Published : Aug 30, 2026, 06:59 AM ISTUpdated : Aug 30, 2026, 11:35 PM IST

Karnataka News Live: ಪ್ರೇಕ್ಷಕರು ನನಗಿಂತ ಬುದ್ಧಿವಂತರೆಂಬ ಎಚ್ಚರಿಕೆಯಿಂದ ಸಿನಿಮಾ ಮಾಡಿದ್ದೇನೆ - ನಾಗತಿಹಳ್ಳಿ ಚಂದ್ರಶೇಖರ್‌

ಸಾರಾಂಶ

ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಾಗಿಲು ಹಾಕಿ ಒತ್ತಾಯಪೂರ್ವಕವಾಗಿ ರಾಜೀನಾಮೆ ಸಲ್ಲಿಸುವಂತೆ ಮಾಡಿದರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಒತ್ತಡ ಹೇರುವ ಮೂಲಕ ರಾಜೀನಾಮೆ ಪಡೆಯುವುದು ಸರಿಯಾದ ಕ್ರಮವಲ್ಲ. ನಾನು ಯಾವುದೇ ತಪ್ಪು ಮಾಡದಿದ್ದರೂ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು. ಬಾಗಿಲು ಹಾಕಿಕೊಂಡು ಈ ರೀತಿಯಾಗಿ ರಾಜೀನಾಮೆ ಪಡೆಯುವ ಪರಿಸ್ಥಿತಿ ಎದುರಾಗಿದ್ದು ನೋವು ತಂದಿತ್ತು. ರಾಜಕೀಯದಲ್ಲಿ ಅಧಿಕಾರಕ್ಕಿಂತ ಪ್ರಜಾಪ್ರಭುತ್ವದ ಮೌಲ್ಯಗಳು, ಪರಸ್ಪರ ಗೌರವ ಹಾಗೂ ಪಾರದರ್ಶಕತೆ ಮುಖ್ಯವಾಗಬೇಕು. ನಾನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಅದೇ ಹುದ್ದೆಗೆ ಏರುವೆ ಎಂದರು.

ಸಭಾಪತಿ ಸ್ಥಾನದಲ್ಲಿ ಕುಳಿತುಕೊಂಡು ಯಾವುದೇ ರೀತಿಯ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾಡದೇ ಆ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ನಡೆದುಕೊಂಡಿದ್ದೇನೆ. ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದಂತೆ ಪತ್ರ ನೀಡಿದ್ದರೆ, ಅದನ್ನು ಎರಡು ನಿಮಿಷದಲ್ಲೇ ತಿರಸ್ಕರಿಸುತ್ತಿದ್ದೆ. ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸ ನಿರ್ಣಯದ ಕಾನೂನುಬದ್ಧ ಮಾರ್ಗವನ್ನು ಅನುಸರಿಸಿದ್ದರೆ ಅದನ್ನು ಎದುರಿಸಲು ಸಿದ್ಧನಿದ್ದೆ ಎಂದರು.

11:35 PM (IST) Aug 30

ಪ್ರೇಕ್ಷಕರು ನನಗಿಂತ ಬುದ್ಧಿವಂತರೆಂಬ ಎಚ್ಚರಿಕೆಯಿಂದ ಸಿನಿಮಾ ಮಾಡಿದ್ದೇನೆ - ನಾಗತಿಹಳ್ಳಿ ಚಂದ್ರಶೇಖರ್‌

‘ಅಮೆರಿಕಾ ಅಮೆರಿಕಾ 2’ ಸಿನಿಮಾದ ಟ್ರೇಲರ್ ಮೈಸೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಈ ಸಿನಿಮಾದ ಬಗ್ಗೆ ಡಾಲಿ ಧನಂಜಯ, ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಹಾಗೂ ಶಾನ್ವಿ ಶ್ರೀವತ್ಸ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Read Full Story

11:13 PM (IST) Aug 30

Tech - ಹೆಚ್ಚಿತು ಭಾರತದ ಶಕ್ತಿ; ಕೇವಲ 20 ನಿಮಿಷ ಸಾಕು, ಅರ್ಧ ಜಗತ್ತೇ ಬೂದಿ! ಜಗತ್ತನ್ನೇ ನಡುಗಿಸುತ್ತಿದೆ ಇಂಡಿಯಾದ ಈ ಅಣು ಬ್ರಹ್ಮಾಸ್ತ್ರ!

1989ರಲ್ಲಿ ಉಡಾವಣೆಯಾದ 'ಅಗ್ನಿ' ಕ್ಷಿಪಣಿಯು ಭಾರತವನ್ನು ಮಿಲಿಟರಿ ಸೂಪರ್ ಪವರ್ ಆಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನೇತೃತ್ವದಲ್ಲಿ, ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಮೀರಿ ಸ್ವದೇಶಿ ತಂತ್ರಜ್ಞಾನದಿಂದ ಅಗ್ನಿ-1 ರಿಂದ ಅಗ್ನಿ-5 ರವರೆಗೆ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಯಿತು.

Read Full Story

10:39 PM (IST) Aug 30

ಸಲಾಡ್‌ ಅಷ್ಟೇ ತಿಂದು ಫಿಟ್ನೆಟ್ ಮೈಂಟೇನ್ ಮಾಡುತ್ತಿರುವ ಬಿಗ್‌ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ

ವರ್ಕೌಟ್‌ಗೆ ಸಮಯ ಸಿಗದ ಕಾರಣ ಸಂಗೀತಾ ಶೃಂಗೇರಿ ತಮ್ಮ ಡಯಟ್‌ನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಅನ್ನ, ರೋಟಿ, ದೋಸೆಗೆ ಬ್ರೇಕ್‌ ನೀಡಿ ಹಣ್ಣು-ತರಕಾರಿ ಸಲಾಡ್‌ಗೆ ಆದ್ಯತೆ ನೀಡುತ್ತಿರುವುದಾಗಿ ನಟಿ ಹೇಳಿದ್ದಾರೆ.

Read Full Story

10:35 PM (IST) Aug 30

ಒಂದೇ ಓವರ್‌ನಲ್ಲಿ 6, 6, 6, 6, 6, 6! 26 ಎಸೆತಗಳಲ್ಲಿ 77 ರನ್ ಚಚ್ಚಿದ ಅಭಿಷೇಕ್ ಶರ್ಮಾ..!

ಪಂಜಾಬ್ ಟಿ20 ಲೀಗ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ, ಕೇವಲ 26 ಎಸೆತಗಳಲ್ಲಿ 77 ರನ್ ಚಚ್ಚುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇವರ ಈ ಬಿರುಗಾಳಿಯಂತಹ ಬ್ಯಾಟಿಂಗ್ ನೆರವಿನಿಂದ ಅಮೃತಸರ ಸೂರ್ಮಾಸ್ ತಂಡ 258 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

Read Full Story

09:16 PM (IST) Aug 30

ಕಷ್ಟದಲ್ಲಿದ್ದ 4 ಕುಟುಂಬಗಳಿಗೆ ಕಿಚ್ಚ ಸುದೀಪ್‌ ಆಸರೆ - ತಾಯಿಯ ನೆನಪಿನಲ್ಲಿ ಮಹತ್ವದ ಕಾರ್ಯ

ಕಿಚ್ಚ ಸುದೀಪ್‌ ಅವರು ತಮ್ಮ ತಾಯಿ ಸರೋಜಾ ಸಂಜೀವ್‌ ಅವರ ಸ್ಮರಣಾರ್ಥ ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾಗಳನ್ನು ನೀಡಿ ಸ್ವಾವಲಂಬಿ ಬದುಕಿಗೆ ನೆರವಾಗಿದ್ದಾರೆ.

Read Full Story

09:09 PM (IST) Aug 30

ಬೆಂಗಳೂರಿನ 'ಆರ್ಟ್ ಆಫ್ ಲಿವಿಂಗ್' ಆಶ್ರಮದಲ್ಲಿ ದೈವಿಕ ಸಂಗಮ - ಶ್ರೀ ಶ್ರೀ ರವಿಶಂಕರ್ ಗುರೂಜಿ ಆಶೀರ್ವಾದ ಪಡೆದ ಕೇಜ್ರಿವಾಲ್, ಭಗವಂತ್ ಮಾನ್

ಪಂಜಾಬ್ ಸಿಎಂ ಭಗವಂತ್ ಮಾನ್, ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದರು.

Read Full Story

08:52 PM (IST) Aug 30

ಒರಿಜಿನಲ್ 'ಮಾನ್‌ಸ್ಟರ್' ಯಾರು ಅನ್ನೋ ಪ್ರಶ್ನೆ ಸೈಡ್‌ ಇಡಿ.. ಶಿವಣ್ಣ-ಸಲ್ಲೂ ಜೋಡಿ ಸಿನಿಮಾ ಬರ್ತಿದೆ ನೋಡಿ!

ಹೆಸರಿನ ವಿಚಾರದಲ್ಲಿ ಶುರುವಾಗಿದ್ದ ಗೊಂದಲಕ್ಕೆ ಶಿವಣ್ಣ ಸೌಮ್ಯವಾಗಿಯೇ ಉತ್ತರ ನೀಡಿದ್ದು, ಭವಿಷ್ಯದ ಮಲ್ಟಿಸ್ಟಾರರ್ ಸಿನಿಮಾದ ಕನಸನ್ನು ಅಭಿಮಾನಿಗಳ ಕಣ್ಣಲ್ಲಿ ಬಿತ್ತಿದ್ದಾರೆ. ಹಾಗಿದ್ರೆ, ಶಿವರಾಜ್‌ಕುಮಾರ್-ಸಲ್ಮಾನ್ ಖಾನ್ ಜೋಡಿಯ ಸಿನಿಮಾ ಯಾವಾಗ ಶುರು? ನೋಡಿ…

Read Full Story

08:43 PM (IST) Aug 30

ಟ್ರ್ಯಾಕ್ಟರ್‌ಗೂ ಸವಾಲ್? 9 ಗಂಟೆಯಲ್ಲಿ 40 ಎಕರೆ ಎಡೆ ಹೊಡೆದ ವಿಜಯಪುರದ ಜೋಡೆತ್ತುಗಳು!

ಸಾಮಾನ್ಯವಾಗಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆಯಲು 18ರಿಂದ 20 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಆದರೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದ ಜೋಡೆತ್ತುಗಳು ಕೇವಲ 9 ಗಂಟೆಗಳಲ್ಲಿ ಬರೋಬ್ಬರಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆದು ಗಮನ ಸೆಳೆದಿವೆ.

Read Full Story

08:43 PM (IST) Aug 30

ಎಲೆಕ್ಟ್ರಾನಿಕ್ ಸಿಟಿ ಸೇರಿ ಬೆಂಗಳೂರಿನ ಪ್ರಮುಖ ಫ್ಲೈಓವರ್ ಮೇಲೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧ

ಬೆಂಗಳೂರಿನ ಹಲವು ಪ್ರಮುಖ ಫ್ಲೈ ಓವರ್ ಮೇಲೆ ಬೈಕ್ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಯಾವೆಲ್ಲಾ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನ ನಿರ್ಬಂಧಿಸಲಾಗಿದೆ?

Read Full Story

08:34 PM (IST) Aug 30

ಟಿಪ್ಪು ಕಟೌಟ್ ವಿವಾದ - ನಾಳೆ 'ಚಿಕ್ಕಮಗಳೂರು ಚಲೋ' ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ!

ಟಿಪ್ಪು ಕಟೌಟ್ ಮೇಲೆ ಪಾಕಿಸ್ತಾನ ಪರ ಹಾಡು ಬಳಸಿದ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳು ನಾಳೆ 'ಚಿಕ್ಕಮಗಳೂರು ಚಲೋ'ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಮಗಳೂರು ತಹಶೀಲ್ದಾರ್ ನಗರದಾದ್ಯಂತ ಬಿಎನ್‌ಎಸ್ 163 ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

Read Full Story

08:14 PM (IST) Aug 30

ನಾರಾಯಣ ಮೂರ್ತಿ ಕುಟುಂಬದಿಂದ ಹೊಸ ಶೇರು ಖರೀದಿ.. 5 ವರ್ಷದಲ್ಲಿ ಭಾರೀ ಲಾಭ, ಯಾವ ಕಂಪನಿ ಗೊತ್ತಾ?

ನಾರಾಯಣ ಮೂರ್ತಿ ಅವರ ಕುಟುಂಬದ ಕ್ಯಾಟಮರನ್ ವೆಂಚರ್ಸ್ ಹಾಗೂ ಎಲ್ಐಸಿಯಂತಹ ದಿಗ್ಗಜ ಸಂಸ್ಥೆಗಳು 'ಫೋಸೆಕೊ ಇಂಡಿಯಾ' ಕೆಮಿಕಲ್ ಕಂಪನಿಯ ಷೇರುಗಳನ್ನು ಖರೀದಿಸಿವೆ. ಕಳೆದ 5 ವರ್ಷಗಳಲ್ಲಿ ಶೇ. 324 ರಷ್ಟು ಮಲ್ಟಿಬ್ಯಾಗರ್ ಲಾಭ ನೀಡಿರುವ ಈ ಕಂಪನಿಯ ಪ್ರಬಲ ಆರ್ಥಿಕ ಬೆಳವಣಿಗೆಯೇ ಈ ಭಾರಿ ಹೂಡಿಕೆಗೆ ಕಾರಣವಾಗಿದೆ.

Read Full Story

07:59 PM (IST) Aug 30

ಟಾಟಾ ಮೋಟಾರ್ಸ್ ಇವಿ ಬುಕಿಂಗ್‌ನಲ್ಲಿ 3 ಪಟ್ಟು ಹೆಚ್ಚಳ - ಉತ್ಪಾದನಾ ಸಾಮರ್ಥ್ಯವನ್ನೂ ಮೀರಿದ ಬೇಡಿಕೆ!

ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವಾಹನಗಳ ಬುಕಿಂಗ್ ಕಳೆದ ಆರು ತಿಂಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದೆ. ಉತ್ಪಾದನಾ ಸಾಮರ್ಥ್ಯದ ಮಿತಿಗಳ ಹೊರತಾಗಿಯೂ, ಹಬ್ಬದ ಋತುವಿನಲ್ಲಿ ದಾಖಲೆಯ ಮಾರಾಟವನ್ನು ನಿರೀಕ್ಷಿಸಲಾಗುತ್ತಿದೆ. ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳು ಮತ್ತು ಸರ್ಕಾರದ ನೀತಿಗಳು ಈ ಬೆಳವಣಿಗೆಗೆ ಪೂರಕವಾಗಿವೆ.
Read Full Story

07:52 PM (IST) Aug 30

Vijaypura - ಬೈಕ್‌ನಲ್ಲಿ ಬೆನ್ನಟ್ಟಿದ ಭಜರಂಗದಳ ಕಾರ್ಯಕರ್ತರು; ಕೊನೆಗೆ ಸಿಕ್ಕಿಬಿತ್ತು 8 ಟನ್ ಗೋಮಾಂಸ ತುಂಬಿದ ಲಾರಿ!

ವಿಜಯಪುರ ಜಿಲ್ಲೆಯಲ್ಲಿ, ಭಜರಂಗದಳ ಕಾರ್ಯಕರ್ತರು ಬೈಕ್‌ನಲ್ಲಿ ಲಾರಿಯೊಂದನ್ನು ಬೆನ್ನಟ್ಟಿ ಅಕ್ರಮ ಗೋಮಾಂಸ ಸಾಗಾಟ ಜಾಲವನ್ನು ಬಯಲಿಗೆಳೆದಿದ್ದಾರೆ. ತೆಲಂಗಾಣಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 8 ಟನ್ ಗೋಮಾಂಸವನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.
Read Full Story

07:45 PM (IST) Aug 30

ಧಾರವಾಡದಲ್ಲಿ ಎಬಿವಿಪಿ, ಆರ್‌ಎಸ್ಎಸ್ ಕಾರ್ಯಕರ್ತರ ಬಂಧನ, ಠಾಣೆಗೆ ಧಾವಿಸಿದ ಶಾಸಕ ಬೆಲ್ಲದ್

ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ. ಎಬಿವಿಪಿ, ಆರ್‌ಎಸ್ಎಸ್ ಕಾರ್ಯಕರ್ತರ ಬಂಧನಕ್ಕೆ ಆಕ್ರೋಶಗಳು ಹೆಚ್ಚಾಗುತ್ತಿದೆ. ಠಾಣೆಗೆ ಶಾಸಕ ಅರವಿಂದ್ ಬೆಲ್ಲದ್ ಬೇಟಿ ನೀಡಿ ಪೊಲೀಸ್ ಕ್ರಮ ಪ್ರಶ್ನಿಸಿದ್ದಾರೆ.

Read Full Story

07:18 PM (IST) Aug 30

ಈ ಬಾರಿಯ ಬಿಗ್‌ ಬಾಸ್ ನನಗೆ 'ತುಂಬಾ ಅನುಕೂಲ'.. ಗ್ರೇಟ್ ಸೀಕ್ರೆಟ್ ಬಿಚ್ಚಿಟ್ಟು ಶಾಕ್ ಮೂಡಿಸಿದ ಕಿಚ್ಚ ಸುದೀಪ್!

"ಮುಂದಿನ ಬೇಟೆ" (Next Hunt) ಎಂಬ ಪದದ ಬಗ್ಗೆ ಕೇಳಿದಾಗ, ಸುದೀಪ್ ತುಂಬಾ ಮಾರ್ಮಿಕವಾಗಿ ಉತ್ತರಿಸಿದ್ದಾರೆ. "ಸದ್ಯಕ್ಕೆ ಬಿಗ್ ಬಾಸ್ ಮೇಲೆ ಮಾತ್ರ ಗಮನವಿರಲಿ. ನನ್ನ ಮುಂದಿನ ಸಿನಿಮಾ ಮತ್ತು ಬೇಟೆಯ ಬಗ್ಗೆ ಸರಿಯಾದ ಸಮಯ ಬಂದಾಗ ಖಂಡಿತಾ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ" ಎಂದು ಹೇಳುವ ಮೂಲಕ ಸಸ್ಪೆನ್ಸ್ ಉಳಿಸಿದ್ದಾರೆ.

Read Full Story

06:46 PM (IST) Aug 30

ಬೆಂಗಳೂರಿಗೆ ಮತ್ತೊಂದು ಟೋಲ್ ಆಧಾರಿತ ಎಲಿವೇಟೆಡ್ ಕಾರಿಡಾರ್! ರಾಗಿಗುಡ್ಡ ಟು ಕನಕಪುರ ರಸ್ತೆ..! ವಿಶೇಷತೆ ಏನು?

ದಕ್ಷಿಣ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಗಿಗುಡ್ಡದಿಂದ ಕನಕಪುರ ರಸ್ತೆಯವರೆಗೆ 18.5 ಕಿ.ಮೀ ಉದ್ದದ ಹೊಸ ಟೋಲ್ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಸರ್ಕಾರ ಬಿಡ್ ಆಹ್ವಾನಿಸಿದೆ. ₹18,000 ಕೋಟಿ ವೆಚ್ಚದ ಬೃಹತ್ ಯೋಜನೆಯ ಭಾಗವಾಗಿರುವ ಈ ರಸ್ತೆಯು ಪೈಪ್‌ಲೈನ್ ರಸ್ತೆಯ ಮೂಲಕ ಸಾಗಿ ನೈಸ್ ರಸ್ತೆಯನ್ನು ಸಂಪರ್ಕಿಸಲಿದೆ.

Read Full Story

06:41 PM (IST) Aug 30

ದರ್ಶನ್ ಸಾಂಗ್ಸ್ 'ಬಿಗ್ ಬಾಸ್' ಮನೇಲಿ ಯಾಕ್ ಹಾಕಲ್ಲ? "ಓಪನ್ ಆಗಿ ಹೇಳ್ತಿನಿ" ಎಂದು ಸುದೀಪ್ ಹೇಳಿದ್ದೇನು?

ದರ್ಶನ್ ಹಾಡು ಬಿಗ್ ಬಾಸ್ ಮನೆಯಲ್ಲಿ ಏಕೆ ಪ್ಲೇ ಆಗೋದಿಲ್ಲ ಅನ್ನೋ ವಿಚಾರಕ್ಕೆ ಸಂಬಂಧಿಸಿ ಬಂದ ಪ್ರಶ್ನೆಗೆ ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಖಡಕ್ ಉತ್ತರ ನೀಡಿದ್ದಾರೆ. "ಓಪನ್ ಆಗಿ ಹೇಳ್ತಿನಿ" ಎಂದು ಮಾತು ಶುರು ಮಾಡಿದ ಸುದೀಪ್ ಹೇಳಿದ್ದೇನು? ಈ ಸ್ಟೋರಿ ನೋಡಿ..

Read Full Story

06:36 PM (IST) Aug 30

‘ಇದನ್ನು ಈ ದೃಷ್ಟಿಕೋನದಿಂದ ನೋಡಿ’ - ಯಶ್ ಟಾಕ್ಸಿಕ್ ಟೀಕೆಗೆ ಮಾಸ್ಟರ್ ಆನಂದ್ ತಿರುಗೇಟು

ರಾಕಿಂಗ್‌ ಸ್ಟಾರ್‌ ಯಶ್‌ ‘ಟಾಕ್ಸಿಕ್’ ಸಿನಿಮಾದಲ್ಲಿ ಕಥೆಯೇ ಇಲ್ಲ ಎಂಬ ಟೀಕೆಗೆ ಮಾಸ್ಟರ್ ಆನಂದ್ ಪ್ರತಿಕ್ರಿಯಿಸಿದ್ದಾರೆ. ಯಶ್ ಅಭಿನಯದ ಚಿತ್ರದ ನಾನ್-ಲೀನಿಯರ್ ಕಥೆ, ಕ್ಲೈಮ್ಯಾಕ್ಸ್‌ ಹಾಗೂ ಪಾತ್ರದ ಹಿನ್ನೆಲೆ ಬಗ್ಗೆ ಅವರು ವಿವರಿಸಿದ್ದಾರೆ.

Read Full Story

05:29 PM (IST) Aug 30

ಉಡಲು ತಂದ ಸೀರೆಯೇ ಉಸಿರು ನೀಡಿತು - ನೇಪಾಳದಲ್ಲಿ 21 ಜೀವ ಕಾಪಾಡಿ ದೇವದೂತರಾದ ತಮಿಳುನಾಡು ದಂಪತಿ!

ಕೈಲಾಸ ಯಾತ್ರೆಗೆ ತೆರಳಿದ್ದ ತಮಿಳುನಾಡಿನ 21 ಯಾತ್ರಿಕರು ನೇಪಾಳದ ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ, ರತ್ನಕುಮಾರ್ ಮತ್ತು ಪೂಂಗುಳಲಿ ಎಂಬ ದಂಪತಿ ಜಾರುವ ಬೆಟ್ಟದಿಂದ ಎಲ್ಲರನ್ನೂ ಮೇಲೆತ್ತಿ ಜೀವ ಉಳಿಸಿದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

05:25 PM (IST) Aug 30

ನಟಿ ಪ್ರೇಮಾ ಜೀವನದಲ್ಲಿ ನಿಜಕ್ಕೂ ನಡೆದಿದ್ದೇನು? ವಿಚ್ಛೇದನ, ಕ್ಯಾನ್ಸರ್‌ ವದಂತಿ ಬಗ್ಗೆ ಕೊನೆಗೂ ಸ್ಪಷ್ಟನೆ

ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಾಯಕಿಯಾಗಿ ಮಿಂಚಿದ್ದ ನಟಿ ಪ್ರೇಮಾ, ಇತ್ತೀಚಿನ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬದ ಕುರಿತು ನಟಿ ಹೇಳಿದ್ದೇನು?

Read Full Story

04:59 PM (IST) Aug 30

7.5KG ಡಂಬೆಲ್ಸ್‌ ಜೊತೆ ಯಶ್‌ ಅಬ್ಬರ - ‘ಟಾಕ್ಸಿಕ್’ ₹250 ಕೋಟಿ ದಾಟಿದ ಬೆನ್ನಲ್ಲೇ Workout Video ವೈರಲ್

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ‘TOXIC’ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ವಿಶ್ವದಾದ್ಯಂತ ₹250 ಕೋಟಿಗೂ ಅಧಿಕ ಗ್ರಾಸ್‌ ಕಲೆಕ್ಷನ್‌ ಮಾಡಿದೆ ಎಂದು ವರದಿಯಾಗಿದೆ. ಇದೇ ವೇಳೆ ಯಶ್‌ 7.5 ಕೆಜಿ ಡಂಬೆಲ್ಸ್‌ ಬಳಸಿ ವರ್ಕೌಟ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Read Full Story

04:54 PM (IST) Aug 30

Mysuru Dasara - ದಸರಾ ಗಜಪಡೆ ತೂಕ ಪರೀಕ್ಷೆ, ಶ್ರೀಕಂಠನಿಗೆ ನಂಬರ್ 1 ಸ್ಥಾನ; ಕ್ಯಾಪ್ಟನ್ ಆಯ್ಕೆ ಹೇಗಿರುತ್ತೆ?

ಮೈಸೂರು ದಸರಾ ಜಂಬೂ ಸವಾರಿಗಾಗಿ ಗಜಪಡೆಯ ತಾಲೀಮು ಆರಂಭವಾಗಿದೆ. ಮೊದಲ ಹಂತದಲ್ಲಿ ಬಂದ 9 ಆನೆಗಳ ತೂಕ ಪರೀಕ್ಷೆ ನಡೆಸಲಾಗಿದ್ದು, ಶ್ರೀಕಂಠ ಆನೆ ಅತಿ ಹೆಚ್ಚು ತೂಕ ಹೊಂದಿದೆ. ಅಂಬಾರಿ ಹೊರುವ ಕ್ಯಾಪ್ಟನ್ ಆನೆಯ ಆಯ್ಕೆ ಪ್ರಕ್ರಿಯೆಗೂ ಚಾಲನೆ ಸಿಕ್ಕಿದ್ದು, ಕುತೂಹಲ ಹೆಚ್ಚಿಸಿದೆ.
Read Full Story

04:42 PM (IST) Aug 30

Yash Secret - ಟಾಕ್ಸಿಕ್ ಭರ್ಜರಿ ಗಳಿಕೆ.. ಈಗೇನ್ಮಾಡ್ತಿದಾರೆ ಯಶ್? ಮುಂದೇನು ಮಾಡ್ತಾರೆ? ಉತ್ತರ ಇಲ್ಲಿದೆ ನೋಡಿ!

ಜಾಗತಿಕ ಮಟ್ಟಕ್ಕೆ ಕನ್ನಡದ ಬಾವುಟ ಹಾರಿಸಿದ 'ರಾಕಿಂಗ್ ಸ್ಟಾರ್' ಯಶ್ ಈಗ 'ಟಾಕ್ಸಿಕ್' (TOXIC) ಸಿನಿಮಾದ ಮೂಲಕ ಇಡೀ ವಿಶ್ವದಾದ್ಯಂತ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ಕೇವಲ 4 ದಿನಗಳಲ್ಲಿ ಈ ಸಿನಿಮಾ 250 ಕೋಟಿಗೂ ಅಧಿಕ ಗಳಿಸಿದೆ. ಈಗೇನ್ಮಾಡ್ತಿದಾರೆ ಯಶ್? ಉತ್ತರಕ್ಕೆ ಈ ಸ್ಟೋರಿ ನೋಡಿ..

Read Full Story

04:31 PM (IST) Aug 30

‘ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ - ಪ್ರತಿ ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಕಿಚ್ಚ ಸುದೀಪ್ ಪುತ್ರಿ, ಗಾಯಕಿ ಸಾನ್ವಿ ಸುದೀಪ್‌ ಕೂಡ ಸೇರ್ಪಡೆಯಾಗಿದ್ದಾರೆ. ‘ಟಾಕ್ಸಿಕ್‌’ನಲ್ಲಿ ಯಶ್‌ ಅವರ ಅಭಿನಯಕ್ಕೆ ಫಿದಾ ಆಗಿರುವ ಸಾನ್ವಿ, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

Read Full Story

04:13 PM (IST) Aug 30

ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್; ಉಚಿತ ವಿದ್ಯುತ್ ಯೋಜನೆಯ ಮಹತ್ವದ ಅಪ್‌ಡೇಟ್ ಕೊಟ್ಟ ಬೆಸ್ಕಾಂ ಎಂಡಿ

ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಸರ್ವೆಯ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಫಲಾನುಭವಿಗಳಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ಮತ್ತು ಸರ್ವೆ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬೆಸ್ಕಾಂ ಮನವಿ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Read Full Story

04:10 PM (IST) Aug 30

EPFO - 30 ವರ್ಷ ಸರ್ವಿಸ್ ಮುಗಿಸಿದರೆ ಎಷ್ಟು ಪೆನ್ಷನ್ ಸಿಗುತ್ತೆ? ನೀವೇ ಲೆಕ್ಕಹಾಕಲು ಇಲ್ಲಿದೆ ಸರಳ ವಿಧಾನ

30 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿದ ನೌಕರರ ಮಾಸಿಕ ಪಿಂಚಣಿಯನ್ನು ಅವರ ಅಂತಿಮ ಮೂಲ ವೇತನದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ನಿಯಮಗಳ ಪ್ರಕಾರ, ಅಂತಿಮ ಮೂಲ ವೇತನದ 50% ಮೂಲ ಪಿಂಚಣಿಯಾಗಿದ್ದು, ಇದರ ಜೊತೆಗೆ ತುಟ್ಟಿಭತ್ಯೆಯೂ ಸೇರಿ ಒಟ್ಟು ಪಿಂಚಣಿ ನಿರ್ಧಾರವಾಗುತ್ತದೆ. ಅದನ್ನು ಹೇಗೆ ಲೆಕ್ಕಹಾಕಬಹುದೆನ್ನುವ ಸರಳವಿಧಾನ ಇಲ್ಲಿದೆ.

Read Full Story

03:19 PM (IST) Aug 30

Koppal - 'ಬೇರೆ ಧರ್ಮಗಳಿಗಿಂತ ಇಸ್ಲಾಂ ಶ್ರೇಷ್ಠ, ನಾನು ದೇವಸ್ಥಾನ-ಮಠಮಾನ್ಯಗಳಿಗೆ ಜಾಸ್ತಿ ಹೋಗೋದಿಲ್ಲ', ಸಚಿವ ಬಸವರಾಜ ರಾಯರೆಡ್ಡಿ

ಕೊಪ್ಪಳದ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ, ಸಚಿವ ಬಸವರಾಜ ರಾಯರೆಡ್ಡಿ ಇಸ್ಲಾಂ ಧರ್ಮವನ್ನು ಶ್ರೇಷ್ಠ ಮತ್ತು ವೈಜ್ಞಾನಿಕ ಎಂದು ಬಣ್ಣಿಸಿದ್ದಾರೆ. ತಮಗೆ ಹಜ್ ಯಾತ್ರೆಗೆ ಹೋಗುವ ಆಸೆ ಇದೆ ಎಂದ ಅವರು, ಕುರಾನ್ ಅಧ್ಯಯನ ಮಾಡುವುದಾಗಿಯೂ ತಿಳಿಸಿದರು. ಇದೇ ವೇಳೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ರಾಯರೆಡ್ಡಿ ಅವರ ಜ್ಞಾನವನ್ನು ಶ್ಲಾಘಿಸಿದರು.
Read Full Story

03:08 PM (IST) Aug 30

ತಾಳಿ ಕಟ್ಟಿದ ಕೂಡಲೇ ಭಾವುಕತೆಯಿಂದ ಕಣ್ಣೀರಾದ ಪಾವನಾ.. ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿಕ್ಕಣ್ಣ ಸಂತಸದ ಕ್ಷಣ ಹೀಗಿತ್ತು..

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಈ ಮದುವೆ ನಿಜಕ್ಕೂ ರಾಜವೈಭವವನ್ನು ನೆನಪಿಸುವಂತಿತ್ತು. ರೇಷ್ಮೆ ಶರ್ಟ್, ಪಂಚೆ ಹಾಗೂ ತಲೆಗೆ ಮೈಸೂರು ಪೇಟ ಧರಿಸಿದ್ದ ಚಿಕ್ಕಣ್ಣ ಪಕ್ಕಾ ಮೈಸೂರು ಅಳಿಯನಂತೆ ಮಿಂಚುತ್ತಿದ್ದರು. ವಧುವಿನ ಕಡೆಯವರು ಚಿಕ್ಕಣ್ಣನಿಗೆ ಆರತಿ ಬೆಳಗಿ ಮದುವೆ ಮಂಟಪಕ್ಕೆ ಬರಮಾಡಿಕೊಂಡ ರೀತಿ ಅದ್ಭುತವಾಗಿತ್ತು. ಪಾವನ ಗೌಡ ಕೂಡ ಮದುವೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಣ್ಮನ ಸೆಳೆಯುತ್ತಿದ್ದರು.

Read Full Story

02:30 PM (IST) Aug 30

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ 'ಮಾರ್ಮಿಕ' ಹೇಳಿಕೆ ವೈರಲ್!

"ಯಶ್ ಸರ್, ನೀವು ನಿಮ್ಮ ಪಾತ್ರವನ್ನು ಕೇವಲ ನಿರ್ವಹಿಸುವುದಿಲ್ಲ, ಅದಕ್ಕೆ ನಿಮ್ಮ ಹೃದಯದ ರಕ್ತವನ್ನೇ ಸುರಿದು ಜೀವ ತುಂಬುತ್ತೀರಿ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಒಬ್ಬ ಪ್ರಭಾವಿ ವ್ಯಕ್ತಿಯ ಅಂತರಂಗದ ಹೋರಾಟವನ್ನು ತೆರೆಯ ಮೇಲೆ ಅಷ್ಟು ದೃಢವಾಗಿ ಚಿತ್ರಿಸುವುದು ಸುಲಭದ ಮಾತಲ್ಲ. ಅದನ್ನು ಯಶ್ ಸಲೀಸಾಗಿ ಮಾಡಿದ್ದಾರೆ ಎಂದು ರಿಷಬ್ ಮೆಚ್ಚಿಕೊಂಡಿದ್ದಾರೆ.

Read Full Story

01:49 PM (IST) Aug 30

ಕೊಲ್ಲಾಪುರದಿಂದ ದಾರವಾಡಕ್ಕೆ ರೈಲಿನ ಬೋಗಿಯಲ್ಲಿ ಅರೆಬೆತ್ತಲೆ ಮಹಿಳೆಯ ಶವ ಪತ್ತೆ! ಬೆಚ್ಚಿಬಿದ್ದ ರೈಲ್ವೆ ಸಿಬ್ಬಂದಿ!

ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಕೊಲ್ಲಾಪುರದಿಂದ ಬಂದ ರೈಲಿನ ಬೋಗಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಆಸನದ ಕೆಳಗೆ ಅರೆಬೆತ್ತಲೆ, ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದ್ದು, ಬಲ ತ್ಕಾರ ವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Read Full Story

01:22 PM (IST) Aug 30

Toxic Box Office Collection - 300 ಕೋಟಿ ಕ್ಲಬ್‌ಗೆ ಇನ್ನೆಷ್ಟು ಬೇಕು? ಇಲ್ಲಿದೆ ಲೆಕ್ಕ

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮೊದಲ ದಿನ ಭರ್ಜರಿ 101.10 ಕೋಟಿ ಗಳಿಕೆ ಕಂಡರೂ, ನಂತರದ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಇಳಿಕೆ ದಾಖಲಿಸಿದೆ. 300 ಕೋಟಿ ಸಿನಿಮಾಗಳ ಪಟ್ಟಿಗೆ ಸೇರುವಲ್ಲಿ ಟಾಕ್ಸಿಕ್ ಮುಂದಾಗಿದೆ. ನಾಲ್ಕು ದಿನಗಳಲ್ಲಿ ಟಾಕ್ಸಿಕ್ ಗಳಿಸಿದ್ದೆಷ್ಟು ಎಂದು ನೋಡೋಣ ಬನ್ನಿ.

Read Full Story

01:00 PM (IST) Aug 30

Mysuru - ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ವರದಿ, 10 ದಿನಗಳ ಒಳಗೆ ರೈತರ ಖಾತೆ ಹಣ - ಡಿಸಿಎಂ ಪರಮೇಶ್ವರ್ ವಿಶ್ವಾಸ

ಡಿಸಿಎಂ ಪರಮೇಶ್ವರ್ ಅವರು 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಬಾರಿ ನ್ಯಾಯಾಲಯದ ಮೂಲಕ ಪರಿಹಾರ ಪಡೆದಿದ್ದನ್ನು ಸ್ಮರಿಸಿದ ಅವರು, ರಾಜ್ಯದ ಪರಿಹಾರವನ್ನು 10 ದಿನಗಳಲ್ಲಿ ವಿತರಿಸಲಾಗುವುದು ಹಾಗೂ ಕೇಂದ್ರದ ತಂಡದ ಪರಿಶೀಲನೆ ನಂತರ ಹೆಚ್ಚಿನ ನೆರವು ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

12:58 PM (IST) Aug 30

ಗಂಡನ ರೂಪದ ಹಾವಿನ ಜೊತೆ ಸಂಸಾರ; 15 ಹಾಡುಗಳ ಸೂಪರ್ ಹಿಟ್ ಸಸ್ಪೆನ್ಸ್ ಕನ್ನಡ ಸಿನಿಮಾ

Sandalwood Film 1997ರಲ್ಲಿ ಬಿಡುಗಡೆಯಾದ ಕಾದಂಬರಿ ಆಧಾರಿತ ಜಾನಪದ ಸಿನಿಮಾ. ಗಂಡನ ರೂಪದಲ್ಲಿ ಬರುವ ಹಾವಿನೊಂದಿಗೆ ನಾಯಕಿ ಸಂಸಾರ ನಡೆಸುವ ಈ ರೋಚಕ ಕಥೆಯುಳ್ಳ ಚಿತ್ರವು ಸಂಗೀತಮಯವಾಗಿದ್ದು, 5 ರಾಜ್ಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

Read Full Story

12:52 PM (IST) Aug 30

ವಿಜಯನಗರ - ಮಳೆ ಕೊರತೆಯಿಂದ ತೀವ್ರ ಬರ; ಮಳೆಗಾಗಿ ಪ್ರಾರ್ಥಿಸಿ ಒಂಭತ್ತು ದಿನ ಭಜನಾ ವ್ರತ

ವಿಜಯನಗರದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಕೃಷಿ ಚಟುವಟಿಕೆ ಇಲ್ಲದೆ ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಮಳೆಗಾಗಿ ಪ್ರಾರ್ಥಿಸಿ ಉಲವತ್ತಿ ಗ್ರಾಮದ ಸರ್ವಧರ್ಮದ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವ್ರತ ಕೈಗೊಂಡಿದ್ದಾರೆ.

Read Full Story

12:19 PM (IST) Aug 30

Shivamogga - ಕೆರೆಯ ತಡೆಗೋಡೆಗೆ ಖಾಸಗಿ ಬಸ್ ಡಿಕ್ಕಿ - ಕ್ರೀಡಾಕೂಟ ಮುಗಿಸಿ ಮನೆಗೆ ವಾಪಸ್ ಆಗಬೇಕಿದ್ದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!

ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಕೆರೆಯ ತಡೆಗೋಡೆಗೆ ಹೊಡೆದ ದುರಂತ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಕಾಸ್ಪೋಡಿಯಲ್ಲಿ ನಡೆದಿದೆ.

Read Full Story

11:59 AM (IST) Aug 30

Viral Video - 'ದೇವರಂತೆ' ಬಂದ ಬೆಂಗಳೂರು ಹೊಯ್ಸಳ ಪೊಲೀಸ್ ಸಿಬ್ಬಂದಿ; ಉಳಿಯಿತು ಬೈಕ್ ಸವಾರನ ಜೀವ!

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರನಿಗೆ ಹೃದಯಾಘಾತವಾದಾಗ, ಹೊಯ್ಸಳ ಗಸ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಿಪಿಆರ್ ನೀಡಿ ಪ್ರಾಣ ಉಳಿಸಿದ್ದಾರೆ. ಸಹಾಯಕ ಸಬ್ ಇನ್ಸ್ ಪೆಕ್ಟರ್ ಸಚ್ಚಿದಾನಂದಮೂರ್ತಿ ಮತ್ತು ಹೆಡ್ ಕಾನ್‌ಸ್ಟೇಬಲ್ ಬಸವರಾಜು ಅವರ ಈ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Read Full Story

11:36 AM (IST) Aug 30

ದಾವಣಗೆರೆ - ಸೆಲ್ಫೀ ವಿಡಿಯೋ ಮಾಡಿಬ್ಯಾಂಕ್ ಉದ್ಯೋಗಿ ನಾಪತ್ತೆ! ತುಂಗಾ ಕಾಲುವೆಯಲ್ಲಿ ಬೈಕ್ ಪತ್ತೆ! ಸ್ಥಳಕ್ಕೆ ಎಂಪಿ ರೇಣುಕಾಚಾರ್ಯ ಭೇಟಿ

ದಾವಣಗೆರೆಯ ಖಾಸಗಿ ಬ್ಯಾಂಕ್ ಉದ್ಯೋಗಿ ಮೋಹನ್ ಕುಮಾರ್, ಸಹೋದ್ಯೋಗಿಗಳ ಕಿರುಕುಳ ಮತ್ತು ಸಾಲದ ಒತ್ತಡದಿಂದ ನೊಂದು ಸೆಲ್ಫೀ ವಿಡಿಯೋ ಮಾಡಿ ನಾಪತ್ತೆಯಾಗಿದ್ದಾರೆ. ತುಂಗಾ ಕಾಲುವೆಯಲ್ಲಿ ಅವರ ಬೈಕ್ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Read Full Story

10:53 AM (IST) Aug 30

AI Trust Paradox - ಜನರಿಗೆ ಎಐ ಮೇಲೆ ನಂಬಿಕೆ ಇಲ್ಲ… ಆದ್ರೂ ಶಾಪಿಂಗ್‌ಗೆ ಮಾತ್ರ ಅದನ್ನೇ ಬಳಸ್ತಾರೆ! ಏನಿದು ವಿಚಿತ್ರ?

ಎಐ ಸಲಹೆಗಳ ಮೇಲೆ ಗ್ರಾಹಕರ ನಂಬಿಕೆ 40% ಕ್ಕಿಂತ ಕಡಿಮೆ ಇದ್ದರೂ, ಶಾಪಿಂಗ್ ಮಾಡಲು ಮಾತ್ರ ಅದನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಮೆಕಿನ್ಸೆ ಸಂಶೋಧನೆ ತಿಳಿಸಿದೆ. ಗ್ರಾಹಕರ ವಿಚಿತ್ರ ನಡೆವಳಿಕೆಯು ಬ್ರ್ಯಾಂಡ್‌ಗಳಿಗೆ ಹೊಸ ಸವಾಲುಗಳನ್ನು ಒಡ್ಡಿದೆ.

Read Full Story

10:34 AM (IST) Aug 30

Valmiki Corporation Scam - ಕೊನೆಗೂ ಕ್ಯಾಬಿನೇಟ್‌ನಿಂದ ನಾಗೇಂದ್ರ ಔಟ್, ಇದು ಅಧಿಕೃತ!

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ತಮ್ಮ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಇದು ತಮ್ಮ ವಿರುದ್ಧದ ಪಿತೂರಿ ಎಂದು ಆರೋಪಿಸಿರುವ ನಾಗೇಂದ್ರ, ಬಿಜೆಪಿ ನಾಯಕರ ವಿರುದ್ಧ ಸವಾಲು ಹಾಕಿದ್ದಾರೆ. ಈ ರಾಜೀನಾಮೆಯೊಂದಿಗೆ ಸಿಎಂ ಡಿಕೆ ಶಿವಕುಮಾರ್ ಸಂಪುಟದ ಮೊದಲ ವಿಕೆಟ್ ಪತನಗೊಂಡಂತಾಗಿದೆ.
Read Full Story

10:03 AM (IST) Aug 30

Teachers Recruitment - 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಆಂಗ್ಲ ಭಾಷೆ ಸಂಪೂರ್ಣ ಕಡೆಗಣನೆ!

ರಾಜ್ಯ ಸರ್ಕಾರದ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ, 6 ರಿಂದ 8ನೇ ತರಗತಿ ವಿಭಾಗದಲ್ಲಿ ಆಂಗ್ಲ ಭಾಷಾ ಶಿಕ್ಷಕರ ಹುದ್ದೆಗಳನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ನೇಮಕಾತಿ ನಿಯಮಾವಳಿಗಳ ಬದಲಾವಣೆಯಿಂದಾಗಿ ಸಾವಿರಾರು ಹುದ್ದೆಗಳು ಕಡಿಮೆಯಾಗಿದ್ದು, ಇದು ಆಕಾಂಕ್ಷಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ ಮತ್ತು ಸರ್ಕಾರಿ ಶಾಲೆಗಳ ಆಂಗ್ಲ ಬೋಧನೆಯ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

More Trending News