'ಎಲ್ಲಾ ಅವನೊಬ್ನೆ' ಯಶ್‌ನ ಸರ್ವಾಂತರ್ಯಾಮಿ ಅಂತಾ ಕೆಣಿಕಿದ ಕೆಆರ್‌ಕೆ!
KRK tweet on Yash's next film ಯಶ್ ಅವರ ಮುಂಬರುವ 'ಟಾಕ್ಸಿಕ್' ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಶ್ ಅವರ ಸರ್ವಾಂತರ್ಯಾಮಿ ವರ್ತನೆ ಮತ್ತು 600 ಕೋಟಿ ಬಜೆಟ್ ಇದಕ್ಕೆ ಕಾರಣ ಎಂದಿದ್ದು, ಇದಕ್ಕೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿ ಯಶ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಸೌಥ್ ಸಿನಿಮಾಗಳ ಯಶಸ್ಸು
ಕಳೆದ ನಾಲ್ಕೈದು ವರ್ಷಗಳಿಂದ ದೇಶದ ಸಿನಿಲೋಕ ದಕ್ಷಿಣ ಭಾರತದತ್ತ ಮುಖ ಮಾಡುತ್ತಿದೆ. ಇಲ್ಲಿಯ ಪ್ರಾದೇಶಿಕತೆ ಕಥೆ ಜೊತೆ ಬಿಡುಗಡೆಯಾಗುವ ಸಿನಿಮಾಗಳು ಭಾಷೆಯ ಎಲ್ಲೆಯನ್ನು ಮೀರಿ ಜನರನ್ನು ತಲುಪುತ್ತಿವೆ. ಅಕ್ಟೋಬರ್ 2ರಂದು ಬಿಡುಗಡೆಯಾಗಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಯಶಸ್ಸಿನ ಮಾರ್ಗದಲ್ಲಿ ಸಾಗುತ್ತಿದೆ. ಇದೀಗ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಸಿನಿಮಾ ವಿಮರ್ಶಕ ಹೊಟ್ಟೆ ಉರಿದುಕೊಂಡು ಟ್ವೀಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯಶ್ ಸಿನಿಮಾ ಬಗ್ಗೆ ಕಮೆಂಟ್
ಕೆಆರ್‌ಕೆ ಎಂಬ ವ್ಯಕ್ತಿ ತನ್ನನ್ನು ಸಿನಿಮಾ ವಿಮರ್ಶಕ ಎಂದು ಕರೆದುಕೊಳ್ಳುತ್ತಾನೆ. ಈಗ ಕೆಜಿಎಫ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಕಮೆಂಟ್ ಮಾಡಿದ್ದಾನೆ. ಯಶ್ ಅವರ ಮುಂದಿನ ಟಾಕ್ಸಿಕ್ ಸಿನಿಮಾ ಯಶಸ್ಸು ಕಾಣಲ್ಲ ಎಂದು ಬರೆದುಕೊಂಡು ಕೆಲವು ಕಾರಣಗಳನ್ನು ನೀಡಿದ್ದಾನೆ. ಕೆಅರ್‌ಕೆ ಮಾಡಿದ ಟ್ವೀಟ್‌ನಲ್ಲಿ ಏನಿದೆ ಎಂಬುದರ ಮಾಹಿತಿ ಈ ಕೆಳಗಿನಂತಿದೆ.
ಕೆಆರ್‌ಕೆ ಟ್ವೀಟ್
ಕನ್ನಡ ನಟ ಯಶ್ ತಾನು ಮಾಡುವ ಕೆಲಸವೇ ಪರ್ಫೆಕ್ಟ್ (ಸರ್ವಾಂತರ್ಯಾಮಿ) ಅಂತ ತಿಳಿದುಕೊಂಡಿರುವ ವ್ಯಕ್ತಿ. ಯಶ್ ಮುಂದಿನ ಸಿನಿಮಾ ಟಾಕ್ಸಿಕ್‌ಗೆ ಅವರೇ ನಿರ್ದೇಶಕ, ಪ್ರೊಡಕ್ಷನ್ ಡಿಸೈನರ್ ಮತ್ತು ನಟ. ಈ ಚಿತ್ರದ ಬಜೆಟ್ 600 ಕೋಟಿ ರೂ.ಗೆ ತಲುಪಿದೆ. ಕೆಜಿಎಫ್ 2 ಸಿನಿಮಾ ಸಕ್ಸಸ್ ಮತ್ತೆ ಕಾಣಬೇಕು ಅನ್ನೋದು ಯಶ್ ಆಸೆ. ಆದ್ರೆ ಮತ್ತೆ ಮರಳಲ್ಲ ಎಂದು ಕೆಆರ್‌ಕೆ ಟ್ವೀಟ್ ಮಾಡಿದ್ದಾರೆ.
Kannada actor @TheNameIsYash has become self obsessed. He’s all alone is Writer Director Casting Director Production Designer and Actor of his upcoming film #Toxic. Film budget has reached to ₹600CR. He wants to repeat the success of #KGF2, which is not going to happen for sure.
— KRK (@kamaalrkhan) October 6, 2025
ನೆಟ್ಟಿಗರು ಹೇಳಿದ್ದೇನು?
ಟ್ವೀಟ್‌ಗೆ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಯಶ್ ಇಡೀ ಚಿತ್ರದ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದಾರೆ. ಕೆಜಿಎಫ್ ಎಂಬ ಬಿಗ್ ಹಿಟ್ ಬಳಿಕ ಅಂತದ್ದೆ ಸಕ್ಸಸ್ ಕಾಣಲು ಯಶ್ ಪ್ರಯತ್ನಿಸುತ್ತಿರೋದು ಸತ್ಯ. ಎಲ್ಲಾ ಚಿತ್ರಗಳಲ್ಲಿಯೂ ಕೆಜಿಎಫ್ ಮ್ಯಾಜಿಕ್ ಕಾಣೋದು ಅಷ್ಟು ಸುಲಭದ ಮಾತಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಯಶ್ ಕನಸುಗಾರ ಮತ್ತು ಸಾಧಕ
ಸಂದೀಪ್ ಎಂಬವರು ಕಮೆಂಟ್ ಮಾಡಿ, ಆರಂಭದಲ್ಲಿ ಇದು ಅತಿಯಾದ ಆತ್ಮವಿಶ್ವಾಸದಂತೆ ಕಾಣಬಹುದು. ಆದ್ರೆ ಯಶ್ ಸಿನಿಮಾ ಹಿನ್ನಲೆಯನ್ನು ಗಮನಿಸಿದ್ರೆ ಈ ರೀತಿ ಮಾತನಾಡಲ್ಲ. ಯಶ್ ಇತಿಹಾಸ ತಿಳಿದವರು ಹೀಗೆ ಮಾತನಾಡಲರು. ಯಶ್ ಓರ್ವ ಕನಸುಗಾರ ಮತ್ತು ಸಾಧಕರಾಗಿದ್ದಾರೆ. ಮೊದಲು 100 ಕೋಟಿ ಸಿನಿಮಾ ಅಂತ ಹೇಳಿದಾಗ ಎಲ್ಲರೂ ನಕ್ಕಿದ್ದರು. ಈಗ ಅದು ಇತಿಹಾಸ ಎಂದು ಕೆಆರ್‌ಕೆಗೆ ತಿರುಗೇಟು ನೀಡಿದ್ದಾರೆ.
ವಿಎಫ್‌ಎಕ್ಸ್‌ಗೆ ಮನ್ನಣೆ
ಇತ್ತೀಚೆಗೆ ಎಲ್ಲವೂ ದೊಡ್ಡ ಬಜೆಟ್ ಸಿನಿಮಾಗಳು. ನಿರ್ಮಾಪಕರು ಚಿತ್ರಕಥೆಗಿಂತ ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು VFX ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಆದ್ರೆ ಈ ಅವಲಂಬನೆ ಪ್ರತಿಬಾರಿಯೂ ಸಿನಿಮಾವನ್ನು ಗೆಲ್ಲಿಸಲ್ಲ ಎಂಬುವುದು ಸಾಬೀತಾಗಿದೆ. ಜನರ ಪ್ರತಿಬಾರಿಯೂ ಹೊಸದನ್ನು ತೆರೆಯ ಮೇಲೆ ನೋಡಲು ಬಯಸುತ್ತಾರೆ.
ಇದನ್ನೂ ಓದಿ: ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1': ಭಾರತದ ಎಲ್ಲಾ ನಿರ್ದೇಶಕರೂ ನಾಚಿಕೆಪಡಬೇಕು' ಎಂದ ರಾಮ್ ಗೋಪಾಲ್ ವರ್ಮಾ!
ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು VFX
ಪ್ರೇಕ್ಷಕರು ಕಥೆಯನ್ನು ಮೆಚ್ಚಿಕೊಂಡ್ರೆ ಮಾತ್ರ ಸಿನಿಮಾ ಗೆಲ್ಲಲಿದೆ. ಉತ್ತಮ ಕಥೆಗೆ ಪೂರಕವಾಗಿ ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು VFX ಇರಬೇಕೇ ಹೊರತು, ಇಡೀ ಸಿನಿಮಾವೇ ಮಾಯಾಲೋಕ ಆಗಬಾರದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಯಶ್, ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಸಂಸ್ಥೆ ಬಗ್ಗೆ 'ಕಾಂತಾರ ಸಕ್ಸಸ್ ಟೈಂ'ನಲ್ಲಿ ರಿಷಬ್ ಶೆಟ್ಟಿ ಹೇಳಿದ್ದೇನು?