MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Lakshmi Nivasa: ತನು ಕೈಯಲ್ಲಿ ವಿಶ್ವನ ಜಾತಕ! ಜಾನುನೇ ಲವರ್​ ಎಂದು ಗೊತ್ತಾಗೋಗತ್ತಾ?

Lakshmi Nivasa: ತನು ಕೈಯಲ್ಲಿ ವಿಶ್ವನ ಜಾತಕ! ಜಾನುನೇ ಲವರ್​ ಎಂದು ಗೊತ್ತಾಗೋಗತ್ತಾ?

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ವಿಶ್ವನ ಮೇಲಿನ ಅನುಮಾನದಿಂದ ತನು ಆತನ ಕಾಲೇಜಿಗೆ ಹೋಗಿ ಜಾಹ್ನವಿಯ ದಾಖಲೆಗಳನ್ನು ಪತ್ತೆಹಚ್ಚುತ್ತಾಳೆ. ವಿಶ್ವ ತಡೆಯಲು ಪ್ರಯತ್ನಿಸಿದರೂ, ಜಾಹ್ನವಿಯ ದಾಖಲೆ ತನು ಕೈ ಸೇರಿದ್ದು, ವಿಶ್ವ ಮತ್ತು ಜಾಹ್ನವಿಯ ರಹಸ್ಯ ಬಯಲಾಗುವ ಹಂತ ತಲುಪಿದೆ.

2 Min read
Suchethana D
Published : Oct 06 2025, 05:09 PM IST
Share this Photo Gallery
  • FB
  • TW
  • Linkdin
  • Whatsapp
17
ವಿಶ್ವ ಮತ್ತು ಜಾಹ್ನವಿಯ ಗುಟ್ಟು ರಟ್ಟು?
Image Credit : Instagram

ವಿಶ್ವ ಮತ್ತು ಜಾಹ್ನವಿಯ ಗುಟ್ಟು ರಟ್ಟು?

ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ (Lakshmi Nivasa Serial) ಈಗ ವಿಶ್ವ ಮತ್ತು ಜಾಹ್ನವಿಯ ಲವ್​ ಮ್ಯಾಟರ್​ ಗುಟ್ಟಾಗುವ ಕಾಲ ಬಂದಾಗಿದೆ. ತನು ಜೊತೆ ಎಂಗೇಜ್​ಮೆಂಟ್​ ಆದಾಗಿನಿಂದಲೂ ವಿಶ್ವನ ಬದಲಾಗ್ತಿರೋ ಕ್ಯಾರೆಕ್ಟರ್​ ಅನ್ನು ತನು ಗಮನಿಸುತ್ತಿದ್ದಾಳೆ. ಆದರೆ ಆಕೆಗೆ ತನ್ನ ಮನೆಯಲ್ಲಿ ಇರುವ ಜಾಹ್ನವಿಯೇ ಆತನ ಲವರ್​ ಎನ್ನುವುದು ಗೊತ್ತಿಲ್ಲ. ಆದರೆ ಅವರಿಬ್ಬರೂ ಹೊರಗಡೆ ಹೋಗುವುದು ನೋಡಿ ಯಾಕೋ ಅನುಮಾನ ಬಂದಿದ್ದರೂ, ಜಾಹ್ನವಿಯ ಸತ್ಯ ಗೊತ್ತಿಲ್ಲದ ಕಾರಣ ಅದನ್ನು ಆಕೆ ಅಷ್ಟು ಸೀರಿಯಸ್​ ಆಗಿ ತಿಳಿದುಕೊಂಡಿಲ್ಲ.

27
ಜಯಂತ್​ ಬಳಿಯೂ ವಿಷಯ ಹೇಳಿದ್ದ ತನು
Image Credit : Instagram

ಜಯಂತ್​ ಬಳಿಯೂ ವಿಷಯ ಹೇಳಿದ್ದ ತನು

ಸಾಲದು ಎನ್ನುವುದಕ್ಕೆ ಜಯಂತ್​ ಬಳಿಯೂ ಆಕೆ ಜಾಹ್ನವಿ ವಿಷಯವನ್ನು ಹೇಳಿಬಿಟ್ಟಿದ್ದಾಳೆ. ವಿಶ್ವನ ಲವರ್​ ಸತ್ತಿಲ್ಲ ಎನ್ನುವ ಸಂದೇಹವಿದೆ. ಅವರಿಬ್ಬರೂ ಮೀಟ್​ ಆಗ್ತಿದ್ದಾರೆ ಎನ್ನಿಸ್ತಿದೆ ಎಂದಿದ್ದಾಳೆ. ಇದನ್ನು ಕೇಳಿ ಜಯಂತ್​ಗೆ ಸಿಟ್ಟು ಉಕ್ಕಿ ಬಂದಿದ್ದರೂ, ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿದು ಖುಷಿಯಪಟ್ಟುಕೊಂಡಿದ್ದಾನೆ. ಚಿನ್ನುಮರಿ ಒಂದು ಬಾರಿ ಕೈಗೆ ಸಿಕ್ಕರೆ ವಿಶ್ವನ ಕಥೆ ಮುಗಿಸುವ ಪ್ಲ್ಯಾನ್​ ಅವನದ್ದು.

Related Articles

Related image1
Karna ಸೀರಿಯಲ್​ಗೂ ಎಂಟ್ರಿ ಕೊಟ್ಟ ಜೋಗತವ್ವ! ತಲೆಗೆ ಹುಳು ಬಿಡೋ ಇವರು ತ್ರಿಕಾಲ ಜ್ಞಾನಿಗಳಾ?
Related image2
Bigg Bossನಲ್ಲಿ ಪ್ರತಿಸಲನೂ ಯಾಕೋ ಹೀಗೆ ಗೊತ್ತಿಲ್ಲ, ಇದು ನೋವಿನ ಸಂಗತಿ ! ಐಶ್ವರ್ಯ ಸಿಂಧೋಗಿ ತೀವ್ರ ಅಸಮಾಧಾನ
37
ಜಾಹ್ನವಿ ಪತ್ತೆ ಹಚ್ಚಲು ತನು ಶುರು
Image Credit : Instagram

ಜಾಹ್ನವಿ ಪತ್ತೆ ಹಚ್ಚಲು ತನು ಶುರು

ಇದೀಗ ಒಂದು ಹಂತ ಮುಂದಕ್ಕೆ ಹೋಗಿರುವ ತನು, ಆ ಜಾಹ್ನವಿ ಯಾರು ಎನ್ನುವುದನ್ನು ಪತ್ತೆ ಹಚ್ಚಲೇಬೇಕು ಎಂದು ವಿಶ್ವನ ಕಾಲೇಜಿಗೆ ಹೋಗಿದ್ದಾಳೆ. ಅಲ್ಲಿ ಅಟೆಂಡರ್​ಗೆ ಲಂಚ ಕೊಟ್ಟು ಆ ದಾಖಲೆಗಳನ್ನು ತರಿಸಿಕೊಂಡಿದ್ದಾಳೆ. ಜಾಹ್ನವಿಯ ಫೋಟೋ ಅನ್ನು ವಿಶ್ವ ತೋರಿಸದೇ ಇರುವ ಕಾರಣ ಹೇಗಾದರೂ ಮಾಡಿ ಆಕೆಯನ್ನು ಪತ್ತೆ ಹಚ್ಚುವುದು ಈಕೆಯ ಉದ್ದೇಶ.

47
ವಿಶ್ವನಿಗೆ ತನು ನೋಡಿ ಶಾಕ್​
Image Credit : Instagram

ವಿಶ್ವನಿಗೆ ತನು ನೋಡಿ ಶಾಕ್​

ಯಾವುದೇ ಸರ್ಟಿಫಿಕೇಟ್​ ತೆಗೆದುಕೊಳ್ಳುವುದಕ್ಕಾಗಿ ವಿಶ್ವ ಅಲ್ಲಿಗೆ ಬಂದಾಗ ತನುವನ್ನು ನೋಡಿ ಶಾಕ್​ ಆಗಿದ್ದಾನೆ. ಆಗ ತನು ಇರುವ ಸತ್ಯವನ್ನು ಹೇಳಿದ್ದಾಳೆ. ಇಲ್ಲಿಂದ ಸತ್ಯ ತಿಳಿದುಕೊಂಡೇ ಹೋಗುವುದಾಗಿ ಹೇಳಿದ್ದಾಳೆ. ವಿಶ್ವ ಆಕೆಯನ್ನು ಎಳೆದುಕೊಂಡು ಹೋಗಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ.

57
ದಾಖಲೆ ತಂದುಕೊಟ್ಟ ಅಟೆಂಡರ್​
Image Credit : Instagram

ದಾಖಲೆ ತಂದುಕೊಟ್ಟ ಅಟೆಂಡರ್​

ಕೊನೆಗೆ ಅಟೆಂಡರ್​ ದಾಖಲೆಯನ್ನು ತಂದುಕೊಟ್ಟಿದ್ದಾನೆ. ಅಲ್ಲಿ ಜಾಹ್ನವಿ ಯಾರು ಎನ್ನುವ ಬಗ್ಗೆ ತನು ಹುಡುಕಲು ಶುರು ಮಾಡಿದ್ದಾಳೆ. ಜಾಹ್ನವಿ ಹೆಸರಿನ ವಿದ್ಯಾರ್ಥಿಯ ದಾಖಲೆ ಅವಳಿಗೆ ಸಿಕ್ಕೇಬಿಟ್ಟಿದೆ. ಅಲ್ಲಿಗೆ ಪ್ರೊಮೋ ಕಟ್​ ಆಗಿದೆ.

67
ತನುಗೆ ಸತ್ಯ ಗೊತ್ತಾಗತ್ತಾ?
Image Credit : Instagram

ತನುಗೆ ಸತ್ಯ ಗೊತ್ತಾಗತ್ತಾ?

ಹಾಗಿದ್ದರೆ ಜಾಹ್ನವಿ ತನ್ನ ಮನೆಯಲ್ಲಿ ಇರುವ ಚಂದನಾನೇ ಎನ್ನುವುದು ತನುಗೆ ತಿಳಿಯತ್ತಾ, ಅಥವಾ ಅಲ್ಲಿ ಇರುವುದೇ ಬೇರೆ ಫೋಟೋನಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಈ ಮೊದಲು ಇಡೀ ಕಾಲೇಜಿಗೆ ಇರುವುದು ಒಬ್ಬಳೇ ಜಾಹ್ನವಿ ಎಂದು ಹೇಳಿದ್ದರಿಂದ ಬೇರೆಯವರ ಹೆಸರು ಹೇಳುವುದು ಅಷ್ಟು ಸುಲಭವಲ್ಲ, ನಿಜ ಗೊತ್ತಾಗತ್ತೆ ಎಂದು ಕಮೆಂಟ್​ನಲ್ಲಿ ನೆಟ್ಟಿಗರು ಹೇಳಿದ್ದಾರೆ. ಹಾಗಿದ್ದರೆ ಮುಂದೇನು? ಸತ್ಯ ಅನಾವರಣಗೊಳ್ಳತ್ತಾ? ಸತ್ಯ ತಿಳಿದರೆ ಜಯಂತ್​ಗೂ ಇದು ಗೊತ್ತಾಗಿಬಿಡತ್ತಾ?

77
ಹಾಗಿದ್ದರೆ ಮುಂದೇನು?
Image Credit : Instagram

ಹಾಗಿದ್ದರೆ ಮುಂದೇನು?

ಹಾಗಿದ್ದರೆ ಮುಂದೇನು? ಸತ್ಯ ಅನಾವರಣಗೊಳ್ಳತ್ತಾ? ಸತ್ಯ ತಿಳಿದರೆ ಜಯಂತ್​ಗೂ ಇದು ಗೊತ್ತಾಗಿಬಿಡತ್ತಾ?

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved