Published : Feb 07, 2026, 06:27 AM ISTUpdated : Feb 07, 2026, 10:47 PM IST

Karnataka News Live: ಸೂರಜ್‌ಕುಂಡ್ ಮೇಳದಲ್ಲಿ ತುಂಡಾಗಿ ಬಿದ್ದ ದೈತ್ಯ ಜಾಯಿಂಟ್ ವ್ಹೀಲ್; ಪೊಲೀಸ್ ಇನ್ಸ್‌ಪೆಕ್ಟರ್ ಸಾವು, 13 ಮಂದಿಗೆ ಗಾಯ!

ಸಾರಾಂಶ

ಹುಬ್ಬಳ್ಳಿ: ಮೊಬೈಲ್‌ನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಮತಾಂಧನನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಶುಕ್ರವಾರ ಹಿಂದೂಪರ ಸಂಘಟನೆಗಳು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದವು. ಇಲ್ಲಿನ ನೇಕಾರ ನಗರದ ದಾದಾಪೀರ ಹೆಬ್ಬಳ್ಳಿ ಎಂಬಾತ ದೇವಸ್ಥಾನವೊಂದರ ಬಳಿ ನಿಂತು ಹಿಂದೂ ದೇವರಿಗೆ ಅವಮಾನ ಮಾಡಿದ್ದ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸ್ಟೇಟಸ್‌ ಇಟ್ಟುಕೊಂಡಿದ್ದನು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಕುರಿತು ಗುರುವಾರ ಹಳೇ ಹುಬ್ಬಳ್ಳಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ದಾದಾಪೀರನನ್ನು ಬಂಧಿಸಿದ್ದರು. ಈ ಸುದ್ದಿ ಹರಡುತ್ತಿದ್ದಂತೆ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯ ಎದುರು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮತಾಂಧನನ್ನು ಕೂಡಲೇ ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈಗಾಗಲೇ ಆರೋಪಿಯ ಮೇಲೆ ದೂರು ದಾಖಲಿಸಿ ಬಂಧಿಸಲಾಗಿದೆ. ಅವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದರು.

Surajkund Mela Accident

10:47 PM (IST) Feb 07

ಸೂರಜ್‌ಕುಂಡ್ ಮೇಳದಲ್ಲಿ ತುಂಡಾಗಿ ಬಿದ್ದ ದೈತ್ಯ ಜಾಯಿಂಟ್ ವ್ಹೀಲ್; ಪೊಲೀಸ್ ಇನ್ಸ್‌ಪೆಕ್ಟರ್ ಸಾವು, 13 ಮಂದಿಗೆ ಗಾಯ!

ಪ್ರಸಿದ್ಧ ಸೂರಜ್‌ಕುಂಡ್ ಕರಕುಶಲ ಮೇಳದಲ್ಲಿ ದೈತ್ಯ ಜಾಯಿಂಟ್ ವ್ಹೀಲ್ ಮುರಿದು ಬಿದ್ದಿದೆ. ಈ ದುರಂತದಲ್ಲಿ ಜನರನ್ನು ರಕ್ಷಿಸಲು ಹೋದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮೃತಪಟ್ಟಿದ್ದು, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯು ಮೇಳದ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ.

Read Full Story

09:38 PM (IST) Feb 07

ಪೊಲೀಸಪ್ಪನೇ ಕಳ್ಳರ ಗ್ಯಾಂಗ್ ಲೀಡರ್, ತನ್ನದೇ ಸ್ಟೇಷನ್ ಕಂಬಿ ಹಿಂದೆ ಕಾನ್‌ಸ್ಟೇಬಲ್ - ಗೌಡರ ಮನೆ ಕಳ್ಳತನ ಕೇಸ್‌ಗೆ ಟ್ವಿಸ್ಟ್!

ಸಾರ್ವಜನಿಕರ ಆಸ್ತಿ ರಕ್ಷಿಸಬೇಕಾದ ಪೊಲೀಸ್ ಕಾನ್ಸ್‌ಟೇಬಲ್ ಓರ್ವನೇ ಕಳ್ಳರ ತಂಡಕ್ಕೆ ನಾಯಕನಾಗಿ ತೋಟದ ಮನೆಯಲ್ಲಿ ದರೋಡೆ ಮಾಡಿಸಿದ್ದಾನೆ. ಗ್ರಾಮದ ಅಳಿಯನಾಗಿದ್ದ ಈತ,  ಕಳ್ಳತನಕ್ಕೆ ಪಕ್ಕಾ ಸ್ಕೆಚ್ ಹಾಕಿಕೊಟ್ಟಿದ್ದು, ಇದೀಗ ಐವರು ಆರೋಪಿಗಳ ಸಹಿತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Read Full Story

09:25 PM (IST) Feb 07

ಶಿವರಾತ್ರಿ 'ಚಂದಾ' ನೀಡದ ಅಂಗಡಿ ಯುವಕನಿಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

ಬೀದರ್‌ನಲ್ಲಿ ಮಹಾಶಿವರಾತ್ರಿ ಹಬ್ಬದ ಚಂದಾ ವಸೂಲಿ ವೇಳೆ, ಕೇಳಿದಷ್ಟು ಹಣ ನೀಡದ ಕಾರಣಕ್ಕೆ ಯುವಕರ ಗುಂಪೊಂದು ಅಂಗಡಿಯಲ್ಲಿದ್ದ ಮಹೇಶ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ, ಗುಂಪಿನಲ್ಲಿದ್ದ ಓರ್ವ ಮಹೇಶ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.

Read Full Story

09:04 PM (IST) Feb 07

Vaibhav Suryavanshi - ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ 14ರ ಪೋರ ವೈಭವ್! ಈತ ಭವಿಷ್ಯದ ಸೂಪರ್‌ ಸ್ಟಾರ್?

ಕೇವಲ 14ನೇ ವಯಸ್ಸಿಗೆ ವೈಭವ್ ಸೂರ್ಯವಂಶಿ ಅನ್ನೋ ಹುಡುಗ ಅಂಡರ್-19 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಗಳನ್ನೇ ಮುರಿಯುತ್ತಿದ್ದಾನೆ. ತನ್ನ ಅದ್ಭುತ ಸ್ಟ್ರೈಕ್ ರೇಟ್‌ನಿಂದ ಭಾರತಕ್ಕೆ ಹೊಸ ಭರವಸೆಯಾಗಿದ್ದಾನೆ. ಯೂತ್ ಕ್ರಿಕೆಟ್‌ನಲ್ಲಿ ಕೊಹ್ಲಿಗಿಂತ ದೊಡ್ಡ ಆಟಗಾರ ಸಿಕ್ಕಿಬಿಟ್ಟನಾ?
Read Full Story

08:17 PM (IST) Feb 07

ಸಿಸಿಎಲ್ ಆಡಲು ಅಭಿಮಾನಿಗಳಿಗೂ ಅವಕಾಶ - 'ಕರ್ನಾಟಕ ಬುಲ್ಡೋಜರ್ಸ್' ತಂಡ ಸೇರಲು ಗಲ್ಲಿ ಕ್ರಿಕೆಟಿಗರಿಗೂ ಕಿಚ್ಚನ ಆಹ್ವಾನ!

'ಕರ್ನಾಟಕ ಬುಲ್ಡೋಜರ್ಸ್' ನಾಯಕ ಕಿಚ್ಚ ಸುದೀಪ್, ಪ್ರತಿಭೆಯುಳ್ಳ ಅಭಿಮಾನಿಗಳಿಗೆ ಸಿಸಿಎಲ್ ತಂಡ ಸೇರಲು ಮುಕ್ತ ಆಹ್ವಾನ ನೀಡಿದ್ದಾರೆ. ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಎಲ್ಲಿಯೂ ಕನ್ನಡ ಧ್ವಜ ಹಾರಿಸಲು ಹಿಂಜರಿಯಬಾರದು ಎಂದು ಧೈರ್ಯ ತುಂಬಿದ್ದಾರೆ.
Read Full Story

07:35 PM (IST) Feb 07

ಕನಕಪುರ ಶ್ರೀನಿವಾಸ್‌ಗೆ ಹುಚ್ಚು ಹಿಡಿದಿದ್ರೆ ಆಸ್ಪತ್ರೆಗೆ ಸೇರಿಸಿ; ನಾವು ಮಂಡ್ಯದವ್ರು, ನಮಗೂ ಮಾತು ಬರುತ್ತೆ-ಎಪಿ ಅರ್ಜುನ್

ಕನಕಪುರ ಶ್ರೀನಿವಾಸ್ ಅವರ ವರ್ತನೆ ನೋಡಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ. ಮನೆಯವರು ತಕ್ಷಣ ಅವರಿಗೆ ಚಿಕಿತ್ಸೆ ಕೊಡಿಸುವುದು ಒಳ್ಳೆಯದು. ನಾವೂ ಮಂಡ್ಯದವರು, ನಮಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ ಎಂದು ನಿರ್ದೇಶಕ ಎ.ಪಿ. ಅರ್ಜುನ್ ಎಚ್ಚರಿಕೆ ನೀಡಿದ್ದಾರೆ.

Read Full Story

07:15 PM (IST) Feb 07

ಬಿಗ್‌ ಬಾಸ್​ ಗೆದ್ದ ಗಿಲ್ಲಿ ಮೇಲೆ ದೊಡ್ಡ ಆರೋಪ! ನಲ್ಲಿ ಮೂಳೆ ಸ್ಟಾರ್ ಮೇಲೆ ದಾಖಲಾಯ್ತು ಕೇಸ್​..!

ಬಿಗ್ ಬಾಸ್ ಗೆದ್ದ ನಂತರ ಗಿಲ್ಲಿ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಆದರೆ, ಅವರು ನಟಿಸಿದ್ದ 'ಸರ್ಕಾರಿ ಶಾಲೆ ಎಚ್​​8' ಚಿತ್ರದ ಪ್ರಚಾರಕ್ಕೆ ಗೈರಾಗಿದ್ದಾರೆ ಎಂದು ನಿರ್ಮಾಪಕ ತೇಜಸ್ವಿ ಎಸ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.  

Read Full Story

07:06 PM (IST) Feb 07

ಸೀರಿಯಲ್​ ಮೂಲಕ 'ನಿತ್ಯ' ಎಲ್ಲರ ಮನಸ್ಸು ಕದಿತಿರೋ Bigg Boss ನಾಯಕಿ ಯಾರೀಕೆ ತಿಳಿಯಿತಾ?

ಜೀ ಕನ್ನಡದ ಜನಪ್ರಿಯ ಸೀರಿಯಲ್ ನಟಿ ಮತ್ತು ಬಿಗ್​ಬಾಸ್​ ಸ್ಪರ್ಧಿ  ತಮ್ಮ ಬಾಲ್ಯದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 'ಕರ್ಣ' ಸೀರಿಯಲ್ ಖ್ಯಾತಿಯ ನಟಿಯ ಮುದ್ದಾದ ಫೋಟೋಗಳಿಗೆ ಅಭಿಮಾನಿಗಳು ಮನಸೋತಿದ್ದು, ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ.

Read Full Story

07:03 PM (IST) Feb 07

ಬೆಂಗಳೂರು ರಸ್ತೆಯಲ್ಲಿ ಹೆಚ್ಚುತ್ತಿರುವ ರೋಡ್ ರೇಜ್, ಎರಡು ವಿಭಿನ್ನ ಘಟನೆ, ಎರಡು ವಿಭಿನ್ನ ಪ್ರತಿಕ್ರಿಯೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳಿಗೆ ಇತ್ತೀಚಿನ ಎರಡು ಘಟನೆಗಳು ಸಾಕ್ಷಿಯಾಗಿವೆ. ಒಂದು ಕಡೆ ಬೈಕ್ ಸವಾರನೊಬ್ಬನ ಅಜಾಗರೂಕ ವರ್ತನೆ ಆತಂಕ ಸೃಷ್ಟಿಸಿದರೆ, ಮತ್ತೊಂದೆಡೆ ಕಾರು ಚಾಲಕನ ನಿಂದನೆಗೆ ಬೈಕ್ ಸವಾರನೊಬ್ಬ ತೋರಿದ ಸಂಯಮವು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story

06:40 PM (IST) Feb 07

ಬೆಂಗಳೂರು ಮೆಟ್ರೋ ಬಾಗಿಲಲ್ಲೇ 10 ಹೊಸ ಬಿಎಂಟಿಸಿ ಬಸ್ ನಿಲ್ದಾಣ; ವಿಮಾನ ನಿಲ್ದಾಣವೂ ಮತ್ತಷ್ಟು ಹತ್ತಿರ!

ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ, BMRCL ಮತ್ತು BMTC ಜಂಟಿಯಾಗಿ 'ನೇರಳೆ' ಮತ್ತು 'ಹಸಿರು' ಮಾರ್ಗದ ಪ್ರಮುಖ ನಿಲ್ದಾಣಗಳ ದ್ವಾರದ ಬಳಿ ಹೊಸ ಬಸ್ ನಿಲ್ದಾಣಗಳನ್ನು ಸ್ಥಾಪಿಸಿವೆ. ಮೆಟ್ರೋ ಮತ್ತು ಬಸ್ ನಡುವಿನ ಸಂಪರ್ಕ ಸುಧಾರಿಸಿ, ಪ್ರಯಾಣಿಕರು ನಡೆಯುವ ಪ್ರಯಾಸ ಕಡಿಮೆಯಾಗಲಿದೆ.

Read Full Story

06:38 PM (IST) Feb 07

ಡಿವೈನ್ ಸ್ಟಾರ್‌ ರಿಷಬ್‌ ಶೆಟ್ಟಿಗೆ ಹೊಸ ಚಾಲೆಂಜ್​! ಮಲೆಯಾಳಂನ 1,000 ಕೋಟಿ ಬಜೆಟ್ ಸಿನಿಮಾದಲ್ಲಿ ರಿಷಬ್?

'ಕಾಂತಾರ' ಯಶಸ್ಸಿನ ನಂತರ ರಿಷಬ್ ಶೆಟ್ಟಿ ಮಲಯಾಳಂನ 1000 ಕೋಟಿ ಬಜೆಟ್‌ನ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರವು 'ರಂಡಮೂಳಂ' ಕಾದಂಬರಿ ಆಧಾರಿತವಾಗಿದ್ದು, ಈ ಹಿಂದೆ ಮೋಹನ್‌ಲಾಲ್ ನಟಿಸಬೇಕಿದ್ದ ಭೀಮನ ಪಾತ್ರಕ್ಕೆ ಈಗ ರಿಷಬ್ ಶೆಟ್ಟಿ ಹೆಸರು ಕೇಳಿಬರುತ್ತಿದೆ.
Read Full Story

06:21 PM (IST) Feb 07

ಗೃಹಲಕ್ಷ್ಮಿ ಹಣಕ್ಕೆ ಹೊಸ ರೂಲ್ಸ್? ಇನ್ಮುಂದೆ 'ಜೀವಿತ ಪ್ರಮಾಣ ಪತ್ರ' ಕಡ್ಡಾಯ; ಸಿಎಂ ಮಹತ್ವದ ಆದೇಶ

ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಸೋರಿಕೆ ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತರಲು ಚಿಂತಿಸುತ್ತಿದೆ. ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ಪ್ರತಿ ವರ್ಷ 'ಜೀವಿತ ಪ್ರಮಾಣ ಪತ್ರ' ಸಲ್ಲಿಸುವುದು ಕಡ್ಡಾಯವಾಗುವ ಸಾಧ್ಯತೆಯಿದ್ದು, ಈ ಪ್ರಸ್ತಾವನೆ ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

Read Full Story

06:05 PM (IST) Feb 07

ಬೆಂಗಳೂರು ಮೆಟ್ರೋ ದರ ಏರಿಕೆಗೆ ಸದ್ಯಕ್ಕೆ ತಡೆ, ಸಂಸದ ತೇಜಸ್ವಿ ಸೂರ್ಯ ಮನವಿಗೆ ಕೇಂದ್ರದ ಸ್ಪಂದನೆ

ಸೋಮವಾರದಿಂದ ಜಾರಿಯಾಗಬೇಕಿದ್ದ ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರ ಮನವಿಯ ಮೇರೆಗೆ ಕೇಂದ್ರ ಸಚಿವ ಎಂ.ಎಲ್. ಖಟ್ಟರ್ ಈ ಸೂಚನೆ ನೀಡಿದ್ದು, ಪ್ರಯಾಣಿಕರಿಗೆ ಸದ್ಯಕ್ಕೆ ನಿರಾಳ ಸಿಕ್ಕಿದೆ. 

Read Full Story

05:59 PM (IST) Feb 07

ಗ್ಯಾಸ್ ಗೀಸರ್ ಸೋರಿಕೆಯಿಂದ ಗಂಡನ ಸಾವು, ಮುಖವನ್ನೂ ನೋಡಲು ಧೈರ್ಯವಾಗದೇ ನೇಣಿಗೆ ಕೊರಳೊಡ್ಡಿದ ಪತ್ನಿ!

ನೆಲಮಂಗಲದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದರಲ್ಲಿ, ಗ್ಯಾಸ್ ಗೀಸರ್ ಸೋರಿಕೆಯಿಂದ ಪತಿ ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗದ ಪತ್ನಿ, ಪತಿಯ ಮುಖವನ್ನೂ ನೋಡದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಮಗನ ಆಕ್ರಂದನ ಮುಗಿಲು ಮುಟ್ಟಿದೆ.
Read Full Story

05:36 PM (IST) Feb 07

Bigg Boss ರಕ್ಷಿತಾ ಶೆಟ್ಟಿಗೆ ಮಾತಿನಂತೆ 2 ಲಕ್ಷ ನೀಡಲು ವರ್ತೂರು ಸಂತೋಷ್​ ಆಹ್ವಾನ - ಪುಟ್ಟಿ ಕಕ್ಕಾಬಿಕ್ಕಿ

ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್, ರನ್ನರ್ ಅಪ್‌ಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅದರಂತೆ, ಮೊದಲ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಕರೆ ಮಾಡಿ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಈ ಅನಿರೀಕ್ಷಿತ ಕರೆಯಿಂದ ರಕ್ಷಿತಾ ಗೊಂದಲಕ್ಕೊಳಗಾದರು.
Read Full Story

05:34 PM (IST) Feb 07

ದೇಶದಲ್ಲೇ ದುಬಾರಿ ನಮ್ಮ ಬೆಂಗಳೂರು ಮೆಟ್ರೋ! ದೇಶದ ಇತರ ನಗರಗಳಲ್ಲಿ ಮೆಟ್ರೋ ದರ ಎಷ್ಟಿದೆ?

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇತ್ತೀಚೆಗೆ ಟಿಕೆಟ್ ದರಗಳನ್ನು ಏರಿಸಿದ್ದು, ನಮ್ಮ ಮೆಟ್ರೋ ದೇಶದಲ್ಲೇ ಅತಿ ದುಬಾರಿ ಸೇವೆಯಾಗಿದೆ ಎಂಬ ಚರ್ಚೆ ಹುಟ್ಟುಹಾಕಿದೆ. ದೆಹಲಿ, ಮುಂಬೈ, ಕೋಲ್ಕತ್ತಾದಂತಹ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಗರಿಷ್ಠ ದರಕ್ಕೆ ತಲುಪಿದೆ.

Read Full Story

04:48 PM (IST) Feb 07

Shivamogga Convertion - ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಹಿಂದೂ ಹೆಂಡ್ತಿ; ಗಂಡ-ಮಕ್ಕಳಿಗೂ ಮತಾಂತರವಾಗಲು ಕಿರುಕುಳ!

ಶಿವಮೊಗ್ಗದಲ್ಲಿ, ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು, ತನಗೂ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೂ ಮತಾಂತರಗೊಳ್ಳುವಂತೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಪತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮತಾಂತರಕ್ಕೆ ಒಪ್ಪದಿದ್ದಕ್ಕೆ ಪತ್ನಿ ಮನೆ ಬಿಟ್ಟು ಹೋಗಿದ್ದಾರೆ.

Read Full Story

04:45 PM (IST) Feb 07

ಕೋಲಾರ ಶಾಕಿಂಗ್ - ಕಮೀಷನ್ ಆಸೆಗೆ ಲೀವ್ ಇನ್ ಟುಗೆದರ್‌ ಜೋಡಿಯ ಮಗು ಮಾರಿಸಿದ ಮಧ್ಯವರ್ತಿ, 5 ಲಕ್ಷಕ್ಕೆ ಮಾರಾಟ!

ಕೋಲಾರದ ಶ್ರೀನಿವಾಸಪುರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಜೋಡಿಯೊಂದು ಹಣದಾಸೆಗೆ ತಮ್ಮ ನವಜಾತ ಗಂಡು ಮಗುವನ್ನು ಮಾರಾಟ ಮಾಡಿದೆ. ಈ ಮಗು ಮಾರಾಟ ಜಾಲವನ್ನು ಪತ್ತೆಹಚ್ಚಿದ ಪೊಲೀಸರು, ಮಗುವನ್ನು ಖರೀದಿಸಿದ ದಂಪತಿ ಹಾಗೂ ಮಧ್ಯವರ್ತಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

Read Full Story

04:36 PM (IST) Feb 07

ಕೊಳ್ಳಿದೆವ್ವದ ಬೆಳಕಲ್ಲಿ ಕೊಲೆಗಾರನ ಅನಾವರಣ - ರಾಜ್‌ ಬಿ ಶೆಟ್ಟಿ Rakkasapuradhol Movie Review

Rakkasapuradhol Kannada Movie Review: ರಾಜ್‌ ಬಿ ಶೆಟ್ಟಿ, ಸ್ವಾತಿಷ್ಠ ಕೃಷ್ಣ, ಅರ್ಚನಾ ಕೊಟ್ಟಿಗೆ, ಅನಿರುದ್ಧ ಭಟ್‌ ನಟನೆಯ ರಕ್ಕದಪುರದೋಳ್‌ ಸಿನಿಮಾ ರಿಲೀಸ್‌ ಆಗಿದೆ. ಹಾಗಾದರೆ ಈ ಸಿಮಾ ಹೇಗಿದೆ?

Read Full Story

04:18 PM (IST) Feb 07

JC Movie Review - ಗಾಢ ಸಂದೇಶ ಕೊಟ್ಟು, ರೌಡಿಸಂ ಕತೆಯ ಕೊನೆಯಲ್ಲಿ ಸಣ್ಣ ನಿಟ್ಟುಸಿರು!

JC Kannada Movie Review: ಸೂರ್ಯ ಪ್ರಖ್ಯಾತ್‌, ರಂಗಾಯಣ ರಘು, ಭಾವನಾ ರೆಡ್ಡಿ, ವಿಜಯ್‌ ಸಿಂಹ ನಟನೆಯ ಜೆಸಿ ಸಿನಿಮಾ ರಿಲೀಸ್‌ ಆಗಿದೆ. ಈ ಚಿತ್ರಕ್ಕೆ ನಟ ಧನಂಜಯ ಅವರು ಹಣ ಹೂಡಿದ್ದಾರೆ. 

Read Full Story

04:00 PM (IST) Feb 07

ತಲೆ ಹೊಡೆದು ದುಡ್ಡು ಮಾಡಿದ್ಯಾ, ನೀನು ಗಂಡಸಾ? ಅಂತಾರೆ - ಕನಕಪುರ ಶ್ರೀನಿವಾಸ್‌ ವಿರುದ್ಧ ಜೋಗಿ ಪ್ರೇಮ್‌ ದೂರು

Jogi Prem V/S Kanakapura Srinivas: ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಜೋಗಿ ಪ್ರೇಮ್‌, ಡಿಕೆ ಶಿವಕುಮಾರ್‌, ಪುನೀತ್‌ ರಾಜ್‌ಕುಮಾರ್‌, ದರ್ಶನ್‌ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದರು. ಈಗ ಜೋಗಿ ಪ್ರೇಮ್‌ ಅವರು ಈ ಬಗ್ಗೆ ದೂರು ನೀಡಿದ್ದಾರೆ.

 

Read Full Story

03:55 PM (IST) Feb 07

ಇದು ಟೆಕ್ಕಿಗಳ ಲವ್ - 6 ವರ್ಷ ಲಿಂಗ್ ಟುಗೆದರ್ ಇದ್ದು, ಈಗ ಬೇರೆ ಮದುವೆ ಮಾಡ್ಕೋತ್ತಿದ್ದಾಳೆ ನನ್ ಹುಡುಗಿ!

ಚಿತ್ರದುರ್ಗದಲ್ಲಿ ಆರು ವರ್ಷಗಳ ಕಾಲ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಪ್ರೇಮಿಗಳಿಬ್ಬರ ನಡುವಿನ ವಿವಾದ ಬೀದಿಗೆ ಬಂದಿದೆ. ತನ್ನ ಪ್ರೇಯಸಿ ಬೇರೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆ ಎಂದು ಆರೋಪಿಸಿ ಪ್ರಿಯಕರ ರವಿಕುಮಾರ್ ಆಕೆಯ ಮನೆಯ ಮುಂದೆ ಧರಣಿ ನಡೆಸಿದ್ದಾನೆ.

Read Full Story

03:49 PM (IST) Feb 07

ಭಾರತಕ್ಕೆ ತವರಿನಲ್ಲಿ ಆಡುವ ಒತ್ತಡವಿದೆ, ಈ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ - ಅಚ್ಚರಿ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್!

ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಹೀಗಿರುವಾಗಲೇ ಈ ಬಾರಿ ಯಾವ ತಂಡ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಲಿದೆ. ಯಾವ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎನ್ನುವ ಚರ್ಚೆ ಜೋರಾಗಿದೆ. ಹೀಗಿರುವಾಗ ಎಬಿ ಡಿವಿಲಿಯರ್ಸ್ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ.

 

Read Full Story

03:30 PM (IST) Feb 07

ಮಲ್ಲೇಶ್ವರಂನಲ್ಲಿ ಪಾರ್ಕಿಂಗ್‌ಗೆ ಹೊಸ ನೀತಿ, ಕಾರು-ಬೈಕ್‌ಗೆ ಪಾವತಿಸಿ ಈ ಜಾಗಗಳಲ್ಲಿ ಮಾತ್ರ ನಿಲ್ಲಿಸಿ

ಮಲ್ಲೇಶ್ವರಂನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು, ಜಿಬಿಎ 'ಪೇ ಅಂಡ್ ಪಾರ್ಕಿಂಗ್' ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಯೋಜನೆಯಡಿ, ಸಂಪಿಗೆ ರಸ್ತೆ ಸೇರಿದಂತೆ ಏಳು ಪ್ರಮುಖ ರಸ್ತೆಗಳಲ್ಲಿ ಕಾರು ಮತ್ತು ಬೈಕ್‌ಗಳಿಗೆ ಗಂಟೆಯ ಆಧಾರದ ಮೇಲೆ ಪಾರ್ಕಿಂಗ್ ಶುಲ್ಕವನ್ನು ನಿಗದಿಪಡಿಸಲಾಗುವುದು.

Read Full Story

03:28 PM (IST) Feb 07

Annayya Serial ನಟಿ, ಕಾಮಿಡಿ ಕಿಲಾಡಿಗಳು ಶೋ ದೀಪಿಕಾ 75 ಲಕ್ಷ ರೂ ಮನೆ ಕಟ್ಟಿದ್ರಾ? ಅಂತೂ ಸತ್ಯ ಹೊರಬಂತು!

Comedy Khiladigalu Actress Deepika: ಅಣ್ಣಯ್ಯ ಧಾರಾವಾಹಿ ಹಾಗೂ ಕಾಮಿಡಿ ಕಿಲಾಡಿಗಳು ಸೇರಿದಂತೆ ಕೆಲ ಕಾಮಿಡಿ ಶೋಗಳಲ್ಲಿ ಗುರುತಿಸಿಕೊಂಡಿರುವ ನಟಿ ದೀಪಿಕಾ ಅವರ 75 ಲಕ್ಷ ರೂಪಾಯಿ ಮನೆ ಭಾರೀ ಚರ್ಚೆಯಲ್ಲಿದೆ.

 

Read Full Story

02:53 PM (IST) Feb 07

Bigg Boss ರಘು ಪಾಲಿಗೆ ಅದೃಷ್ಟದೇವತೆಯಾದ ರಕ್ಷಿತಾ ಶೆಟ್ಟಿ; ಏನ್ರೀ...ಇದು.. ಇಂಥ ದಾಖಲೆ!

Bigg Boss Raghu And Rakshita Shetty: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಘು ಮನೆಗೆ ತಂಗಿ ರಕ್ಷಿತಾ ಅವರು ಬಂದಿದ್ದರು. ಅಲ್ಲಿ ಇವರಿಬ್ಬರು ಸೇರಿಕೊಂಡು ವಿಡಿಯೋ ಮಾಡಿದ್ದಾರೆ. ಈ ವಿಡಿಯೋಗಳಿಗೆ ಭಾರೀ ವೀಕ್ಷಣೆ ಸಿಕ್ಕಿದೆ.

 

Read Full Story

02:19 PM (IST) Feb 07

'ಸುಳ್ಳು ಹೇಳೋಕೆ ನಾಚಿಕೆ ಆಗೋಲ್ವಾ? ಏನು ತಿಂತೀರಿ?' ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಿಡಿ

ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ತೀವ್ರ ವಾಗ್ದಾಳಿ ನಡೆದಿದೆ. ರಾಜ್ಯ ಸರ್ಕಾರವೇ ದರ ಏರಿಕೆಗೆ ಒತ್ತಡ ಹೇರಿ ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಸೂರ್ಯ ಆರೋಪಿಸಿದರು.

Read Full Story

01:49 PM (IST) Feb 07

BBK 12 ಪುನರ್ಮಿಲನ 'ದೊಡ್ಮನೆ ಹಬ್ಬ' - ಜೋಡಿ ಹಕ್ಕಿಗಳ, ಸಿಟ್ಟು ಮಾಡ್ಕೊಂಡೋರ ಮುಖಾಮುಖಿ ಹೇಗಿದೆ ನೋಡಿ!

ಬಿಗ್‌ಬಾಸ್ 12ರ ಎಲ್ಲಾ ಸ್ಪರ್ಧಿಗಳು 'ದೊಡ್ಮನೆ ಹಬ್ಬ' ಎಂಬ ವಿಶೇಷ ಕಾರ್ಯಕ್ರಮಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ.  ಈ ಕಾರ್ಯಕ್ರಮದಲ್ಲಿ, ಸ್ಪರ್ಧಿಗಳ ಡಾನ್ಸ್, ಕಾಮಿಡಿ ಹಾಗೂ ಅಸಮಾಧಾನಿತರ ಮುಖಾಮುಖಿಯನ್ನು ನಿರೀಕ್ಷಿಸಬಹುದು.  ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ.

Read Full Story

01:38 PM (IST) Feb 07

ಅಯ್ಯೋ... ಆ ಸ್ಥಿತಿ ಯಾವ ಹೆಣ್ಣಿಗೂ ಬರಬಾರದು - ಆ ದುರಂತದ ದಿನದ ಬಗ್ಗೆ ಮೌನ ಮುರಿದ ನಟಿ ಕರೀಷ್ಮಾ ಕಪೂರ್

Actress Karishma Kapoor News: ನಟಿ ಕರೀಷ್ಮಾ ಕಪೂರ್‌ ಹಾಗೂ ಅಭಿಷೇಕ್‌ ಬಚ್ಚನ್‌ ಅವರು 2000ರಲ್ಲಿ ಜೋಡಿಯಾಗಿದ್ದರು. 2002ರಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು, ಇನ್ನೇನು ಮದುವೆ ಆಗಬೇಕಿದ್ದ ಈ ಜೋಡಿ ಆಮೇಲೆ ದೂರ ಆಗಿತ್ತು.

 

Read Full Story

01:15 PM (IST) Feb 07

Raichur Utsava 2026 - ರಾಯಚೂರು ಉತ್ಸವದಲ್ಲಿ ಗ್ಯಾರೆಂಟಿ ಸಮಾವೇಶ; ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾದ ಕೃಷಿಮೇಳ!

ರಾಯಚೂರು ಉತ್ಸವದ ಮೂರನೇ ದಿನದಂದು ಕೃಷಿ ಮೇಳದ ಭಾಗವಾಗಿ 'ಗ್ಯಾರೆಂಟಿ ಸಮಾವೇಶ'ವನ್ನು ಆಯೋಜಿಸಲಾಯಿತು. ಎಚ್.ಎಂ. ರೇವಣ್ಣ ಅವರು ಚಾಲನೆ ನೀಡಿದ ಈ ಕಾರ್ಯಕ್ರಮದಲ್ಲಿ, ಸಚಿವರು ಮತ್ತು ಶಾಸಕರು ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಮಹತ್ವವನ್ನು ವಿವರಿಸಿದರು.
Read Full Story

01:13 PM (IST) Feb 07

ಬೈಂದೂರಿನ ಧೀಮಂತ ನಾಯಕ, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ವಿಧಿವಶ

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ (91) ವಯೋಸಹಜ ಅಸೌಖ್ಯದಿಂದ ನಿಧನರಾದರು. 1983-85ರ ಅವಧಿಯಲ್ಲಿ ಜನತಾ ಪಕ್ಷದಿಂದ ಶಾಸಕರಾಗಿದ್ದ ಅವರು, ಕೊಲ್ಲೂರು ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸರಳ ಜೀವನ ಹಾಗೂ ಜನಪರ ಕಾಳಜಿಯಿಂದ ಅವರು ಗುರುತಿಸಿಕೊಂಡಿದ್ದರು.
Read Full Story

01:02 PM (IST) Feb 07

ಮಗಳಿಗೆ ಮೋಸ ಮಾಡಿದ ಪಲಾಶ್‌; ರೋಸ್ಟ್‌ ಮಾಡಿ, ಇಂಡಿಯನ್‌ ಮಮ್ಮಿ ಗತ್ತು ತೋರಿಸಿದ ಸ್ಮೃತಿ ಮಂಧಾನ ತಾಯಿ

ವೈಯಕ್ತಿಕ ಜೀವನದಲ್ಲಿ ಏರಿಳಿತವಾಗಿದ್ದರೂ ಕೂಡ, women’s premier league ಅಲ್ಲಿ ಟ್ರೋಫಿ ಗೆದ್ದು ಬೀಗಿದ ಸ್ಮೃತಿ ಮಂಧಾನ ಅವರು ಈಗ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಮನಸ್ಸೊಂದಿದ್ದರೆ ಯಾವುದು ಕೂಡ ದೊಡ್ಡದಲ್ಲ ಎನ್ನುವುದಕ್ಕೆ ಸ್ಮೃತಿ ದೊಡ್ಡ ಉದಾಹರಣೆ.

 

Read Full Story

01:00 PM (IST) Feb 07

Bigg Boss ಗಿಲ್ಲಿ ನಟನಿಗೆ ಬೆನ್ನುಬಿಡದ ಆರೋಪಗಳು - ಈಗ ಸೆಲ್ಫಿ ಕಿರಿಕ್​! ಸುದೀಪ್​ ಹೇಳಿದ್ದು ನಿಜ ಆಗೋಯ್ತಾ?

ಬಿಗ್​ಬಾಸ್​ 12ರ ವಿಜೇತ ಗಿಲ್ಲಿ ನಟ, ಸೆಲೆಬ್ರಿಟಿ ಆದ ಬಳಿಕ ಸರಣಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರಿಗೆ ಸೆಲ್ಫಿ ನೀಡುವಾಗ ಅಗೌರವ ತೋರಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಇದು ಸುದೀಪ್ ನೀಡಿದ್ದ ಎಚ್ಚರಿಕೆಯ ಮಾತನ್ನು ನೆನಪಿಸುತ್ತಿದೆ.
Read Full Story

12:40 PM (IST) Feb 07

ಸದನದಲ್ಲಿ ಶಾಸಕರ ಜಟಾಪಟಿ - ಬಗೆಹರಿಸಿಕೊಂಡು ಹೋಗುವುದೇ ಸದನದ ಸಂಸ್ಕೃತಿ, ಶಿವಲಿಂಗೇಗೌಡರ ಬಗ್ಗೆ ಸ್ಪೀಕರ್ ಹೇಳಿದ್ದನು?

ವಿಧಾನಸಭೆಯಲ್ಲಿ ಶಾಸಕರಾದ ಶಿವಲಿಂಗೇಗೌಡ ಮತ್ತು ಶರಣು ಸಲಗಾರ ನಡುವಿನ ಮಾತಿನ ಜಟಾಪಟಿಗೆ ಸ್ಪೀಕರ್ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದನವು ಒಂದು ಕುಟುಂಬವಿದ್ದಂತೆ, ಶಾಸಕರು ಆತ್ಮಾವಲೋಕನ ಮಾಡಿಕೊಂಡು ಸದನದ ಗೌರವವನ್ನು ಕಾಪಾಡಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ. 

Read Full Story

12:37 PM (IST) Feb 07

ಒಬ್ಬ ವಿದ್ಯಾರ್ಥಿ ಮೇಲೆ 4 ಜನ ಶಿಕ್ಷಕರಿಂದ ಹಲ್ಲೆ! ಪ್ರಜ್ಞೆ ಕಳೆದುಕೊಂಡ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು

ಗೌರಿಬಿದನೂರಿನ ವಿದ್ಯಾನಿಧಿ ಖಾಸಗಿ ಶಾಲೆಯಲ್ಲಿ, 8ನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ನಾಲ್ವರು ಶಿಕ್ಷಕರು ಹಲ್ಲೆ ನಡೆಸಿದ ಗಂಭೀರ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ಪ್ರಜ್ಞೆ ತಪ್ಪಿದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೋಷಕರು ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
Read Full Story

12:13 PM (IST) Feb 07

Meghana Raj's Marriage - ಮೇಘನಾ ರಾಜ್​ ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಅಪ್ಪ ಸುಂದರ್​ ರಾಜ್​

ನಟಿ ಮೇಘನಾ ರಾಜ್ ಅವರ ಎರಡನೇ ಮದುವೆಯ ಬಗ್ಗೆ ಅವರ ತಂದೆ ಸುಂದರ್ ರಾಜ್ ಮಾತನಾಡಿದ್ದಾರೆ. ಮಗಳ ಬದುಕಿನ ನಿರ್ಧಾರ ಅವಳದ್ದೇ ಎಂದಿರುವ ಅವರು, ಪ್ರತಿಯೊಬ್ಬರಿಗೂ ಸಹಬಾಳ್ವೆ ಅಗತ್ಯ ಎಂದು ಹೇಳಿದ್ದಾರೆ. ಮದುವೆಯ ಬಗ್ಗೆ ಅವರು ಹೇಳಿದ್ದೇನು?

Read Full Story

12:13 PM (IST) Feb 07

ಬೀಗಲ್ ತಳಿಯ ಸಾಕು ನಾಯಿ ಕಡಿತ ನಿರ್ಲಕ್ಷಿಸಿದ್ದ ಐಎಎಸ್ ಅಧಿಕಾರಿ ಪುತ್ರಿ ರೇಬೀಸ್‌ಗೆ ಬಲಿ

ಹಿರಿಯ ಐಎಎಸ್ ಅಧಿಕಾರಿಯೊಬ್ಬರ ವಿವಾಹಿತ ಪುತ್ರಿಯೊಬ್ಬರು ರೇಬೀಸ್‌ಗೆ ಬಲಿಯಾದ ದುರಂತ ಘಟನೆ ಕೆಲ ದಿನಗಳ ಹಿಂದೆ ಗುಜರಾತ್‌ನಲ್ಲಿ ನಡೆದಿದ್ದು, ಈ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಜೊತೆಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.

Read Full Story

12:04 PM (IST) Feb 07

ಜಾತ್ರೆಗೆ ಕಡಿಯಲು ತಂದಿದ್ದ ಆಡು, ರೈತನಿಗೆ ಒಲಿದ ಅಚ್ಚರಿಯ ಅದೃಷ್ಟ! ಜಾಕ್‌ಪಾಟ್‌ ಹೊಡೆದ ರೈತನ ಮನೆಗೆ ಜನವೋ ಜನ!

ಚಿಕ್ಕಮಗಳೂರಿನ ಚಂದ್ರಕಟ್ಟೆ ನಿವಾಸಿ ಯುವ ರೈತ ಸಂತೋಷ್, ಜಾತ್ರೆಗೆ ಕಡಿಯಲು ತಂದಿದ್ದ  ಆಡು ಒಂದು ಗರ್ಭಿಣಿ ಎಂಬ ಅನುಮಾನದಿಂದ ಅದನ್ನು ಉಳಿಸಿಕೊಂಡಿದ್ದರು. ಇದೀಗ ಆ ಕುರಿಯು ಏಕಕಾಲಕ್ಕೆ ಆರು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದ್ದು, ರೈತನಿಗೆ ಅಚ್ಚರಿಯ ಜೊತೆಗೆ ಅದೃಷ್ಟವನ್ನು ತಂದಿದೆ.

Read Full Story

11:54 AM (IST) Feb 07

ಬದಲಾದ ಭಾಗ್ಯ - ಯಾರ ಬಾಳಲ್ಲಿ ಲಕ್ಷ್ಮಿಯಾಗಿ ಹೆಜ್ಜೆ ಇಡ್ತಾಳೆ? ಅಂತಿಮ ಕ್ಷಣದ ರೋಚಕ ಫೋಟೋಶೂಟ್​

ಭಾಗ್ಯಲಕ್ಷ್ಷಿ ಸೀರಿಯಲ್ ಅಂತಿಮ ಘಟ್ಟ ತಲುಪಿದ್ದು, ತಾಂಡವ್ ಕ್ಷಮೆ ಕೇಳಿದರೂ ಭಾಗ್ಯ ಒಪ್ಪುತ್ತಿಲ್ಲ. ಇದರ ನಡುವೆ ಆದಿ ಪ್ರಪೋಸ್ ಮಾಡಿದ್ದು, ಭಾಗ್ಯಳ ಮನಸ್ಸಿನಲ್ಲಿ ಪ್ರೀತಿ ಮೂಡಿದೆ. ಈ ತ್ರಿಕೋನ ಪ್ರೇಮಕಥೆಯ ಅಂತ್ಯ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
Read Full Story

11:41 AM (IST) Feb 07

KPTCL ತುರ್ತು ನಿರ್ವಹಣಾ ಕಾಮಗಾರಿ - ಇಂದು ಬೆಂಗಳೂರಿನ ಈ ಭಾಗಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಇರೋಲ್ಲ ಕರೆಂಟ್!

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಆರ್.ಆರ್. ನಗರ ಹಾಗೂ ಬನಶಂಕರಿ ವಿಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Read Full Story

More Trending News