ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಆ.9, 10 ಮತ್ತು 11ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ತಾಲೂಕಿನ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಳೆದ ಜು.30, 31 ಮತ್ತು ಆ.1 ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ನಮ್ಮಜ್ಜಿ ಚನ್ನಮ್ಮರ ಅಗಲಿಕೆಯಿಂದ ಪಾದಯಾತ್ರೆ ಮುಂದೂಡಲಾಗಿತ್ತು. ರಾಜ್ಯ ಸರ್ಕಾರ ಈ ವಿಚಾರವನ್ನು ಪ್ರತಿಷ್ಠೆಗೆ ತೆಗೆದುಕೊಂಡು ರೈತರ ಜಮೀನು ಕಸಿಯುವ ಪ್ರಯತ್ನ ಮಾಡುತ್ತಿದೆ. ಮೊದಲಿನಿಂದ ಬೈರಮಂಗಲ ಭಾಗದ ಜನರ ಜತೆ ಜೆಡಿಎಸ್ ನಿಂತಿದೆ. ಒಂದು ಬಾರಿ ಪಾದಯಾತ್ರೆ ಮಾಡಿ ಧೈರ್ಯ ನೀಡಿದೆ. ಈ ಯೋಜನೆಗೆ ಸ್ಟೇ ತರಲು ಕಾನೂನು ಹೋರಾಟಕ್ಕೆ ಸಹ ಸಿದ್ಧತೆ ನಡೆಸಲಾಗಿದೆ ಎಂದರು.
09:52 PM (IST) Aug 03
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 4 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
09:37 PM (IST) Aug 03
ಶಾಸಕ, ನಟ, ನಿರ್ಮಾಪಕ ಸಿಪಿ ಯೋಗೇಶ್ವರ್ ಅವರ ಮಗ ಧ್ಯಾನ್ ಯೋಗೇಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ 'ಕರ್ಣಾಟಬಲಂ ಅಜೇಯಂ' ಚಿತ್ರಕ್ಕೆ ಬಾದಾಮಿಯಲ್ಲಿ ಅದ್ದೂರಿಯಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಧ್ಯಾನ್ ಸಹಸ್ರಾರು ಕಲಾವಿರೊಂದಿಗೆ 'ಬಾದಾಮಿ ಸೀಮೆಯಿದು ಎಂತ ಸೊಬಗು ..' ಎಂಬ ಗೀತೆಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.
09:09 PM (IST) Aug 03
G Janardhana Reddy: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಿರುವದು ಸಂತಸ ತಂದಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.
08:31 PM (IST) Aug 03
ಬೆಂಗಳೂರು ಉಪನಗರ ಸಾರಿಗೆ ಯೋಜನೆಯ 'ಕಾರಿಡಾರ್ 4' (ಕನಕ ಲೈನ್) ವ್ಯಾಪ್ತಿಯಲ್ಲಿ, ಹುಸ್ಕೂರು ರೈಲ್ವೆ ನಿಲ್ದಾಣದ ಬಳಿ ಮೊದಲ 'ಟಿ-ಗಿರ್ಡರ್' ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಇದು ಯೋಜನೆಯ ಪ್ರಮುಖ ಮೈಲಿಗಲ್ಲಾಗಿದೆ.
07:35 PM (IST) Aug 03
Detective Teekshana: ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಸಿನಿ ಪಯಣ, ಮಹಿಳಾ ಪಾತ್ರಗಳ ಬದಲಾವಣೆ, ಹೊಸ ಸಿನಿಮಾದ ವಿಶೇಷತೆ ಹಾಗೂ ಮುಂದಿನ ನಿರ್ದೇಶನದ ಕನಸಿನ ಬಗ್ಗೆ ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ.
07:33 PM (IST) Aug 03
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 19 ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ, ಸಂಪುಟದ ಒಟ್ಟು ಬಲ 33ಕ್ಕೆ ಏರಿಕೆಯಾಗಿದೆ. ಆದರೆ, ಈ ವಿಸ್ತರಿತ ಮಂತ್ರಿಮಂಡಲದಲ್ಲಿ ಒಬ್ಬರೂ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಗಮನಾರ್ಹ ಚರ್ಚೆಗೆ ಕಾರಣವಾಗಿದೆ.
07:30 PM (IST) Aug 03
07:06 PM (IST) Aug 03
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು, ಪರಿಸರಕ್ಕೆ ಮಾರಕವಾಗಿದ್ದ ಹಾಲಿನ ಪ್ಲಾಸ್ಟಿಕ್ ಪೊಟ್ಟಣಗಳನ್ನು ಅತ್ಯಂತ ಗಟ್ಟಿಮುಟ್ಟಾದ 'ಹೈ-ಪರ್ಫಾರ್ಮೆನ್ಸ್ ಇಂಜಿನಿಯರಿಂಗ್ ಪ್ಲಾಸ್ಟಿಕ್' ಆಗಿ ಪರಿವರ್ತಿಸುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
06:43 PM (IST) Aug 03
ಬೆಂಗಳೂರಿನ ಕೆಂಗೇರಿ ಬಳಿಯ 30,000 ಕೋಟಿ ರೂ. ಮೌಲ್ಯದ ಬಿ.ಎಂ ಕಾವಲ್ ಅರಣ್ಯ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ನಡೆಸಿದ ಬೃಹತ್ ಸಂಚನ್ನು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ವಿಫಲಗೊಳಿಸಿದ್ದಾರೆ.
06:10 PM (IST) Aug 03
05:33 PM (IST) Aug 03
Brahma Kamala Trailer: ವಿಭಿನ್ನ ಕಥೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸುತ್ತಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಮತ್ತೊಮ್ಮೆ ಹೊಸ ಪ್ರಯೋಗದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
05:20 PM (IST) Aug 03
05:08 PM (IST) Aug 03
City Lights Kannada Movie: ದುನಿಯಾ ವಿಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟರ್ ಹಂಚಿಕೊಂಡು, "ಸಿಟಿ ಲೈಟ್ಸ್ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ" ಎಂದು ಘೋಷಿಸಿದ್ದಾರೆ.
04:49 PM (IST) Aug 03
ಸಚಿವ ಸಂಪುಟ ವಿಸ್ತರಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಲಭಿಸಿರುವ ಹಿನ್ನೆಲೆಯಲ್ಲಿ ಅವರ ಸಹೋದರ ಹಾಗೂ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಅವರು ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯವಾಗಿ ಭಿನ್ನ ಪಕ್ಷಗಳಲ್ಲಿದ್ದರೂ ಸಹೋದರನ ಯಶಸ್ಸಿಗೆ ಅವರು ಹಾರೈಸಿದ್ದಾರೆ. ಆ ಕುರಿತಾದ ವರದಿ ಇಲ್ಲಿದೆ..
04:48 PM (IST) Aug 03
ನಟ ಅಭಿಷೇಕ್ ಅಂಬರೀಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಹೊಸ ಸಿನಿಮಾ ಅಥವಾ ಲುಕ್‌ನಿಂದಲ್ಲ. 'ಅಯೋಗ್ಯ 2' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ಚಿತ್ರದ ಬಗ್ಗೆ ಕೇಳಲಾದ..
03:56 PM (IST) Aug 03
ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದ ಸಚಿವರ ಪಟ್ಟಿಯಲ್ಲಿದ್ದ ಶಾಸಕ ಮಂಕಾಳು ವೈದ್ಯ ಅವರ ಹೆಸರನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಗಿದ್ದು, ಇದನ್ನು ಎಐಸಿಸಿ 'ಟೈಪಿಂಗ್ ಮಿಸ್ಟೇಕ್' ಎಂದು ಸಮಜಾಯಿಷಿ ನೀಡಿದೆ.
03:39 PM (IST) Aug 03
ಸಾಮಾನ್ಯವಾಗಿ ಕಳ್ಳರು ಕದ್ದ ಮಾಲನ್ನು ಮಾರಿ ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಈ ಕಳ್ಳರು ಪಶ್ಚಾತ್ತಾಪ ಪಟ್ಟು ಮಾಲನ್ನು ಮರಳಿಸಿರುವುದು ಈಗ ಕಾಕಿನಾಡ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಪೊಲೀಸರು ಈ 'ಪಶ್ಚಾತ್ತಾಪ' ಪಟ್ಟ ಕಳ್ಳರು ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.
03:16 PM (IST) Aug 03
03:05 PM (IST) Aug 03
03:03 PM (IST) Aug 03
02:17 PM (IST) Aug 03
02:14 PM (IST) Aug 03
ಬೆಂಗಳೂರಿನಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಜಯನಗರದ ರಸ್ತೆಬದಿ ವ್ಯಾಪಾರಿಗಳು ಹೊಸ ಹೆಜ್ಜೆಯೊಂದನ್ನು ಮುಂದಿಟ್ಟಿದ್ದಾರೆ. 2020ರಲ್ಲಿ ಅನುಮೋದನೆಗೊಂಡು ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ಈ ಯೋಜನೆಗೆ ಮರುಚಾಲನೆ ನೀಡಬೇಕೆಂದು ವ್ಯಾಪಾರಿಗಳ ಸಂಘಟನೆ ಆಗ್ರಹಿಸಿದೆ.
02:03 PM (IST) Aug 03
01:00 PM (IST) Aug 03
12:54 PM (IST) Aug 03
12:53 PM (IST) Aug 03
ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ಪಟ್ಟಿ ಹೈಕಮಾಂಡ್ ಕಳುಹಿಸಿದೆ. ಕೆಲ ಅಚ್ಚರಿ ಹೆಸರುಗಳು ಇದರಲ್ಲಿದೆ. ಆದರೆ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಘಟಾನುಘಟಿಗಳಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಸಚಿವ ಸ್ಥಾನದಿಂದ ವಂಚಿತರಾದವರ ಪಟ್ಟಿ ಇಲ್ಲಿದೆ.
12:44 PM (IST) Aug 03
12:41 PM (IST) Aug 03
ತೆರೆಮೇಲೆ ರಾವಣನ ಹಾವಳಿ ಜೋರಾಗಿದೆ, ಆದರೆ ಕರುನಾಡಿನ ದುರ್ಯೋಧನನ ರಾಜಸಿಕ ಕಳೆ ಮಾತ್ರ ಮೌನವಾಗಿದೆ. ಕಾಲ ಎಲ್ಲ ಗಾಯಗಳಿಗೂ ಮದ್ದು ಮಾಡುತ್ತದೆ ಅಂತಾರೆ . ಹಾಗೆಯೇ, ದರ್ಶನ್ ಎಂಬ ಚಕ್ರವರ್ತಿ ಬದುಕಿನ ಈ ಕರಾಳ ರಾಮಾಯಣ ಮುಗಿದು, ಮತ್ತೆ ಅವರ ಸಿಂಹಾಸನದ ರಾಜಯೋಗ ಯಾವಾಗ ಕೂಡಿಬರಲಿದೆ? ಕಾಲವೇ ಉತ್ತರಿಸಬೇಕು!
12:18 PM (IST) Aug 03
ರಾಜ್ಯ ರಾಜಕಾರಣದಲ್ಲಿ ಇಂದು ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಅಚ್ಚರಿಯ ಹೆಸರೊಂದು ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನ ನೂತನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಎ.ವಿ. ಅವರಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದ್ದು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
12:01 PM (IST) Aug 03
ಕನ್ನಡ ಬಿಗ್‌ಬಾಸ್ ಸೀಸನ್ 13 ಶೀಘ್ರದಲ್ಲೇ ಆರಂಭವಾಗಲಿದ್ದು, ಹೊಸ ಸ್ಪರ್ಧಿಗಳ ಆಯ್ಕೆಗೆ ಈ ಬಾರಿ ವಿಶೇಷ ಟ್ವಿಸ್ಟ್ ನೀಡಲಾಗಿದೆ ಎನ್ನಲಾಗುತ್ತಿದೆ. ಮಾಜಿ ಸ್ಪರ್ಧಿಗಳಾದ ಸಂಗೀತಾ, ವಿನಯ್ ಮತ್ತು ಗಿಲ್ಲಿ ನಟ ಕಾಣಿಸಿಕೊಂಡು, ಸ್ಪರ್ಧಿಗಳಿಗೆ ಮೂರು ಸವಾಲುಗಳನ್ನು ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
11:43 AM (IST) Aug 03
11:14 AM (IST) Aug 03
11:05 AM (IST) Aug 03
ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಕಲೇಶಪುರ ಸಮೀಪದ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿ, ಬದಲಿ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ರೈಲ್ವೆ ಇಲಾಖೆ ಹಳಿ ದುರಸ್ತಿ ಕಾರ್ಯ ಕೈಗೊಂಡಿದೆ.
10:52 AM (IST) Aug 03
ನಟಿ ಹರ್ಷಿಕಾ ಪೂಣಚ್ಚ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, 'ವಾತ್ಸಲ್ಯ' ಥೀಮ್‌ನಡಿ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಯಶೋದೆ-ಕೃಷ್ಣನ ಪ್ರೀತಿಯನ್ನು ಸಾರುವ ಈ ಫೋಟೋಗಳಲ್ಲಿ, ಅವರು ಕಡುಗೆಂಪು ಕಾಂಚೀಪುರಂ ಸೀರೆಯುಟ್ಟು ಕಂಗೊಳಿಸಿದ್ದು, ಈ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
10:52 AM (IST) Aug 03
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರೀ ಮಳೆಯಿಂದಾಗಿ ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತಗೊಂಡಿದ್ದು, ಬಂಟ್ವಾಳದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಾಗೂ ಕಾರ್ಕಳದಲ್ಲಿ ಕಿರು ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
10:18 AM (IST) Aug 03
09:41 AM (IST) Aug 03
09:14 AM (IST) Aug 03
08:44 AM (IST) Aug 03
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು, ಆಹಾರ ಮತ್ತು ನಿದ್ದೆಯ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದ್ದಾರೆ. ನಿದ್ದೆಯು ಮಾತೃಸ್ವರೂಪಿಣಿಯಾಗಿದ್ದು, ಶರೀರ ಮತ್ತು ಮನಸ್ಸಿಗೆ ಚೈತನ್ಯ ನೀಡುತ್ತದೆ ಹಾಗೂ ಸರಿಯಾದ ನಿದ್ದೆ ಸಮಾಧಿ ಸ್ಥಿತಿಗೆ ಸಮಾನ ಎಂದು ಅವರು ತಿಳಿಸಿದ್ದಾರೆ.
08:30 AM (IST) Aug 03