Published : Jun 26, 2026, 07:08 AM ISTUpdated : Jun 26, 2026, 09:01 PM IST

Karnataka News Live: Deepika Padukone-Indrajit Lankesh - 'ಐಶ್ವರ್ಯ' ಚಿತ್ರಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ? ರಹಸ್ಯ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

ಸಾರಾಂಶ

ಬೆಂಗಳೂರಲ್ಲಿ ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ತಿಂಗಳು ಹಲಸೂರಿನ ಕಾರ್ ಸ್ಟ್ರೀಟ್ ನಲ್ಲಿ ಜ್ಯುವೆಲ್ಲರಿ ಅಂಗಡಿಗೆ ಕನ್ನ ಹಾಕಿದ್ದ ಆರೋಪಿ ತೇಜು, ಬೆಳ್ಳಿ ಕದ್ದು ಪರಾರಿಯಾಗಿದ್ದ. ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲಕ ತೇಜುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪದೇ ಪದೇ ಕೈ ಕೊಡ್ತಿರುವ ನಮ್ಮ‌ ಮೆಟ್ರೋ, ಧರ್ಮಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ, ಅಬಕಾರಿ ಹೆಚ್ಚುವರಿ ಆಯುಕ್ತ ವೈ ಡಿ ಮಂಜುನಾಥ ನಿವಾಸದ ಮೇಲೆ ಇ ಡಿ ದಾಳಿ ಪ್ರಕರಣ, ರಾಜ್ಯ ಸರ್ಕಾರದ ಆಡಳಿ, ರಾಜ್ಯ ರಾಜಕಾರಣ ಸೇರಿದಂತೆ ಇಂದಿನ ಕ್ಷಣ ಕ್ಷಣದ ಸುದ್ದಿ ಲೈವ್ ಅಪ್‌ಡೇಟ್ ಇಲ್ಲಿದೆ.

Deepika Padukone Indrajit Lankesh

09:01 PM (IST) Jun 26

Deepika Padukone-Indrajit Lankesh - 'ಐಶ್ವರ್ಯ' ಚಿತ್ರಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ? ರಹಸ್ಯ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ದೀಪಿಕಾರನ್ನು ಭೇಟಿಯಾಗಲು ಇಂದ್ರಜಿತ್ ಲಂಕೇಶ್ ಮುಂಬೈಗೆ ಹೋದರು. ಆದರೆ ಆ ಭೇಟಿ ಆಗಿದ್ದು ಲಿಫ್ಟ್‌ನಲ್ಲಿ. ಅಲ್ಲಿ ನಡೆದ ಕೆಲವೇ ನಿಮಿಷಗಳ ಸಂಭಾಷಣೆ ದೀಪಿಕಾ ಬದುಕಿನ ದಿಕ್ಕನ್ನು ಬದಲಿಸಿತು ಎಂದರೆ ನಂಬಲೇಬೇಕು. ಹಾಗಿದ್ದರೆ ನಡೆದಿದ್ದು ಏನು?

Read Full Story

07:24 PM (IST) Jun 26

Konkan Railway ನೂತನ ಫುಟ್‌ ಓವರ್ ಬ್ರಿಡ್ಜ್‌ಗೆ ಟೆಂಡರ್‌, ಬದಲಾಗಲಿದೆ ಮೂಲ್ಕಿ ರೈಲು ನಿಲ್ದಾಣದ ಚಿತ್ರಣ!

ಮೂಲ್ಕಿ ರೈಲು ನಿಲ್ದಾಣವನ್ನು 5 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಹೊಸ ಪ್ಲಾಟ್‌ಫಾರ್ಮ್, ಫುಟ್ ಓವರ್ ಬ್ರಿಡ್ಜ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಸೇರಿದ್ದು, ಸಂಸದ ಬ್ರಿಜೇಶ್ ಚೌಟ ಈ ಕುರಿತು ಮಾಹಿತಿ ನೀಡಿದ್ದಾರೆ.
Read Full Story

06:49 PM (IST) Jun 26

ವಿವಾಹಿತ ಪುತ್ರಿಯೂ ಅನುಕಂಪದ ನೇಮಕಾತಿಗೆ ಅರ್ಹಳು - ಮಹತ್ವದ ತೀರ್ಪಲ್ಲಿ ಹೈಕೋರ್ಟ್​ ಹೇಳಿದ್ದೇನು

ಅವಲಂಬಿತ ವಿವಾಹಿತ ಮಗಳಿಗೆ ಸಹಾನುಭೂತಿಯ ಆಧಾರದ ಮೇಲೆ ನೇಮಕಾತಿ ನೀಡುವುದು ಕಾನೂನುಬದ್ಧ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 'ಕುಟುಂಬ'ದ ವ್ಯಾಖ್ಯಾನದಲ್ಲಿ ವಿವಾಹಿತ ಹೆಣ್ಣುಮಕ್ಕಳನ್ನು ಸೇರಿಸುವ ತಿದ್ದುಪಡಿಯು ಹಿಂದಿನಿಂದಲೂ ಜಾರಿಯಲ್ಲಿದೆ ಮತ್ತು ತಾಯಿ ಪಿಂಚಣಿ ಪಡೆಯುತ್ತಿರುವುದು ನೇಮಕಾತಿ ನಿರಾಕರಿಸಲು ಕಾರಣವಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
Read Full Story

06:48 PM (IST) Jun 26

ಅಮೆರಿಕವನ್ನೇ ನಡುಗಿಸಿದ ಬೆಂಗಳೂರು ಮೂಲದ ವಕೀಲ ವಿನೋದ್ ದೊಡ್ಡಮನಿ - ವಲಸೆ ವಂಚನೆ, 255000 ಡಾಲರ್ ದಂಡ!

ಬೆಂಗಳೂರಿನಲ್ಲಿ ಓದಿ ಅಮೆರಿಕದಲ್ಲಿ ಖ್ಯಾತ ವಕೀಲರಾಗಿದ್ದ ವಿನೋದ್ ದೊಡ್ಡಮನಿ ವಿರುದ್ಧ ವಲಸೆ ವಂಚನೆ ಆರೋಪ ಕೇಳಿಬಂದಿದೆ. ಭಾರತೀಯರ ಪರವಾಗಿ ನಕಲಿ ಆಶ್ರಯ ಅರ್ಜಿಗಳನ್ನು ಸಲ್ಲಿಸಿದ ಕಾರಣಕ್ಕೆ ಅಮೆರಿಕ ಸರ್ಕಾರವು ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 2.14 ಕೋಟಿ ರೂ.ಗಳ ಬೃಹತ್ ದಂಡ ವಿಧಿಸಲು ಮುಂದಾಗಿದೆ.
Read Full Story

06:12 PM (IST) Jun 26

Pawan Kalyan - DCM ಡ್ಯೂಟಿ ಮಧ್ಯೆಯೇ 'OG 2' ಅನೌನ್ಸ್; ಓಜಸ್ ಗಂಭೀರನ ಜಪಾನೀಸ್ ಸೀಕ್ರೆಟ್ ಏನು?

ಪವನ್ ಕಲ್ಯಾಣ್ ತಮ್ಮ ರಾಜಕೀಯ ಬದ್ಧತೆಯ ನಡುವೆಯೇ ಸಿನಿಮಾ ಬದ್ಧತೆಯನ್ನೂ ಕಾಪಾಡಿಕೊಂಡು ಬರುತ್ತಿದ್ದಾರೆ. ಭೂಗತ ಲೋಕದ 'ಹಂಗ್ರಿ ಚೀತಾ' ಜಪಾನ್‌ನಿಂದ ಹಾರಿ ಬರಲು ರೆಡಿಯಾಗುತ್ತಿದೆ. 'OG 2' ಕೇವಲ ಒಂದು ಸಿನಿಮಾವಲ್ಲ, ಇದು ಪವರ್ ಸ್ಟಾರ್ ಅಭಿಮಾನಿಗಳ ಪಾಲಿಗೆ ಹಬ್ಬದೂಟ! 

Read Full Story

05:47 PM (IST) Jun 26

ಬೆಳ್ಳಿತೆರೆ ಕನಸು ನನಸಾಯ್ತು; ಪ್ರೇಮಕಾವ್ಯ ಧಾರಾವಾಹಿ ನಟಿಯ Love Seasons Movie ಟ್ರೇಲರ್‌ ರಿಲೀಸ್

Love Seasons Kannada Movie: ಪ್ರೇಮಕಾವ್ಯ ಧಾರಾವಾಹಿಯಲ್ಲಿ ಸ್ನೇಹ ಪಾತ್ರ ಮಾಡುತ್ತಿರುವ ನಟಿ ಶ್ವೇತಾ ಈಗ ಬೆಳ್ಳಿತೆರೆಯತ್ತ ಗಮನ ಕೊಟ್ಟಿದ್ದಾರೆ. ಹೌದು, ಇವರ ‘ಲವ್‌ ಸೀಸನ್ಸ್’‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

05:46 PM (IST) Jun 26

ಮಹಿಳೆಯ ಚೈನ್​ ತಂದ ಆಪತ್ತು - ಸ್ಟಾಪ್​ ಆಗೋಯ್ತು ನಮ್ಮ ಮೆಟ್ರೊ- ಲಕ್ಷಾಂತರ ಪ್ರಯಾಣಿಕರ ಪರದಾಟ

ಬೆಂಗಳೂರಿನ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ಇತ್ತೀಚೆಗೆ ಉಂಟಾದ ವ್ಯತ್ಯಯಕ್ಕೆ ತಾಂತ್ರಿಕ ದೋಷ ಕಾರಣವೆಂದು ಭಾವಿಸಲಾಗಿತ್ತು. ಆದರೆ, ತನಿಖೆಯ ನಂತರ ಮಹಿಳೆಯೊಬ್ಬರ ಲೋಹದ ಸರ ರೈಲಿನ ಬಾಗಿಲಿಗೆ ಸಿಲುಕಿದ್ದೇ ಈ ವಿಳಂಬಕ್ಕೆ ಕಾರಣವೆಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ಈ ಘಟನೆಯಿಂದಾಗಿ ಸಂಜೆ ವೇಳೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
Read Full Story

04:40 PM (IST) Jun 26

Bengalurina Aa Ondu Ghatane - ಯುಟ್ಯೂಬ್‌ನಲ್ಲೇ ರಿಲೀಸ್‌ ಆದ 'ಬೆಂಗಳೂರಿನ ಆ ಒಂದು ಘಟನೆ' ವೆಬ್‌ ಸಿರೀಸ್‌

Bengalurina Aa Ondu Ghatane:  ‘ಬೆಂಗಳೂರಿನ ಆ ಒಂದು ಘಟನೆ’ ಯುಟ್ಯೂಬ್‌ನಲ್ಲಿ ರಿಲೀಸ್‌ ಆಗಲು ರೆಡಿಯಾಗಿದೆ. ನಮ್ಮ ಕುಡ್ಲದ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಇದೀಗ ನಿರ್ಮಾಣವಾಗಿದೆ. ಇದೊಂದು ಕ್ರೈಂ ಥ್ರಿಲ್ಲರ್ ವೆಬ್ ಸರಣಿಯಾಗಿದೆ. ಇದರಲ್ಲಿ ನಾಲ್ಕು ಸಂಚಿಕೆಗಳಿವೆ.

 

Read Full Story

04:19 PM (IST) Jun 26

Telugu Saregamapa Audition - ಬೆಂಗಳೂರಿನಲ್ಲಿ ತೆಲುಗು ಸರೆಗಮಪ ರಿಯಾಲಿಟಿ ಶೋ ಆಡಿಷನ್;‌ ಯಾವಾಗ? ಎಲ್ಲಿ?

Telugu Saregamapa Show: ಜನಪ್ರಿಯ ಮನರಂಜನಾ ವಾಹಿನಿ 'ಜೀ ತೆಲುಗು', ತನ್ನ ಅತ್ಯಂತ ಯಶಸ್ವಿ ಸಿಂಗಿಂಗ್ ರಿಯಾಲಿಟಿ ಶೋ 'ಸ ರಿ ಗ ಮ ಪ'ದ ಹೊಸ ಸೀಸನ್‌ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಇದರ ಆಡಿಷನ್‌ ನಡೆಯಲಿದೆ. 

 

Read Full Story

03:54 PM (IST) Jun 26

Small Screen - ಈ ವಾರದ TRP ಲೆಕ್ಕಾಚಾರ ಉಲ್ಟಾ ಪಲ್ಟಾ; ಜೀ ಕನ್ನಡಕ್ಕೆ ಭಾರೀ ನಡುಕ ಹುಟ್ಟಿಸಿದ ಕಲರ್ಸ್ ಕನ್ನಡ ಈ ಧಾರಾವಾಹಿಗಳು!

ಯಾವಾಗಲೂ ಟಾಪ್ 5 ಸೀರಿಯಲ್‌ಗಳ ಪಟ್ಟಿಯಲ್ಲಿ ಜೀ ಕನ್ನಡದ ನಾಲ್ಕೈದು ಧಾರಾವಾಹಿಗಳಿರುತ್ತಿದ್ದವು. ಆದರೆ ಈ ವಾರ ಚಿತ್ರಣ ಉಲ್ಟಾ ಪಲ್ಟಾ ಆಗಿದೆ. 'ಅಣ್ಣಯ್ಯ' ಧಾರಾವಾಹಿ 6.6 ರೇಟಿಂಗ್ ಪಡೆದು ಇಡೀ ಕರ್ನಾಟಕದ ನಂಬರ್ 1 ಸೀರಿಯಲ್ ಆಗಿ ಹೊರಹೊಮ್ಮುವ ಮೂಲಕ ಜೀ ಕನ್ನಡದ ಮರ್ಯಾದೆ ಉಳಿಸಿದೆ. ಆದರೆ, ಮಿಕ್ಕಂತೆ ಕಲರ್ಸ್ ಕನ್ನಡ ಧಾರಾವಾಹಿಗಳು ಮಿಂಚಿವೆ!

Read Full Story

03:20 PM (IST) Jun 26

ನಿಂತು ಹೋಗಿದ್ದ ಬಂಡೀಪುರ-ನಾಗರಹೊಳೆ ಜಂಗಲ್ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭಕ್ಕೆ ರಾಜ್ಯ ಸರ್ಕಾರ ಘೋಷಣೆ

ಕರ್ನಾಟಕ ಸರ್ಕಾರವು, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಆರಂಭಿಸಲು ಅನುಮೋದನೆ ನೀಡಿದೆ. ಈ ನಿರ್ಧಾರವು ಪರಿಸರ ಸಂರಕ್ಷಣೆಯೊಂದಿಗೆ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಸ್ಥಳೀಯ ಆರ್ಥಿಕತೆಗೆ ಚೈತನ್ಯ ನೀಡುವ ಗುರಿ ಹೊಂದಿದೆ.
Read Full Story

02:11 PM (IST) Jun 26

ಮೈಮೇಲೆ ಖಾಕಿ ಇದೆ ಎಂದು ಏನು ಬೇಕಾದರೂ ಮಾಡುತ್ತೀರಾ? ತಪ್ಪು ಮಾಡದವನ ಬಂಧನಕ್ಕೆ ಪೊಲೀಸರಿಗೆ ಹೈಕೋರ್ಟ್ ತರಾಟೆ

ಮದುವೆ ವಂಚನೆ ಆರೋಪ ಎದುರಿಸುತ್ತಿರುವ ಎಸ್‌ಐ ಬದಲಿಗೆ ಅವರ ಅಮಾಯಕ ಸಹೋದರನನ್ನು ಬಂಧಿಸಿದ ಚಿತ್ರದುರ್ಗ ಮಹಿಳಾ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾನೂನುಬಾಹಿರವಾಗಿ ನಡೆದುಕೊಂಡ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದು, ಪೊಲೀಸರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದೆ.
Read Full Story

01:27 PM (IST) Jun 26

ನಾಳೆ ವಿಶೇಷ ದಿನ - ಲೈವ್​ ಬಂದು ಕಿಚ್ಚ ಸುದೀಪ್​ ಕೊಟ್ರು ಬಿಗ್​ ನ್ಯೂಸ್​- ಜನರಲ್ಲಿ ಹೀಗೊಂದು ಮನವಿ

ಬೆಂಗಳೂರನ್ನು ಮತ್ತೊಮ್ಮೆ ಹಸಿರು ನಗರವನ್ನಾಗಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) #GreenBengaluruByBDA ಎಂಬ ವಿಶೇಷ ಹಸಿರು ಆಂದೋಲನವನ್ನು ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುವ ಈ ಯೋಜನೆಯಡಿ 15 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದ್ದು, ನಟ ಸುದೀಪ್ ಈ ಕಾರ್ಯಕ್ಕೆ ಬೆಂಬಲ ಸೂಚಿಸಿದ್ದಾರೆ.  

Read Full Story

12:43 PM (IST) Jun 26

Mantralaya - ಮಂತ್ರಾಲಯ ಮಠದ ಹುಂಡಿ ಎಣಿಕೆ - ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ! ಚಿನ್ನ ಬೆಳ್ಳಿ ಎಷ್ಟು?

Mantalaya hundi collection: ರಾಯಚೂರಿನ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಜೂನ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನೀಡಿದ ಚಿನ್ನ ಬೆಳ್ಳಿಯಷ್ಟು ತಿಳಿಯಿರಿ.

Read Full Story

12:40 PM (IST) Jun 26

Krishi Thapanda-Vaishak Death - ಕೃಷಿ ತಾಪಂಡ ಸುತ್ತ ಅನುಮಾನದ ಹುತ್ತ; ತಕ್ಷಣವೇ ನಡೆಯಲಿದೆಯಾ ನಟಿಯ ವಿಚಾರಣೆ?

ಗ್ಲಾಮರ್ ಪ್ರಪಂಚದ ಹಿಂದೆ ಇಂತಹದೊಂದು ಕರಾಳ ಕಥೆ ಅಡಗಿದೆ ಎಂಬುದು ಈಗ ಸಾಬೀತಾಗಿದೆ. ಸ್ಯಾಂಡಲ್‌ವುಡ್ ಈ ನಟಿಗೆ ಕಾದಿದೆಯಾ ಕಂಟಕ? ಅಥವಾ ವಿಚಾರಣೆಯಲ್ಲಿ ಈ ಸಾವಿನ ರಹಸ್ಯ ಬಯಲಾಗುತ್ತಾ? ಸದ್ಯಕ್ಕೆ ಪೊಲೀಸರ ವಿಚಾರಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Read Full Story

12:31 PM (IST) Jun 26

ಹಿರಿಯರು, ವಿಧವೆಯರು, ವಿಕಲಾಂಗರ ಪಿಂಚಣಿ ಯೋಜನೆ - 91ಸಾವಿರ ಖಾತೆ ಶಾಶ್ವತ ಬಂದ್, 16 ಲಕ್ಷ ಮಂದಿಗೆ ತಾತ್ಕಾಲಿಕ ಸ್ಥಗಿತ!

ರಾಜ್ಯ ಸರ್ಕಾರವು ನಕಲಿ ದಾಖಲೆಗಳನ್ನು ನೀಡಿ ಪಿಂಚಣಿ ಪಡೆಯುತ್ತಿದ್ದ 91,152 ಅನರ್ಹರ ಖಾತೆಗಳನ್ನು ರದ್ದುಗೊಳಿಸಿದೆ. ಅಲ್ಲದೆ, ಸೂಕ್ತ ದಾಖಲೆಗಳಿಲ್ಲದ ಕಾರಣ 16.42 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ದಾಖಲೆಗಳನ್ನು ಸರಿಪಡಿಸಿಕೊಳ್ಳಲು 30 ದಿನಗಳ ಕಾಲಾವಕಾಶ ನೀಡಿದೆ.
Read Full Story

11:48 AM (IST) Jun 26

Ambareesh - 'ಅವನು ಯಾವ ಸೀಮೆ ಹೀರೋರೀ' ಎಂದು ಗೇಲಿ; ಅದೇ ಸಿನಿಮಾದಿಂದ 'ರೆಬೆಲ್ ಸ್ಟಾರ್' ಪಟ್ಟ ಪಡೆದ ನಟ!

ಅಲ್ಲಿಯವರೆಗೆ ಕೇವಲ ಖಳನಾಯಕನಾಗಿ ಮಾತ್ರ ಗುರುತಿಸಿಕೊಂಡಿದ್ದ ಅಂಬರೀಶ್ ಅವರನ್ನು ಹೀರೋ ಆಗಿ ಮಾಡುತ್ತಿರುವುದನ್ನು ಯಾರೊಬ್ಬರೂ ಒಪ್ಪಿರಲಿಲ್ಲ. "ಅವನು ಯಾವ ಸೀಮೆ ಹೀರೋರೀ? ಒಬ್ಬ ವಿಲನ್ ಅನ್ನು ಕರೆದುಕೊಂಡು ಬಂದು ನೀವು ಹೀರೋ ಮಾಡ್ತಾ ಇದ್ದೀರಾ, ಇದು ಹೇಗೆ ಸಾಧ್ಯ?" ಎಂದು ಎಲ್ಲರೂ ಗೇಲಿ ಮಾಡಿದ್ದರು.

Read Full Story

11:19 AM (IST) Jun 26

ನಾನೇ ಸೀರೆ ಕಟ್‌ ಮಾಡಿ ವೈಶಾಕ್ ಮೃತದೇಹ ಇಳಿಸಿದ್ದೆ, ಪೊಲೀಸರ ತನಿಖೆ ವೇಳೆ ನಟಿ ಕೃಷಿ ತಾಪಂಡ ಹೇಳಿಕೆ

ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಸ್ನೇಹಿತ ವೈಶಾಖ್ ಸಾವಿನ ಪ್ರಕರಣದಲ್ಲಿ ಪೊಲೀಸರು ನಟಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ರಾತ್ರಿ ತಾನು ಮನೆಯಲ್ಲಿ ಇರಲಿಲ್ಲವೆಂದೂ, ವಾಪಸ್ ಬಂದಾಗ ವೈಶಾಖ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಗಿ ಕೃಷಿ ತಿಳಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಮೃತನ ಕುಟುಂಬಸ್ಥರು ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ.
Read Full Story

10:06 AM (IST) Jun 26

ಪವಿತ್ರ ಕ್ಷೇತ್ರದಲ್ಲಿ ಹೇಳುತ್ತಿದ್ದೇನೆ, ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ

ಈ ಪವಿತ್ರ ಕ್ಷೇತ್ರದಲ್ಲಿ ನಿಂತು ಮಾತನಾಡುತ್ತಿದ್ದೇನೆ. ಅಡ್ಡಮತದಾನ ಬಳಿಕ ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿದ್ದೇನು?

Read Full Story

09:39 AM (IST) Jun 26

ಸವಾರರ ಸುರಕ್ಷತೆ ಖಚಿತಪಡಿಸಲು ಕಾರಿನಿಂದ ಇಳಿದಿದ್ದ ದರ್ಶನ್ ಪುತ್ರ, ಅಪಘಾತ ಕೇಸ್‌ಗೆ ವಿಜಯಲಕ್ಷ್ಮಿ ಸ್ಪಷ್ಟನೆ

ದರ್ಶನ್ ಪುತ್ರ ವಿನೀಶ್ ಕಾರು ಚಲಾಯಿಸಿಲ್ಲ. ಬೈಕ್ ಸವಾರರ ತಪ್ಪಿನಿಂದ ಸಣ್ಣ ಅಪಘಾತವಾಗಿದೆ ಎಂದು ದರ್ಶನ್ ಪುತ್ರ ವಿನೀಶ್ ಕಾರು ಅಫಘಾತ ಪ್ರಕರಣ ಕುರಿತು ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ವಿಜಯಲಕ್ಷ್ಮಿ ಹೇಳಿದ್ದೇನು?

 

Read Full Story

08:55 AM (IST) Jun 26

ತುರ್ತು ಸೇವೆ 108 ಆ್ಯಂಬುಲೆನ್ಸ್, 104 ಆರೋಗ್ಯ ಸಹಾಯವಾಣಿ ಕಮಾಂಡ್ ಸೆಂಟರ್ ತಾತ್ಕಾಲಿಕ ಸ್ಥಗಿತ

ನಿನ್ನೆ ರಾತ್ರಿಯಿಂದ ತುರ್ತು ಸೇವೆಗಳ ಸಹಾಯವಾಣಿ ಸ್ಥಗಿತಗೊಂಡಿದೆ. ಆ್ಯಂಬುಲೆನ್ಸ್ (108), ಆರೋಗ್ಯ ಸಹಾಯವಾಣಿ (104) ಎರಡೂ ಸೇವೆಗಳು ವ್ಯತ್ಯಯವಾಗಿದೆ. ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡಿದೆ.

Read Full Story

08:44 AM (IST) Jun 26

Bengaluru Airbound - ಬೆಂಗ್ಳೂರು ನೆರವಿಂದ ಆಂಧ್ರದಲ್ಲಿ ಡ್ರೋನ್‌ ಡೆಲಿವರಿ ನೆಟ್‌ವರ್ಕ್‌!

ಆ.ಪ್ರದೇಶ ಸರ್ಕಾರವು ಬೆಂಗಳೂರಿನ 'ಏರ್‌ಬೌಂಡ್‌' ಸ್ಟಾರ್ಟಪ್ ಜೊತೆಗೂಡಿ ವಿಶ್ವದ ಅತಿದೊಡ್ಡ ಡ್ರೋನ್ ಸರಕು ವಿತರಣಾ ಜಾಲ ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಡಿ, ರಾಜ್ಯಾದ್ಯಂತ ದಿನಕ್ಕೆ ಕನಿಷ್ಠ 10,000 ಡ್ರೋನ್‌ಗಳ ಮೂಲಕ ಔಷಧಿ, ಅಗತ್ಯ ವಸ್ತುಗಳ ತಲುಪಿಸುವ ಗುರಿ.

Read Full Story

08:39 AM (IST) Jun 26

ಧರ್ಮಸ್ಥಳಕ್ಕೆ ವಿಜಯೇಂದ್ರ ಭೇಟಿ, ಹೆಸರೆತ್ತಿದ ಪ್ರಾಯಶ್ಚಿತ್ತಕ್ಕೆ ಮಂಜುನಾಥನ ದರ್ಶನ ಪಡೆದ್ರಾ ಬಿಜೆಪಿ ರಾಜ್ಯಾಧ್ಯಕ್ಷ?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ. ಈ ವೇಳೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಣೆ ಪ್ರಮಾಣ ವಿಚಾರದಲ್ಲಿ ಧರ್ಮಸ್ಥಳ ಹೆಸರೆತ್ತಿದ ಕಾರಣಕ್ಕಾಗಿ ಮಂಜುನಾಥನ ದರ್ಶನಕ್ಕೆ ಆಗಮಿಸಿದ್ರಾ?

Read Full Story

08:08 AM (IST) Jun 26

ರಸ್ತೆ ಅಪಘಾತದಲ್ಲಿ ಮೃತನ 2ನೇ ಪತ್ನಿಗೂ ಸಮಾನ ಪರಿಹಾರ ಕೊಡಬೇಕು - ಹೈಕೋರ್ಟ್ ಮಹತ್ವದ ಆದೇಶ

ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಎರಡನೇ ಪತ್ನಿ ಕೂಡ ಪರಿಹಾರಕ್ಕೆ ಅರ್ಹಳು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೃತನ ಆದಾಯವನ್ನು ಅವಲಂಬಿಸಿದ ಎಲ್ಲರೂ ಪರಿಹಾರ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂದು ಹೇಳಿದೆ. ಏನಿದು ಪ್ರಕರಣ? ತಿಳಿಯಿರಿ.

Read Full Story

07:42 AM (IST) Jun 26

ಪದೇ ಪದೇ ಕೈಕೊಡುತ್ತಿದೆ ನಮ್ಮ ಮೆಟ್ರೋ, ಮೂರು ವರ್ಷದಲ್ಲಿ 21 ಬಾರಿ ಎಡವಟ್ಟಿಗೆ ಬೇಸತ್ತ ಪ್ರಯಾಣಿಕರು

ನಮ್ಮ ಮೆಟ್ರೋ ಪದೇ ಪದೆ ಕೈಕೊಡುತ್ತಿದೆ. ದೇಶದಲ್ಲಿ 2ನೇ ಅತೀ ದೊಡ್ಡ ಮೆಟ್ರೋ ಜಾಲ ಹೊಂದಿರು ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಯಾವಾಗ ಮೆಟ್ರೋ ಓಡುತ್ತೆ, ಯಾವಾಗ ನಿಲ್ಲುತ್ತೆ ಅನ್ನೋದೆ ಗೊತ್ತಾಗದಂತಾಗಿದೆ.

Read Full Story

07:40 AM (IST) Jun 26

Vokkaligara Sangha - ನೇಮಕಾತೀಲಿ ಭ್ರಷ್ಟಾಚಾರ ನಡೆದಿದೆ ಅಂತ ಆರೋಪ ಮಾಡಿದವರಿಂದಲೇ ಹಲವು ಅಕ್ರಮ - ಒಕ್ಕಲಿಗರ ಸಂಘ

ಒಕ್ಕಲಿಗರ ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ, ಉಮಾಪತಿ ಶ್ರೀನಿವಾಸ ಗೌಡ ಅವರ ಅಕ್ರಮದ ಆರೋಪಗಳಿಗೆ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ. ಆರೋಪಗಳು ನಡೆದಾಗ ಅವರೇ ಅಧಿಕಾರದಲ್ಲಿದ್ರು , ಉಮಾಪತಿ ಅವರು 50 ಲಕ್ಷ ಕಿಕ್‌ಬ್ಯಾಕ್ ಪಡೆದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

Read Full Story

07:08 AM (IST) Jun 26

ಆರೋಪಿಯಿಂದ 5 ಕೆಜಿ ಬೆಳ್ಳಿ ವಶಕ್ಕೆ

ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ತೇಜು 10 ಕೆಜಿ ಪೈಕಿ 5 ಕೆಜಿ ಬೆಳ್ಳಿ ಮಾರಾಟ ಮಾಡಿದ್ದ. ಪೊಲೀಸರು ತೇಜು ಅರೆಸ್ಟ್ ಮಾಡಿ ಬಾಕಿ ಉಳಿದ 5 ಕೆಜಿ ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


More Trending News