ಬೆಂಗಳೂರು: ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ದೊರೆಯದ್ದರಿಂದ ರೈತರು ಕಂಗಾಲಾ ಗಿದ್ದು, ಗೊಬ್ಬರಕ್ಕಾಗಿ ಕೃಷಿ ಚಟುವಟಿಕೆ ಬಿಟ್ಟು ಅಂಗಡಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಈ ಬಾರಿ ಉತ್ತಮವಾಗಿ ಸುರಿಯುತ್ತಿರುವ ನಡುವೆ ರಾಜ್ಯದಲ್ಲಿ ಬೆಳೆಗಳಿಗೆ ಅಗತ್ಯವಾದ ಯೂರಿಯಾ ರಸಗೊಬ್ಬರದ ಅಭಾವ ಕೂಡ ಮುಂದುವರಿದಿದೆ. ಯೂರಿಯಾಗಾಗಿ ರಾಜ್ಯದ ವಿವಿಧೆಡೆ ರೈತರು ಮುಗಿಬೀಳುತ್ತಿದ್ದು, ಶನಿವಾರವೂ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಇದರ ನಡುವೆ, ಕೊಪ್ಪಳ ಜಿಲ್ಲೆಯಲ್ಲಿ ರೈತನೊಬ್ಬ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ದಾವಣಗೆರೆ ಜಿಲ್ಲೆಯ ಜಗಳೂರು, ಚಿತ್ರದುರ್ಗ, ಗದಗ ಜಿಲ್ಲೆಯ ನರಗುಂದ ಸೇರಿ ಅನೇಕ ಕಡೆ ಗೊಬ್ಬರದ ಅಂಗಡಿಗಳ ಮುಂದೆ ಹನುಮನ ಬಾಲದಂತೆ ಸರದಿ ಕಂಡುಬಂದಿದೆ. ಇನ್ನೂ ಕೆಲವು ಕಡೆ ಪೊಲೀಸ್ ಭದ್ರತೆಯಲ್ಲಿ ಗೊಬ್ಬರ ವಿತರಿಸಲಾಗಿದೆ.ಗದಗ ಜಿಲ್ಲೆ ಲಕ್ಷ್ಮಶ್ವರದಲ್ಲಿ ರೈತರು ಚಳಿ, ಮಳೆ ಲೆಕ್ಕಿಸದೆ ಗೊಬ್ಬರದ ಅಂಗಡಿಗಳ ಮುಂದೆ ರಾತ್ರಿಯಿಡೀ ಟ್ರ್ಯಾಕ್ಟರ್‌ನಲ್ಲಿ ವಾಸ್ತವ್ಯ ಹೂಡಿ ಮುಂಜಾನೆವರೆಗೆ ಸರದಿಯಲ್ಲಿ ನಿಂತ ರೈತರಿಗೆ ಕೇವಲ 2 ಚೀಲ ಮಾತ್ರ ಗೊಬ್ಬರ ಸಿಕ್ಕಿದೆ.

11:17 PM (IST) Jul 27
ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಪ್ರಥಮ್ ಮತ್ತು ರಕ್ಷಕ್ ಬುಲೆಟ್ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ರಕ್ಷಕ್ ಬುಲೆಟ್ ವಿರುದ್ಧದ ಆರೋಪಗಳು ಮತ್ತು ಪ್ರಥಮ್‌ನ ಜೀವ ಬೆದರಿಕೆ ಆರೋಪಗಳು ಚರ್ಚೆಗೆ ಗ್ರಾಸವಾಗಿವೆ.
10:32 PM (IST) Jul 27
09:32 PM (IST) Jul 27
09:00 PM (IST) Jul 27
ಕುಂದಾಪುರವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ವಿಮಾನ ನಿಲ್ದಾಣದ ಯೋಜನೆಯನ್ನು ಪರಿಗಣಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
08:09 PM (IST) Jul 27
ಮಲ್ಲಿಕಾರ್ಜುನ ಖರ್ಗೆ ಪುತ್ರ ಮಿಲಿಂದ್ ಖರ್ಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
07:52 PM (IST) Jul 27
ಬೆಳಗಾವಿಯಲ್ಲಿ ನಡೆದ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ದೇಶದ ಸಂವಿಧಾನ ಮತ್ತು ರಾಷ್ಟ್ರಧ್ವಜದ ಬಗ್ಗೆ ಗೌರವಿಸುವುದಿಲ್ಲ, ಕೇವಲ ತೋರಿಕೆಗೆ ದೇಶಭಕ್ತಿಯ ಮಾತನಾಡುತ್ತಾರೆ ಎಂದು ಆರೋಪಿಸಿದರು.
07:21 PM (IST) Jul 27
07:19 PM (IST) Jul 27
ಗೆಳೆಯನ ಸಾವಿನಿಂದ ಜಾಗೃತರಾದ ರಾಘವೇಂದ್ರ ಕುಮಾರ್, 'ಹೆಲ್ಮೆಟ್ ಮ್ಯಾನ್' ಎಂದೇ ಖ್ಯಾತರಾಗಿದ್ದಾರೆ. ತಮ್ಮ ಆಸ್ತಿಯನ್ನೇ ಮಾರಿ 70,000ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಜಾಗೃತಿಗಾಗಿ ದೇಶಾದ್ಯಂತ ಸಂಚರಿಸುತ್ತಿರುವ ರಾಘವೇಂದ್ರ, ಹೆಲ್ಮೆಟ್ ಬ್ಯಾಂಕ್ ಸ್ಥಾಪಿಸುತ್ತಿದ್ದಾರೆ.
07:00 PM (IST) Jul 27
06:20 PM (IST) Jul 27
ಶಿವಮೊಗ್ಗದಲ್ಲಿ ಅಣ್ಣನ ಭೀಕರ ಕೊಲೆಯಾಗಿದ್ದು, ತಮ್ಮ ನಾಪತ್ತೆಯಾಗಿದ್ದಾನೆ. ರಾತ್ರಿ ಅಕ್ಕ-ಪಕ್ಕದಲ್ಲೇ ಮಲಗಿದ್ದ ಅಣ್ಣ-ತಮ್ಮಂದಿರ ಪೈಕಿ ಬೆಳಗ್ಗೆ ಅಣ್ಣ ಮಣಿಕಂಠನ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಮಣಿಕಂಠನ ಮೃತದೇಹದ ಬಳಿ ಕಲ್ಲು ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
05:56 PM (IST) Jul 27
05:18 PM (IST) Jul 27
ದೀಪಾವಳಿ ಹಬ್ಬಕ್ಕೆ ಮಾರುತಿ ಸುಜುಕಿ ಹೊಸ ಮಿಡ್‌ಸೈಜ್ ಎಸ್‌ಯುವಿ ಕಾರು ಬಿಡುಗಡೆ ಮಾಡುತ್ತಿದೆ. ಮಾರುತಿ ಬ್ರೆಜ್ಜಾ ಕಾರಿಗಿಂತ ದೊಡ್ಡದು, ಗ್ರ್ಯಾಂಡ್ ವಿಟಾರ ಕಾರಿಗಿಂತ ಚಿಕ್ಕದು, ಜೊತೆಗೆ ಕಡಿಮೆ ಬೆಲೆಯಲ್ಲಿ ಈ ಕಾರು ಬಿಡುಗಡೆಯಗುತ್ತಿದೆ.
05:06 PM (IST) Jul 27
ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳಿಂದ ದಾಳಿ ನಡೆದಿದೆ. ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, 15-20 ಜನರು ಮಾರಕಾಸ್ತ್ರಗಳೊಂದಿಗೆ ಪ್ರಥಮ್‌ರನ್ನು ಬೆದರಿಸಿದ್ದಾರೆ. ನಟ ಪ್ರಥಮ್ ಅವರ ಮುಂದೆ ಬುದ್ಧಿವಂತಿಕೆಯಿಂದ ತಲೆ ತಗ್ಗಿಸಿ ಹೊರಗೆ ಬಂದಿದ್ದಾರೆ.
05:04 PM (IST) Jul 27
ಇಂಗ್ಲೆಂಡ್‌ನಲ್ಲಿ ಒಂದು ಟೆಸ್ಟ್ ಸರಣಿಯಲ್ಲಿ 700 ರನ್ ಗಳಿಸಿದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಶುಭ್‌ಮನ್ ಗಿಲ್ ಪಾತ್ರರಾಗಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಹಾಗೂ ವಿರಾಟ್ ಕೊಹ್ಲಿ ದಾಖಲೆಗಳನ್ನು ಮುರಿದಿದ್ದಾರೆ.
04:47 PM (IST) Jul 27
ದಿಗ್ಗಜ ಕಂಪನಿಗಳ ಬಳಿಕ ಇದೀಗ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಉದ್ಯೋಗ ಕಡಿತ ಘೋಷಿಸಿದೆ. ಬರೋಬ್ಬರಿ 12,000 ಉದ್ಯೋಗ ಕಡಿತ ಮಾಡುತ್ತಿದೆ. ಈ ಕುರಿತು ಕಂಪನಿ ಸಿಇಒ ಹೇಳಿದ್ದಾರೆ.
03:58 PM (IST) Jul 27
ಸೌರವ್ಯೂಹದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇದು ಖಗೋಳಶಾಸ್ತ್ರಜ್ಞರ ಅಚ್ಚರಿಗೊಳಿಸಿದೆ. ನೆಪ್ಚೂನ್ ಗ್ರಹದ ಜೊತೆ ವಿಚಿತ್ರ ವಸ್ತುವೊಂದು ಡ್ಯಾನ್ಸ್ ಮಾಡುತ್ತಿರುವುದ ಪತ್ತೆಯಾಗಿದೆ.
03:42 PM (IST) Jul 27
ಕರ್ನಾಟಕದ ಕರಾವಳಿಯಲ್ಲಿ ಮತ್ತೊಂದು ದೈವದ ಪವಾಡ ಘಟನೆಯೊಂದು ನಡೆದಿದೆ. ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕಳ್ಳರ ಪೈಕಿ ಒಬ್ಬ ಕಳ್ಳ ಮೂರ್ಛೆ ಹೋಗಿ ಬಿದ್ದ ಘಟನೆ ನಡೆದಿದೆ. ಸ್ಥಳೀಯರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
03:29 PM (IST) Jul 27
ಬೆಂಗಳೂರಿನ ಎಂಪೈರ್ ರೆಸ್ಟೋರೆಂಟ್ ಒಂದರಲ್ಲಿ ಬಳಲಾಗ್ತಿರೋ ಚಿಕನ್ ಕಬಾಬ್ ಅಸುಕ್ಷಿತವಾಗಿರುವುದಾಗಿ ರಾಜ್ಯ ಆಹಾರ ಇಲಾಖೆ ನೋಟಿಸ್ ಜಾರಿ ಮಾಡಿದೆ. ವರದಿಯಲ್ಲಿ ಕಂಡು ಬಂದ ಸತ್ಯವೇನು?
03:24 PM (IST) Jul 27
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇದೀಗ ವಾಶಿಂಗ್ ಮಶಿನ್‌ನಲ್ಲೂೂ ಎಐ ತಂತ್ರಜ್ಞಾನದ ಬಳಸಿಕೊಳ್ಳಲಾಗಿದೆ. ಇದು ನೀರು ಶುದ್ಧೀಕರಿಸಿ ಬಟ್ಟೆ ತೊಳೆಯಲಿದೆ.ಬರೋಬ್ಬರಿ 20 ವರ್ಷ ವಾರೆಂಟಿ ನೀಡುತ್ತಿದೆ.
02:49 PM (IST) Jul 27
ಚಿತ್ರದುರ್ಗ ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತ ಯುವಕನನ್ನು ಆತನ ಅಕ್ಕ ಮತ್ತು ಭಾವ ಕೊಲೆಗೈದಿರುವ ಆಘಾತಕಾರಿ ಘಟನೆ ನಡೆದಿದೆ. ಇದೊಂದು ಮರ್ಯಾದಾ ಹತ್ಯೆಯಾಗಿದೆ. ಮೃತ ಯುವಕನ ಕತ್ತಿನ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
02:08 PM (IST) Jul 27
2026ರ ಜನವರಿ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಳ್ವಿಕೆ ಅಂತ್ಯಗೊಳ್ಳಲಿದೆ. ಕಾರಣ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ ಎಂದು ಖ್ಯಾತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.
02:02 PM (IST) Jul 27
01:22 PM (IST) Jul 27
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಮಹಿಳೆಯರ ಶವಗಳನ್ನು ಹೂತ ಪ್ರಕರಣದಲ್ಲಿ ಅನಾಮಿಕ ದೂರುದಾರನ ಹಿನ್ನೆಲೆ ಮತ್ತು ವೈಯಕ್ತಿಕ ಮಾಹಿತಿಯನ್ನು ಎಸ್‌ಐಟಿ ತೀವ್ರವಾಗಿ ಪರಿಶೀಲಿಸುತ್ತಿದೆ. ಲೈಂಗಿಕ ಕಿರುಕುಳದ ಆರೋಪ ಮತ್ತು ಕುಟುಂಬದೊಂದಿಗೆ ಧರ್ಮಸ್ಥಳದಿಂದ ಪಲಾಯನದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
01:06 PM (IST) Jul 27
ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ 5 ವರ್ಷದ ಮಗಳನ್ನು ಸ್ಕೂಟರ್ ಮೂಲಕ ಆಸ್ಪತ್ರೆಯಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಯದ್ವಾ ತದ್ವಾ BMW ಕಾರೊಂದು ಚಲಾಯಿಸಿದ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ 5 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.
12:25 PM (IST) Jul 27
ಜುಲೈ 27 ರಾಷ್ಟ್ರೀಯ ಸ್ಕಾಚ್ ಡೇ. ಕಾಲ ಯಾವುದೇ ಇರಲಿ, ಕೈಯಲ್ಲೊಂದು ಗ್ಲಾಸ್, ಒಂದೊಂದು ಗುಟುಕು ಹೀರುತ್ತಾ ಸ್ಕಾಚ್ ಸವಿ ಅನುಭವಿಸುವ ಮಂದಿ ಕಡಿಮೆಯೇನಿಲ್ಲ. ಅಷ್ಟಕ್ಕೂ ವಿಸ್ಕಿ ಸ್ಕಾಚ್ ಆಗಲ್ಲ ಯಾಕೆ? ಸ್ಕಾಚ್ ಇತಿಹಾಸವೇನು?
11:40 AM (IST) Jul 27
ಕ್ಲಿನಿಕ್ ಮಹಿಳಾ ರೆಸೆಪ್ಷನಿಸ್ಟ್ ಮೇಲೆ ರೋಗಿ ಸಂಬಂಧಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಬಾಲಿವುಡ್ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದಕ್ಕೂ ಮೊದಲಿನ ವಿಡಿಯೋ ಬಹಿರಂಗವಾಗಿದ್ದು, ಇದೀಗ ರೆಸೆಪ್ಷನಿಸ್ಟ್ ಮೇಲೂ ಕ್ರಮಕ್ಕೆ ಹಲವರು ಆಗ್ರಹಿಸಿದ್ದಾರೆ.
11:40 AM (IST) Jul 27
ಕನಕಪುರ ತಾಲೂಕಿನ ಸಾತನೂರು ಬಳಿ ಕಾಂಗ್ರೆಸ್ ಮುಖಂಡ ನಂಜೇಶ್‌ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ರಾಜಕೀಯ ಕಾರಣಗಳು ಹಾಗೂ ಜಮೀನು ವಿವಾದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
11:16 AM (IST) Jul 27
11:11 AM (IST) Jul 27
ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಅರ್ಥ ವ್ಯವಸ್ಥೆಯಲ್ಲಾದ ಕ್ರಾಂತಿಕಾರಿ ಸುಧಾರಣೆಗಳು, ಸುಗಮ ವ್ಯಾಪಾರ ಮತ್ತು ಪ್ರಧಾನಿಯವರ ಜಾಗತಿಕ ಸ್ಥಾನಮಾನವು ಭಾರತದಲ್ಲಿ ಸಾಮಾನ್ಯ ಜನರಿಗೂ ದೊಡ್ಡ ಅವಕಾಶ ಒಲಿಯಲು ಸಾಧ್ಯವಾಗಿದೆ. ಎಲ್ಲಿಯೂ ರಾಜಿಯಾಗದೇ ಜನರ ಹಿತಾಸಕ್ತಿಗೆ ಬದ್ಧವಾಗಿದೆ.
11:06 AM (IST) Jul 27
ಮಾನಸ ದೇವಿ ದೇಗುಲದಲ್ಲಿ ಏಕಾಏಕಿ ಸಾವಿರಾರು ಭಕ್ತರು ಸೇರಿದ ಕಾರಣ ಭೀಕರ ಕಾಲ್ತುಳಿತ ಸಂಭವಿಸಿದೆ. ಪವಿತ್ರ ಶ್ರಾವಣ ಮಾಸದ ವಿಶೇಷ ಪೂಜೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ವೇಳೆ ಕಾಲ್ತುಳಿತ ಸಂಭವಿಸಿ 6 ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.
10:43 AM (IST) Jul 27
ಟೇಕ್ಆಫ್‌ಗಾಗಿ ಬೋಯಿಂಗ್ ವಿಮಾನ ವೇಗವಾಗಿ ರನ್‌ವೇಯಲ್ಲಿ ಸಾಗುತ್ತಿದ್ದಂತೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ತುರ್ತು ನಿರ್ಗಮನದ ಮೂಲಕ ಪ್ರಯಾಣಿಕರು ಹೊರಕ್ಕೆ ಜಿಗಿದ ಘಟನೆ ನಡೆದಿದೆ.
10:32 AM (IST) Jul 27
ಚೌಡಿ ಮಾವಿನಮರದ ಹಣ್ಣು ಒಳ್ಳೆ ಈಶಾಡಿ ಹಣ್ಣಿನ ತರಹ ರುಚಿ ಇತ್ತು. ಮರವೋ ದೈತ್ಯಾಕಾರದಲ್ಲಿ ಬೆಳೆದು ರೆಂಬೆಕೊಂಬೆಗಳನ್ನು ಸುತ್ತ ಚಾಚಿತ್ತು.
09:52 AM (IST) Jul 27
ಮೂರು ನಾಲ್ಕು ದಶಕಗಳ ಹಿಂದೆ, ಮುಂಜಾನೆ ಎದ್ದು ಒಂದು ಗಂಟೆ ಪತ್ರಿಕೆಗಳನ್ನು ಓದಿ, ಒಂದೂವರೆ ಗಂಟೆ ವಾಕಿಂಗ್ ಮಾಡಿ, ಗೆಳೆಯರ ಜತೆಗೆ ಮಾತನಾಡಿ, ತರಕಾರಿ ತೆಗೆದುಕೊಂಡು ಮನೆಗೆ ಬರುತ್ತಿದ್ದ ಅನೇಕರನ್ನು ಬೆಂಗಳೂರಲ್ಲಿ ನೋಡಬಹುದಾಗಿತ್ತು.
09:36 AM (IST) Jul 27
ಆತ್ಮ*ಹತ್ಯೆ ಎಂಬಂತೆ ಬಿಂಬಿತವಾಗಿದ್ದ ಪ್ರಕರಣವೊಂದು ಮುಚ್ಚಳ ಇಲ್ಲದ ವಿಷದ ಬಾಟಲಿ ಹಾಗೂ ಕಾಣೆಯಾಗಿದ್ದ ಒಂದು ಚಪ್ಪಲಿಯಿಂದಾಗಿ ಕೊಲೆ ಎಂದು ದೃಢಪಟ್ಟಿರುವ ಕುತೂಹಲಕಾರಿ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
08:51 AM (IST) Jul 27
ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿ ಚಾಮರಾಜನಗರವು ಅರಿಶಿಣ ಉತ್ಪನ್ನಕ್ಕೆ ಆಯ್ಕೆಯಾಗಿತ್ತು. ಅದರಂತೆ ಅರಿಶಿಣ ಸಂಸ್ಕರಣೆಗೆ ತೊಡಗಿಸಿಕೊಂಡರು ಮೈಸೂರಿನ ಬಿ.ಎಸ್ ಭಾನುಪ್ರಸಾದ್.
08:31 AM (IST) Jul 27
ತನ್ನ ಹಳೆಯ ಬಾಯ್ ಫ್ರೆಂಡ್‌ನನ್ನು ಮಾತುಕತೆ ಸೋಗಿನಲ್ಲಿ ಕರೆಸಿಕೊಂಡು ಬಳಿಕ ಅಪಹರಿಸಿ 2.5 ಕೋಟಿ ರು. ವಸೂಲಿಗೆ ಯತ್ನಿಸಿದ್ದ ದುಬೈ ಟ್ರಾವೆಲ್ಸ್ ಏಜೆನ್ಸಿ ಉದ್ಯೋಗಿಯ ಮಾಜಿ ಪ್ರಿಯತಮೆಯ ನಾಲ್ವರು ಸಹಚರರು ಅಶೋಕ ನಗರ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾರೆ.
08:12 AM (IST) Jul 27
ರಾಜ್ ಬಿ.ಶೆಟ್ಟಿ ನಿರ್ಮಾಣ, ಜೆ.ಪಿ.ತುಮಿನಾಡ್ ನಿರ್ದೇಶನದ ‘ಸು ಫ್ರಂ ಸೋ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಕಮಾಲ್ ಮಾಡುತ್ತಿದೆ.