರ್ಧಾರಗಳು, ತೀರ್ಮಾನ, ವರ್ತನೆ ಅನೇಕರಿಗೆ ಟೀಕೆ ಆಗಿದ್ದುಂಟು. ಈಗ ಇವರ ಬಾಯ್‌ಫ್ರೆಂಡ್ ಬಗ್ಗೆ ಮಾಹಿತಿ ಹೊರಬಿದ್ದಿದೆ.
01:03 PM (IST) Jan 09
ಹುಬ್ಬಳ್ಳಿಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದ್ದಾರೆ. ಇದೇ ವೇಳೆ, ಸಂತ್ರಸ್ತರನ್ನು ಭೇಟಿಯಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಮರ್ಥಿಸಿಕೊಂಡರು.
12:51 PM (IST) Jan 09
ಮೃದು ಇಡ್ಲಿಗಾಗಿ ಟಿಪ್ಸ್: ಮೃದುವಾದ ಇಡ್ಲಿ ಮಾಡೋದು ಹೇಗೆ ಅಂತ ಹೆಚ್ಚಿನ ಮಹಿಳೆಯರಿಗೆ ಪ್ರಶ್ನೆ ಇರುತ್ತೆ. ಕೆಲವು ಸುಲಭ ಟ್ರಿಕ್ಸ್ ಮತ್ತು ಟಿಪ್ಸ್ ಬಳಸಿ ನೀವು ಮೃದುವಾದ ಇಡ್ಲಿ ತಯಾರಿಸಬಹುದು. .
12:43 PM (IST) Jan 09
12:42 PM (IST) Jan 09
12:35 PM (IST) Jan 09
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳನ್ನು ಸಿಲುಕಿಸಬೇಕು ಎಂದು ಶ್ರೇಷ್ಠ ಮಹಾ ಪ್ಲ್ಯಾನ್ ಮಾಡಿದ್ದಳು. ಹೀಗಾಗಿ ಅವಳು ತಾಂಡವ್‌ಗೆ ವಿಷ ಕುಡಿಸಿದ್ದಳು. ಮೊದಲ ಹೆಂಡತಿ ಟಾರ್ಚರ್ ಕೊಟ್ಟಳು ಎಂದು ತಾಂಡವ್ ವಿಷ ಕುಡಿದಿದ್ದಾನೆ ಎಂದು ಬಿಂಬಿಸಿದ್ದಳು.
12:10 PM (IST) Jan 09
ಇತ್ತೀಚೆಗೆ ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆನ್ನಲಾದ ಸಂತ್ರಸ್ತೆ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯ ಹಳೆಯ ಹನಿಟ್ರ್ಯಾಪ್ ಪ್ರಕರಣದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಆಕೆ ತುಕಾರಾಮ್ ಎಂಬ ವ್ಯಕ್ತಿಯನ್ನು ಅಪಹರಿಸಿ, ವಿವಸ್ತ್ರಗೊಳಿಸಿ, ಅಮಾನುಷವಾಗಿ ಹಲ್ಲೆ ನಡೆಸಿರುವುದು ಇಲ್ಲಿವೆ.
12:04 PM (IST) Jan 09
ಬಿಗ್‌ಬಾಸ್ ಸೀಸನ್ 12ರ 15ನೇ ವಾರದಲ್ಲಿ ಸ್ಪರ್ಧಿಗಳು ತಮ್ಮ ನೂರರಷ್ಟು ಶಕ್ತಿಯನ್ನು ಹಾಕಿ ಆಟದಲ್ಲಿ ಭಾಗವಹಿಸುತ್ತಿದ್ದಾರೆ. ಏನೇ ಆಗಲಿ ಫಿನಾಲೆ (Bigg Boss Finale) ವಾರಕ್ಕೆ ತಲಪುವ ಗುರಿಯೊಂದಿಗೆ ಎಲ್ಲಿಯೂ ತಪ್ಪುಗಳನ್ನ ಮಾಡಿಕೊಳ್ಳದೇ ಅತ್ಯಂತ ಎಚ್ಚರಿಕೆಯಿಂದ ಆಡುತ್ತಿದ್ದಾರೆ.
11:50 AM (IST) Jan 09
11:18 AM (IST) Jan 09
Oscar Awards: ಆಸ್ಕರ್ ಅಂಗಳದಲ್ಲಿ ಹೊಂಬಾಳೆ ಫಿಲ್ಮ್ಸ್ ಅಬ್ಬರ: 'ಅತ್ಯುತ್ತಮ ಚಿತ್ರ' ವಿಭಾಗದ ಪಟ್ಟಿಯಲ್ಲಿ 'ಕಾಂತಾರ-1' ಮತ್ತು 'ಮಹಾವತಾರ ನರಸಿಂಹ' ಸಿನಿಮಾಗಳಿವೆ. ಹೌದು, ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
11:02 AM (IST) Jan 09
10:58 AM (IST) Jan 09
Bigg Boss Kannada Kavya Shaiva: ಕಾವ್ಯ ಶೈವ ಹಾಗೂ ಗಿಲ್ಲಿ ನಟ ಅವರು ಸ್ನೇಹಿತರು. ಇವರಿಬ್ಬರ ಮಧ್ಯೆ ಜಗಳ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಗಿಲ್ಲಿಯನ್ನು ಅವಾಯ್ಡ್ ಮಾಡುತ್ತಿದ್ದ ಕಾವ್ಯ ಶೈವ ಅವರು ಬೇಕಾದಾಗ ಯೂಸ್ ಮಾಡಿಕೊಳ್ತಾರೆ ಎಂಬ ಆರೋಪ ಕೇಳಿ ಬಂದಿದೆ.
10:50 AM (IST) Jan 09
ಕನಕಗಿರಿ ತಾಲೂಕಿನ ಕನ್ನೇರಮಡು ಗ್ರಾಮದ ರೈತ ಪುತ್ರ ಚಂದ್ರಶೇಖರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ 13 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
10:38 AM (IST) Jan 09
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರ ಮೇಲಿನ ಭ್ರಷ್ಟಾಚಾರದ ಆರೋಪಗಳು ಅವರಿಗೆ ಶೋಭೆ ತರುವುದಿಲ್ಲ, ಆದ್ದರಿಂದ ಅವರು ಆಡಳಿತದ ಮೇಲೆ ಹಿಡಿತ ಸಾಧಿಸಬೇಕು ಎಂದು ನಟ ಪ್ರಕಾಶ್ ರಾಜ್ ಉಡುಪಿಯಲ್ಲಿ ಸಲಹೆ ನೀಡಿದ್ದಾರೆ. ತಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ ಎಂದು ಹೇಳಿದ್ದಾರೆ.
10:22 AM (IST) Jan 09
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ, ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಸ್ವತಃ ದಾಸೋಹದ ಟೇಬಲ್ ಸ್ವಚ್ಛಗೊಳಿಸುವ ಮೂಲಕ ತಮ್ಮ ಸರಳತೆಯನ್ನು ಮೆರೆದಿದ್ದಾರೆ. ಅವರ ಈ ಕಾಯಕ ಯೋಗದ ವಿಡಿಯೋ ವೈರಲ್ ಆಗಿದೆ.
10:11 AM (IST) Jan 09