Mar 24, 2025, 10:24 PM IST
Karnataka News Live: ನಮ್ಮ ವಿನಯ್ ಕುಮಾರ್ ಹುಡುಕಿ ತೆಗೆದ ಮಲಪ್ಪುರಂ ಗೋಲ್ಡ್ ಕಥೆ..!


ಸಚಿವ ಸಂಪುಟ ಪುನರ್‌ರಚನೆ ಹಾಗೂ ಪರಿಷತ್‌ನ ಖಾಲಿ ಸ್ಥಾನಗಳ ನೇಮಕದ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಭಾನುವಾರ ಮಹತ್ವದ ಚರ್ಚೆ ನಡೆಸಿದ್ದು, ಅಂತಿಮ ಹಂತದ ಚರ್ಚೆಗೆ ಮುಂದಿನ ವಾರ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಇದೇ ವೇಳೆ ಸಚಿವ ಸಂಪುಟ ಪುನಾರಚನೆ ವಿಚಾರವಾಗಿಯೂ ಚರ್ಚಿಸಿದ್ದು ಏಪ್ರಿಲ್ ತಿಂಗಳಿನಲ್ಲಿ ಪುನರ್‌ರಚನೆ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚೆಯಾಗಿದೆ. ಸಂಪುಟದಿಂದ ಐದಾರು ಮಂದಿ ಸಚಿವರನ್ನು ಆ ಜಾಗಕ್ಕೆ ಬೇರೆಯವರನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚೆಯಾಗಿದೆ.
10:24 PM
ನಮ್ಮ ವಿನಯ್ ಕುಮಾರ್ ಹುಡುಕಿ ತೆಗೆದ ಮಲಪ್ಪುರಂ ಗೋಲ್ಡ್ ಕಥೆ..!
ಸಾಮಾನ್ಯ ಆಟೋ ಡ್ರೈವರ್ ಮಗ ವಿಘ್ನೇಶ್ ಪುಥೂರ್ ಮುಂಬೈ ಇಂಡಿಯನ್ಸ್ ತಂಡ ಸೇರಲು ಕಾರಣರಾದವರು ವಿನಯ್ ಕುಮಾರ್. ಕೇರಳ T20 ಲೀಗ್’ನಲ್ಲಿ ಆಡುತ್ತಿದ್ದ ವಿಘ್ನೇಶನ ಪ್ರತಿಭೆಯನ್ನು ಗುರುತಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕರೆತಂದರು.
ಪೂರ್ತಿ ಓದಿ8:53 PM
ತಂದೆಯಾಗಿ ಬಡ್ತಿ ಪಡೆದ ಕ್ರಿಕೆಟಿಗ ಕೆ ಎಲ್ ರಾಹುಲ್; ಅಥಿಯಾ ಶೆಟ್ಟಿಯಿಂದ ತಾತನಾದ ಸುನೀಲ್ ಶೆಟ್ಟಿ!
ಕ್ರಿಕೆಟರ್ ಕೆ ಎಲ್ ರಾಹುಲ್, ಅಥಿಯಾ ಶೆಟ್ಟಿ ಅವರು ಪಾಲಕರಾಗಿ ಬಡ್ತಿ ಪಡೆದಿದ್ದಾರೆ.
ಪೂರ್ತಿ ಓದಿ8:07 PM
ಬೆಂಗಳೂರಿನ ಎಲ್ಲ ನಿವಾಸಿಗಳ ಮನೆ ಬಾಗಿಲಿಗೆ ಉಚಿತ ಆಸ್ತಿ ಪತ್ರ ವಿತರಣೆ: ಡಿ.ಕೆ. ಶಿವಕುಮಾರ್
ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಉಚಿತ ಖಾತೆ ನೀಡುವ ವಿನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಏಪ್ರಿಲ್ ತಿಂಗಳಿನಿಂದ ಈ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ತೆರಿಗೆ ವ್ಯಾಪ್ತಿಗೆ ಬಾರದ ಮನೆಗಳನ್ನು ಗುರುತಿಸಿ ತೆರಿಗೆ ವಸೂಲಿ ಮಾಡಲಾಗುವುದು.
ಪೂರ್ತಿ ಓದಿ7:47 PM
ಸಂಸದರ ವೇತನ, ದಿನಭತ್ಯೆ, ಪಿಂಚಣಿ ಏರಿಸಿದ ಕೇಂದ್ರ ಸರ್ಕಾರ, ಈಗ ವರ್ಷಕ್ಕೆ 15 ಲಕ್ಷ ಸ್ಯಾಲರಿ!
ಕೇಂದ್ರ ಸರ್ಕಾರವು ಸಂಸದರ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಹೆಚ್ಚಿಸಿದೆ. 2023ರ ಏಪ್ರಿಲ್ 1 ರಿಂದ ಪರಿಷ್ಕೃತ ವೇತನಗಳು ಜಾರಿಗೆ ಬರಲಿವೆ. ಕರ್ನಾಟಕ ಸರ್ಕಾರವು ಸಹ ಶಾಸಕರ ವೇತನವನ್ನು ಹೆಚ್ಚಿಸಿದೆ.
ಪೂರ್ತಿ ಓದಿ7:37 PM
ಚಿನ್ನ vs ವಜ್ರ : ಹೂಡಿಕೆ ಮಾಡುವುದಕ್ಕೆ ಯಾವುದು ಉತ್ತಮ?
ಭಾರತದಲ್ಲಿ ಚಿನ್ನವು ಸಂಸ್ಕೃತಿಯ ಭಾಗವಾಗಿದೆ ಮತ್ತು ಸುಲಭವಾಗಿ ಹಣವನ್ನಾಗಿ ಪರಿವರ್ತಿಸಬಹುದಾದ ಹೂಡಿಕೆಯಾಗಿದೆ. ವಜ್ರಗಳಿಗೆ ಹೋಲಿಸಿದರೆ ಚಿನ್ನದ ಆಭರಣಗಳು ಮೌಲ್ಯವನ್ನು ಉಳಿಸಿಕೊಳ್ಳುತ್ತವೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಹೊಂದಿವೆ.
ಪೂರ್ತಿ ಓದಿ7:17 PM
ಗೋಲ್ಡ್ ಲೋನ್ vs ಪರ್ಸನಲ್ ಲೋನ್: ತುರ್ತು ಕಿರುಸಾಲ ಪಡೆಯಲು ಯಾವುದು ಉತ್ತಮ?
ಆರ್ಥಿಕ ತುರ್ತು ಸಂದರ್ಭಗಳಲ್ಲಿ ಕಿರುಸಾಲ ಪಡೆಯಲು ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲಗಳು ಲಭ್ಯವಿವೆ. ಆದರೆ, ಯಾವ ಸಾಲ ಪಡೆದರೆ ಸೂಕ್ತ ಎಂಬ ಗೊಂದಲಗಳಿಗೆ ಇಲ್ಲಿದೆ ನೋಡಿ ಪರಿಹಾರ..
ಪೂರ್ತಿ ಓದಿ6:30 PM
ಜ್ಞಾಪಕಶಕ್ತಿ ಕುಂದುತ್ತಿದೆಯೇ? ಈಗಲೇ ಈ ಅಭ್ಯಾಸಗಳನ್ನು ಬಿಟ್ಟುಬಿಡಿ!
ಇತ್ತೀಚಿನ ದಿನಗಳಲ್ಲಿ ಜ್ಞಾಪಕಶಕ್ತಿ ಕುಂದುವುದು ಸಾಮಾನ್ಯವಾಗಿದೆ. ಕೆಲವು ಅಭ್ಯಾಸಗಳು ಇದಕ್ಕೆ ಕಾರಣವಾಗಬಹುದು. ಅವುಗಳನ್ನು ಬಿಟ್ಟುಬಿಡುವುದು ಉತ್ತಮ.
ಪೂರ್ತಿ ಓದಿ6:15 PM
ಬೆಂಗಳೂರು ಉದ್ಯಮಿ ಲೋಕನಾಥ್ ಸಿಂಗ್ ಉದ್ಯಮಿ ಕೇಸ್‌ನಲ್ಲಿ ಟ್ವಿಸ್ಟ್; ಹೆಣ್ಣು ಕೊಟ್ಟ ಅತ್ತೆಯಿಂದಲೇ ಸ್ಕೆಚ್?
ಬೆಂಗಳೂರಿನ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣದಲ್ಲಿ ಅತ್ತೆ ಮತ್ತು ಹೆಂಡತಿಯೇ ಆರೋಪಿಗಳು ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹ ಮತ್ತು ಬೆದರಿಕೆ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂರ್ತಿ ಓದಿ5:53 PM
BCCI ಸೆಂಟ್ರಲ್ ಕಾಂಟ್ರ್ಯಾಕ್ಟ್ ಪ್ರಕಟ; ಮೊದಲ ಬಾರಿ ಕನ್ನಡತಿಗೆ ಸ್ಥಾನ!
ಭಾರತ ಮಹಿಳಾ ಕ್ರಿಕೆಟ್ ತಂಡದ ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪ್ರಕಟಗೊಂಡಿದೆ. ಹರ್ಮನ್‌ಪ್ರೀತ್, ಸ್ಮೃತಿ, ದೀಪ್ತಿ 'ಎ' ಗ್ರೇಡ್‌ನಲ್ಲಿದ್ದು, ಶ್ರೇಯಾಂಕಾ ಪಾಟೀಲ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಗ್ರೇಡ್‌ಗಳ ಆಧಾರದ ಮೇಲೆ ಆಟಗಾರ್ತಿಯರಿಗೆ ಸಂಭಾವನೆ ನಿಗದಿಪಡಿಸಲಾಗಿದೆ.
ಪೂರ್ತಿ ಓದಿ5:45 PM
ರಜತ್, ವಿನಯ್ ಗೌಡ ಪೊಲೀಸರ ವಶಕ್ಕೆ; ಮಚ್ಚು ಹಿಡಿದು ರೀಲ್ಸ್ ಹುಚ್ಚಾಟ ಮಾಡಿದ್ದ ಬಿಗ್ ಬಾಸ್ ಸ್ಪರ್ಧಿಗಳು!
ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಟ ಮಚ್ಚು ಹಿಡಿದು ರೀಲ್ಸ್ ಮಾಡಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದಾರೆ. ಬಸವೇಶ್ವರ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೂರ್ತಿ ಓದಿ3:42 PM
ರಾಜ್ಯದ 5 ಮಹಾನಗರ ಪಾಲಿಕೆಗಳಿಗೆ ಈ ವರ್ಷವೇ ಚುನಾವಣೆ: ಚುನಾವಣಾ ಆಯುಕ್ತ ಸಂಗ್ರೇಶಿ!
ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ನೀಡದಿದ್ದರೆ ಹೈಕೋರ್ಟ್ ಮೊರೆ ಹೋಗುವುದಾಗಿ ಚುನಾವಣಾ ಆಯೋಗದ ಆಯುಕ್ತರು ತಿಳಿಸಿದ್ದಾರೆ. ಹಳೆಯ ಮೀಸಲಾತಿ ಪಟ್ಟಿಯಂತೆ 2025ರಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ.
ಪೂರ್ತಿ ಓದಿ3:38 PM
ಸಿಎಸ್‌ಕೆಯನ್ನು ತಬ್ಬಿಬ್ಬು ಮಾಡಿದ ವಿಘ್ನೇಶ್ ಆಟೋ ಚಾಲಕನ ಮಗ! ಕೇರಳದ ಮುತ್ತು ಈಗ ಮುಂಬೈ ಸ್ವತ್ತು!
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ವಿಘ್ನೇಶ್ ಪುತೂರ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಈ ಯುವ ಸ್ಪಿನ್ನರ್‌ನ ರೋಚಕ ಕಥೆ ಇಲ್ಲಿದೆ.
ಪೂರ್ತಿ ಓದಿ3:14 PM
ಭಾರತದ ಟಾಪ್ 10 ಶ್ರೀಮಂತ ನಟರು ಯಾರು? ಅವರ ಆಸ್ತಿ ವಿವರ ಇಲ್ಲಿದೆ; ಇದರಲ್ಲಿ ಕನ್ನಡ ನಟರು ಯಾರಿದ್ದಾರೆ?
ಸಿನಿಮಾ ಉದ್ಯಮವು ಲಾಭದಾಯಕವಾಗಿದ್ದು, ಭಾರತದ ಶ್ರೀಮಂತ ನಟರ ಆಸ್ತಿಯ ವಿವರ ಇಲ್ಲಿದೆ. ಶಾರುಖ್ ಖಾನ್ ನಂ. 1 ಹಾಗೂ ರಜನಿಕಾಂತ್ 10ನೇ ಸ್ಥಾನದಲ್ಲಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಕನ್ನಡ ನಟರು ಯಾರಿದ್ದಾರೆ? ನೀವೇ ನೋಡಿ..
ಪೂರ್ತಿ ಓದಿ2:26 PM
AI ತಂತ್ರಜ್ಞಾನದಿಂದ ಮಹಿಳೆಯರಿಗೆ ಅನ್ಯಾಯ: ಡಾ। ಹುಲಿಕುಂಟೆ ಮೂರ್ತಿ
AI ಮತ್ತು ಚಾಟ್‌ಬಾಟ್‌ಗಳಿಂದ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಡಾ। ಹುಲಿಕುಂಟೆ ಮೂರ್ತಿ ಕರೆ ನೀಡಿದರು. ಲೇಖಕಿಯರ ಸಮ್ಮೇಳನದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಮಹಿಳಾ ಬರಹಗಳ ಕುರಿತು ಚರ್ಚಿಸಲಾಯಿತು.
ಪೂರ್ತಿ ಓದಿ2:11 PM
ಯುಗಾದಿ ಹಬ್ಬದಿಂದ 3 ದಿನ ಕಳ್ಳರ ಕಾಟ ಹೆಚ್ಚು: ಪೊಲೀಸ್ ಇಲಾಖೆಯ ಈ ಕುತೂಹಲದ ಪ್ರಕಟಣೆಯಲ್ಲಿ ಏನಿದೆ ನೋಡಿ!
ಯುಗಾದಿ ಹಬ್ಬದಿಂದ 3 ದಿನ ಕಳ್ಳರ ಕಾಟ ಹೆಚ್ಚಾಗಿರುತ್ತದೆ. ಇಂಥದ್ದೊಂದು ಪ್ರಕಟಣೆಯನ್ನು ಪೊಲೀಸ್ ಇಲಾಖೆ ಹೊರಡಿಸಿದೆ. ಏನಿದರ ವಿಶೇಷತೆ?
2:01 PM
ಸೆಲ್ಫಿ, ಸಿಂಗಲ್ ಫೋಟೋ ಅಂದರೆ ರಾಜಕಾರಣಿಗಳು ಬೆಚ್ಚಿ ಬೀಳೋದ್ಯಾಕೆ? ತಾವೇ ವಿಶ್ ಮಾಡಿಕೊಂಡ ಆಯುಕ್ತರು!
ಬೆಂಗಳೂರು ಪೊಲೀಸ್ ಆಯುಕ್ತರ ಸ್ವ-ವಿಶ್, ರಾಜಕಾರಣಿಗಳಿಗೆ ಹನಿ ಟ್ರ್ಯಾಪ್ ಭಯ, ಮತ್ತು ತೊಗರಿ ಬೆಳೆ ನಷ್ಟದಿಂದ ಕಂಗಾಲಾದ ರೈತರ ಪರಿಹಾರದ ಬೇಡಿಕೆ ಕುರಿತ ವರದಿ ಇದು.
ಪೂರ್ತಿ ಓದಿ1:35 PM
ಬೆಂಗಳೂರಿನಲ್ಲಿ ನಿಧಿ ಸಿಕ್ಕಿದೆ ಎಂದು ಮಣ್ಣಿನ ಇಟ್ಟಿಗೆಗೆ ಚಿನ್ನದ ಪಾಲಿಶ್ ಮಾಡಿ ಮಾರುತ್ತಿದ್ದ ವಂಚಕರ ಬಂಧನ!
ಬೆಂಗಳೂರಿನಲ್ಲಿ ಚಿನ್ನದ ಲೇಪಿತ ಇಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದ ಮೂವರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ. ರಾಜರ ಆಳ್ವಿಕೆಯ ಪ್ರದೇಶದಲ್ಲಿ ನಿಧಿ ಸಿಕ್ಕಿದೆ ಎಂದು ನಂಬಿಸಿ ವಂಚಿಸುತ್ತಿದ್ದರು. ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನಕಲಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಪೂರ್ತಿ ಓದಿ1:25 PM
ಬಾಂಗ್ಲಾದೇಶ ದಿಗ್ಗಜ ಕ್ರಿಕೆಟಿಗನಿಗೆ ಹಾರ್ಟ್ ಅಟ್ಯಾಕ್! ಆಸ್ಪತ್ರೆಗೆ ದೌಡು!
ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ತಮೀಮ್ ಇಕ್ಬಾಲ್‌ಗೆ ಹೃದಯಾಘಾತವಾಗಿದ್ದು, ಅವರನ್ನು ಢಾಕಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್‌ನಲ್ಲಿ ಆಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ.
ಪೂರ್ತಿ ಓದಿ1:19 PM
ಅವಳು ದೂರವಾದ ಮೇಲೆ ದೊಡ್ಡ ಕುಡುಕನಾಗಿದ್ದೆ, ಫುಲ್ ಬಾಟಲ್ ಕುಡೀತಿದ್ದೆ: ಅಂದಿನ ದಿನ ನೆನೆದ ಆಮೀರ್ ಖಾನ್
ಹಿಂದೊಮ್ಮೆ ಕುಡಿತದ ಚಟಿ ಅಂಟಿ ದೊಡ್ಡ ಕುಡುಕನಾಗಿದ್ದ ಬಗ್ಗೆ ನಟ ಆಮೀರ್ ಖಾನ್ ಮಾತನಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ನಟ ಹೇಳಿದ್ದೇನು?
1:15 PM
ಪ್ರೀತಿಗಿಂತ ಸ್ನೇಹವೇ ಬೆಸ್ಟ್ ಎಂದ ಮಕ್ಕಳು ಎಂದೆಂದಿಗೂ ಬೇರೆಯಾಗದಿರಲಿ; ಮನಗೆಲ್ಲುವ ವಿಡಿಯೋ ವೈರಲ್
ಕಾನ್ವೆಂಟ್ ಶಾಲೆಯ ಮಕ್ಕಳಾದ ನಿಷ್ಕಾ ಮತ್ತು ಕುನಾಲ್ ಅವರ ಮುದ್ದಾದ ಸ್ನೇಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಮ ವರ್ಷದ ಕೌಟುಂಬಿಕ ಹಿನ್ನೆಲೆಯವರಾಗಿದ್ದು, ಸಾಮಾನ್ಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಈ ಮಕ್ಕಳು ನಮಗೆ ಪ್ರೀತಿಗಿಂತ ಸ್ನೇಹವೇ ಮುಖ್ಯ ಎಂದು ಹೇಳಿಕೊಂಡಿದ್ದಾರೆ.
ಪೂರ್ತಿ ಓದಿ12:48 PM
'ಬೆಳಗಾವಿ ಬಂದ್ ಮಾಡೋ ತಾಕತ್ ಇರೋದು ನಮಗಷ್ಟೇ, ಕರ್ನಾಟಕ ಬಂದ್ ನೀರಸ ಪ್ರತಿಕ್ರಿಯೀ ಬೆನ್ನಲ್ಲೇ ಶಿವಸೇನೆ ಪೋಸ್ಟ್ ವೈರಲ್!
ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ವಿಫಲವಾದ ಬೆನ್ನಲ್ಲೇ, ಶಿವಸೇನೆಯ ಯುವ ಸೇನೆ ವಿವಾದಾತ್ಮಕ ಪೋಸ್ಟ್ ಹಾಕಿದೆ. ಬೆಳಗಾವಿ ಬಂದ್ ಮಾಡುವ ತಾಕತ್ತು ಮರಾಠಿಗರಿಗೆ ಮಾತ್ರ ಇದೆ ಎಂದು ಹೇಳಿಕೆ ನೀಡಿದೆ.
ಪೂರ್ತಿ ಓದಿ12:27 PM
ಪುಟ್ಟ ಮಗಳ ಮುಂದೆ ಮೊಬೈಲ್ ನೋಡಿದ ಬಿಗ್ ಬಾಸ್ ಧನರಾಜ್ ಆಚಾರ್; ಮುಂದೇನಾಯ್ತು ನೀವೇ ನೋಡಿ!
ಬಿಗ್ ಬಾಸ್ ಖ್ಯಾತಿಯ ಧನರಾಜ್ ಆಚಾರ್ ಮಗಳ ಮುಂದೆ ಮೊಬೈಲ್ ನೋಡಿದ್ದಕ್ಕೆ ಹೆಂಡತಿಯಿಂದ ಕ್ಲಾಸ್ ತಿಂದಿದ್ದಾರೆ. ನಂತರ ಮಗುವನ್ನು ಕ್ಯಾರಿ ಬ್ಯಾಗ್‌ನಲ್ಲಿ ಕೂರಿಸಿ ಮೊಬೈಲ್ ನೋಡುವ ಪ್ರಯತ್ನ ಮಾಡಿದ್ದು, ಈ ಹಾಸ್ಯಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ12:18 PM
ಕೇರಳ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ರಾಜೀವ್ ಚಂದ್ರಶೇಖರ್ ಅವರನ್ನು ಕೇರಳ ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಪ್ರಹ್ಲಾದ್ ಜೋಶಿ ತಿರುವನಂತಪುರದಲ್ಲಿ ನಡೆದ ಬಿಜೆಪಿ ರಾಜ್ಯ ಪರಿಷತ್ ಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದರು.ರಾಜೀವ್ ಚಂದ್ರಶೇಖರ್ ಅವರ ಆಯ್ಕೆ ಯುವಕರು ಮತ್ತು ವೃತ್ತಿಪರರನ್ನು ಆಕರ್ಷಿಸುವತ್ತ ಗಮನಹರಿಸುತ್ತದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ12:11 PM
ಬೆಂಗಳೂರು: ಒಂದೇ ದಿನದ ಮಳೆಗೆ 65 ಮರಗಳ ಬುಡಮೇಲು!
ಬೆಂಗಳೂರಿನಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದ 65 ಮರಗಳು ಧರೆಗುರುಳಿದ್ದು, 202 ಮರದ ರೆಂಬೆಗಳು ಮುರಿದು ಬಿದ್ದಿವೆ. ಮಳೆಯಿಂದಾಗಿ ತಮಿಳುನಾಡು ಮೂಲದ ಮಗುವೊಂದು ಮೃತಪಟ್ಟಿದ್ದು, ಕುಟುಂಬಕ್ಕೆ ಪರಿಹಾರ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಪೂರ್ತಿ ಓದಿ12:07 PM
ಕರ್ನಾಟಕ ಹನಿಟ್ರ್ಯಾಪ್: ಪಾಕ್‌ಗೆ ರಹಸ್ಯ ತಿಳಿಸಿ ದೇಶದ್ರೋಹ ಎಸೆದ ಭಾರತದ ಹನಿಟ್ರ್ಯಾಪ್ ಸುಂದರಿಯ ರಹಸ್ಯಗಳು!
ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಹಕಾರ ಸಚಿವರು 48 ನಾಯಕರ ಮೇಲೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಜಗತ್ತಿಗೆ ಹನಿಟ್ರ್ಯಾಪ್ ಪರಿಚಯಿಸಿದ ಮಾತಾಹರಿ ಮತ್ತು ಭಾರತದ ಮಾಧುರಿ ಗುಪ್ತಾ ಅವರ ರಹಸ್ಯ ಜೀವನದ ಬಗ್ಗೆ ಮಾಹಿತಿ ನೀಡಲಾಗಿದೆ.
ಪೂರ್ತಿ ಓದಿ11:56 AM
ಮುತಾಲಿಕ್‌ಗಿದ್ದ ಗೋವಾ ಪ್ರವೇಶ ನಿಷೇಧ 10 ವರ್ಷಗಳ ನಂತರ ತೆರವು
ಟ್ವಿಟರ್‌ನ ನೀಲಿ ಹಕ್ಕಿ ಲೋಗೋ 29 ಲಕ್ಷ ರು.ಗೆ ಹರಾಜಾಗಿದೆ. ಸಲ್ಮಾನ್ ಖಾನ್, ರಶ್ಮಿಕಾ ಜತೆಗಿನ ರೊಮ್ಯಾನ್ಸ್ ಬಗ್ಗೆ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ. ಮಸೀದಿ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಮಿತಿ ಮುಖ್ಯಸ್ಥ ಅಲಿ ಬಂಧನ.
ಪೂರ್ತಿ ಓದಿ11:50 AM
ಹುಸ್ಕೂರು ಮದ್ದೂರಮ್ಮ ಜಾತ್ರೆ 100 ರಥ ದುರಂತ: 'ಜಸ್ಟೀಸ್ ಫಾರ್ ಸೌಜನ್ಯ' ಫಲಕ ಪ್ರದರ್ಶನ ಕಾರಣವೇ?
ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ 100 ಅಡಿ ರಥ ಕುಸಿದು ಬಿದ್ದಿದ್ದು, ರಥದಲ್ಲಿ ಸೌಜನ್ಯ ಪರ ಫಲಕ ಪ್ರದರ್ಶಿಸಿದ್ದೇ ಕಾರಣವೆಂದು ಚರ್ಚೆಗಳು ನಡೆಯುತ್ತಿವೆ. ಸೌಜನ್ಯ ಪ್ರಕರಣದ ಹಿನ್ನೆಲೆ ಹಾಗೂ ರಥ ದುರಂತದ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ11:44 AM
ಜುವೆಲ್ಲರಿ ಅಂಗಡಿ ಮಾಲೀಕನಿಂದ 950 ಗ್ರಾಂ ಚಿನ್ನದ ಗಟ್ಟಿ ಪಡೆದು ವಂಚಿಸಿದ ಪಿಎಸ್‌ಐ ಸಸ್ಪೆಂಡ್
ಆಭರಣ ಅಂಗಡಿ ಮಾಲೀಕನಿಂದ ಚಿನ್ನ ಪಡೆದು ವಂಚಿಸಿದ ಆರೋಪದ ಮೇಲೆ ಪಿಎಸ್‌ಐ ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪೂರ್ತಿ ಓದಿ11:25 AM
ಧರ್ಮದ ಆಧಾರದಲ್ಲಿ ಮೀಸಲಿಗೆ ಅವಕಾಶವಿಲ್ಲ : ಆರ್‌ಎಸ್‌ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ
ಧರ್ಮ ಆಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಆರ್‌ಎಸ್‌ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ವಕ್ಫ್‌ನಿಂದ ರೈತರ ಭೂಮಿ ಒತ್ತುವರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಔರಂಗಜೇಬ್ ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದ್ದವರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೂರ್ತಿ ಓದಿ11:16 AM
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರ: ಮತ್ತೆ ಅಣ್ಣಾಮಲೈ ಮೇಲೆ ಡಿಕೆಶಿ ವಾಕ್ ಪ್ರಹಾರ
ತಮಿಳುನಾಡಿನಲ್ಲಿ ಕೇಂದ್ರದ ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ಮಾತನಾಡಿದ ಡಿಕೆಶಿ, ಅಣ್ಣಾಮಲೈ ಹೇಳಿಕೆಗೆ ಮಹತ್ವ ನೀಡಬೇಕಿಲ್ಲ ಎಂದಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಹೇಳಿಕೆ ಮುಖ್ಯವೆಂದು ತಿಳಿಸಿದ್ದಾರೆ.
ಪೂರ್ತಿ ಓದಿ11:11 AM
IPL 2025: ಶುಭಾರಂಭಕ್ಕೆ ಡೆಲ್ಲಿ vs ಲಖನೌ ಬಿಗ್ ಫೈಟ್!
ವಿಶಾಖಪಟ್ಟಣಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿದ್ದು, ಅಕ್ಷರ್ ಪಟೇಲ್ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ಲಖನೌ ತಂಡದ ನಾಯಕರಾಗಿದ್ದು, ಈ ಪಂದ್ಯ ಕುತೂಹಲ ಕೆರಳಿಸಿದೆ.
ಪೂರ್ತಿ ಓದಿ11:01 AM
'ಬುರ್ಖಾ ಧರಿಸಿದ್ರೆ ಸತ್ತ ಮೇಲೆ ಶವಕ್ಕೆ ಏನೂ ಆಗೋಲ್ಲ..' ಮಕ್ಕಳಿಗೆ ಶಾಲೆಯಲ್ಲೇ ವ್ಯವಸ್ಥಿತವಾಗಿ ಬ್ರೈನ್ ವಾಶ್? ವಿಡಿಯೋ ವೈರಲ್!
ಚಾಮರಾಜನಗರದ ಶಾಲೆಯೊಂದರಲ್ಲಿ ಚಿಕ್ಕ ಮಕ್ಕಳ ಬ್ರೈನ್ ವಾಶ್ ಮಾಡಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆಗಿದೆ. ಮಕ್ಕಳಲ್ಲಿ ಧರ್ಮಾಂಧತೆ ತುಂಬಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಪೂರ್ತಿ ಓದಿ10:41 AM
ಐಪಿಎಲ್‌ನಲ್ಲಿ ಸೊನ್ನೆ ಸುತ್ತುವುದರಲ್ಲೂ ರೋಹಿತ್ ಶರ್ಮಾ ಹೊಸ ದಾಖಲೆ!
ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರು ದಿನೇಶ್ ಕಾರ್ತಿಕ್ ದಾಖಲೆಯನ್ನು ಸರಿಗಟ್ಟಿದ್ದಾರೆ ಮತ್ತು ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಪೂರ್ತಿ ಓದಿ10:22 AM
ಗಂಡನ ಮೇಲಿನ ಸಿಟ್ಟಿಗೆ ಅಮೆರಿಕದಲ್ಲಿ ಕತ್ತು ಸೀಳಿ ಮಗನ ಕೊಂದ ಬೆಂಗಳೂರಿನ ವಿಚ್ಚೇದಿತ ಮಹಿಳೆ
ಭಾರತ ಮೂಲದ ಮಹಿಳೆಯೊಬ್ಬಳು ಮಗನನ್ನು ಕತ್ತು ಸೀಳಿ ಕೊಲೆ ಮಾಡಿದ್ದಾಳೆ.
ಪೂರ್ತಿ ಓದಿ9:49 AM
ಜಲ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ, 'ನಮ್ಮ ಪ್ಲಂಬರ್ ನಮ್ಮ ಹೀರೋ' ಸಂವಾದದಲ್ಲಿ ಜೈಸಲ್ಮೇರ್ ಮಹಾರಾಣಿ ಮಾತು
ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗವೆಂದು ರಾಸೇಶ್ವರಿ ರಾಜಲಕ್ಷ್ಮಿ ಹೇಳಿದರು. ಮಳೆ ನೀರು ಕೊಯ್ಲು ಅಳವಡಿಸಿಕೊಂಡರೆ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಎಸ್. ಎನ್.ಪಾಂಡೆ ಅಭಿಪ್ರಾಯಪಟ್ಟರು.
ಪೂರ್ತಿ ಓದಿ9:30 AM
ಚೊಚ್ಚಲ ಪಂದ್ಯದಲ್ಲೇ ಯುವ ಸ್ಪಿನ್ನರ್ ವಿಘ್ನೇಶ್ ಮಿಂಚು! ಧೋನಿ ಮನಗೆದ್ದ ಮುಂಬೈ ಇಂಡಿಯನ್ಸ್ ಆಟಗಾರ!
ಚೆನ್ನೈ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಯುವ ಆಟಗಾರ ವಿಘ್ನೇಶ್ ಪುತೂರ್ ಅವರ ಮಾರಕ ದಾಳಿಯು ಮುಂಬೈ ತಂಡಕ್ಕೆ ಸೋಲು ತಂದಿತು.
ಪೂರ್ತಿ ಓದಿ9:26 AM
ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಗುಣಮುಖರಾಗಿದ್ದು, 5 ವಾರಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಗೂ ಮುನ್ನ ಆಸ್ಪತ್ರೆಯ ಬಾಲ್ಕನಿಯಿಂದ ನೆರೆದಿದ್ದ ಜನರಿಗೆ ಅವರು ಧನ್ಯವಾದ ಸಲ್ಲಿಸಿದರು.
ಪೂರ್ತಿ ಓದಿ9:25 AM
ದೂರು ಬಂದ್ರೆ ಹನಿಟ್ರ್ಯಾಪ್ ತನಿಖೆ ನಡೆಸಿ : ಸಿಎಂಗೆ ಖರ್ಗೆ ಸೂಚನೆ! 48 ರಾಜಕಾರಣಿಗಳಿಗೆ ಬಲೆ ಹಾಕಿದ ಆ ಖತರ್ನಾಕ್ ಯಾರು?
Karnataka honeytrap row: ರಾಜ್ಯದಲ್ಲಿ ಹನಿಟ್ರ್ಯಾಪ್ ವಿವಾದದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಹನಿಟ್ರ್ಯಾಪ್ ದೂರು ಬಂದರೆ ತನಿಖೆ ನಡೆಸಿ ಎಂದು ಖರ್ಗೆ ಸಲಹೆ ನೀಡಿದ್ದಾರೆ.
ಪೂರ್ತಿ ಓದಿ9:06 AM
2019ರಲ್ಲಿ ಸಂಭವಿಸಿದ್ದ ಮೈಸೂರಿನ ವೈದ್ಯನ ಕೊಲೆ : ಕೇರಳದ ಮೂವರಿಗೆ ಶಿಕ್ಷೆ
2019ರಲ್ಲಿ ಕೇರಳದಲ್ಲಿ ನಡೆದ ವೈದ್ಯ ಶಾಬಾ ಷರೀಫ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಔಷಧ ಸೂತ್ರಕ್ಕಾಗಿ ವೈದ್ಯರನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು.
ಪೂರ್ತಿ ಓದಿ9:03 AM
IPL 2025: ಸನ್‌ರೈಸರ್ಸ್ ಆರ್ಭಟಕ್ಕೆ ರಾಯಲ್ಸ್ ಧೂಳೀಪಟ!
ಸನ್‌ರೈಸರ್ಸ್ ಹೈದರಾಬಾದ್ ರಾಜಸ್ಥಾನ ರಾಯಲ್ಸ್ ವಿರುದ್ಧ 44 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇಶಾನ್ ಕಿಶನ್ ಅವರ ಶತಕ ಮತ್ತು ತಂಡದ ಆಕ್ರಮಣಕಾರಿ ಆಟವು ಗೆಲುವಿಗೆ ಕಾರಣವಾಯಿತು.
ಪೂರ್ತಿ ಓದಿ8:48 AM
Karimani Serial: ಅರುಂಧತಿಯೇ ಬ್ಲ್ಯಾಕ್ ರೋಸ್; ರಣರೋಚಕ ಸತ್ಯ ಬಯಲು! ಮಲತಾಯಿ ಮಲತಾಯಿನೇ!
ʼಕರಿಮಣಿʼ ಧಾರಾವಾಹಿಯಲ್ಲಿ ʼಬ್ಲ್ಯಾಕ್ ರೋಸ್ʼ ಯಾರು ಎನ್ನೋದು ರಿವೀಲ್ ಆಗಿದೆ. ಅರುಂಧತಿಯೇ ಬ್ಲ್ಯಾಕ್‌ರೋಸ್ ಅನ್ನೋದು ಪಕ್ಕಾ ಆಗಿದೆ.
ಪೂರ್ತಿ ಓದಿ8:34 AM
ಜೈಲಲ್ಲಿ ಪ್ರೇಮಿಯ ಜೊತೆ ಸಹ ಜೀವನ, ಡ್ರಗ್ಸ್‌ಗೆ ಬೇಡಿಕೆ ಇಟ್ಟ ಮರ್ಚಂಟ್ ನೇವಿ ಅಧಿಕಾರಿ ಕೊಂದ ಹಂತಕಿ
ಮರ್ಚಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಜೈಲಿನ ಒಂದೇ ಕೋಣೆಯಲ್ಲಿರಲು ವಿನಂತಿಸಿದ್ದಾರೆ. ಡ್ರಗ್ಸ್ ವ್ಯಸನಿಗಳಾಗಿರುವ ಇವರು ಜೈಲಿನಲ್ಲಿ ಡ್ರಗ್ಸ್ ಸಿಗದ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೂರ್ತಿ ಓದಿ8:31 AM
Kerala BJP | ಕೇರಳ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್? ಕೋರ್ ಕಮಿಟಿ ಸಭೆಯಲ್ಲಿ ಆಯ್ಕೆ
ಕೇರಳ ಬಿಜೆಪಿ ರಾಜ್ಯಾಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಪಕ್ಷವು ರಾಜೀವ್ ಅವರ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಸೋಮವಾರ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ಪೂರ್ತಿ ಓದಿ8:11 AM
Bigg Boss Kannada ವಿನಯ್ ಗೌಡ, ರಜತ್ ಕಿಶನ್ ವಿರುದ್ಧ ದೂರು ದಾಖಲು! ಏನಾಯ್ತು?
ʼಬಿಗ್ ಬಾಸ್ ಕನ್ನಡʼ ಖ್ಯಾತಿಯ ವಿನಯ್ ಗೌಡ, ರಜತ್ ಕಿಶನ್ ವಿರುದ್ಧ ದೂರು ದಾಖಲಾಗಿದೆ. ಯಾಕೆ? ಏನಾಯ್ತು?
ಪೂರ್ತಿ ಓದಿ8:08 AM
Judge cash row | ದೆಹಲಿ ನ್ಯಾಯಾಧೀಶರ ಮನೆಯಲ್ಲಿ ಕಂತೆ ಕಂತೆ ಸುಟ್ಟ ಹಣ: ತನಿಖಾ ವರದಿ ಬಹಿರಂ! ಇಲ್ಲಿದೆ ವಿವರ
ದೆಹಲಿ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಸುಟ್ಟ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯಲ್ಲಿ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ನ್ಯಾಯಾಧೀಶರ ಮನೆಯಲ್ಲಿ ಸುಟ್ಟ 500 ರುಪಾಯಿ ನೋಟಿನ ಗೋಣಿಚೀಲಗಳು ಪತ್ತೆಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೂರ್ತಿ ಓದಿ