Published : Mar 04, 2026, 06:51 AM ISTUpdated : Mar 04, 2026, 10:14 PM IST

Karnataka News Live: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ - ಕೊನೆಗೂ ಕಂಡುಬಂತು 'ಕೊಡವ' ಸೊಗಡು!

ಸಾರಾಂಶ

ಬೆಂಗಳೂರು: ನಿಮ್ಮ ಮತ್ತು ಡಿಸಿಎಂ ನಡುವಿನ ಕುಚುಕು ಕುಚುಕು ಬಗ್ಗೆ ನಮಗೇನೂ ಸಂಕಟವಿಲ್ಲ. ಆದರೆ ನಿಮ್ಮೊಳಗೆ ಹುದುಗಿದ್ದ ಅಸಹನೆಯ ಜ್ವಾಲಾಮುಖಿ ಅದೆಷ್ಟೋ ಬಾರಿ ವೇದಿಕೆಗಳ ಮೇಲೆಯೇ ಸ್ಫೋಟಿಸಿದೆ. ರಾಜ್ಯದ ಜನ ನೋಡಿ ಕೃತಾರ್ಥರಾಗಿದ್ದಾರೆ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವಷ್ಟು ನಿಮ್ಮಬ್ಬರ ಕುಚುಕು ಬಗ್ಗೆ ಜನತೆಗೆ ಗೊತ್ತಿಲ್ಲದ್ದು ಏನೂ ಇಲ್ಲವೇನೋ? ನಿಮ್ಮ ಸ್ನೇಹ ಚಿರಾಯುವಾಗಲಿ ಹಾಗೂ ನಿಮ್ಮ ಸ್ನೇಹಿತನಿಗಾಗಿ ನಿಮ್ಮ ವಚನ ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ... ಎಂದು ಹೆಚ್‌ ಡಿ ಕುಮಾರಸ್ವಾಮಿ ಕಾಲೆಳೆದಿದ್ದಾರೆ.

DK Shivakumar at Rashmika Mandanna Marriage

10:14 PM (IST) Mar 04

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ - ಕೊನೆಗೂ ಕಂಡುಬಂತು 'ಕೊಡವ' ಸೊಗಡು!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಹೈದರಾಬಾದ್ ಆರತಕ್ಷತೆ ಅದ್ಧೂರಿಯಾಗಿ ನೆರವೇರಿದೆ. ಈ ಸಮಾರಂಭಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಿ ಶುಭ ಹಾರೈಸಿದ್ದು, ರಶ್ಮಿಕಾ ಕುಟುಂಬಸ್ಥರು ಕೊಡವ ಶೈಲಿಯ ಸೀರೆಯುಟ್ಟು ಗಮನ ಸೆಳೆದರು. ಟಾಲಿವುಡ್‌ನ ಹಲವು ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾದರು.
Read Full Story

08:06 PM (IST) Mar 04

Haveri - ಸೇಮ್‌ ಟು ಸೇಮ್‌ ಚೆಲುವಿನ ಚಿತ್ತಾರ; ಉಲ್ಲಾಸದ ಹೂಮಳೆ ಹಾಡುತ್ತಿದ್ದ ಜೋಡಿಗೆ ಕಟುಕನಾದ ಅಪ್ಪ!

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ 'ಚೆಲುವಿನ ಚಿತ್ತಾರ' ಸಿನಿಮಾದಂತೆಯೇ ಘಟನೆಯೊಂದು ನಡೆದಿದೆ. ಪೋಷಕರ ವಿರೋಧದ ನಡುವೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸೃಷ್ಟಿ ಮತ್ತು ಮಣಿಕಂಠ ಜೋಡಿಯನ್ನು, ಯುವತಿಯ ಪೋಷಕರೇ ಬಲವಂತವಾಗಿ ಬೇರ್ಪಡಿಸಿದ್ದಾರೆ.

Read Full Story

06:34 PM (IST) Mar 04

ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ! ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಬರ್ತಿದ್ದಂತೆ ಅಲರ್ಟ್

ದಾವಣಗೆರೆ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ.  

Read Full Story

06:29 PM (IST) Mar 04

ಪಲ್ಯ ಮಾಡುವಾಗ ಹಾಗಲಕಾಯಿ ಕಹಿ ಬರ್ತಿದೆಯೇ? ಕಹಿ ತೆಗೆಯಲು ಈ ಸಿಂಪಲ್‌ ಟ್ರಿಕ್‌ ಫಾಲೋ ಮಾಡಿ!

ಹಾಗಲಕಾಯಿ ಅಂದಕೂಡಲೇ ಅದರ ಕಹಿಯ ನೆನಪಾಗಿ ಅನೇಕರು ಮುಖ ಹಿಂಡುತ್ತಾರೆ. ಆದರೆ, ಆಯುರ್ವೇದದಲ್ಲಿ 'ರಾಮಬಾಣ' ಎಂದು ಕರೆಸಿಕೊಳ್ಳುವ ಈ ತರಕಾರಿ ಆರೋಗ್ಯದ ಗಣಿಯಾಗಿದೆ. ಹಾಗಲಕಾಯಿಯ ಅದ್ಭುತ ಪ್ರಯೋಜನಗಳು ಮತ್ತು ಅದರ ಕಹಿಯನ್ನು ಹೋಗಲಾಡಿಸುವ 6 ಸರಳ ಸೂತ್ರಗಳು ಇಲ್ಲಿವೆ

 

Read Full Story

06:21 PM (IST) Mar 04

ಚಂದ್ರಗುತ್ತಿಯಲ್ಲಿ ಕ್ರಿ.ಶ. 1350ರ ಕಾಲಘಟ್ಟದ ವೀರಗಲ್ಲು ಪತ್ತೆ, ಯುದ್ಧ ಗೆದ್ದ ವಿಜಯನಗರ ಕಾಲದ ಯೋಧನ ಬಣ್ಣನೆ!

ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಆರಂಭಿಕ ಕಾಲದ ಅಪೂರ್ವ ವೀರಗಲ್ಲು ಶಾಸನ ಪತ್ತೆಯಾಗಿದೆ. ಕ್ರಿ.ಶ. 1350ರ ಈ ಶಾಸನವು, ಆರಗದ ಅರಸರ ವಿರುದ್ಧ ಹೋರಾಡಿ ಮಡಿದ ಸಂಡದ ಹಾಲಪ್ಪ ಎಂಬ ಯೋಧನ ಸ್ಮರಣಾರ್ಥ ಸ್ಥಾಪಿಸಲಾಗಿದೆ. ಈ ಶೋಧನೆಯು ಮಲೆನಾಡಿನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.
Read Full Story

06:10 PM (IST) Mar 04

ವಿದೇಶದಲ್ಲಿದ್ರೂ 'ಇಂಟರ್ನ್ಯಾಷನಲ್ ಜೀಜು' ಮಾಡಿದ್ದೇನು? ನಿಕ್ ಜೊತೆಗಿದ್ರೂ ಕಣ್ಣೀರು ಹಾಕಿದ್ದೇಕೆ ಪ್ರಿಯಾಂಕಾ ಚೋಪ್ರಾ..?

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತನ್ನದೇ ಆದ ಛಾಪು ಮೂಡಿಸಿರುವ 'ದೇಶಿ ಗರ್ಲ್' ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್ ಪಾಪ್ ಸಿಂಗರ್ ನಿಕ್ ಜೋನಸ್ ಜೋಡಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ. ಈ ಜೋಡಿ ಕೇವಲ ಸಿನಿಮಾಗಳಿಗಾಗಿ ಮಾತ್ರವಲ್ಲದೆ ವಿಭಿನ್ನ ವಿಷಯಕ್ಕೂ ಸುದ್ದಿಯಾಗುತ್ತಾರೆ.

Read Full Story

06:05 PM (IST) Mar 04

ಬೀದರ್ - ಚಿಕಿತ್ಸೆ ಸಿಗದೆ ರೋಗಿ ಸಾಯಲು ಯತ್ನ, BRIMS ನಿರ್ದೇಶಕಿ ನೋ ರೆಸ್ಪಾನ್ಸ್, 'ನನಗೂ ಇದಕ್ಕೂ ಸಂಬಂಧಿವಿಲ್ಲ ಎಂದ DHO!

ಬೀದರ್‌ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆಯಲ್ಲಿ ಎಕ್ಸ್‌-ರೇ ಸೌಲಭ್ಯಕ್ಕಾಗಿ ದಿನಗಟ್ಟಲೆ ಕಾಯುವಂತಾದ ಔರಾದ್ ನಿವಾಸಿ ಆನಂದ ಕರಬಾಳೆ ಎಂಬುವವರು, ಚಿಕಿತ್ಸೆ ಸಿಗದೆ ಮನನೊಂದು ಆತ್ಮ೧ಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯು ಆಸ್ಪತ್ರೆಯ ಅವ್ಯವಸ್ಥೆ, ಸಿಬ್ಬಂದಿಯ ಬೇಜವಾಬ್ದಾರಿ ಬಯಲಾಗಿದೆ.

Read Full Story

05:54 PM (IST) Mar 04

ಕಾಡಾನೆ ನಾಡಿಗೆ ಬರದಂತೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ₹12.77 ಕೋಟಿ ಅನುದಾನ ಬಿಡುಗಡೆ

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ನಿರಂತರ ಕಾಡಾನೆ ಹಾವಳಿಯನ್ನು ತಡೆಯಲು ರಾಜ್ಯ ಸರ್ಕಾರವು 7.71 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹12.77 ಕೋಟಿ ಅನುದಾನ ಬಿಡುಗಡೆ ಮಾಡಿದೆ. 

Read Full Story

05:54 PM (IST) Mar 04

ಕಿಚ್ಚ ಅಂದ್ರೆ ಏನು? ತಲೆ ಕೆಡಿಸಿಕೊಂಡ ಸುದೀಪ್! ಕಾಲೇಜಲ್ಲೂ ಹುಚ್ಚು ಹಿಡಿಸಿದ ಶಬ್ದಕ್ಕೆ ಕೊನೆಗೂ ಸಿಕ್ತು ಉತ್ತರ

ನಟ ಸುದೀಪ್ ಅವರಿಗೆ 'ಕಿಚ್ಚ' ಎಂಬ ಹೆಸರು ಬಂದಿದ್ದು 2001ರ 'ಹುಚ್ಚ' ಸಿನಿಮಾದಿಂದ. ಈ ಸಿನಿಮಾದಲ್ಲಿ 'ಕಿಚ್ಚ' ಪದದ ಅರ್ಥ ಹುಡುಕುವ ದೃಶ್ಯವಿದ್ದು, ಕೊನೆಗೆ ಜ್ಯೋತಿಷಿಯೊಬ್ಬರು ಕಿಚ್ಚ ಶಬ್ದದ ಅರ್ಥ ವಿವರಿಸುತ್ತಾರೆ. ಈ ಮೂಲಕ ಸುದೀಪ್ ಅವರ ಜನಪ್ರಿಯ ಹೆಸರಿನ ಹಿಂದಿನ ಕಥೆಯನ್ನು ಲೇಖನವು ತಿಳಿಸುತ್ತದೆ.

Read Full Story

05:33 PM (IST) Mar 04

ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ ಟ್ರಾಫಿಕ್ ದಟ್ಟಣೆ ಶಮನಕ್ಕೆ ದಕ್ಷಿಣ ರೈಲ್ವೆ ಮಹತ್ವದ ಹೆಜ್ಜೆ, ಚತುಷ್ಪಥ ರಸ್ತೆ!

ಮಂಗಳೂರಿನ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿನ ತೀವ್ರ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ದಕ್ಷಿಣ ರೈಲ್ವೆ ಅನುಮೋದನೆ ನೀಡಿದೆ. ಸಂಸದ ಬ್ರಿಜೇಶ್ ಚೌಟ ಅವರ ಪ್ರಯತ್ನದ ಫಲವಾಗಿ ಈ ಯೋಜನೆ ಜಾರಿಯಾಗುತ್ತಿದೆ. 

Read Full Story

05:23 PM (IST) Mar 04

ಸಿಎಂ ಬಂದ್ರೂ ಡಿಲೀಟ್​ ಮಾಡಲ್ಲ, ಅವ್ರಾ- ನಾನಾ ನೋಡ್ತೇನೆ, ನಾನು ಮೀಟರ್​ ಇರೋನು ಎಂದ Dog Satish

ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್, ತಾವು ಮೂತ್ರ ವಿಸರ್ಜನೆ ಮಾಡುವಾಗ ಸುದೀಪ್ ಅವರ ಹಾಡನ್ನು ಬಳಸಿದ ವಿಡಿಯೋದಿಂದ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ತೀವ್ರ ವಿರೋಧ ವ್ಯಕ್ತವಾದರೂ, ಇದು ನನ್ನ ಇಷ್ಟ ಮತ್ತು ವಿಡಿಯೋ ಡಿಲೀಟ್ ಮಾಡುವುದಿಲ್ಲ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.
Read Full Story

05:07 PM (IST) Mar 04

92 ಲಕ್ಷ ವೇತನ ಝೀರೋ ಭದ್ರತೆ, ಒಂದೇ ದಿನದಲ್ಲಿ ಶೇ.40ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಬೆಂಗಳೂರು ಐಟಿ ಕಂಪೆನಿ!

ಬೆಂಗಳೂರು ಮೂಲದ ಐಟಿ ಸ್ಟಾರ್ಟ್‌ಅಪ್ ಒಂದೇ ದಿನದಲ್ಲಿ ತನ್ನ 40% ಉದ್ಯೋಗಿಗಳನ್ನು ವಜಾಗೊಳಿಸಿದೆ. ವಾರ್ಷಿಕ ₹92 ಲಕ್ಷ ಸಂಬಳ ಪಡೆಯುತ್ತಿದ್ದ ಉದ್ಯೋಗಿ ಸೇರಿದಂತೆ ಹಲವರು ಕೆಲಸ ಕಳೆದುಕೊಂಡಿದ್ದು, ಈ ಘಟನೆಯು ಭಾರತದ ತಂತ್ರಜ್ಞಾನ ವಲಯದಲ್ಲಿನ ಹೆಚ್ಚುತ್ತಿರುವ ಉದ್ಯೋಗ ಅನಿಶ್ಚಿತತೆಯನ್ನು ತೋರಿಸುತ್ತದೆ. 

Read Full Story

04:52 PM (IST) Mar 04

ಮುನಿಸಿಕೊಂಡ ಗ್ರಾಹಕರ ಸೆಳೆಯಲು ಓಲಾ ಎಲೆಕ್ಟ್ರಿಕ್ ಹೋಳಿ ಆಫರ್, ಕೈಗೆಟುಕುವ ದರದಲ್ಲಿ ಇವಿ ಬೈಕ್

ಮುನಿಸಿಕೊಂಡ ಗ್ರಾಹಕರ ಸೆಳೆಯಲು ಓಲಾ ಎಲೆಕ್ಟ್ರಿಕ್ ಹೋಳಿ ಆಫರ್, ಕೈಗೆಟುಕುವ ದರದಲ್ಲಿ ಇವಿ ಬೈಕ್, ಹಬ್ಬದ ಆಫರ್ ಮೂಲಕ ಸ್ಕೂಟರ್ ಖರೀದಿಸಲು ಓಲಾ ವಿಶೇಷ ಆಫರ್ ನೀಡಿದೆ. ಟೀಕೆ, ದೂರುಗಳಿಂದ ಸೊರಗಿದ್ದ ಓಲಾ ಹೊಸ ಆಫರ್ ನೀಡಿದೆ.

 

Read Full Story

04:28 PM (IST) Mar 04

ಗೂಗಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಟೆಕ್ಕಿಯ ಪಾಠ, ಈ ಹನ್ನೆರಡು ಸೂತ್ರಗಳು ಇದ್ದರೆ ಮಾತ್ರ ಅರ್ಹ!

ಬೆಂಗಳೂರು ಮೂಲದ ಟೆಕ್ಕಿ ದೀಕ್ಷಾ ಅಗರ್ವಾಲ್, ಗೂಗಲ್‌ನಲ್ಲಿ ತಮ್ಮ ಮೊದಲ ವರ್ಷದ ಸೇವೆಯಲ್ಲಿ ಕಲಿತ ಮಹತ್ವದ ಪಾಠಗಳನ್ನು ಹಂಚಿಕೊಂಡಿದ್ದಾರೆ. ಸರಳ ಕೋಡಿಂಗ್, ಗುಣಮಟ್ಟದ ಪರೀಕ್ಷೆ, ದೋಷಾರೋಪಣೆಗಿಂತ ಪರಿಹಾರಕ್ಕೆ ಆದ್ಯತೆ ನೀಡುವ ಸಂಸ್ಕೃತಿವಿವರಿಸಿದ್ದಾರೆ.

Read Full Story

04:16 PM (IST) Mar 04

​KERC new power rates - ಬೇಸಿಗೆ ಆರಂಭದಲ್ಲೇ ಕರೆಂಟ್ ಶಾಕ್ - ಕೈಗಾರಿಕಾ ಮತ್ತು ವಾಣಿಜ್ಯ ವಿದ್ಯುತ್ ದರ ಭಾರಿ ಏರಿಕೆ!

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಪರಿಷ್ಕರಿಸಿದ್ದು, ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಈ ನಿರ್ಧಾರದಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ದರ ಏರಿಕೆಯಾಗಿದ್ದು, ಗೃಹ ಬಳಕೆದಾರರ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

Read Full Story

04:14 PM (IST) Mar 04

ಕೆಪಿಎಸ್ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಇತಿಹಾಸ, ಭ್ರಷ್ಟಾಚಾರವಲ್ಲ-ಜ್ಯೋತಿ!

ಇತ್ತೀಚಿನ ಕೆಪಿಎಸ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಂದೇ ಪರೀಕ್ಷಾ ಕೊಠಡಿಯಿಂದ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ತಿಳಿಸಿದ್ದಾರೆ.

Read Full Story

04:12 PM (IST) Mar 04

ಅಡ್ಡಾದಿಡ್ಡಿ ಕಾರು ಚಾಲನೆ - ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿ - ಕೈಗೆ ಸಿಕ್ಕ ಕಾರು ಚಾಲಕನಿಗೆ ಕೈರುಚಿ ತೋರಿಸಿದ ಜನ

ಬಳ್ಳಾರಿಯ ಎಎಸ್ಎಂ ಮಹಿಳಾ ಕಾಲೇಜು ಬಳಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಚಾಲಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಕಾರು ಪಲ್ಟಿಯಾಗಿ ಜಖಂಗೊಂಡಿದೆ. 

Read Full Story

03:46 PM (IST) Mar 04

ಒಳ ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಆದರೆ.. - ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಒಳ ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ, ಆದರೆ ಕಾನೂನಾತ್ಮಕ ತೊಡಕುಗಳಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆ, ಬಿಜೆಪಿ ವಿರುದ್ಧದ ಆರೋಪ, ದಲಿತ ನಾಯಕರ ಸರಣಿ ಸಭೆ ಕುರಿತು ಅವರು ಮಾಹಿತಿ, ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲೇ ನಿಭಾಯಿಸುವುದಾಗಿ ತಿಳಿಸಿದ್ದಾರೆ.

Read Full Story

03:42 PM (IST) Mar 04

ಕೋರ್ಟ್ ಸಮಯ ಹಾಳು ಮಾಡುತ್ತಿರೋ ಡಿ ಗ್ಯಾಂಗ್; ದಾಸನ ಬೇಡಿಕೆಗೆ SPP ಗುನ್ನ, ಮುಗಿಯಲ್ಲ ಗ್ರಹಣ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಪ್ರತಿದಿನದ ವಿಚಾರಣೆ, ಮನೆಯೂಟ ಸೇರಿದಂತೆ ದರ್ಶನ್ ಪರ ವಕೀಲರ ಹಲವು ಮನವಿಗಳಿಗೆ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

Read Full Story

03:38 PM (IST) Mar 04

ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿರುವರಿಗೆ, ಪಿಜಿ ನಡೆಸುವ ಮಾಲೀಕರಿಗೆ ಜಿಬಿಎ ವಾರ್ನಿಂಗ್, ಈ ನಿಯಮ ಪಾಲಿಸಲೇಬೇಕು

2 ಮಹಡಿಗಿಂತ ಹೆಚ್ಚಿನ ಕಟ್ಟಡಗಳು ಮತ್ತು ಪಿಜಿಗಳಲ್ಲಿ ಹಸಿ ಮತ್ತು ಒಣ ಕಸಕ್ಕೆ ಪ್ರತ್ಯೇಕ ಡಬ್ಬಿಗಳನ್ನು ಕಡ್ಡಾಯಗೊಳಿಸಲು ಜಿಬಿಎ ಮುಂದಾಗಿದೆ. ಸಾರ್ವಜನಿಕ ಸಭೆಯಲ್ಲಿ ಈ ವಿಷಯ ತಿಳಿಸಿದ ಮುಖ್ಯ ಆಯುಕ್ತ ಮಹೇಶ್ವರ ರಾವ್, ಕಟ್ಟಡ ನಿಯಮ ಉಲ್ಲಂಘನೆ ವಿರುದ್ಧವೂ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

Read Full Story

02:03 PM (IST) Mar 04

ಕಾರದ ಮಠದ ಪೀಠಾಧ್ಯಕ್ಷರಾದ ವೀರಬಸವ ಸ್ವಾಮೀಜಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ಸಿದ್ದಗಂಗಾ ಮಠಕ್ಕೆ ಪಾದಯಾತ್ರೆ

ತುಮಕೂರಿನ ಕಾರದ ಮಠದ ಪೀಠಾಧ್ಯಕ್ಷ ವೀರಬಸವ ಸ್ವಾಮೀಜಿ ನಾಪತ್ತೆಯಾಗಿದ್ದಾರೆಂಬ ವದಂತಿಗೆ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ತಾವು ಮೌನವ್ರತದಲ್ಲಿದ್ದು ಪಾದಯಾತ್ರೆ ಮೂಲಕ ಸಿದ್ದಗಂಗಾ ಮಠಕ್ಕೆ ಬಂದಿದ್ದಾಗಿ ತಿಳಿಸಿದ್ದು, ಮಾಹಿತಿ ನೀಡದ ಕಾರಣ ಗೊಂದಲ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
Read Full Story

01:50 PM (IST) Mar 04

ನಾಳೆಯಿಂದ ಬೆಂಗಳೂರು ಹೃದಯಭಾಗದ ರಸ್ತೆಯಲ್ಲಿ ಕಾಮಗಾರಿ, 15 ದಿನ ಟ್ರಾಫಿಕ್ ಸಂಕಷ್ಟ ತಪ್ಪಿದ್ದಲ್ಲ

ಬೆಂಗಳೂರಿನ ರಸ್ತೆಯಲ್ಲಿ 15 ದಿನಗಳ ಕಾಲ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದ್ದು, ಡಾಂಬರೀಕರಣದ ಸಮಯದಲ್ಲಿ ಪರ್ಯಾಯ ಮಾರ್ಗ ಸೂಚಿಸಲಾಗುವುದು.

Read Full Story

01:43 PM (IST) Mar 04

ಸ್ವಾಮೀಜಿ ಮಿಸ್ಸಿಂಗ್ - ಬರ್ತಡೇ ಪ್ಲೆಕ್ಸ್ ಹರಿದಿದ್ದಕ್ಕೆ ಯುವಕರಿಂದ ಗಲಾಟೆ - ರಾತ್ರೋರಾತ್ರಿ ಮಠ ತೊರೆದ ಶ್ರೀಗಳು!

ತುಮಕೂರಿನ ಬೆಳ್ಳಾವಿ ಮಠದಲ್ಲಿ ಹುಟ್ಟುಹಬ್ಬದ ಪ್ಲೆಕ್ಸ್ ವಿಚಾರಕ್ಕೆ ಯುವಕರು ಗಲಾಟೆ ಮಾಡಿದ್ದರಿಂದ ಮನನೊಂದ ವೀರಬಸವ ಸ್ವಾಮೀಜಿ ಮಠವನ್ನೇ ತೊರೆದಿದ್ದಾರೆ. ಎರಡು ದಿನಗಳ ನಂತರ ನಾಪತ್ತೆಯಾಗಿದ್ದ ಶ್ರೀಗಳು ಸಿದ್ದಗಂಗಾ ಮಠದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಗಲಾಟೆ ಮಾಡಿದ ಯುವಕರು ಪೊಲೀಸರು ವಶಕ್ಕೆ

Read Full Story

01:37 PM (IST) Mar 04

The Rise of Ashoka ಶೂಟಿಂಗ್​ನಲ್ಲಿ ಹಾರಿ ಹಾರಿ ಬಿದ್ದ ಹಾರಿಬಲ್​ ವಿಡಿಯೋ ಶೇರ್​ ಮಾಡಿದ ನಟಿ Saptami Gowda

ಸತೀಶ್ ನೀನಾಸಮ್ ಮತ್ತು ಸಪ್ತಮಿ ಗೌಡ ಅಭಿನಯದ 'ದಿ ರೈಸ್ ಆಫ್ ಅಶೋಕ' 1970ರ ದಶಕದ ಕಥೆಯಾಗಿದೆ. ಮೇಲ್ಜಾತಿ ದೌರ್ಜನ್ಯದ ವಿರುದ್ಧ, ಸರ್ಕಾರಿ ನೌಕರಿ ತೊರೆದು ತನ್ನ ಸಮುದಾಯಕ್ಕಾಗಿ ಹೊಸ ಸಾಮ್ರಾಜ್ಯ ಕಟ್ಟಲು ಹೊರಟ ಅಶೋಕನ ಹೋರಾಟವೇ ಈ ಚಿತ್ರದ ಹೂರಣ.
Read Full Story

01:27 PM (IST) Mar 04

ಕೊಲ್ಲಿ ದೇಶದಲ್ಲಿ ಯುದ್ಧ - ಇಂಧನ ಸಿಗದ ಭೀತಿ ಕರ್ನಾಟಕದ ಅಲ್ಲಲ್ಲಿ ಪಂಪ್ ಮುಂದೆ ಕ್ಯೂ ನಿಂತ ವಾಹನ ಸವಾರರು!

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀತಿಯಿಂದಾಗಿ ಕರ್ನಾಟಕದ ಭಟ್ಕಳ, ಬೆಂಗಳೂರು ಸೇರಿದಂತೆ ಹಲವೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ಜನಜಂಗುಳಿ ಉಂಟಾಗಿದೆ. ಇರಾನ್ ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಎಚ್ಚರಿಕೆ ನೀಡಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಆತಂಕ ಸೃಷ್ಟಿಯಾಗಿದೆ.

Read Full Story

01:06 PM (IST) Mar 04

ಬೆಂಗಳೂರಿನ UV ವಿಕಿರಣ 'Extreme 13' ಮಟ್ಟಕ್ಕೆ, ಇದರಿಂದ ಆಗೋ ಸಮಸ್ಯೆಯೇನು?

ಬೆಂಗಳೂರು ಮಂಗಳವಾರ 13ರ 'ತೀವ್ರ' ಯುವಿ ಸೂಚ್ಯಂಕವನ್ನು ದಾಖಲಿಸಿದೆ, ಇದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅಪಾಯಕಾರಿ ಮಟ್ಟವಾಗಿದೆ. ಈ ಹೆಚ್ಚಳವು ಚರ್ಮದ ಕ್ಯಾನ್ಸರ್, ಬಿಸಿಲಿನ ಬೇಗೆಯಂತಹ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಿದೆ.

Read Full Story

01:04 PM (IST) Mar 04

ಅಡುಗೆ ಮಾಡುವ ವಿಚಾರಕ್ಕೆ ಅತ್ತೆ ಸೊಸೆ ಮಧ್ಯೆ ಗಲಾಟೆ - ಸಾವಿಗೆ ಶರಣಾದ ಟೆಕ್ಕಿ - ಅತ್ತೆ ಪರಾರಿ

ಬೆಂಗಳೂರಿನಲ್ಲಿ ಅಡುಗೆ ಮಾಡುವ ವಿಚಾರವಾಗಿ ಅತ್ತೆಯೊಂದಿಗೆ ನಡೆದ ಜಗಳದ ನಂತರ ಇಂಜಿನಿಯರ್ ಸೊಸೆ ಸುಷ್ಮಾ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪೋಷಕರು ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದು, ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. ಘಟನೆಯ ನಂತರ ಆರೋಪಿ ಅತ್ತೆ ಪರಾರಿಯಾಗಿದ್ದಾರೆ.

Read Full Story

01:04 PM (IST) Mar 04

ಹುಬ್ಬಳ್ಳಿ - ನಂಬಿದ ನೌಕರನಿಂದಲೇ ಕಾರಿನಲ್ಲಿದ್ದ 59 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಕಳ್ಳತನ!

ಬೆಂಗಳೂರಿನ ಬೆಳ್ಳಿ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯೋಗೇಶ ಸಿಂಗ್ ಎಂಬಾತ, ಹುಬ್ಬಳ್ಳಿಯಲ್ಲಿ ₹59 ಲಕ್ಷ ಮೌಲ್ಯದ 24 ಕೆಜಿ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. 

Read Full Story

12:50 PM (IST) Mar 04

ಅತ್ಯಧಿಕ ತೆರಿಗೆ ಸಂಗ್ರಹಿಸಿ ಕಡಬ ತಾಲೂಕು ರಾಜ್ಯಕ್ಕೆ ಪ್ರಥಮ ಸ್ಥಾನ ; ಶೇ.103 ಗುರಿ ಸಾಧನೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತ್ಯಧಿಕ ತೆರಿಗೆ ಸಂಗ್ರಹಿಸುವ ಮೂಲಕ ಶೇ. 103ರಷ್ಟು ಗುರಿ ಸಾಧಿಸಿದೆ. ಈ ಐತಿಹಾಸಿಕ ಸಾಧನೆಯೊಂದಿಗೆ, ಕಡಬ ತಾಲೂಕು ಜಿಲ್ಲೆ ಹಾಗೂ ರಾಜ್ಯದಲ್ಲೇ ತೆರಿಗೆ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

Read Full Story

12:41 PM (IST) Mar 04

'ನನ್ನ ಪ್ರಾರ್ಥನೆ ಈಡೇರಲೇ ಇಲ್ಲ' ಎಂದ Naa Ninna Bidalaare ಅಂಬಿಕಾ ಶೂಟಿಂಗ್​ನ ಅವಘಡ ಹೀಗೆ ವಿವರಿಸಿದ್ರು

'ನಾ ನಿನ್ನ ಬಿಡಲಾರೆ' ಸೀರಿಯಲ್ ಖ್ಯಾತಿಯ ನಟಿ ನೀತಾ ಅಶೋಕ್ ಅವರು ಶೂಟಿಂಗ್ ವೇಳೆ ಕಾಲು ಮುರಿದುಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸರ್ಜರಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿಯೇ ಕೆಲವು ದೃಶ್ಯಗಳ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಈ ಕುರಿತು ನಟಿ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Read Full Story

12:41 PM (IST) Mar 04

US, Israel and Iran conflict - 5 ದಿನಗಳಿಂದ ನಿಂತಲ್ಲೇ ನಿಂತ ಹಡಗು, ಕತಾರ್ ಬಂದರಿನಲ್ಲಿ ಸಿಲುಕಿದ ಬಸವನಗುಡಿಯ 8 ಮಂದಿ ವೃದ್ಧರು!

ಇರಾನ್-ಇಸ್ರೇಲ್ ಯುದ್ಧದ ಕಾರಣದಿಂದಾಗಿ, ಬೆಂಗಳೂರಿನ ಎಂಟು ಮಂದಿ ಹಿರಿಯ ಸ್ನೇಹಿತರು ಕತಾರ್‌ನ ದೋಹಾ ಬಂದರಿನಲ್ಲಿ ಕ್ರೂಸ್ ಶಿಪ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇತರ ದೇಶಗಳು ತಮ್ಮ ಪ್ರಜೆಗಳನ್ನು ರಕ್ಷಿಸಿದ್ದರೂ, ಭಾರತ ಸರ್ಕಾರದ ವಿಳಂಬ ಮಾಡಿದೆ ಎಂದು ಸಂತ್ರಸ್ತರ ಆರೋಪ.

Read Full Story

12:04 PM (IST) Mar 04

ಬೆಂಗಳೂರಿಗೆ ಭೀಕರ ಜಲಕ್ಷಾಮ ಭೀತಿಯ ವರದಿ, 65 ವಾರ್ಡ್‌ಗಳಲ್ಲಿ ಆತಂಕಕಾರಿ ಕುಸಿತ, ಜಲಮಂಡಳಿಯಲ್ಲಿ ಹೈವೋಲ್ಟೇಜ್ ಸಭೆ!

ಐಐಎಸ್ಸಿ ಅಧ್ಯಯನದ ಪ್ರಕಾರ, ಬೆಂಗಳೂರಿನ 65 ವಾರ್ಡ್‌ಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಬೇಸಿಗೆಯಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಇದನ್ನು ತಡೆಯಲು ಜಲಮಂಡಳಿ ವಿಶೇಷ ಕಾರ್ಯಯೋಜನೆ ರೂಪಿಸುತ್ತಿದೆ.
Read Full Story

11:56 AM (IST) Mar 04

ಕೆಜಿಗೆ ₹2000 ಬೆಲೆಯ ಕಾಳುಮೆಣಸು ಮನೆಯಲ್ಲೇ ಬೆಳೆಯಿರಿ! ಪಾಟ್‌ನಲ್ಲಿ ಬೆಳೆಸೋದು ಹೇಗೆ?

ಈ ಲೇಖನವು ಮನೆಯಲ್ಲಿ ಪಾಟ್ ಬಳಸಿ ಕಾಳುಮೆಣಸಿನ ಗಿಡವನ್ನು ಹೇಗೆ ಸುಲಭವಾಗಿ ಬೆಳೆಸಬಹುದು ಎಂಬುದನ್ನು ವಿವರಿಸುತ್ತದೆ. ಪಾಟ್ ಸಿದ್ಧತೆ, ನಾಟಿ ಮಾಡುವ ವಿಧಾನ, ನೀರು ಮತ್ತು ಗೊಬ್ಬರದ ನಿರ್ವಹಣೆಯಿಂದ ಹಿಡಿದು ಫಸಲು ಪಡೆಯುವವರೆಗಿನ ಸಂಪೂರ್ಣ ಮಾಹಿತಿಯನ್ನು ಇದು ಒಳಗೊಂಡಿದೆ.

Read Full Story

11:49 AM (IST) Mar 04

ಚಿಕ್ಕಮಗಳೂರು - ಚೀಲದಲ್ಲಿ ಗೋವಿನ ಕಳೇಬರ ತುಂಬಿ ರಸ್ತೆಗೆಸೆದು ಹೋದ ದುಷ್ಕರ್ಮಿಗಳು - ಪ್ರತಿಭಟಿಸಿದವರ ವಿರುದ್ಧ FIR

Illegal cow slaughter in Karnataka: ಚಿಕ್ಕಮಗಳೂರಿನಲ್ಲಿ ಗೋವಿನ ಕಳೇಬರ ಪತ್ತೆಯಾದ ಹಿನ್ನೆಲೆ ಪ್ರತಿಭಟನೆ ನಡೆಸಿದ ಭಜರಂಗದಳ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಾಗಿದೆ. ಮತ್ತೊಂದೆಡೆ, ಬಳ್ಳಾರಿಯಲ್ಲಿ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 29 ಜಾನುವಾರುಗಳನ್ನು ರಕ್ಷಿಸಲಾಗಿದೆ.

Read Full Story

11:21 AM (IST) Mar 04

ಬೆಂಗಳೂರು - ನಿಧಿಯಾಸೆಗೆ 900 ವರ್ಷಗಳ ಪುರಾತನ ದೇಗುಲದ ಗರ್ಭಗುಡಿ ಅಗೆದ ಆಂಧ್ರದ ರಿಯಲ್ ಎಸ್ಟೇಟ್ ಉದ್ಯಮಿ!

ಬೆಂಗಳೂರಿನ HSR ಲೇಔಟ್ ಸಮೀಪದ 900 ವರ್ಷಗಳ ಇತಿಹಾಸವಿರುವ ಎಳ್ಳುಕುಂಟೆ ಗ್ರಾಮದ ಪುರಾತನ ದೇವಾಲಯದಲ್ಲಿ ನಿಧಿಗಾಗಿ ಕಿಡಿಗೇಡಿಗಳು 15 ಅಡಿ ಆಳದ ಗುಂಡಿ ತೋಡಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕೈವಾಡವನ್ನು ಶಂಕಿಸಿದ್ದಾರೆ.  

Read Full Story

11:19 AM (IST) Mar 04

ಟಾಕ್ಸಿಕ್ ಬಿಡುಗಡೆ ಮುಂದೂಡಿಕೆಗೆ ಅಸಲಿ ಕಾರಣವೇನು? ಚಿತ್ರತಂಡದಿಂದ ಅಧಿಕೃತ ಹೇಳಿಕೆ

ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಜಾಗತಿಕ ಅನಿಶ್ಚಿತತೆಯ ಕಾರಣದಿಂದ, ಮಾರ್ಚ್ 19ರ ಬದಲು ಇದೀಗ 2026ರ ಜೂನ್ 4 ರಂದು ಚಿತ್ರವು ವಿಶ್ವಾದ್ಯಂತ ತೆರೆಕಾಣಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
Read Full Story

10:27 AM (IST) Mar 04

ಹಣ್ಣು-ತರಕಾರಿಗಳನ್ನು ಹೀಗೆ ಸ್ಟೋರ್ ಮಾಡಿದ್ರೆ ವಾರಗಟ್ಟಲೆ ಫ್ರೆಶ್ ಆಗಿರುತ್ತೆ! ಇಲ್ಲಿದೆ ಸಿಂಪಲ್ ಟ್ರಿಕ್ಸ್

ಮನೆಗೆ ತಂದ ತರಕಾರಿಗಳು ಮತ್ತು ಹಣ್ಣುಗಳು ಬೇಗ ಹಾಳಾಗುವುದು ಸಾಮಾನ್ಯ ಸಮಸ್ಯೆ. ಹೊರಗಿನಿಂದ ನೋಡಲು ಚೆನ್ನಾಗಿದ್ದರೂ, ಒಳಗೆ ಕೊಳೆತು ಹೋಗಿರುತ್ತವೆ. ಇದರಿಂದ ಆಹಾರ ಮತ್ತು ಹಣ ಎರಡೂ ವೇಸ್ಟ್. ಆದರೆ, ಸರಿಯಾದ ರೀತಿಯಲ್ಲಿ ಇವನ್ನು ಸ್ಟೋರ್ ಮಾಡಿದರೆ, ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿ ಇಡಬಹುದು.
Read Full Story

10:16 AM (IST) Mar 04

ಟಾಕ್ಸಿಕ್‌ ಬಿಡುಗಡೆ ಮುಂದೂಡಿಕೆ, ಹೊಸ ದಿನಾಂಕ ಪ್ರಕಟ ; ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಬಿಗ್ ಶಾಕ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕವನ್ನು ಮಾರ್ಚ್ 19 ರಿಂದ ಮುಂದೂಡಲಾಗಿದೆ. ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್-2' ಚಿತ್ರದೊಂದಿಗೆ ಮುಖಾಮುಖಿ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಚಿತ್ರದ ಟ್ರೇಲರ್ ಮಾರ್ಚ್ 8 ರಂದು ಬಿಡುಗಡೆಯಾಗಲಿದೆ.

Read Full Story

09:28 AM (IST) Mar 04

ಕಿವಿ ಹರ್ಕೊಂಡು ಒಂದು ಕೊಂಬು ಮುರ್ಕೊಂಡಿರೋ ಕಾಡಾನೆ ಭೀಮಾ - ಕಾಫಿ ತೋಟದ ಬೇಲಿಗಳೆಲ್ಲಾ ಪುಡಿ ಪುಡಿ

Wild elephant Bhima: ಚಿಕ್ಕಮಗಳೂರು: ಕಾಫಿತೋಟದಲ್ಲಿ ಕಾಡಾನೆ ಭೀಮನ ಹಾವಳಿ ಜೋರಾಗಿದ್ದು, ನಾನು ನಡೆದದ್ದೇ ದಾರಿ ಅಂತ ಕಾಫಿತೋಟದಲ್ಲಿ ಬಿಂದಾಸ್ ಆಗಿ ಓಡಾಡ್ತಿರುವ ಭೀಮನ ಫೋಟೊ ವೀಡಿಯೋಗಳು ವೈರಲ್ ಆಗಿವೆ.

Read Full Story

09:04 AM (IST) Mar 04

ಬರುತ್ತಿದ್ದಂತೆ ಕರ್ಣ, ನಿತ್ಯಾ, ನಿಧಿಗೆ ಪಿಂಡ ಇಟ್ಟ ಅಭಿಜಿತ್; ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ?

ಜೀ ಕನ್ನಡದ 'ಕರ್ಣ' ಧಾರಾವಾಹಿಯಲ್ಲಿ ರಮೇಶ್ ಪಾತ್ರದಿಂದ ಹಿರಿಯ ನಟ ಟಿ.ಎಸ್. ನಾಗಾಭರಣ ಹೊರನಡೆದಿದ್ದು, ಆ ಪಾತ್ರಕ್ಕೆ ಇದೀಗ ನಟ ಅಭಿಜಿತ್ ಪ್ರವೇಶಿಸಿದ್ದಾರೆ. ರಮೇಶ್ ಪಾತ್ರದಲ್ಲಿ ಅಭಿಜಿತ್, ಕರ್ಣನ ಮುಂದಿನ ಹೆಜ್ಜೆಗಳನ್ನು ತಾನೇ ನಿರ್ಧರಿಸುವುದಾಗಿ ಪಣ ತೊಟ್ಟಿದ್ದಾರೆ.

Read Full Story

More Trending News