ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಒಂಟಿ (ಅರಸರು) ಮತ್ತು ಜಂಟಿ (ಗುಲಾಮರು) ಎಂಬ ಥೀಮ್‌ನಿಂದಾಗಿ ಸ್ಪರ್ಧಿಗಳ ನಡುವೆ ಅಸಮಾನತೆ ಸೃಷ್ಟಿಯಾಗಿದೆ. ಈ ಕಾರಣದಿಂದಾಗಿ ಎರಡೂ ಗುಂಪುಗಳ ನಡುವೆ ತೀವ್ರ ಕಿತ್ತಾಟ ಶುರುವಾಗಿದ್ದು, ಜಾಹ್ನವಿ ಜಂಟಿಗಳ ನಿಯಮ ಉಲ್ಲಂಘನೆಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ.
ಬಿಗ್ ಬಾಸ್ ಸೀಸನ್ 12 ರಿಯಾಲಿಟಿ ಶೋ ಆರಂಭವಾಗಿ ಇದೀಗ ಒಂದು ವಾರವಷ್ಟೇ ಮುಕ್ತಾಯವಾಗಿದೆ. ಮೊದಲ ವಾರದೊಂದಲೇ ಕೆಲವೊಬ್ಬರು ವೈಯಕ್ತಿಕವಾಗಿ ಕಿತ್ತಾಡಿಕೊಂಡರೆ, ಎರಡನೇ ವಾರದಲ್ಲಿ ಗುಂಪುಗಳ ಮಡುವೆ ವೈಮನಸ್ಸು ಮೂಡಿ, ಅಸಲಿ ಕಿತ್ತಾಡ ಶುರುವಾಗಿದೆ. ಇನ್ನು ಬಿಗ್ ಬಾಸ್ ಸ್ಪರ್ಧಿಗಳ ಕಿತ್ತಾಟವನ್ನು ನೋಡಿದರೆ, ಇಲ್ಲಿ ಒಂಟಿ ಮತ್ತು ಜಂಟಿ ಗುಂಪುಗಳನ್ನು ಕಿತ್ತಾಡಲೆಂದೇ ಮಾಡಿರುವಂತೆ ಕಾಣಿಸುತ್ತಿದೆ.
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಗಿದ್ದು, ಇಲ್ಲಿ ಎಲ್ಲವೂ ಎಕ್ಸ್‌ಪೆಕ್ಟೆಡ್ ಟು ದಿ ಅನ್ ಎಕ್ಸ್‌ಪೆಕ್ಟೆಡ್ ಎಂಬ ಥೀಮ್ ಇಟ್ಟಿದ್ದಾರೆ. ಕಳೆದ ಸೀಸನ್ 11ರಲ್ಲಿ ಸ್ವರ್ಗ ಮತ್ತು ನರಕ ಥೀಮ್ ಮಾಡಲಾಗಿದ್ದು, ಇದಕ್ಕೆ ಜನರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬಾರಿ ಅದರ ಸುಧಾರಿತ ಭಾಗವೆಂದೇ ಹೇಳಬಹುದಾದ ಇನ್ನೊಂದು ಥೀಮ್ ತಂದಿದ್ದಾರೆ. ಇಲ್ಲಿ ಒಂಟಿಗಳು (ಅರಸರು) ಹಾಗೂ ಜಂಟಿಗಳು (ಗುಲಾಮರು) ಎನ್ನುವಂ ಥೀಮ್ ತಂದಿದ್ದಾರೆ. ಇಲ್ಲಿ ಎಲ್ಲ ಜಂಟಿಗಳು ಕೆಲಸವನ್ನು ಮಾಡುತ್ತಾ, ಒಂಟಿಗಳು ಹೇಳಿದ ಆಜ್ಞೆಗಳನ್ನು ಪಾಲಿಸಬೇಕಾಗಿದೆ.
ಬಿಗ್ ಬಾಸ್ ಮಾಡಿದ ಈ ಗುಂಪುಗಳು ಆಟವಾಡುವುದಕ್ಕೆ ಎನ್ನುವುದು ಎಲ್ಲರ ನಂಬಿಕೆ ಆಗಿದೆ. ಆದರೆ, ಅಸಲಿಯಾಗಿ ನೋಡಿದರೆ ಎಲ್ಲ ಸ್ಪರ್ಧಿಗಳು ತಮ್ಮದೇ ಆದ ಪ್ರಸಿದ್ಧಿಯಿಂದ ಬಿಗ್ಬ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಆದರೆ ಅವರನ್ನು ಎರಡು ಗುಂಪುಗಳನ್ನಾಗಿ ಮಾಡಿ ಅವರ ನಡುವೆ ಅಸಮಾನತೆ ತಂದು ಹಾಕಿದ್ದಾರೆ. ಇದೀಗ ಇದೇ ಅಸಮಾನತೆಯಿಂದ ಬಿಗ್ ಬಾಸ್ ಮನೆಯಲ್ಲಿ ಅಸಹಾಕಾರ ಶುರುವಾಗಿದೆ. ಇಲ್ಲಿ ಆಳುವ ವರ್ಗ ಮತ್ತು ಕೆಲಸ ಮಾಡುವ ವರ್ಗದ ಸದಸ್ಯರು ಪರಸ್ಪರ ಕಿತ್ತಾಡುತ್ತಿದ್ದಾರೆ.
ಜಂಟಿಗಳಿಂದ ಬಿಗ್ ಬಾಸ್ ನಿಯಮ ಉಲ್ಲಂಘನೆ
ಮನೆಯಲ್ಲಿ ಬಿಗ್ ಬಾಸ್ ಮಾಡಿದ ನಿಯಮಗಳು ತುಂಬಾ ಉಲ್ಲಂಘನೆ ಆಗುತ್ತಿವೆ. ತಮ್ಮ ಅಸ್ತಿತ್ವವನ್ನು ಉಳಿಸೋದಕ್ಕೆ ಜಂಟಿ-ಒಂಟಿಗಳು ಅಸಲಿ ಆಟಕ್ಕೆ ಇಳಿದಿದ್ದಾರೆ. ನಿಯಮ ಉಲ್ಲಂಘನೆ ಬಗ್ಗೆ ತೀವ್ರ ಆಕ್ರೋಶಗೊಂಡ ರಾಜಮಾತೆ ಅಶ್ವಿನಿ ಗೌಡ, ಜಂಟಿಗಳು ಯಾರೂ ಅಡುಗೆ ಮನೆಗೆ ಪ್ರವೇಶ ಮಾಡಬೇಡಿ ಎಂದು ಅಡ್ಡ ಹಾಕಿದ್ದಾರೆ. ಅರಸ-ಅರಸಿಯರ ಸೇವೆ ಮಾಡದಿರುವ ನಿಮಗೆ ನಾವ್ಯಾಕೆ ಊಟ ಕೊಡಬೇಕು ಎಂದು ಕೇಳುತ್ತಾರೆ. ಆಗ ಮರ್ಯಾದೆ ಇಲ್ಲವಾ ನಮಗೆ? ನಾವ್ಯಾಕೆ ಯಾರಿಂದಲೋ ಹೇಳಿಸಿಕೊಳ್ಳಬೇಕು? ಇದಕ್ಕೆ ಮಧ್ಯದಲ್ಲಿ ಬಂದ ಜಾಹ್ನವಿ ಕಪ್ಪೆಗಳು ಒಡಗುಟ್ಟಿದರೆ ಮೌನವೇ ಲೇಸು ಎಂದು ಹೇಳುತ್ತಾರೆ. ಇದಕ್ಕೆ ಅಭಿಷೇಕ್, ಜಾಹ್ನವಿ ಮುಂದೆ ಬಂದು ಬಾಯಿಗೆ ಬಂದಂತೆ ಮಾತನಾಡಿದರೆ ಸುಮ್ಮನಿರೊಲ್ಲ ಎಂದು ಹೇಳಿದ್ದಾನೆ.
ಕೋತಿ ಕುಣಿಸುವುದು ನನಗೆ ಗೊತ್ತು ಎಂದ ಅಶ್ವಿನಿ ಗೌಡ:
ಇದರಿಂದ ಮತ್ತೆ ಜಂಟಿಗಳ ಆಕ್ರೋಶದ ಕಟ್ಟೆ ಒಡೆಯಿತು. ಇದರಿಂದ ಎಲ್ಲ ಜಂಟಿಗಳು ಸೇರಿಕೊಂಡು ಒಂಟಿಯಾಗಿರುವ ಅರಸರನ್ನು ಕಿಚಾಯಿಸಲು ಶುರು ಮಾಡುತ್ತಾರೆ. ಕೋತಿಗಳಂತೆ ಅಣಕಿಸುತ್ತಿದ್ದ ಜಂಟಿ ತಂಡದ ಗಿಲ್ಲಿ ನಟನ ಆಟವನ್ನು ಸಹಿಸದ ರಾಜಮಾತೆ ಅಶ್ವಿನಿ ಗೌಡ ನನಗೆ ಕೋತಿ ಕುಣಿಸುವುದು ಗೊತ್ತು ಎಂದು ಹೇಳುತ್ತಾರೆ. ನಿಯಮ ಉಲ್ಲಂಘನೆ ಮಾಡಿದ್ದಲ್ಲದೇ ಇವಾಗ ಗಾಂಚಲಿ ಮಾಡ್ತಿದ್ದೀರಾ ಎಂದು ಜಂಟಿ ತಂಡದ ಅಭಿಷೇಕ್ ಮುಂದೆ ಒಂಟಿ ತಂಡದ ಜಾಹ್ನವಿ ಸಿಟ್ಟು ಹೊರಹಾಕಿದ್ದಾರೆ. ನೀವು ಹದ್ದುಮೀರಿ ಮಾತನಾಡುವುದು ಬೇಡ. ನಿಮ್ಮ ಮಾತಿನ ಮೇಲೆ ನಿಗಾ ಇರಲಿ ಎಂದು ಜಂಟಿಗಳು ಖಡಕ್ ತಿರುಗೇಟು ಕೊಡುತ್ತಾರೆ.
