ಶಿರಸಿ: ಕಳೆದ ವಾರದಿಂದ ತೀವ್ರ ಕುಡಿಯುವ ನೀರಿನ ಅಭಾವ ಹಾಗೂ ಆತಂಕವನ್ನು ಎದುರಿಸುತ್ತಿರುವ ಶಿರಸಿ ತಾಲೂಕಿನ ಲಂಡಕ್ನಳ್ಳಿ ಗ್ರಾಮದಲ್ಲಿ 6ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಮುಖ್ಯ ಮೂಲವಾಗಿರುವ ಕೊಳವೆ ಬಾವಿಗಳಲ್ಲಿ ಎಣ್ಣೆ (ಆಯಿಲ್) ಮಿಶ್ರಿತ ನೀರು ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯರಲ್ಲಿ ಸಾರ್ವಜನಿಕರ ದಿನನಿತ್ಯದ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಾವಿ ನೀರಿನ ಮೇಲ್ಭಾಗದಲ್ಲಿ ಎಣ್ಣೆಯ ದಪ್ಪ ಪದರ ತೇಲುತ್ತಿರುವುದರಿಂದ ನೀರು ದುರ್ವಾಸನೆಯಿಂದ ಕೂಡಿದ್ದು, ಕುಡಿಯಲು ಹಾಗೂ ಗೃಹ ಬಳಕೆಗೂ ಸಂಪೂರ್ಣ ಅಯೋಗ್ಯವಾಗಿದೆ.
ಕಳೆದ ಒಂದು ವಾರದಿಂದ ಬಾವಿಯಲ್ಲಿ ಎಣ್ಣೆ ಅಂಶ ಕಾಣಿಸಿಕೊಳ್ಳುತ್ತಿದ್ದು, ಕುಡಿಯಲು ಹನಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬಾವಿ ನೀರು ಕಲುಷಿತಗೊಳ್ಳಲು ಹತ್ತಿರದ ಎಸಳೆ ಗ್ರಿಡ್‌ನಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳಿಗೆ ಬಳಸುವ ಆಯಿಲ್ ಸೋರಿಕೆ ಆಗಿ ಬಾವಿಗಳಿಗೆ ಸೇರ್ಪಡೆಯಾಗಿರಬಹುದು ಎಂಬ ಶಂಕೆ ಮೂಡಿದೆ.
08:12 AM (IST) Nov 07
1995ರಲ್ಲಿ ಬಿಡುಗಡೆಯಾದ ಈ ಕನ್ನಡ ಸಿನಿಮಾ ಬರೋಬ್ಬರಿ 832 ಬಾರಿ ಮರು ಬಿಡುಗಡೆಯಾಗಿ ಲಿಮ್ಕಾ ದಾಖಲೆ ಬರೆದಿದೆ. 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಸುಮಾರು 300 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರ ಸ್ಯಾಂಡಲ್‌ವುಡ್‌ನ ಟಾಪ್ ಸಿನಿಮಾಗಳಲ್ಲಿ ಒಂದಾಗಿದೆ.
07:46 AM (IST) Nov 07
07:42 AM (IST) Nov 07
07:37 AM (IST) Nov 07