LIVE NOW
Published : Oct 28, 2026, 05:18 AM ISTUpdated : Oct 28, 2026, 11:12 PM IST

Karnataka News Live: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬರೀ 10 ಲಕ್ಷಕ್ಕೆ ಸೇರಿಕೊಂಡ ವುಮೆನ್‌ 'ವೈಭವ್‌ ಸೂರ್ಯವಂಶಿ' ಕರ್ನಾಟಕದ ಆಲ್ರೌಂಡರ್‌ ಉಮಾ ಕಾಶ್ವಿ!

ಸಾರಾಂಶ

ಬೆಳಗಾವಿ: ಕಬ್ಬು ದರ ವಿವಾದಕ್ಕೆ ಎರಡು ದಿನಗಳಲ್ಲಿ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದ್ದು, ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ದಸರಾ ಬಳಿಕ ರೈತರ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ಅದರಂತೆ ಸೋಮವಾರ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಲಾಗಿದೆ. ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಚಳವಳಿಗಾರರ ಬಳಿಗೆ ತೆರಳಿ ಮಾತುಕತೆ ನಡೆಸಿರುವುದು ಇದೇ ಮೊದಲ ಬಾರಿ. ಮುಖ್ಯಮಂತ್ರಿಯವರ ನಡೆಗೆ ನಾಡಿನ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ರೈತರು ಟನ್‌ ಕಬ್ಬಿಗೆ ₹4 ಸಾವಿರ ದರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಕ್ಕರೆ ಎಂಎಸ್‌ಪಿ ಪ್ರತಿ ಕೆಜಿಗೆ ₹50 ಹೆಚ್ಚಿಸುವ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಎಂಎಸ್‌ಪಿ ₹50ಕ್ಕೆ ನಿಗದಿಯಾದರೆ ಟನ್‌ಗೆ ₹4 ಸಾವಿರ ನೀಡಲು ಸಿದ್ಧ ಎಂದು ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ ಎಂದರು.

11:12 PM (IST) Oct 28

ಡೆಲ್ಲಿ ಕ್ಯಾಪಿಟಲ್ಸ್‌ಗೆ ಬರೀ 10 ಲಕ್ಷಕ್ಕೆ ಸೇರಿಕೊಂಡ ವುಮೆನ್‌ 'ವೈಭವ್‌ ಸೂರ್ಯವಂಶಿ' ಕರ್ನಾಟಕದ ಆಲ್ರೌಂಡರ್‌ ಉಮಾ ಕಾಶ್ವಿ!

WPL ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕರ್ನಾಟಕದ 15 ವರ್ಷದ ಉಮಾ ಕಾಶ್ವಿಯನ್ನು ಖರೀದಿಸಿದ್ದು, ಇವರು ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉಮಾ ಕಾಶ್ವಿ ಅವರ ಹಿನ್ನೆಲೆ ಏನು? ಸ್ಟೋರಿ ಓದಿ.

Read Full Story

10:34 PM (IST) Oct 28

ಕನ್ನಡದ ಹುಡುಗಿ ವೃಂದಾ ದಿನೇಶ್ ಆರ್‍‌ಸಿಬಿಗೆ ಬಂದಿದ್ದಕ್ಕೆ ಕುಣಿದು ಕುಪ್ಪಳಿಸಿದ ಶ್ರೇಯಾಂಕಾ ಪಾಟೀಲ್

WPL-2026 ಮಿನಿ ಹರಾಜಿನಲ್ಲಿ ಆರ್‍‌ಸಿಬಿ ತಂಡವು ಕರ್ನಾಟಕದ ಪ್ರತಿಭೆ ವೃಂದಾ ದಿನೇಶ್ ಅವರನ್ನು 10 ಲಕ್ಷ ರೂ.ಗೆ ಖರೀದಿಸಿದೆ. ಈ ವಿಚಾರ ತಿಳಿದು ಶ್ರೇಯಾಂಕಾ ಪಾಟೀಲ್ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ. ಇನ್ನು ಆರ್‍‌ಸಿಬಿ ಸೇರಿದ ಖುಷಿಯನ್ನು ವೃಂದಾ ದಿನೇಶ್ ಹಂಚಿಕೊಂಡಿದ್ದಾರೆ.

Read Full Story

09:55 PM (IST) Oct 28

ನನ್ನ ವೈಯಕ್ತಿಕ ಜೀವನದಲ್ಲಿ ಆದ ಘಟನೆಗಳಿಗೆ ಮೈಮಾಟ ಹಾಡು ಉತ್ತರವಲ್ಲ, ಸ್ಪಷ್ಟನೆ ನೀಡಿದ ರ‍್ಯಾಪರ್ ಚಂದನ್‌ ಶೆಟ್ಟಿ

ಚಂದನ್ ಶೆಟ್ಟಿ ಅವರ ಹೊಸ 'ಮೈಮಾಟ' ಹಾಡು ಮಾಜಿ ಪತ್ನಿ ನಿವೇದಿತಾ ಗೌಡ ಅವರನ್ನು ಗುರಿಯಾಗಿಸಿ ಬರೆಯಲಾಗಿದೆ ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ ಈ ಹಾಡನ್ನು ಕೇವಲ ಮನರಂಜನೆಗಾಗಿ ರಚಿಸಲಾಗಿದ್ದು, ತಮ್ಮ ವೈಯಕ್ತಿಕ ಜೀವನಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಚಂದನ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

Read Full Story

09:53 PM (IST) Oct 28

Gut Health Tips - ಕರುಳಿನ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುವ ಈ ಆಹಾರಗಳನ್ನು ಅಗತ್ಯವಿದ್ದಾಗ ತಪ್ಪದೇ ಸೇವಿಸಿ!

ಕರುಳಿನ ಆರೋಗ್ಯ ಎಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಸೂಕ್ಷ್ಮಾಣುಜೀವಿಗಳ (ಗಟ್ ಮೈಕ್ರೋಬಯೋಮ್) ಸಮತೋಲನ ಕಾಪಾಡುವುದು. ಜೀರ್ಣಕ್ರಿಯೆ ಸುಗಮವಾಗಿ ನಡೆಯಲು ಇದು ಬಹಳ ಮುಖ್ಯ. ನಿಮ್ಮ ಕರುಳಿನ ಆರೋಗ್ಯಕ್ಕೆ ಅಗತ್ಯವಿದ್ದಾಗ ತಪ್ಪದೇ ಈ ಆಹಾರಗಳನ್ನು ಸೇವಿಸಿ!

Read Full Story

09:35 PM (IST) Oct 28

‘ಬನ’ ಸಿನಿಮಾ ನೋಡಿದ ಬಳಿಕ ಜಯಪ್ರಕಾಶ್ ಶೆಟ್ಟಿ ಜೊತೆ ಫೋಟೋಗೆ ಮುಗಿಬಿದ್ದ ವಿದ್ಯಾರ್ಥಿಗಳು - ಕಾರಣವೇನು?

ಜಯಪ್ರಕಾಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬನ’ ತುಳು ಸಿನಿಮಾ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಮಂಗಳೂರಿನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ವಿವಿಧ ವರ್ಗದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read Full Story

09:20 PM (IST) Oct 28

ಬೆಂಗಳೂರು-ತುಮಕೂರು 4 ಪಥದ ರೈಲ್ವೆ ಯೋಜನೆಗೆ ಇನ್ನೂ ಆಗದ ಭೂಸ್ವಾಧೀನ, ಸರ್ಕಾರದ ಸಹಕಾರಕ್ಕೆ ಕಾಯುತ್ತಿರುವ ರೈಲ್ವೇಸ್‌

ಬೆಂಗಳೂರು-ತುಮಕೂರು ನಡುವಿನ ಬಹುನಿರೀಕ್ಷಿತ ಚತುಷ್ಪಥ ರೈಲ್ವೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರ ರೈಲ್ವೆ ಸಚಿವಾಲಯವು ಮಧ್ಯಸ್ಥಿಕೆದಾರರನ್ನು ನೇಮಿಸಿದೆ. ಆದರೆ, ರಾಜ್ಯ ಸರ್ಕಾರದ ವಿಳಂಬ ನೀತಿಯಿಂದಾಗಿ ಕಾಮಗಾರಿ ಕುಂಠಿತಗೊಳ್ಳುವ ಆತಂಕವನ್ನು ನೈಋತ್ಯ ರೈಲ್ವೆ ವ್ಯಕ್ತಪಡಿಸಿದೆ.

Read Full Story

09:00 PM (IST) Oct 28

ಪದವೀಧರರಿಗೆ ಬಿಗ್ ಆಫರ್ - 6 ತಿಂಗಳ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್ ಕೋರ್ಸ್ ಆರಂಭಿಸಿದ ಸಹಕಾರ ಮಹಾಮಂಡಳ

ರಾಜ್ಯ ಸಹಕಾರ ಮಹಾಮಂಡಳವು ನಿರುದ್ಯೋಗಿ ಪದವೀಧರರಿಗಾಗಿ 6 ತಿಂಗಳ 'ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್' (DCA) ಕೋರ್ಸ್ ಆರಂಭಿಸಿದೆ. ಬಿ.ಕಾಂ ಅಥವಾ ಅಕೌಂಟೆನ್ಸಿ ಓದಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಬಿಪಿಎಲ್ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಸಿಗಲಿದೆ.

Read Full Story

07:52 PM (IST) Oct 28

ಬೆಂಗಳೂರು-ಹೊಸೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ, ಚಂದಾಪುರ NH-44 ರಲ್ಲಿ 61 ಮೀಟರ್ ದೈತ್ಯ ಗರ್ಡರ್ ಅಳವಡಿಸಿದ K-RIDE

ಕೆ-ರೈಡ್ ಸಂಸ್ಥೆಯು ಚಂದಾಪುರ ಸಮೀಪದ ಎನ್‌ಹೆಚ್-44 ರಸ್ತೆಯ ಮೇಲೆ 61 ಮೀಟರ್ ಉದ್ದದ ಎರಡು ಬೃಹತ್ ಗರ್ಡರ್‌ಗಳನ್ನು ಯಶಸ್ವಿಯಾಗಿ ಅಳವಡಿಸಿದೆ. ಇದು ಬೈಯಪ್ಪನಹಳ್ಳಿ-ಹೊಸೂರು ರೈಲ್ವೆ ಮಾರ್ಗ ದ್ವಿಗುಣಗೊಳಿಸುವ ಯೋಜನೆಯ ಪ್ರಮುಖ ಮೈಲಿಗಲ್ಲಾಗಿದೆ.

Read Full Story

07:51 PM (IST) Oct 28

ಅಮೆರಿಕ ಮಹಿಳೆಯ 'ಕಣ್ಣು ಬೆಳಗಿಸಿದ' ಬೆಂಗಳೂರಿನ ಆಸ್ಪತ್ರೆ, ರೋಚಕ ಅನುಭವ ಕೇಳಿ ಖುಷಿಯಾದ ಜನ

ಅಮೆರಿಕದಿಂದ ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಅನಿವಾರ್ಯವಾಗಿ ಬೆಂಗಳೂರಿನ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಮೆರಿಕದ ಆರೋಗ್ಯ ವ್ಯವಸ್ಥೆಗೆ ಹೋಲಿಸಿದರೆ ಇಲ್ಲಿನ ತ್ವರಿತ ಹಾಗೂ ಅತ್ಯುತ್ತಮ ವೈದ್ಯಕೀಯ ಸೇವೆ ಕಂಡು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಮೆ ಇಲ್ಲದಿದ್ದರೂ ಸುಲಭವಾಗಿ ಚಿಕಿತ್ಸೆ ಸಿಕ್ಕಿದ್ದಕ್ಕೆ ಅವರು ಆಸ್ಪತ್ರೆಗೆ ಧನ್ಯವಾದ ತಿಳಿಸಿದ್ದಾರೆ.
Read Full Story

07:23 PM (IST) Oct 28

ಬೆಂಗಳೂರಿನ ಮಲ್ಲೇಶ್ವರದ ಪ್ರಸಿದ್ಧ CTR ದೋಸೆಯಲ್ಲಿ ಜಿರಳೆ ಪತ್ತೆ, ಗ್ರಾಹಕರ ಕ್ಷಮೆ ಕೋರಿದ ಹೋಟೆಲ್‌

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಸಿಟಿಆರ್ ಹೋಟೆಲ್‌ನ ಮಸಾಲೆ ದೋಸೆಯಲ್ಲಿ ಜಿರಳೆ ಪತ್ತೆಯಾದ ವಿಡಿಯೋ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಆಡಳಿತ ಮಂಡಳಿಯು ಗ್ರಾಹಕರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದೆ.

Read Full Story

07:06 PM (IST) Oct 28

ಧನ್ವೀರ್‌ ಮನೆಯ ರೂಮ್‌ನಲ್ಲಿ ವಿಜಯಲಕ್ಮೀ ಲಾಕ್‌ - ಗಲಾಟೆ ನಡೆದ ದಿನದ ವಿವರ ಘಟನೆ ಬಿಚ್ಚಿಟ್ಟ ದರ್ಶನ್ ಆಪ್ತ ವೇಲು ನಾಯ್ಕರ್!

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ವೀರ್ ಗೌಡ ನಡುವಿನ ಹಣಕಾಸಿನ ವಿವಾದ ತಾರಕಕ್ಕೇರಿದ್ದು, ಪರಸ್ಪರ ಪೊಲೀಸ್ ದೂರು ದಾಖಲಾಗಿವೆ. ಹಣ ಕೇಳಲು ಧನ್ವೀರ್ ಮನೆಗೆ ಹೋಗಿದ್ದ ವಿಜಯಲಕ್ಷ್ಮೀ ಅವರನ್ನು ನಿಂದಿಸಿ, ಕೋಣೆಯಲ್ಲಿ ಕೂಡಿಹಾಕಲಾಗಿತ್ತು ಎಂದು ಆಪ್ತ ವೇಲು ನಾಯ್ಕರ್ ತಿಳಿಸಿದ್ದಾರೆ.

Read Full Story

06:52 PM (IST) Oct 28

ಸಿಡಿದೆದ್ದ ಕರ್ನಾಟಕ ಬಿಜೆಪಿ, ನವೆಂಬರ್ 2 ರಿಂದ ಐದು ದಿನ ಬೃಹತ್ ಪಾದಯಾತ್ರೆ; ಯಾವ ವಿಚಾರಕ್ಕೆ?

ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಘೋಷವಾಕ್ಯದಡಿ ನವೆಂಬರ್ 2 ರಿಂದ 6ರವರೆಗೆ ರಾಜ್ಯಾದ್ಯಂತ ಬಿಜೆಪಿ ಬೃಹತ್ ಪಾದಯಾತ್ರೆ ನಡೆಸಲಿದೆ. ಕೇಂದ್ರದ ವಿರುದ್ಧ ಅರಾಜಕತೆ ಸೃಷ್ಟಿಸುತ್ತಿರುವ ಇಂಡಿಯಾ ಒಕ್ಕೂಟ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಈ ಹೋರಾಟ ನಡೆಯಲಿದೆ ಎಂದು ಎಂಎಲ್‌ಸಿ ರವಿಕುಮಾರ್ ತಿಳಿಸಿದ್ದಾರೆ.
Read Full Story

05:42 PM (IST) Oct 28

ಕೆಜಿಎಫ್ ಬೆಡಗಿಯ ಕಾಲಿಗೆ ಬೀಳಲು ಹೋದ ತೆಲುಗಿನ ಖ್ಯಾತ ನಿರ್ದೇಶಕ - ಶಾಕ್ ಆಗಿದ್ದೇಕೆ ಶ್ರೀನಿಧಿ ಶೆಟ್ಟಿ!

ವೆಂಕಟೇಶ್ ಅಭಿನಯದ ‘ಆದರ್ಶ ಕುಟುಂಬಂ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಶ್ರೀನಿಧಿ ಶೆಟ್ಟಿ ಅವರಿಗೆ ತಮಾಷೆಯಾಗಿ ನಮಸ್ಕರಿಸಲು ಬಾಗಿದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಎಲ್ಲರ ಗಮನ ಸೆಳೆದಿದ್ದಾರೆ.

Read Full Story

05:21 PM (IST) Oct 28

Barefoot Runner - ಸೀರೆಯಲ್ಲಿ ಕಾಲಿಗೆ ಚಪ್ಪಲಿ ಇಲ್ಲದೆ ಓಡಿದ್ದ ಕವಿತಾ ದೇವಿ 'ಹೋಮ್ ಗಾರ್ಡ್' ಕನಸು ನುಚ್ಚುನೂರು, ಏನಾಯ್ತು?

ರಾಮ್‌ಗಢದಲ್ಲಿ ಹೋಮ್‌ಗಾರ್ಡ್ ನೇಮಕಾತಿಯ 1600 ಮೀಟರ್ ಓಟದಲ್ಲಿ ಸೀರೆಯುಟ್ಟು, ಬರಿಗಾಲಿನಲ್ಲಿ ಓಡಿ ಕವಿತಾ ದೇವಿ ಗಮನ ಸೆಳೆದಿದ್ದರು. ಆದರೆ, ನಂತರ ನಡೆದ ಹೈಜಂಪ್ ಪರೀಕ್ಷೆಯಲ್ಲಿ ಅವರು ವಿಫಲರಾಗಿದ್ದಾರೆ. ಇದರಿಂದಾಗಿ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅವರ ಹೋಮ್ ಗಾರ್ಡ್ ಆಗುವ ಕನಸು ನುಚ್ಚುನೂರಾಗಿದೆ.
Read Full Story

05:14 PM (IST) Oct 28

ಪತ್ನಿ ಮೇಲೆ ಪ್ರೀತಿಯ ಸುರಿಮಳೆಗೈದ ಗಂಭೀರ್.. ಜಸ್ಟ್ ಎರಡೇ ಪದಗಳಲ್ಲಿ ಪ್ರೀತಿಯ ನಿವೇದನೆ ಹಂಚಿಕೊಂಡ ಕೋಚ್

ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ತಮ್ಮ 15ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಪತ್ನಿ ನತಾಶಾ ಜೊತೆಗಿನ ವಿಶೇಷ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನೊಂದೆಡೆ, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದ್ದು, ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕದ ಬಗ್ಗೆಯೂ ವಿವರಿಸಲಾಗಿದೆ.
Read Full Story

05:10 PM (IST) Oct 28

‘ಪ್ರೇಮದ ಊರಲಿ’ ನಟಿಯಲ್ಲಿ ಕಲ್ಪನಾ ಅವರ ಛಾಯೆ ಕಾಣಿಸಿಕೊಂಡಿತು - ಆರಂಭದಲ್ಲೇ ‘ಎರಡು ಕನಸು’ ಎಂದ ಶಿವಣ್ಣ

ಶಿವರಾಜ್‌ಕುಮಾರ್ ‘ಪ್ರೇಮದ ಊರಲಿ’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಎರಡು ಕನಸು’ ನೆನಪಿಸಿದ ಈ ಚಿತ್ರವನ್ನು ಅಪರೂಪದ ಸಿನಿಮಾ ಎಂದಿರುವ ಶಿವಣ್ಣ, ನಿರ್ದೇಶನ, ಸಂಗೀತ ಹಾಗೂ ಶ್ರೀರಾಮ್, ರಮಿಕಾ ಶಿವು..

Read Full Story

04:47 PM (IST) Oct 28

ನಟಿ ರಮಿಕಾ ಶಿವು ಮುಂದಿನ ಸಿನಿಮಾ ಇದೇನಾ? ‘ಪ್ರೇಮದ ಊರಲಿ’ ಬೆಡಗಿಗೆ ಹೆಚ್ಚಾಯ್ತು ಫುಲ್ ಕ್ರೇಜ್

‘ಪ್ರೇಮದ ಊರಲಿ’ ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆದಿರುವ ನಟಿ ರಮಿಕಾ ಶಿವು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿಯಲ್ಲಿದ್ದಾರೆ. ಚಿತ್ರದ ಯಶಸ್ಸಿನ ಬಳಿಕ ರಮಿಕಾ ಶಿವು ಅವರ ಮುಂದಿನ ಸಿನಿಮಾ ಯಾವುದು..

Read Full Story

04:27 PM (IST) Oct 28

ವಾಹನದಲ್ಲಿ ಪ್ರೇಮದ ಊರಿಗೆ ಹೋಗುವಂತಿಲ್ಲ, ನಿಷೇಧ ಹೇರಿದ ಹಾಸನ ಜಿಲ್ಲಾಧಿಕಾರಿ!

'ಪ್ರೇಮದ ಊರಲಿ' ಸಿನಿಮಾ ಚಿತ್ರೀಕರಣದ ನಂತರ ಹಾಸನದ ಸೀಗೆಗುಡ್ಡದ ಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಹರಿದುಬರುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮತ್ತು ಅಪಾಯದ ಹಿನ್ನೆಲೆಯಲ್ಲಿ ನವೆಂಬರ್ 11ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

Read Full Story

04:17 PM (IST) Oct 28

32ನೇ ದಿನವೂ 'ಪ್ರೇಮದ ಊರಲಿ' ಅಬ್ಬರ; ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ! 2026ರಲ್ಲಿ ಕರ್ನಾಟಕ ನಂ.1 ಸಿನಿಮಾ?

ಮನೋಜ್ ಕುಮಾರ್ ನಿರ್ದೇಶನದ 'ಪ್ರೇಮದ ಊರಲಿ' ಸಿನಿಮಾ 2026ರಲ್ಲಿ ಕರ್ನಾಟಕದ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಈ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ 150 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದ್ದು, ಸಂಕಷ್ಟದಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ತಂದಿದೆ.
Read Full Story

04:10 PM (IST) Oct 28

ಜೈಲಲ್ಲಿ ದರ್ಶನ್‌ಗೆ ಮತ್ತೆ ಅನಾರೋಗ್ಯ, ನ್ಯಾಯಾಲಯಕ್ಕೆ ತುರ್ತು ಬೇಡಿಕೆ, ಅಕ್ಟೋಬರ್‌ನಲ್ಲೇ ಬೆನ್ನು ನೋವು ಬರೋದ್ಯಾಕೆ?

ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಚಳಿಯಿಂದಾಗಿ ಮತ್ತೆ ತೀವ್ರ ಬೆನ್ನುನೋವು ಕಾಣಿಸಿಕೊಂಡಿದೆ. ತಕ್ಷಣವೇ ಫಿಸಿಯೋಥೆರಪಿ ಚಿಕಿತ್ಸೆ ನೀಡುವಂತೆ ಅವರು ನ್ಯಾಯಾಧೀಶರಲ್ಲಿ ಖುದ್ದಾಗಿ ಮನವಿ ಮಾಡಿದ್ದಾರೆ. ಈ ಹಿಂದೆ 2 ಬಾರಿ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದೇ ಕಾರಣಕ್ಕೆ ಜಾಮೀನು ಪಡೆದಿದ್ದರೂ ಶಸ್ತ್ರಚಿಕಿತ್ಸೆ ಮಾಡಿಕೊಳ್ಳದೆ ಹೊರಬಂದು ಚಿತ್ರೀಕರಣ ಪೂರ್ತಿಗೊಳಿಸಿದ್ದ ನಟ ಬಳಿಕ ಮತ್ತೆ ಜೈಲು ಸೇರಿದ್ದರು.

Read Full Story

04:09 PM (IST) Oct 28

ನಟಿ ಮಾನ್ವಿತಾ ಕಾಮತ್ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಈ ಸ್ಟಾರ್ ಹೀರೋಯಿನ್ ನಾಯಕಿ!

ಜನಪ್ರಿಯ ನಟಿ ಮಾನ್ವಿತಾ ಕಾಮತ್ ನಿರ್ದೇಶಕಿಯಾಗಿ ಸ್ಯಾಂಡಲ್‌ವುಡ್‌ಗೆ ಹೊಸ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read Full Story

04:05 PM (IST) Oct 28

Pradeep Eshwar - ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ವಾ..? ನಿನ್ನೆ ಉಚ್ಚಾಟನೆ, ಇವತ್ತು ರದ್ದು!

ಚಿಕ್ಕಬಳ್ಳಾಪುರ ಕಾಂಗ್ರೆಸ್ ಸಭೆಯಲ್ಲಿ ನಡೆದ ಗದ್ದಲದ ಹಿನ್ನೆಲೆಯಲ್ಲಿ ಉಚ್ಚಾಟನೆಗೊಂಡಿದ್ದ ಮುದಾಸಿರ್ ದಾವೂದ್ ಅವರ ಆದೇಶವನ್ನು ದಿಢೀರ್ ವಾಪಸ್ ಪಡೆಯಲಾಗಿದೆ. ಶಾಸಕ ಪ್ರದೀಪ್ ಈಶ್ವರ್ ವರ್ತನೆಗೆ ನಾಯಕರ ಆಕ್ರೋಶ ಹಾಗೂ ಹೈಕಮಾಂಡ್ ಮೌನ ತೀವ್ರ ಕುತೂಹಲ ಮೂಡಿಸಿದೆ. ಜೊತೆಗೆ, ಜಿಲ್ಲೆಯಲ್ಲಿ 8,749 ಹೊಸ ಮತದಾರರ ಸೇರ್ಪಡೆಯೊಂದಿಗೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ.

Read Full Story

03:47 PM (IST) Oct 28

ನಾನು ಈವರೆಗೂ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ - ನಟ ವಿಜಯ್ ರಾಘವೇಂದ್ರ

‘ಮಹಾನ್’ ಚಿತ್ರದ ‘ಒಡ ಹುಟ್ಟಿದವಳು’ ಹಾಡು ಬಿಡುಗಡೆಯಾಗಿದೆ. ನಟ ವಿಜಯ್ ರಾಘವೇಂದ್ರ ಹಾಗೂ ವರ್ಷ ಬೊಳ್ಳಮ್ಮ ನಟಿಸಿರುವ ಈ ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶನ ಮಾಡಿದ್ದಾರೆ. ಡಾ. ವಿ. ನಾಗೇಂದ್ರಪ್ರಸಾದ್ ಸಾಹಿತ್ಯ..

Read Full Story

03:45 PM (IST) Oct 28

YASH in US - ಅಮೆರಿಕಾದಲ್ಲಿ ಕನ್ನಡ ನಟ ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದು ಕೇಳಿ ಇಡೀ ಜಗತ್ತೇ ಬೆರಗಾಯ್ತು!

‘ರಾಮಾಯಣ’ ಕೇವಲ ಕಥೆಯಲ್ಲ, ನಮ್ಮ ಪರಂಪರೆ ಎಂದ ಯಶ್, ತಮ್ಮ ಮಾತನ್ನು ‘ನಮಸ್ಕಾರ’ ಎಂದು ಆರಂಭಿಸಿದರು. ‘ರಾಮಾಯಣ’ದ ಸಾಂಸ್ಕೃತಿಕ ಮಹತ್ವವನ್ನೂ ವಿವರಿಸುತ್ತ, ‘ಈ ಮಹಾಕಾವ್ಯ ಕೇವಲ ಒಂದು ಕಥೆಯಲ್ಲ; ಸಾವಿರಾರು ವರ್ಷಗಳಿಂದ ತಲೆಮಾರಿನಿಂದ ತಲೆಮಾರಿಗೆ ಸಾಗಿಬಂದಿರುವ ಭಾರತದ ಸಾಂಸ್ಕೃತಿಕ ಪರಂಪರೆ’ ಎಂದು ಹೇಳಿದರು.

Read Full Story

03:27 PM (IST) Oct 28

ಕರ್ನಾಟಕದ ಕಾಶ್ಮೀರ ಕೊಡಗಿಗೆ ಲಗ್ಗೆ ಇಟ್ಟ ರಾಡಿಸನ್ - ಪ್ರವಾಸಿಗರಿಗಾಗಿ ಅತ್ಯಾಧುನಿಕ ' ರೆಸಾರ್ಟ್ ಆಂಡ್ ಸ್ಪಾ' ಆರಂಭ!

ಮಂಜಿನ ನಗರಿ ಕೊಡಗಿನ ಮಡಿಕೇರಿಯಲ್ಲಿ ರಾಡಿಸನ್ ಹೋಟೆಲ್ ಗ್ರೂಪ್ 'ಪರ್ಪಲ್ ಪಾಮ್ಸ್ ರೆಸಾರ್ಟ್ ಆಂಡ್ ಸ್ಪಾ' ಎಂಬ ಐಷಾರಾಮಿ ರೆಸಾರ್ಟ್ ಅನ್ನು ಆರಂಭಿಸಿದೆ. 78 ಅತ್ಯಾಧುನಿಕ ಕೊಠಡಿಗಳು, ರೆಸ್ಟೋರೆಂಟ್, ಬಾರ್ ಮತ್ತು ಸಮಾರಂಭಗಳಿಗೆ ಸೂಕ್ತವಾದ ಸೌಲಭ್ಯಗಳನ್ನು ಇದು ಹೊಂದಿದೆ. ಪ್ರವಾಸಿಗರಿಗೆ ಪ್ರಕೃತಿಯ ಮಡಿಲಲ್ಲಿ ಜಾಗತಿಕ ಗುಣಮಟ್ಟದ ಆತಿಥ್ಯ ನೀಡಲು ಈ ರೆಸಾರ್ಟ್ ಸಜ್ಜಾಗಿದೆ.
Read Full Story

03:07 PM (IST) Oct 28

ಬೆಂಗಳೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ ದಿಢೀರ್ ಬಿಕ್ಕಟ್ಟು, ಸಂಕಷ್ಟದಲ್ಲಿ ಮನೆ ಖರೀದಿದಾರರು, ಬಿಲ್ಡರ್‌ಗಳು!

ಕಚ್ಚಾವಸ್ತುಗಳ ಕೊರತೆ ನೆರೆಯ ಸರ್ಕಾರದ ನಿರ್ಬಂಧದಿಂದಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮರಳು, ಸಿಮೆಂಟ್ ಮತ್ತು ಉಕ್ಕಿನ ಬೆಲೆ ಏರಿಕೆಯಿಂದ ನಿರ್ಮಾಣ ವೆಚ್ಚ ಶೇ.33ರಷ್ಟು ಹೆಚ್ಚಾಗಿದ್ದು, ಯೋಜನೆಗಳು ವಿಳಂಬವಾಗುತ್ತಿವೆ. ಬಿಕ್ಕಟ್ಟು ಪರಿಹರಿಸಲು ಸರ್ಕಾರದ ತುರ್ತು ಹಸ್ತಕ್ಷೇಪಕ್ಕೆ ಕ್ರೆಡೈ ಆಗ್ರಹಿಸಿದೆ. ರಿಯಲ್ ಎಸ್ಟೇಟ್ ಕ್ಷೇತ್ರ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ.

Read Full Story

02:41 PM (IST) Oct 28

ಪಿತೃ ಕಾರ್ಯಕ್ಕೆ ಜಾಮೀನು ಕೇಳಿದ ದರ್ಶನ್ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್, ಕೋರ್ಟ್ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪ್ರದೋಷ್, ದರ್ಶನ್ ವಿರುದ್ಧ ಮಾಫಿ ಸಾಕ್ಷಿ ನುಡಿದು ಈಗಾಗಲೇ ಕೋಲಾಹಲ ಸೃಷ್ಟಿಸಿದ್ದಾರೆ. ಪಿತೃ ಕಾರ್ಯದಲ್ಲಿ ಪಾಲ್ಗೊಳ್ಳಲು ಜಾಮೀನಿಗೆ ಮನವಿ ಮಾಡಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಹೇಳಿದ್ದೇನು?

Read Full Story

02:33 PM (IST) Oct 28

SIR ವಿಚಾರದಲ್ಲಿ ಜ್ಞಾನೇಶ್ ರಾಜೀನಾಮೆ ಕೇಳುವ ಕಾಂಗ್ರೆಸ್‌ಗೆ ಸಿಟಿ ರವಿ ಓಪನ್ ಚಾಲೆಂಜ್! ಡಿಕೆ ಸವಾಲ್ ಸ್ವೀಕರಿಸುತ್ತಾರಾ?

ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್‌ಗೆ ಎಂಎಲ್‌ಸಿ ಸಿಟಿ ರವಿ ಬಹಿರಂಗ ಸವಾಲು ಹಾಕಿದ್ದಾರೆ. 99 ಲಕ್ಷ ಎಎಸ್‌ಡಿಡಿ ಮತಗಳ ಪೈಕಿ ಕನಿಷ್ಠ 9 ಲಕ್ಷ ಜನರನ್ನಾದರೂ ಕರೆತಂದು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.

Read Full Story

01:54 PM (IST) Oct 28

'ಝಣಝಣ ಕಾಂಚಾಣ' ಅದೆಷ್ಟೇ ಇದ್ದರೂ ಮನಸ್ಸಿಗೆ ನೆಮ್ಮದಿ ಇಲ್ಲವೇ? ಹೀಗೆ ಮಾಡಿ, ಹಣದ ಜೊತೆ ಶಾಂತಿಯೂ ಸಿಗುತ್ತೆ!

ಇಂದಿನ ವೇಗದ ಜೀವನದಲ್ಲಿ ದೈಹಿಕ ಆರೋಗ್ಯಕ್ಕೆ ನೀಡುವಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡುವುದು ಅಗತ್ಯ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಹಾರ, ವ್ಯಾಯಾಮ ಮತ್ತು ನಿದ್ರೆಯ ಬಗ್ಗೆ ಕಾಳಜಿ ವಹಿಸುವ ನಾವು, ಮನಸ್ಸಿನ ಆರೋಗ್ಯದ ಕಡೆಗೆ ಮಾತ್ರ ಕೆಲವೊಮ್ಮೆ ನಿರ್ಲಕ್ಷ್ಯ ತೋರುತ್ತೇವೆ. ಹಾಗಿದ್ದರೆ ಏನು ಮಾಡಬೇಕು?

Read Full Story

01:47 PM (IST) Oct 28

Bengaluru - ನ.15ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ, 7.5KM ಪಿಂಕ್ ಲೈನ್ ಮೆಟ್ರೋ ಮಾರ್ಗ ಉದ್ಘಾಟನೆ

ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರವು ಬರ ಪರಿಹಾರ ನಿಧಿ ಬಿಡುಗಡೆ ಕುರಿತು ಪ್ರಧಾನಿಯವರೊಂದಿಗೆ ಚರ್ಚಿಸಲು ಸರ್ವಪಕ್ಷ ನಿಯೋಗದ ಭೇಟಿಗೆ ಸಮಯಾವಕಾಶ ಕೇಳಲಿದೆ. ಜೊತೆಗೆ ಇತ್ತೀಚಿನ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆಯೂ ನಾಯಕರು ಪ್ರತಿಕ್ರಿಯಿಸಿದ್ದಾರೆ.
Read Full Story

01:33 PM (IST) Oct 28

ರೇಣುಕಾಸ್ವಾಮಿ ಕೇಸ್‌ನಲ್ಲಿ ಮಹತ್ವದ ತಿರುವು - ನ್ಯಾಯಪೀಠದ ಮುಂದೆ ನಿಂತು ದರ್ಶನ್ ಗುರುತಿಸದ ಪ್ರಮುಖ ಸಾಕ್ಷಿ!

ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ವೇಳೆ ಪಟ್ಟಣಗೆರೆ ಶೆಡ್‌ನ ಉದ್ಯೋಗಿ ಪುನೀತ್ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದಾನೆ. ತಾನು ಯಾವುದೇ ಆರೋಪಿಗಳನ್ನು ನೋಡಿಲ್ಲ ಎಂದು ಹೇಳುವ ಮೂಲಕ ತನಿಖಾ ತಂಡಕ್ಕೆ ಶಾಕ್ ಕೊಟ್ಟಿದ್ದಾನೆ.

Read Full Story

01:33 PM (IST) Oct 28

ಕರ್ಣನ ಜನ್ಮರಹಸ್ಯದ ಕೊನೆ ಹಂತ; ತಾರಾಳ ಕುತಂತ್ರಕ್ಕೆ ಇನ್ನಿಲ್ಲ ಶಕ್ತಿ, ಅಮ್ಮ-ಮಗನ ಮಿಲನ

ಕರ್ಣನ ಜನ್ಮರಹಸ್ಯದ ಕಥೆಯಲ್ಲಿ ಇದೀಗ ರಮೇಶ್ ಮತ್ತು ಭುವನೇಶ್ವರಿ ಮುಖಾಮುಖಿಯಾಗಿದ್ದಾರೆ. ತಾರಾಳ ಕುತಂತ್ರದಿಂದ ರಮೇಶ್ ಮೇಲೆ ದ್ವೇಷ ಸಾಧಿಸುತ್ತಿರುವ ಭುವನೇಶ್ವರಿಗೆ ಸತ್ಯ ತಿಳಿಯಲಿದೆಯೇ ಎಂಬ ಕುತೂಹಲ ಮೂಡಿದೆ. ಕರ್ಣನಿಗೆ ತಾಯಿಯ ಪ್ರೀತಿ ಸಿಗುತ್ತದಾ ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.
Read Full Story

01:30 PM (IST) Oct 28

ಜಗತ್ತಿನ ಮುಂದೆ ಕನ್ನಡದ ಶಕ್ತಿ ಪ್ರದರ್ಶಿಸಿದ ಯಶ್‌; ‘ರಾಮಾಯಣ’ ಹಾಲಿವುಡ್ ಪ್ರೀಮಿಯರ್‌ನಲ್ಲಿ ರಾಕಿಂಗ್ ಸ್ಟಾರ್ ಭಾಷಣ ವೈರಲ್!

ಲಾಸ್ ಏಂಜಲೀಸ್‌ನಲ್ಲಿ ನಡೆದ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಪ್ರೀಮಿಯರ್‌ನಲ್ಲಿ ನಟ ಯಶ್ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು. ಕೇವಲ ನಟನಾಗಿರದೆ ನಿರ್ಮಾಪಕನಾಗಿಯೂ ಈ ಚಿತ್ರದಲ್ಲಿ ಪಾಲುದಾರರಾಗಿರುವ ಅವರು, ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಆಶಯ ವ್ಯಕ್ತಪಡಿಸಿದ್ದಾರೆ. ನವೆಂಬರ್ 5ರಂದು ಈ ಬೃಹತ್ ಸಿನಿಮಾ ಬಿಡುಗಡೆಯಾಗಲಿದೆ.
Read Full Story

01:25 PM (IST) Oct 28

ವಿಧಾನಪರಿಷತ್ ಚುನಾವಣೇಲಿ ಕಾಂಗ್ರೆಸ್ ಮುಖಭಂಗಕ್ಕೆ ಬೋಸರಾಜು ಹೇಳಿಕೆ ಸಂಚಲನ! ಕೊಪ್ಪಳ ಕಾಂಗ್ರೆಸ್‌ನಲ್ಲಿ ಬಿಕೆ ಹರಿಪ್ರಸಾದ್ ಫೋಟೋವೇ ಮಾಯ!

Karnataka MLC election results: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬೆನ್ನಲ್ಲೇ ಕೊಪ್ಪಳದಲ್ಲಿ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿದೆ. ಸಿದ್ದರಾಮಯ್ಯ ಮೇಲಿನ ಸ್ಟಿಂಗ್ ಆಪರೇಷನ್ ಬಗ್ಗೆ ಎನ್‌ಎಸ್ ಬೋಸರಾಜು ತನಿಖೆಗೆ ಆಗ್ರಹ., ಬ್ಯಾಲೆಟ್ ಪೇಪರ್ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

Read Full Story

01:20 PM (IST) Oct 28

ಮೊದಲ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿಗೆ ಕ್ಲೀನ್ ಸ್ವೀಪ್, SIR ಹೋರಾಟ ನಡುವೆ ಕಾಂಗ್ರೆಸ್ ಮಕಾಡೆ ಮಲಗಿದ್ದೇಕೆ?

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕೂಟ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದೆ. ರಾಹುಲ್ ಗಾಂಧಿಯ ಎಸ್ಐರ್ ಹೋರಾಟ, ಇವಿಎಂ ಬೇಡ ಬ್ಯಾಲೆಟ್ ಪೇಪರ್ ಬೇಕು ಆಗ್ರಹ ಸೇರಿ ಕಾಂಗ್ರೆಸ್ ಎತ್ತಿದ ಪ್ರಮುಖ ಹೋರಾಟಕ್ಕೆ ಪ್ರಬುದ್ಧ ಮತದಾರರು ಸೊಪ್ಪು ಹಾಕಲಿಲ್ಲವೇ? ಮುಂದಿನ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿನಾ?

Read Full Story

11:59 AM (IST) Oct 28

ಅಬುಧಾಬಿ ಲಾಟ್ರಿ, ಕನ್ನಡಿಗರಿಗೆ ಒಲಿದ ಅದೃಷ್ಟ; 200 ಗ್ರಾಂ ಚಿನ್ನ ಗೆದ್ದ ಆಫೀಸ್‌ ಬಾಯ್‌

ಉಡುಪಿ ಮೂಲದ ಅರುಣ್ ಕೃಷ್ಣಪ್ಪ ಮತ್ತು ಬೆಂಗಳೂರಿನ ಸದಾತುಲ್ಲಾ ಅವರು ಅಬುಧಾಬಿಯ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ 25 ಲಕ್ಷ ರೂ. ಮೌಲ್ಯದ ಚಿನ್ನ ಗೆದ್ದಿದ್ದಾರೆ. ಇದರ ಜೊತೆಗೆ ಉಡುಪಿ ರೈಲ್ವೆ ಯಾತ್ರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಮೃತ್ ಯೋಜನೆ ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು.
Read Full Story

11:53 AM (IST) Oct 28

ತಮಿಳುನಾಡು ನಿಷೇಧ, ಬೆಂಗಳೂರು ಬ್ಲೂಲೈನ್ ಮೆಟ್ರೋ ಕಾಮಗಾರಿ ಮತ್ತಷ್ಟು ತಡ! ಏರ್‌ಪೋರ್ಟ್ ಸಂಪರ್ಕ ಕಥೆಯೇನು?

ತಮಿಳುನಾಡು ಸರ್ಕಾರವು ನಿರ್ಮಾಣ ಸಾಮಗ್ರಿಗಳ ರಫ್ತನ್ನು ನಿಷೇಧಿಸಿರುವುದರಿಂದ ಬೆಂಗಳೂರಿನ ನಮ್ಮ ಮೆಟ್ರೋ ಬ್ಲೂ ಲೈನ್ ಕಾಮಗಾರಿಗೆ ತೀವ್ರ ಹಿನ್ನಡೆಯಾಗಿದೆ. ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಕಾಮಗಾರಿಗಳು ನಿಲ್ಲಿಸುವ ಹಂತಕ್ಕೆ ತಲುಪಿದ್ದು, ಕಲ್ಲಿನ ಬೆಲೆ ದ್ವಿಗುಣಗೊಂಡಿದೆ. ಇದರಿಂದಾಗಿ ಬೆಂಗಳೂರಿನ ಸಿಲ್ಕ್ ಬೋರ್ಡ್‌ನಿಂದ ವಿಮಾನ ನಿಲ್ದಾಣದವರೆಗಿನ ಬ್ಲೂ ಲೈನ್ ಮೆಟ್ರೋ ಕಾಮಗಾರಿ ತೀವ್ರವಾಗಿ ವಿಳಂಬವಾಗಿದೆ.

Read Full Story

11:41 AM (IST) Oct 28

ಯಶಸ್ ಬಿಚ್ಚಿಟ್ಟ ರಹಸ್ಯ ಕೇಳಿ ಗಗನ್ ಕಣ್ಣೀರು, ತಾಂಡವ್ ಶಾಕ್; ಏಕಾಂಗಿಯಾದ ವಿವಿಐಪಿ?

ಬಿಗ್‌ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಮತ್ತು ಯಶಸ್ ಕೃಷ್ಣನ್ ನಡುವೆ ಭಾರೀ ವಾಕ್ಸಮರ ನಡೆದಿದೆ. ಟಾಸ್ಕ್ ಒಂದರಲ್ಲಿ ಯಶಸ್ ಆಡಿದ ಕಟು ಮಾತುಗಳಿಂದ ಗಗನ್ ಭಾವುಕರಾಗಿದ್ದಾರೆ. ಆಪ್ತ ಗೆಳೆಯ ತಾಂಡವ್ ರಾಮ್ ಕೂಡ ದೂರವಾಗಿದ್ದು, ಗಗನ್ ಮನೆಯಲ್ಲಿ ಏಕಾಂಗಿಯಾದಂತೆ ಕಾಣುತ್ತಿದ್ದಾರೆ.
Read Full Story

11:30 AM (IST) Oct 28

Tumakuru - 'ಸೋಮಣ್ಣ' ರೌದ್ರಾವತಾರ ಬೆನ್ನಲ್ಲೇ, ಕರಿಬಸವಸ್ವಾಮಿ ಮಠದ ಹೆಣ್ಣಾನೆ ‘ಲಕ್ಷ್ಮಿ’ಗೆ ಅರಣ್ಯ ಇಲಾಖೆ ನಿರ್ಬಂಧ

ತುಮಕೂರಿನ ಹೊರಪೇಟೆ ಮಠದ ಆನೆ 'ಲಕ್ಷ್ಮಿ'ಯ ನಿರ್ವಹಣೆ ಕುರಿತು ಅರಣ್ಯ ಇಲಾಖೆ ವಿಧಿಸಿರುವ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಆರ್‌ಟಿಐ ಮೂಲಕ ಬಹಿರಂಗಪಡಿಸಲಾಗಿದೆ. ಮತ್ತೊಂದೆಡೆ, ನೆಲಮಂಗಲದ ಬೊಮ್ಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈದಾಹಿಟ್ಟು ಸಾಗಿಸುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ.
Read Full Story

11:25 AM (IST) Oct 28

KPSC ಬಳಿಕ ಈಗ KEA ಪರೀಕ್ಷೆಯಲ್ಲೂ ಅಕ್ರಮ ಅನುಮಾನ, ಅಂಕ ವ್ಯತ್ಯಾಸ ಬಗ್ಗೆ ಅಭ್ಯರ್ಥಿಗಳ ಪ್ರಶ್ನೆ

ಕರ್ನಾಟಕದಲ್ಲಿ ಇದೀಗ ಒಂದೊಂದೆ ಪರೀಕ್ಷಾ ಅಕ್ರಮಗಳು ಹೊರಬರುತ್ತಿದೆ. KPSC ಪರೀಕ್ಷಾ ಅಕ್ರಮ ಕೋಲಾಹಲ ನಡುವೆ ಇದೀಗ KEA ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಹಲವು ದಾಖಲೆಗಳನ್ನು ನೀಡಲಾಗಿದೆ.

Read Full Story

More Trending News