ಬೆಂಗಳೂರು (ಅ.6): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಬಲ ಜಾತಿಗಳ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಹಾಗೂ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡುವೆಯೇ ಪ್ರತ್ಯೇಕ ಲಿಂಗಾಯತ ಧರ್ಮ ಪರ ನಿಲುವಿನ ಸ್ವಾಮೀಜಿಗಳು ಭಾನುವಾರ ನಗರದಲ್ಲಿ ನಡೆದ 'ಬಸವ ಸಂಸ್ಕೃತಿ ಅಭಿಯಾನ 2025' ಸಮಾರೋಪದಲ್ಲಿ ಸಿದ್ದು ಅವರನ್ನು ಹಾಡಿ ಹೊಗಳುವ ಮೂಲಕ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು. ವಿಭೂತಿ ಹಚ್ಚಿ ಹೂಮಳೆ ಸುರಿಸಿ 301 ಶ್ರೀಗಳಿಂದ ಸಿಎಂ ಸನ್ಮಾನ ಮಾಡಲಾಯಿತು. ಈ ವೇಳೆ ಅವರು, ಸಿದ್ದು ಎದೆ ಸೀಳಿದರೆ ಬಸವಣ್ಣ ಕಾಣುತ್ತಾರೆ. ಅವರೊಬ್ಬ ಕಳಕರಹಿತ ವ್ಯಕ್ತಿ ಎಂದು ಹೊಗಳಿದ್ದಾರೆ.ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್

10:56 PM (IST) Oct 06
ಇದರ ಉದ್ದೇಶ ಸ್ಪಷ್ಟವಾಗಿತ್ತು – ಕೇವಲ ವೈಭವವನ್ನು ಪ್ರದರ್ಶಿಸುವುದಲ್ಲ, ಬದಲಾಗಿ ಆತ್ಮೀಯತೆಯನ್ನು ಮತ್ತು ಸೌಹಾರ್ದತೆಯನ್ನು ಆಚರಿಸುವುದು. ರಾಜ್‌ಕುಮಾರ್ ಸೇತುಪತಿ ಮತ್ತು ಶ್ರೀಪ್ರಿಯಾ ಅವರು ಈ ಪುನರ್ಮಿಲನಕ್ಕೆ ಸೂಕ್ತವಾದ ಆತಿಥ್ಯ ನೀಡಿದರು.
10:34 PM (IST) Oct 06
Bigg Boss Kannada Show: ಬಿಗ್‌ಬಾಸ್ ಮನೆಯಲ್ಲಿ ಅಡುಗೆ ವಿಚಾರವಾಗಿ ಒಂಟಿಗಳು ಮತ್ತು ಜಂಟಿಗಳ ನಡುವೆ ಜಗಳ ಶುರುವಾಗಿದೆ. ಜಾನ್ವಿ ಬಳಸಿದ 'ಗಾಂಚಾಲಿ' ಪದವು ದೊಡ್ಡ ಗಲಾಟೆಗೆ ಕಾರಣವಾಗಿದ್ದು, ನಿಯಮ ಉಲ್ಲಂಘನೆಗಾಗಿ ಬಿಗ್‌ಬಾಸ್ ಜಂಟಿಗಳಿಗೆ ಕಠಿಣ ಶಿಕ್ಷೆ ನೀಡಿದ್ದಾರೆ.
08:44 PM (IST) Oct 06
ನಟಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥದ ನಂತರ, ನಟ ವಿಜಯ್ ದೇವರಕೊಂಡ ಅವರು ತೆಲಂಗಾಣದ ಗದ್ವಾಲ್ ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಇನ್ನು ಬುಲೆರೋ ವಾಹನದಿಂದಲೇ ಈ ಅಪಘಾತವಾಗಲು ಕಾರಣವೆಂದು ಹೇಳಲಾಗುತ್ತಿದೆ.
08:40 PM (IST) Oct 06
08:21 PM (IST) Oct 06
08:00 PM (IST) Oct 06
Bigg Boss Kannada pollution notice: ಬಿಡದಿಯಲ್ಲಿರುವ ಬಿಗ್‌ಬಾಸ್ ಹೌಸ್, ಸಂಸ್ಕರಿಸದ ತ್ಯಾಜ್ಯ ನೀರನ್ನು ಹೊರಬಿಟ್ಟು ಪರಿಸರ ಮಾಲಿನ್ಯ ಉಂಟುಮಾಡಿದ ಆರೋಪದ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಪಡೆದಿದೆ.
07:48 PM (IST) Oct 06
ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಅವರು ಕರ್ನಾಟಕ ಸರ್ಕಾರದ 12 ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಟ್ವೀಟ್ ಮಾಡಿ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ. ಈ ಆರೋಪವನ್ನು ಸರ್ಕಾರ ತಳ್ಳಿಹಾಕಿದ್ದು, ದಾಖಲೆ ನೀಡುವಂತೆ ಸವಾಲು ಹಾಕಿದೆ.
07:23 PM (IST) Oct 06
ಯೂಟ್ಯೂಬರ್ ಮುಕಳೆಪ್ಪ, ಹಿಂದೂ ಯುವತಿ ಗಾಯತ್ರಿಯನ್ನು ಮದುವೆಯಾದ ನಂತರ 'ಲವ್ ಜಿಹಾದ್' ಆರೋಪ ಎದುರಿಸಿದ್ದರು. ಹಿಂದೂ ಸಂಘಟನೆಗಳ ಪ್ರತಿಭಟನೆಯ ನಂತರ, ಇದು ಪ್ರೀತಿಯಿಂದಾದ ಮದುವೆಯೇ ಹೊರತು ಮತಾಂತರವಲ್ಲ ಎಂದು ಮುಕಳೆಪ್ಪ ಸ್ಪಷ್ಟಪಡಿಸಿದ್ದಾರೆ. ವಿವಾದ ಬದಿಗೊತ್ತಿ ಸಂತೋಷದಿಂದಿರುವ ಫೋಟೋ ಹಂಚಿಕೊಂಡಿದ್ದಾರೆ.
07:12 PM (IST) Oct 06
ಭಾರತೀಯ ರೈಲ್ವೆಯು ಸ್ವದೇಶಿ ಡ್ರೋನ್ ತಂತ್ರಜ್ಞಾನವನ್ನು ಬಳಸಿ ರೈಲು ಬೋಗಿಗಳನ್ನು ತೊಳೆಯುವ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಸೂರತ್‌ನ ಯುವಕರು ಅಭಿವೃದ್ಧಿಪಡಿಸಿದ ಈ ಕಡಿಮೆ ವೆಚ್ಚದ ವಿಧಾನವು, ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನ 25 ಬೋಗಿಗಳನ್ನು ಕೇವಲ 30 ನಿಮಿಷಗಳಲ್ಲಿ ಶುಚಿಗೊಳಿಸಿದೆ.
06:49 PM (IST) Oct 06
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ, ನವಜಾತ ಗಂಡು ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಪತ್ತೆಯಾಗಿ ವೈದ್ಯರನ್ನು ಅಚ್ಚರಿಗೊಳಿಸಿದೆ. ಇದು ಅವಳಿ ಶಿಶುಗಳಲ್ಲಿ ಕಂಡುಬರುವ ಅತ್ಯಂತ ಅಪರೂಪದ ವೈದ್ಯಕೀಯ ಸ್ಥಿತಿಯಾಗಿದ್ದು, ಒಂದು ಭ್ರೂಣವು ಇನ್ನೊಂದರೊಳಗೆ ಬೆಳೆಯುತ್ತದೆ.
06:20 PM (IST) Oct 06
CJI BR Gavai ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಸಿಎಂ ಸಿದ್ದರಾಮಯ್ಯ, ಇದು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿಗಳ ಮೇಲಿನ ಹಲ್ಲೆ ಎಂದು ಬಣ್ಣಿಸಿದ್ದು, ಕಿಡಿಗೇಡಿ ವಕೀಲನ ಬಂಧನಕ್ಕೆ ಆಗ್ರಹಿಸಿದ್ದಾರೆ.
06:09 PM (IST) Oct 06
ಬಿಗ್‌ಬಾಸ್ ಕನ್ನಡ ಸೀಸನ್-12ರ ಸ್ಪರ್ಧಿ, ನಿರೂಪಕಿ ಜಾಹ್ನವಿ ತಮ್ಮ ವಿಚ್ಛೇದನದ ಬಗ್ಗೆ ಮನೆಯಲ್ಲಿ ಮಾತನಾಡಿದ್ದಾರೆ. ತನ್ನ ಪತಿ ಜೀವಂತವಾಗಿರುವಾಗಲೇ ಬೇರೆ ಮದುವೆಯಾಗಿದ್ದೇ ಡಿವೋರ್ಸ್‌ಗೆ ಕಾರಣ ಎಂದಿದ್ದರು. ಆದರೆ, ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.
05:55 PM (IST) Oct 06
Manju Bhashini angry reactionn: ಬಿಗ್‌ಬಾಸ್ ಸೀಸನ್ 12ರ ಎರಡನೇ ವಾರದಲ್ಲಿ ಒಂಟಿ ಮತ್ತು ಜಂಟಿ ಬಣಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಜಾನ್ವಿ ಬಳಸಿದ 'ಗಾಂಚಾಲಿ' ಪದದಿಂದಾಗಿ ಮಂಜು ಭಾಷಿಣಿ ಆಕ್ರೋಶಗೊಂಡಿದ್ದು, ಈ ಬೆಳವಣಿಗೆಗಳಿಂದ ನೊಂದ ಒಂಟಿಗಳ ರಾಜಮಾತೆ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ.
05:54 PM (IST) Oct 06
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು (ವಿಎಸ್‌ಕೆವಿವಿ) ವಿದ್ಯಾರ್ಥಿಯೊಬ್ಬನ ಅಂಕಪಟ್ಟಿಯಲ್ಲಿ ಆತನ ಫೋಟೋ ಬದಲು ಗವಿಸಿದ್ದೇಶ್ವರ ಸ್ವಾಮೀಜಿ ಫೋಟೋ ಮುದ್ರಿಸಿ, ಫಲಿತಾಂಶವನ್ನೂ ತಪ್ಪಾಗಿ ನಮೂದಿಸಿದೆ. ವರ್ಷ ಕಳೆದರೂ ದೋಷ ಸರಿಪಡಿಸದ ಕಾರಣ, ವಿದ್ಯಾರ್ಥಿಯ ಭವಿಷ್ಯ ಅತಂತ್ರವಾಗಿದೆ.
05:50 PM (IST) Oct 06
05:09 PM (IST) Oct 06
05:05 PM (IST) Oct 06
ಬೆಂಗಳೂರಿನ ಲಗ್ಗೆರೆಯಲ್ಲಿ ಗೃಹಿಣಿ ರಕ್ಷಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೆಣ್ಣು ಮಗು ಜನಿಸಿದ್ದಕ್ಕೆ ಪತಿ ರವೀಶ್ ಮತ್ತು ಆತನ ಸಹೋದರ ನಿರಂತರ ಕಿರುಕುಳ ನೀಡುತ್ತಿದ್ದು, ಅವರೇ ಕೊಲೆ ಮಾಡಿ ಆತ್ಮಹ*ತ್ಯೆ ಎಂದು ಬಿಂಬಿಸಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
04:38 PM (IST) Oct 06
Bihar Assembly poll dates: ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಸಿಎಂ ನಿತೀಶ್ ಕುಮಾರ್, ಪಾಟ್ನಾದಲ್ಲಿ ಮೆಟ್ರೋ ರೈಲು ಉದ್ಘಾಟನೆ ಮಾಡಿದ್ದು, ನಾಳೆಯಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. 2020ರಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
04:26 PM (IST) Oct 06
ಬಿಗ್‌ಬಾಸ್ 12ರ ಮೊದಲ ವಾರದ ಎಲಿಮಿನೇಷನ್ ಬಗ್ಗೆ ಬಿಗ್‌ಬಾಸ್ 11ರ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣವಿಲ್ಲದೆ ಸ್ಪರ್ಧಿಗಳನ್ನು ಹೊರಹಾಕುವುದು ಅನ್ಯಾಯ ಎಂದಿರುವ ಅವರು, ತಮ್ಮ ಸೀಸನ್‌ನ ಅನುಭವವನ್ನೂ ಹಂಚಿಕೊಂಡಿದ್ದಾರೆ.
03:55 PM (IST) Oct 06
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಒಂಟಿ (ಅರಸರು) ಮತ್ತು ಜಂಟಿ (ಗುಲಾಮರು) ಎಂಬ ಥೀಮ್‌ನಿಂದಾಗಿ ಸ್ಪರ್ಧಿಗಳ ನಡುವೆ ಅಸಮಾನತೆ ಸೃಷ್ಟಿಯಾಗಿದೆ. ಈ ಕಾರಣದಿಂದಾಗಿ ಎರಡೂ ಗುಂಪುಗಳ ನಡುವೆ ತೀವ್ರ ಕಿತ್ತಾಟ ಶುರುವಾಗಿದ್ದು, ಜಾಹ್ನವಿ ಜಂಟಿಗಳ ನಿಯಮ ಉಲ್ಲಂಘನೆಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ.
03:50 PM (IST) Oct 06
ಕನ್ನಡ ಧಾರಾವಾಹಿಗಳಲ್ಲಿ ಜೋಗತವ್ವನ ಪ್ರವೇಶ ಸಾಮಾನ್ಯವಾಗಿದ್ದು, ಇದೀಗ 'ಕರ್ಣ' ಸೀರಿಯಲ್ನಲ್ಲಿ ದೊಡ್ಡ ತಿರುವು ಸಿಕ್ಕಿದೆ. ನಿಧಿಯನ್ನು ಪ್ರೀತಿಸಿದ ಕರ್ಣ, ಅನಿರೀಕ್ಷಿತವಾಗಿ ನಿತ್ಯಾಗೆ ತಾಳಿ ಕಟ್ಟಿದ್ದು, ಆಕೆ ಗರ್ಭಿಣಿ ಎಂಬ ಸತ್ಯವೂ ಬಹಿರಂಗವಾಗಿದೆ.
03:39 PM (IST) Oct 06
03:25 PM (IST) Oct 06
ಬಿಗ್‌ಬಾಸ್ ಮನೆಯಲ್ಲಿ ನಿರೂಪಕಿ ಜಾನ್ವಿ ತಮ್ಮ ವಿಚ್ಚೇದನದ ಬಗ್ಗೆ ಮಾಡಿದ ಆರೋಪಗಳಿಗೆ ಅವರ ಮಾಜಿ ಪತಿ ಕಾರ್ತಿಕ್ ಮಹಡಿ ಪ್ರತಿಕ್ರಿಯಿಸಿದ್ದಾರೆ. ಜಾನ್ವಿ ಅವರ ನಡವಳಿಕೆ ಬಗ್ಗೆ ಕಾರ್ತಿಕ್ ಮಾತನಾಡಿದ್ದಾರೆ.
02:49 PM (IST) Oct 06
ಉತ್ತರ ಕಾಶ್ಮೀರದ ಹಂದ್ವಾರಾದಲ್ಲಿ, ಆಕಿಬ್ ರಸೂಲ್ ಎಂಬ ಮುಸ್ಲಿಂ ಯುವಕನಿಗೆ ತನ್ನ ತೋಟದಲ್ಲಿ ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದೆ. ಅದನ್ನು ನೋಡಿದಾಕ್ಷಣ ಇದು ಹಿಂದೂಗಳ ಆರಾಧ್ಯ ದೈವ ಶಿವಲಿಂಗ ಮೂರ್ತಿಉ ಎಂಬುದು ತಿಳಿದುಬಂದಿದೆ. ನಂತರ ಆತನ ಕೈಯಿಂದಲೇ ಒಂದು ಚಮಾತ್ಕಾರದ ಘಟನೆ ನಡೆದಿದೆ.
02:49 PM (IST) Oct 06
KRK tweet on Yash's next film ಯಶ್ ಅವರ ಮುಂಬರುವ 'ಟಾಕ್ಸಿಕ್' ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಶ್ ಅವರ ಸರ್ವಾಂತರ್ಯಾಮಿ ವರ್ತನೆ ಮತ್ತು 600 ಕೋಟಿ ಬಜೆಟ್ ಇದಕ್ಕೆ ಕಾರಣ ಎಂದಿದ್ದು, ಇದಕ್ಕೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿ ಯಶ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
02:29 PM (IST) Oct 06
Drunk Passenger Trying to Open Emergency Exit :ವಿಮಾನದಲ್ಲಿ ಪ್ರಯಾಣಿಸುತ್ತಿದ್ದವನೋರ್ವ ಕುಡಿದ ಮತ್ತಿನಲ್ಲಿ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಘಟನೆ ನಡೆದಿದೆ. ಕುಡುಕ ಪ್ರಯಾಣಿಕ ಈ ಹಾವಳಿಯಿಂದಾಗಿ ವಿಮಾನವನ್ನು ತುರ್ತು ಲ್ಯಾಂಡ್ ಮಾಡಬೇಕಾಯ್ತು.
02:07 PM (IST) Oct 06
01:44 PM (IST) Oct 06
ಅಲಿಯಾ ಭಟ್‌ರಿಂದ ಇತ್ತೀಚಿಗೆ ಎಂಟ್ರಿಕೊಟ್ಟ ಶಾರ್ವರಿ ವಾಗ್ ತನಕ ಹಲವರು ಈ ಸ್ಟೈಲ್‌ಗೆ ಫಿದಾ ಆಗಿದ್ದಾರೆ. ಜೊತೆಗೆ ಹಬ್ಬದ ಸೀಸನ್‌ಗೆ ಬಿಜ್ಯುವೆಲ್ಡ್ ಟ್ರೆಂಡ್ ಬಾಲಿವುಡ್‌ನಿಂದ ಬೆಳಗಾವಿ ಹುಡುಗಿಯರವರೆಗೆ ಹಲವರ ಮೈಮೇಲೆ ವಿರಾಜಮಾನವಾಗುತ್ತಿದೆ.
01:35 PM (IST) Oct 06
ಅಯ್ಯೋ ಮನೇಲಿ ದಿನಾಲೂ ಎಷ್ಟೂ ಅಂತಾ ಕೆಲಸ ಮಾಡಿಸ್ತೀರಿ. 2ನೇ ಹೆಂಡತಿಯ ಮಗಳು ಅಂತಾ ನೀವು ನನಗೆ ಇಷ್ಟೊಂದು ಕಷ್ಟಕೊಟ್ಟರೆ ಹೇಗೆ ಸಹಿಸಿಕೊಳ್ಳಲಿ. ನನಗೆ ಬದುಕಲು ಇಷ್ಟವಿಲ್ಲ, ನೀವೆಲ್ಲ ಇನ್ಮುಂದೆ ಸಂತೋಷವಾಗಿರಿ ಎಂದು ಡೆತ್‌ನೋಟ್ ಬರೆದಿಟ್ಟು ಇಬ್ಬರು ವಿದ್ಯಾರ್ಥಿಗಳು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
01:17 PM (IST) Oct 06
ಕಳಪೆ ಕೆಮ್ಮಿನ ಸಿರಪ್ ರಾಜ್ಯದಲ್ಲಿ ಸರಬರಾಜು ಆಗಿಲ್ಲ.ದೇಶದ ಬೇರೆ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
01:08 PM (IST) Oct 06
12:51 PM (IST) Oct 06
‘ಕಾಂತಾರ ಚಾಪ್ಟರ್ 1’ ಆನ್‌ಲೈನ್‌ನಲ್ಲಿ 50 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟ ಕಂಡಿದೆ ಎಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತಿಳಿಸಿದೆ. ಸಿನಿಮಾ ಬಿಡುಗಡೆಯಾದಾಗಿನಿಂದ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯುತ್ತಿದೆ.
12:47 PM (IST) Oct 06
ನಟಿ ರಚಿತಾ ರಾಮ್ ತಮ್ಮ 33ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಈ ಸಂದರ್ಭದಲ್ಲಿ, 'ಬದುಕಿರುವಾಗಲೇ ನನಗೆ ಹೆಸರು, ಪ್ರಶಸ್ತಿ ಬರುತ್ತಿದೆ' ಎಂದು ಅವರು ನೀಡಿದ ಹೇಳಿಕೆಯು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
12:43 PM (IST) Oct 06
12:23 PM (IST) Oct 06
11:51 AM (IST) Oct 06
MB Patil Demands Separate Lingayat Religion, Says Can't Blame Siddaramaiah This Time ಸಚಿವ ಎಂ.ಬಿ. ಪಾಟೀಲ್ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯನ್ನು ಮತ್ತೆ ಬಲವಾಗಿ ಮುಂದಿಟ್ಟಿದ್ದು, ಇದು ಬಸವ ಧರ್ಮ ಆಧಾರಿತ ಭಾರತೀಯ ಮೂಲದ ಧರ್ಮ ಎಂದು ಪ್ರತಿಪಾದಿಸಿದ್ದಾರೆ.
11:47 AM (IST) Oct 06
ಕ್ಷುಲ್ಲಕ ಕಾರಣಕ್ಕೆ ಪಾಪಿ ಪತಿಯೋರ್ವ ತನ್ನ ಪತ್ನಿಯ ತಲೆಗೆ ಲಟ್ಟಣಿಗೆಯಿಂದ ಹೊಡೆದ ಘಟನೆ ಬೆಂಗಳೂರಿನ ಪೀಣ್ಯದ ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ. ಸೆಪ್ಟೆಂಬರ್ 24ರಂದು ನಡೆದಿದ್ದ ಘಟನೆಯು ಇದೀಗ ಬೆಳಕಿಗೆ ಬಂದಿದೆ.
11:14 AM (IST) Oct 06
ಹರ್ಷಿಕಾ ಪೂಣಚ್ಚ ಅವರು ಮಹಿಳಾ ಪ್ರಧಾನ ಚಿತ್ರಕ್ಕೆ ನಾಯಕಿಯಾಗುತ್ತಿದ್ದಾರೆ. ಆ ಮೂಲಕ ತುಂಬಾ ದಿನಗಳ ನಂತರ ನಟಿ ಹರ್ಷಿಕಾ ಪೂಣಚ್ಚ ಅವರು ತೆರೆಗೆ ಮರಳುತ್ತಿದ್ದಾರೆ. ತಮ್ಮ ಈ ಹೊಸ ಚಿತ್ರವನ್ನು ತಮ್ಮ ಪುತ್ರಿಯ ಹುಟ್ಟುಹಬ್ಬದಂದು ಘೋಷಣೆ ಮಾಡಿದ್ದಾರೆ.
10:55 AM (IST) Oct 06
ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ ತನ್ನ ಅದ್ಭುತ ಆಟದ ಜತೆಗೆ ತಮ್ಮ ಬ್ಯೂಟಿ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಅಷ್ಟಕ್ಕೂ ಯಾರು ಈ ಸನಾ? ಈಕೆಯ ಹಿನ್ನೆಲೆ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ
10:54 AM (IST) Oct 06
ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ಹಲವು ಬಾರಿ ಕೇಸ್ ದಾಖಲಿಸಿದ್ದ ಮಹಿಳೆಗೆ ಪತಿಯೊಂದಿಗೆ ಮರು ಜೀವನ ನಡೆಸಲು ಬಯಕೆ. ಪತಿಯಿಂದ ವಿರೋಧ ಬಂದಾಗ ವೈವಾಹಿಕ ಸಂಬಂಧ ಪುನರ್ ಸ್ಥಾಪಿಸಲು ಹೈಕೋರ್ಟ್‌ಗೆ ಮೊರೆ.