ಡಿವೋರ್ಸ್ ಆದ್ರು ಬಿಡ್ತಿಲ್ಲ: ನಿರೂಪಕಿ ಜಾನ್ವಿ ಮಾಜಿ ಗಂಡ ಕಾರ್ತಿಕ್ ಮಹಡಿ ಬೇಸರ
ಬಿಗ್‌ಬಾಸ್ ಮನೆಯಲ್ಲಿ ನಿರೂಪಕಿ ಜಾನ್ವಿ ತಮ್ಮ ವಿಚ್ಚೇದನದ ಬಗ್ಗೆ ಮಾಡಿದ ಆರೋಪಗಳಿಗೆ ಅವರ ಮಾಜಿ ಪತಿ ಕಾರ್ತಿಕ್ ಮಹಡಿ ಪ್ರತಿಕ್ರಿಯಿಸಿದ್ದಾರೆ. ಜಾನ್ವಿ ಅವರ ನಡವಳಿಕೆ ಬಗ್ಗೆ ಕಾರ್ತಿಕ್ ಮಾತನಾಡಿದ್ದಾರೆ.

ನಿರೂಪಕಿ ಜಾನ್ವಿ
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿರುವ ನಿರೂಪಕಿ ಜಾನ್ವಿ ಅವರ ವೈಯಕ್ತಿಕ ಜೀವನ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಎರಡು ಬಾರಿ ತಮ್ಮ ವಿಚ್ಚೇದನಕ್ಕೆ ಕಾರಣ ಗಂಡನ ನಡವಳಿಕೆ ಮತ್ತು ಎರಡನೇ ಮದುವೆ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಜಾನ್ವಿ ಅವರ ಮಾಜಿ ಗಂಡ ಕಾರ್ತಿಕ್ ಮಹಡಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ಆಯಾಮಾದ ಕಥೆಯನ್ನು ಹೇಳಿಕೊಂಡಿದ್ದಾರೆ.
ಸಾಲು ಸಾಲು ಬ್ಯುಸಿನೆಸ್ ಸೋಲು
ನನ್ನ ಆರ್ಥಿಕ ಸ್ಥಿತಿ ಚೆನ್ನಾಗಿರೋವರೆಗೂ ಜಾನ್ವಿ ಚೆನ್ನಾಗಿದ್ದಳು. ಸಾಲು ಸಾಲು ಬ್ಯುಸಿನೆಸ್ ಸೋಲು ಆಗಿದ್ದರಿಂದ ಫ್ಲ್ಯಾಟ್ ಕಂತುಗಳನ್ನು ಜಾನ್ವಿಯೇ ಪಾವತಿಸಿದ್ದರು. ಬೇರೆಯವರಿಗೆ ಜಾನ್ವಿ ತಮ್ಮ ಖಾಸಗಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಹೀಗಾದಾಗ ಯಾವ ಗಂಡಸು ಸುಮ್ನೆ ಇರ್ತಾರೆ. ಇವರ ಬಗ್ಗೆ ಯಾರೋ ಒಬ್ರು ಪತ್ರ ಬರೆದಿದ್ದರು. ರವಿ ಬೆಳಗೆರೆ ಪತ್ರಿಕೆಯಲ್ಲಿಯೂ ಲೇಖನ ಬಂದಾದಲೂ ನಾನು ಪತ್ನಿಯನ್ನು ಸಮರ್ಥಿಸಿಕೊಂಡಿದ್ದೆ ಎಂದು ಹೇಳಿದ್ದಾರೆ.
ಮಗನ ವಿದ್ಯಾಭ್ಯಾಸ
ನನ್ನ ತಾಯಿಗೂ ಜಾನ್ವಿಗೂ ಹೊಂದಾಣಿಕೆಯಾಗದ ಕಾರಣ ಪ್ರತ್ಯೇಕ ಮನೆ ಮಾಡಿದೆ. ನಂತರ ಫ್ಲ್ಯಾಟ್ ಬೇಕೆಂದಾಗ ಸಾಲ ಮಾಡಿಕೊಂಡು ಅದನ್ನು ಸಹ ಖರೀದಿಸಿದೆ. ಡಿವೋರ್ಸ್ ಬಳಿಕ ನನ್ನ ಹೆಸರಿನಲ್ಲಿದ್ದ ಫ್ಲ್ಯಾಟ್ ಜಾನ್ವಿಗೆ ವರ್ಗಾಯಿಸಿದ್ದೇನೆ. ಮಗನ ವಿದ್ಯಾಭ್ಯಾಸಕ್ಕೂ ವಾರ್ಷಿಕ ಅಂತ ನ್ಯಾಯಾಲಯ ಸೂಚಿಸಿದ ಹಣವನ್ನು ಜಾನ್ವಿ ಖಾತೆಗೆ ವರ್ಗಾಯಿಸುತ್ತಿದ್ದೇನೆ. ಅಧಿಕೃತವಾಗಿ ಡಿವೋರ್ಸ್ ಪಡೆದ ನಂತರವೇ ನಾನು ಎರಡನೇ ಮದುವೆಯಾಗಿದ್ದಾನೆ ಎಂದು ಕಾರ್ತಿಕ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಧಿಕೃತವಾಗಿ ಡಿವೋರ್ಸ್
ಮುಂದುವರಿದ ಮಾತನಾಡಿದ ಕಾರ್ತಿಕ್, ಅಧಿಕೃತವಾಗಿ ಡಿವೋರ್ಸ್ ಪಡೆದರೂ ಸುಮ್ಮನಿರದೇ ಮೆಸೇಜ್ ಕಳುಹಿಸುತ್ತಾರೆ. ಆದ್ರೆ ಇದೆಲ್ಲವನ್ನು ನಾನು ನಿರ್ಲಕ್ಷ್ಯ ಮಾಡುತ್ತಿದ್ದೇನೆ. ಈಗ ಮಾಧ್ಯಮ ಮತ್ತು ರಿಯಾಲಿಟಿ ಶೋಗಳಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿ ನೆಮ್ಮದಿ ಇಲ್ಲದಂತೆ ಮಾಡುತ್ತಿದ್ದಾಳೆ. ಡಿವೋರ್ಸ್ ಆದ್ರೂ ನೆಮ್ಮದಿಯಾಗಿ ಜೀವನ ನಡೆಸಲು ಬಿಡುತ್ತಿಲ್ಲ ಎಂದು ಕಾರ್ತಿಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
72 ವರ್ಷ ವಯಸ್ಸು
ಡಿವೋರ್ಸ್ ಬಳಿಕ ಮೊಮ್ಮಗನನ್ನು ನೋಡಲು ನಮ್ಮ ತಂದೆ ಫ್ಲ್ಯಾಟ್‌ಗೆ ಹೋಗಿದ್ದರು. ತಂದೆಯವರಿಗೆ 72 ವರ್ಷ ವಯಸ್ಸು. ಅವರನ್ನು ಮನೆಯೊಳಗೆ ಕರೆದುಕೊಳ್ಳದೇ ಹೊರೆಗೆ ನಿಲ್ಲಿಸಿ ಅವಮಾನಿಸಿದ್ದಾರೆ. ಮಗನನ್ನು ಕಳುಹಿಸುವಂತೆ ಹೇಳಿದರು ಕಳುಹಿಸಲಿಲ್ಲ. ಏಪ್ರಿಲ್‌ನಲ್ಲಿ ತಂದ ನಿಧನವಾದ್ರೂ ಅಂತಿಮ ದರ್ಶನಕ್ಕೂ ಬರಲಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.
ಇದನ್ನೂ ಓದಿ: ಇತ್ತ ಸುದೀಪ್, ಅತ್ತ Bigg Boss ಮಲ್ಲಮ್ಮ! ಈ ಪುಟಾಣಿಯ ಡಬಲ್ ರೋಲ್ಗೆ ನಕ್ಕೂ ನಕ್ಕೂ ಸುಸ್ತಾಗುವಿರಿ!