ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಇಬ್ಬರನ್ನು ದಾಸಯ್ಯನ ತರಹ ಡಂಗೂರ ಹೊಡ್ಕೊಂಡ್ ಓಡಾಡೋಕೆ ಬಿಟ್ಟಿದ್ದೀವಿ ಎಂದು ಪೌರಾಡಳಿತ ಸಚಿವ ಬಾಲಕೃಷ್ಣ ಟಾಂಗ್ ನೀಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನೈಸ್ ರಸ್ತೆ ಸಂತ್ರಸ್ತರೊಂದಿಗೆ ಸಂವಾದ ಮಾಡಿದ್ದರೆ ಅಭಿನಂದನೆ ಸಲ್ಲಿಸುತ್ತಿದ್ದೆ. ಈಗ ರಾಜಕೀಯ ಕಾರಣಕ್ಕೆ ಸಂವಾದದ ನಾಟಕ ಆಡುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಒಂದು ದಿನವೂ ಹೋಗಿ ಸಂತ್ರಸ್ತರಿಂದ ಅಹವಾಲು ಸ್ಬೀಕರಿಸಲಿಲ್ಲ. ವೆಸ್ಟ್ ಎಂಡ್ ಹೋಟೆಲ್ ರೂಂನಲ್ಲಿ ಮಲಗಿಕೊಳ್ಳುತ್ತಿದ್ದರು. ಅವರು ಮಲಗಿಕೊಂಡಿದ್ದಿದ್ದಕ್ಕೆ ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದಿತು. ಆಗ ನಾವು ಎಚ್ಚರಗೊಳಿಸಿದರೂ ಎದ್ದೇಳಲಿಲ್ಲ. ನಿಜವಾಗಿ ಮಲಗಿದ್ದರೆ ಎಚ್ಚರ ಮಾಡಬಹುದು. ಮಲಗಿರುವ ಹಾಗೆ ನಾಟಕ ಮಾಡಿದರೆ ಎಚ್ಚರಿಸಲು ಆಗಲ್ಲ ಎಂದು ವಾಗ್ದಾಳಿ ನಡೆಸಿದರು.
07:15 AM (IST) Oct 04
ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವತಿಯಿಂದ 1.75 ಕೋಟಿ ರೂ. ವಿದ್ಯಾರ್ಥಿವೇತನ ಹಾಗೂ ಲ್ಯಾಪ್‌ಟಾಪ್ ವಿತರಿಸಲಾಯಿತು. ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ವಿದ್ಯಾರ್ಥಿವೇತನ ಹಸ್ತಾಂತರಿಸಿ, ಸಂಸ್ಥೆಯ ಸಮಾಜ ಸೇವೆಯನ್ನು ಶ್ಲಾಘಿಸಿದರು. ಈ ವೇಳೆ 'ಕಲಾಂತರಂಗ- 2026' ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
07:08 AM (IST) Oct 04
07:00 AM (IST) Oct 04
06:53 AM (IST) Oct 04
ದಸರಾ ಹಬ್ಬದ ಪ್ರಯುಕ್ತ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗವು ಅಕ್ಟೋಬರ್ 11 ರಿಂದ 20 ರವರೆಗೆ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸಿದೆ. ನವದುರ್ಗ ದರ್ಶನ, ಮಡಿಕೇರಿ, ಕೊಲ್ಲೂರು, ಸಿಗಂದೂರು ಮತ್ತು ಶೃಂಗೇರಿ ಕ್ಷೇತ್ರಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
06:44 AM (IST) Oct 04
ಈ ಬಾರಿಯ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ವ ಜನಾಂಗದ ಶಾಂತಿಯ ಸಂದೇಶ ಸಾರಲು 500 ವಿವಿಧ ಧರ್ಮಗುರುಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ತ್ರಿವಿಧ ದಳಗಳ ಪಥಸಂಚಲನ, ಕ್ರೀಡಾಪಟುಗಳು ಹಾಗೂ ಚಲನಚಿತ್ರ ತಾರೆಯರು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
06:35 AM (IST) Oct 04
ರಾಮನಾಥಪುರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ 23 ಕೋಟಿ ವೆಚ್ಚದ ಹೊಸ ಸೇತುವೆ ಕಾಮಗಾರಿಯು ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸೇತುವೆಯ ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣವನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ.
06:23 AM (IST) Oct 04
06:17 AM (IST) Oct 04
ಬೆಂಗಳೂರಿನ ಚಂದ್ರಪ್ಪನಗರದಲ್ಲಿ ಪಡಿತರ ಚೀಟಿದಾರರಿಂದ ಇ-ಕೆವೈಸಿ ಮಾಡಲು ₹500 ಪಡೆದ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಆಹಾರ ಇಲಾಖೆ ರದ್ದುಗೊಳಿಸಿದೆ. ನಿಯಮಗಳ ಉಲ್ಲಂಘನೆ ಹಾಗೂ ಹಣ ವಸೂಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
06:09 AM (IST) Oct 04
06:03 AM (IST) Oct 04
05:55 AM (IST) Oct 04
05:40 AM (IST) Oct 04
ಪ್ರಜಾಸೇವಾ ಆಂದೋಲನದಲ್ಲಿ ಯುವಕನೊಬ್ಬ ರೈತರಿಗೆ ಹೆಣ್ಣು ಕೊಡಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾನೆ. ರೈತ ಯುವಕರಿಗೆ ವಧು ಸಿಗುತ್ತಿಲ್ಲ, ಇದನ್ನು 6ನೇ ಗ್ಯಾರಂಟಿಯಾಗಿ ಘೋಷಿಸಿ ಎಂದು ಆತ ಕೇಳಿಕೊಂಡಿದ್ದಾನೆ. ಈ ವಿಚಿತ್ರ ಬೇಡಿಕೆ ಕೇಳಿ ಸಭಾಂಗಣದಲ್ಲಿ ನಗು ಹೊಮ್ಮಿತು.