WPL-2026 ಮಿನಿ ಹರಾಜಿನಲ್ಲಿ ಆರ್‍‌ಸಿಬಿ ತಂಡವು ಕರ್ನಾಟಕದ ಪ್ರತಿಭೆ ವೃಂದಾ ದಿನೇಶ್ ಅವರನ್ನು 10 ಲಕ್ಷ ರೂ.ಗೆ ಖರೀದಿಸಿದೆ. ಈ ವಿಚಾರ ತಿಳಿದು ಶ್ರೇಯಾಂಕಾ ಪಾಟೀಲ್ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ. ಇನ್ನು ಆರ್‍‌ಸಿಬಿ ಸೇರಿದ ಖುಷಿಯನ್ನು ವೃಂದಾ ದಿನೇಶ್ ಹಂಚಿಕೊಂಡಿದ್ದಾರೆ.

WPL-2026 ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ನಮ್ಮ ಆರ್‍‌ಸಿಬಿ ನಾಲ್ವರು ಆಟಗಾರರನ್ನು ಖರೀದಿಸಿದೆ. ವಿಶೇಷ ಅಂದ್ರೆ ಕರ್ನಾಟಕದ ಪ್ರತಿಭೆ ವೃಂದಾ ದಿನೇಶ್ ಅವರನ್ನು ಆರ್‍‌ಸಿಬಿ ಸೇರಿಸಿಕೊಡಿದೆ. 10 ಲಕ್ಷ ರೂಪಾಯಿಗೆ ಆರ್‍‌ಸಿಬಿ ವೃಂದಾ ದಿನೇಶ್ ಅವರನ್ನು ಖರೀದಿಸುತ್ತಿದ್ದಂತೆಯೇ ಶ್ರೇಯಾಂಕಾ ಪಾಟೀಲ್ ಕುಣಿದು ಕುಪ್ಪಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶ್ರೇಯಾಂಕಾ ಪಾಟೀಲ್ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ.

ಯಾರು ವೃಂದಾ ದಿನೇಶ್?

ವೃಂದಾ ದಿನೇಶ್ ಮೂಲತಃ ಬೆಂಗಳೂರಿನವರು. ದೇಸಿಯ ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ಇವರು, ಈ ಹಿಂದೆ ಡಬ್ಲ್ಯೂಪಿಎಲ್‌ನಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಇದೀಗ ಆರ್‍‌ಸಿಬಿ ಪರ ಆಡಲು ರೆಡ್‌ ಜೆರ್ಸಿ ತೊಡಲಿದ್ದಾರೆ. ವೃಂದಾ ದಿನೇಶ್ ಬಲಗೈ ಟಾಪ್-ಆರ್ಡರ್ ಬ್ಯಾಟ್ಸ್‌ಮನ್ ಮತ್ತು ಸಾಂದರ್ಭಿಕ ಲೆಗ್-ಸ್ಪಿನ್ನರ್ ಕೂಡ ಹೌದು. ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಬ್ಯಾಟಿಂಗ್ ಮಾಡುವಲ್ಲಿ ನಿಸ್ಸಿಮರು.

ದೇಸಿಯ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ವೃಂದಾ.. ದೇಶದ ಅತ್ಯಂತ ಭರವಸೆಯ ಯುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಏಷ್ಯಾ ಕಪ್ ಸಮಯದಲ್ಲಿ ಇವರ ಹೆಸರು ಮುಂಚೂಣಿಗೆ ಬಂದಿತು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅವರಿಗೆ ಹೊಸ ವೇದಿಕೆಯನ್ನ ಕಲ್ಪಿಸಿಕೊಡಲಿದೆ. ಆರ್‍‌ಸಿಬಿ ಸೇರಿರೋದ್ರಿಂದ ವೃಂದಾಗೆ ಕನ್ನಡಿಗರ ಬೆಂಬಲ ಸಿಗಲಿದೆ.

2001ರಲ್ಲಿ ಜನಿಸಿದ್ದ ವೃಂದಾ ದಿನೇಶ್‌ಗೆ ಈಗ 25 ವರ್ಷ. ಬೆಂಗಳೂರಿನಲ್ಲಿ ಬೆಳೆದ ಹುಡಗಿ ವೃಂದಾ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಮೇಲೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿರುವ ವೃಂದಾ ತಮ್ಮ 12 ಮತ್ತು 13ನೇ ವಯಸ್ಸಿನಿಂದ ಕ್ರಿಕೆಟ್ ಆಟ ಆರಂಭಿಸಿ, ಇವತ್ತು ಮೊಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಅವರ ಕೂಡ ಮಾಜಿ ಕ್ರಿಕೆಟಿಗ. ದಿನೇಶ್ ಸುಬ್ಬಪ್ಪ ಅವರು ಕ್ರಿಕೆಟ್ ಪ್ಲೇಯರ್ ಆಗಿದ್ದು, ವೃಂದಾ ಅವರ ಆರಂಭಿಕ ಕ್ರಿಕೆಟ್ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಆರ್‍‌ಸಿಬಿ ಸೇರಿದ ಖುಷಿಯಲ್ಲಿ ವೃಂದಾ ಹೇಳಿದ್ದೇನು?

ನಿಜ ಹೇಳಬೇಕು ಅಂದರೆ ನಾನು ನಾಳಿನ ಪಂದ್ಯಕ್ಕಾಗಿ ಟೀಂ ಮೀಟಿಂಗ್ ನಡೆಯುತ್ತಿತ್ತು. ಊಟ ಮುಗಿಸಿ ನಾನು ಜಿಯೋ ಹಾಟ್‌ಸ್ಟಾರ್ ನೋಡುತ್ತಿದ್ದಾಗ ನನ್ನ ನಂಬರ್ ಬಂತು. ಆಗ ನಾನು ತುಂಬಾ ಎಕ್ಸೈಟ್ ಆದೆ. ನನ್ನ ಪಕ್ಕದಲ್ಲಿದ್ದ ಹುಡುಗಿಯರೆಲ್ಲ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರು. ನಿಜಕ್ಕೂ ನನಗೆ ತುಂಬಾ ಸಂತೋಷ ಆಯಿತು. ತಂಡ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದಿದ್ದಾರೆ. ಇನ್ನು ಕಳೆದ WPLನಲ್ಲಿ ಯುಪಿ ವಾರಿಯರ್ಸ್‌ ಪರ ವೃಂದಾ 10 ಪಂದ್ಯಗಳನ್ನ ಆಡಿದ್ದರು. ಈ ವೇಳೆ 9 ಇನ್ನಿಂಗ್ಸ್‌ನಲ್ಲಿ 102 ರನ್‌ಗಳಿಸಿದ್ದರು. 86.44 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರ ಅತ್ಯಧಿಕ ರನ್ 33 ಆಗಿದೆ.

Scroll to load tweet…

Scroll to load tweet…