Bihar Assembly poll dates: ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಸಿಎಂ ನಿತೀಶ್ ಕುಮಾರ್, ಪಾಟ್ನಾದಲ್ಲಿ ಮೆಟ್ರೋ ರೈಲು ಉದ್ಘಾಟನೆ ಮಾಡಿದ್ದು, ನಾಳೆಯಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. 2020ರಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ನವದೆಹಲಿ: ಈ ವರ್ಷದ ಕೊನೆಯ ವಿಧಾನಸಭಾ ಚುನಾವಣೆಗೆ (Bihar Assembly Election 2025 Dates) ಮುಹೂರ್ತ ನಿಗಧಿಯಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಚುನಾವಣೆ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ಬಿಹಾರದಲ್ಲಿ ಮತದಾರರ ಸಂಖ್ಯೆ 7.43 ಕೋಟಿ ಇದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 3.92 ಕೋಟಿ ಪುರುಷರು ಮತ್ತು 3.50 ಕೋಟಿ ಮಹಿಳೆಯರು, 1,725 ತೃತೀಯ ಲಿಂಗಿ ಮತದಾರರನ್ನು ಬಿಹಾರ ಹೊಂದಿದೆ.
ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಸಿಎಂ ನಿತೀಶ್ ಕುಮಾರ್, ಪಾಟ್ನಾದಲ್ಲಿ ಮೆಟ್ರೋ ರೈಲು ಉದ್ಘಾಟನೆ ಮಾಡಿದ್ದು, ನಾಳೆಯಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 14 ಲಕ್ಷ ಜನರು ಮೊದಲ ಬಾರಿಗೆ ಮತದಾನ ಮಾಡಲಿದ್ದು, ಒಂದು ಬೂತ್‌ಗೆ ಗರಿಷ್ಠ 1200 ಮತದಾರರು ಇರಲಿದ್ದಾರೆ. 2020ರಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮತಗಟ್ಟೆಗಳು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಹೊಂದಿರಲಿದೆ.
2025ರ ವಿಧಾನಸಭಾ ಚುನಾವಣೆಯ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ
ಮೊದಲನೇ ಹಂತದ ಚುನಾವಣೆ
ಪ್ರಕ್ರಿಯೆ ಆರಂಭ: 10 ಅಕ್ಟೋಬರ್ 2025 (ಶುಕ್ರವಾರ)
ನಾಮಪತ್ರ ಸಲ್ಲಿಕೆ ಆರಂಭ: 17ನೇ ಅಕ್ಟೋಬರ್ 2025
ಸೆಕ್ಯೂರಿಟಿ ಆಫ್ ನಾಮಿನೇಷನ್: 18ನೇ ಅಕ್ಟೋಬರ್ 2025
ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ: 20ನೇ ಅಕ್ಟೋಬರ್ 2025
ಮತದಾನದ ದಿನಾಂಕ: 6ನೇ ನವೆಂಬರ್ 2025
ಫಲಿತಾಂಶ: 14ನೇ ನವೆಂಬರ್ 2025
ಎರಡನೇ ಹಂತದ ಮತದಾನ
ಪ್ರಕ್ರಿಯೆ ಆರಂಭ: 13ನೇ ಅಕ್ಟೋಬರ್ 2025
ನಾಮಪತ್ರ ಸಲ್ಲಿಕೆ ಆರಂಭ: 20ನೇ ಅಕ್ಟೋಬರ್ 2025
ಸೆಕ್ಯುರಿಟಿ ಆಫ್ ನಾಮಿನೇಷನ್: 21ನೇ ಅಕ್ಟೋಬರ್ 2025
ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ: 23ನೇ ಅಕ್ಟೋಬರ್ 2025
ಮತದಾನ ದಿನಾಂಕ: 11ನೇ ನವೆಂಬರ್ 2025
ಫಲಿತಾಂಶ: 14ನೇ ನವೆಂಬರ್ 2025

ನವೆಂಬರ್ 22ಕ್ಕೆ ಬಿಹಾರ ವಿಧಾನಸಭಾ ಅವಧಿ ಅಂತ್ಯ
ವಿಶೇಷ ಮತಪಟ್ಟಿ ಪರಿಷ್ಕರಣೆಗೂ ಮುನ್ನ ರಾಜ್ಯದಲ್ಲಿ 7.89 ಕೋಟಿ ಮತದಾರರ ಹೆಸರು ಇತ್ತು. ಪರಿಷ್ಕರಣೆಯ ಕರಡು ವರದಿಯಲ್ಲಿ 7.24 ಕೋಟಿ ಹೆಸರು ಮಾತ್ರ ಇತ್ತು. ಅಂದರೆ 65 ಲಕ್ಷ ಹೆಸರು ಕೈಬಿಡಲಾಗಿತ್ತು. ಈ ವೇಳೆ ವಿಪಕ್ಷಗಳು ಉದ್ದೇಶಪೂರ್ವಕವಾಗಿಯೇ ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ರದ್ದುಪಡಿಸಲಾಗಿದೆ ಎಂದು ಆರೋಪಿಸಿದ್ದವು. ಅದಾದ ನಂತರದ ಅವಧಿಯಲ್ಲಿ ಬಹಳಷ್ಟು ಜನರು ದಾಖಲೆ ನೀಡಿ ತಮ್ಮ ಹೆಸರು ಸೇರ್ಪಡೆ ಮಾಡಿದ್ದಾರೆ. ಹೀಗಾಗಿ ಅಂತಿಮ ಪಟ್ಟಿಯಲ್ಲಿ ಮತದಾರರ ಸಂಖ್ಯೆ 7.42 ಕೋಟಿಗೆ ಏರಿದೆ. 243 ಸದಸ್ಯ ಬಲದ ರಾಜ್ಯ ವಿಧಾನಸಭೆಯ ಅವಧಿ ನ.22ಕ್ಕೆ ಕೊನೆಗೊಳ್ಳಲಿದೆ. ಅದಕ್ಕೂ ಮೊದಲು ಚುನಾವಣೆ ನಡೆದು ಹೊಸ ಸರ್ಕಾರ ರಚನೆ ಆಗಬೇಕಿದೆ.
ಇದನ್ನೂ ಓದಿ: ನಾಲ್ವರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಲು ಯಾರು ಅರ್ಹರು? ಸಮೀಕ್ಷೆಯಲ್ಲಿ ಅಚ್ಚರಿ ಮಾಹಿತಿ ಬಹಿರಂಗ
ಇದನ್ನೂ ಓದಿ: ಮತದಾನ ವೇಳೆ ಬುರ್ಖಾಧಾರಿಗಳ ಮುಖ ಪರಿಶೀಲಿಸಿ : ಬಿಜೆಪಿ
