ಬೆಂಗಳೂರು: ಧರ್ಮಸ್ಥಳ ಗ್ರಾಮ ಸುತ್ತಮುತ್ತ ಶವಗಳನ್ನು ಹೂತ ಆರೋಪ ಸಂಬಂಧ ತನಿಖೆ ನಡೆಸಲು ರಚಿಸಿದ್ದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಶೀಘ್ರ ಚಾರ್ಜ್‌ಶೀಟ್ ಸಲ್ಲಿಸಲು ರಾಜ್ಯ ಸರ್ಕಾರ ಸೂಚಿಸಿದ್ದು, ವಾರದಲ್ಲಿ ಈ ಕುರಿತ ತನಿಖೆ ಪ್ರಕ್ರಿಯೆ ಪೂರ್ಣಗೊಳ್ಳುವ ಸುಳಿವು ಲಭಿಸಿದೆ. ಪ್ರಕರಣದ ಬಗ್ಗೆ ನಡೆಸಿರುವ ತನಿಖೆಯಲ್ಲಿ ಲಭ್ಯವಾಗಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸದ್ಯದಲ್ಲೇ ನ್ಯಾಯಾಲಯಕ್ಕೆ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಿದೆ. ರಾಜ್ಯ ಸರ್ಕಾರ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಸುವಂತೆ ಗೃಹ ಇಲಾಖೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

10:39 PM (IST) Oct 24
ಬಿಜೆಪಿ ನಾಯಕರಿಗೆ ಕರ್ನಾಟಕ ರಾಜ್ಯದ ಬಗ್ಗೆ ಕಾಳಜಿ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ ಎಂದು ಡಿ.ಕೆ.ಶಿವಕುಮಾರ್ ಸವಾಲೆಸೆದರು.
09:56 PM (IST) Oct 24
ರಾಜ್ಯದಲ್ಲಿ ಅಹಿಂದ ನಾಯಕತ್ವ ಇದ್ದೇ ಇದೆ. ಅದು ಇಲ್ಲದೇ ಸಂಘಟನೆ ಮಾಡಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕಾಕತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
09:33 PM (IST) Oct 24
ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್ಸಿಗರು. ಅದಕ್ಕೂ ಮೊದಲು ನಾನು ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಿದ್ದು ಅವರಿಗೆ ಗೊತ್ತಿರಲಿಲ್ಲವೇ? ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
09:24 PM (IST) Oct 24
ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್, ತಮ್ಮ ಮದುವೆಯನ್ನು ಖಚಿತಪಡಿಸುವಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಮದುವೆ ಘೋಷಣೆ ಮಾಡ್ತಾರಾ?
09:07 PM (IST) Oct 24
ಕಾಮಗಾರಿ ಹಿನ್ನಲೆಯಲ್ಲಿ ನ.2 ರಿಂದ ಬೆಂಗಳೂರು-ಮಂಗಳೂರು ಹಲವು ರೈಲು ಸಂಚಾರ ರದ್ದು ಮಾಡಲಾಗಿದೆ. ಸರಿಸುಮಾರು ಒಂದೂವರೆ ತಿಂಗಳು ದಿನಗಳ ಕಾಲ ಕಾಮಗಾರಿ ನಡೆಯಲಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲು ಸೇವೆಗಳು ರದ್ದಾಗುತ್ತಿದೆ. ಯಾವ ರೈಲು ಸೇವೆ ರದ್ದಾಗಿದೆ?
08:51 PM (IST) Oct 24
08:20 PM (IST) Oct 24
ಸದ್ಯಕ್ಕೆ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ಈ ವಿಷಯ ಚರ್ಚೆಗೆ ಬಂದಿಲ್ಲ. ಈಗ ನಾನೇ ಅಧ್ಯಕ್ಷನಾಗಿದ್ದೇನೆ ಎಂದು ಜೆಡಿಎಸ್‌ನ ಹಾಲಿ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
08:10 PM (IST) Oct 24
ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಜನಾಭಿಪ್ರಾಯ ಎನ್‌ಡಿಎ ಪರವಾಗಿದೆ ಎಂದರು.
08:05 PM (IST) Oct 24
ಮುಂದಿನ ಸಿಎಂ ಹೇಳಿಕೆ ಕೋಲಾಹಲ, ಪುತ್ರನಿಂದ ವಿವರಣೆ ಪಡೆದು ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ಸಿದ್ದರಾಮಯ್ಯ ನಿವೃತ್ತಿ ಬಳಿಕ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬಹುದು ಅನ್ನೋ ಹೇಳಿಕೆ ಕುರಿತು ಇದೀಗ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
07:43 PM (IST) Oct 24
ಬಿಗ್ ಬಾಸ್ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಕೈಯಲ್ಲಿದ್ದ ಗ್ಲಾಸ್‌ನ ಪಾನೀಯದ ಬಗ್ಗೆ ಭಾರೀ ಚರ್ಚೆಯಾಗಿತ್ತು. ಇದೀಗ ವೈರಲ್ ವಿಡಿಯೋವೊಂದರಲ್ಲಿ ಸ್ವತಃ ಸುದೀಪ್ ಅವರೇ ಆ ಗ್ಲಾಸ್ ರಹಸ್ಯವನ್ನು ತೆರೆದಿಟ್ಟಿದ್ದಾರೆ. ಅವರು ಹೇಳಿದ್ದೇನು?
07:40 PM (IST) Oct 24
ಒಬ್ಬ ಖ್ಯಾತ ನಟಿ ತಾನು ಅಂಕಲ್, ಡ್ಯಾಡಿ ಅಂತ ಕರೆಯುತ್ತಿದ್ದ ಹೀರೋಗಳ ಜೊತೆಯಲ್ಲೇ ನಾಯಕಿಯಾಗಿ ನಟಿಸಿ ರೊಮ್ಯಾನ್ಸ್ ಮಾಡಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು? ಆ ಹೀರೋಗಳು ಯಾರು? ಅನ್ನೋದನ್ನು ಈ ಲೇಖನದಲ್ಲಿ ತಿಳಿಯಿರಿ.
07:35 PM (IST) Oct 24
ಇನ್‌ಸ್ಟಾಗ್ರಾಂ ಮೂಲಕ ಪರಿಚಯ,ಹಾವೇರಿಯಲ್ಲಿ ನಾಲ್ವರಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತೆ ಗರ್ಭಿಣಿಯಾಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಪೋಕ್ಸೋ ಕೇಸ್ ದಾಖಲಾಗಿದೆ.
07:25 PM (IST) Oct 24
07:04 PM (IST) Oct 24
ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಮತ್ತು ನಿರ್ದೇಶಕಿ ನೀರಜಾ ಕೋನಾ, ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸ್ಟಾರ್ ಹೀರೋಗಳ ಲುಕ್ ಬಗ್ಗೆ ಹಲವು ಪ್ರಮುಖ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆ ವಿವರಗಳೇನು ಎಂದು ಈಗ ತಿಳಿಯೋಣ.
06:48 PM (IST) Oct 24
06:40 PM (IST) Oct 24
ಆಕೆ ಒಬ್ಬ ಸ್ಟಾರ್ ನಟಿ, ಹೀರೋಗಳಿಗಿಂತ ಹೆಚ್ಚು ಸಂಭಾವನೆ ಪಡೆದ ನಟಿ, ಸುಮಾರು 1000 ಕೋಟಿ ಆಸ್ತಿ ಹೊಂದಿರುವ ಸುಂದರಿ. ಚಿತ್ರರಂಗ ತನ್ನನ್ನು ಹೊರಹಾಕಿದೆ ಎಂದು ಆರೋಪಿಸಿದ ತಾರೆ.. ಸದ್ಯ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುತ್ತಿರುವ ಈ ನಟಿ ಯಾರೆಂದು ಗೊತ್ತಾ?
06:26 PM (IST) Oct 24
ಕಾಂತಾರ ಚಾಪ್ಟರ್ 1 ಸಿನಿಮಾ ದೇಶದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಈ ಚಿತ್ರದ ಬಗ್ಗೆ ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಡವಾಗಿ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
05:52 PM (IST) Oct 24
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾನೂನು ಸುವ್ಯವಸ್ಥೆ ಇಲ್ಲವೇ ಇಲ್ಲ. ಗೃಹ ಸಚಿವ ಪರಮೇಶ್ವರ ಅವರಿಗೆ ಏನೇ ಕೇಳಿದರೂ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
05:41 PM (IST) Oct 24
ಇಂದಿನ ಕಲಬೆರಕೆ ಯುಗದಲ್ಲಿ, ಹಣದ ದುರಾಸೆಗಾಗಿ ಮೆಣಸಿನ ಪುಡಿಯಲ್ಲಿಯೂ ಅಪಾಯಕಾರಿ ವಸ್ತುಗಳನ್ನು ಬೆರೆಸಲಾಗುತ್ತಿದೆ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಲೇಖನದಲ್ಲಿ, ನೀರಿನ ಸಹಾಯದಿಂದ, ಕೈಗಳಿಂದ ಉಜ್ಜುವ ಮೂಲಕ ಸುಲಭವಾಗಿ ಪತ್ತೆ ಹಚ್ಚುವುದು ಹೇಗೆಂದು ವಿವರಿಸಲಾಗಿದೆ.
05:27 PM (IST) Oct 24
ಸಿನಿಮಾ ಬಗ್ಗೆ ವಿವರ ನೀಡಿದ ನಿರ್ದೇಶಕ ಸತ್ಯಪ್ರಕಾಶ್, ಹೊಸ ಸಿನಿಮಾ ಈಗ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯ ಧೀರೇನ್ ಅವರು ಪಬ್ಬಾರ್ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ಆ ಕೆಲಸದ ಬಳಿಕ ಈ ಸಿನಿಮಾ ಸೆಟ್ಟೇರಲಿದೆ ಎಂದರು.
05:13 PM (IST) Oct 24
ಬಿಗ್ ಬಾಸ್ ಕನ್ನಡ ಸೀಸನ್ 12ರ ಕಿಚ್ಚನ ಪಂಚಾಯಿತಿಯಲ್ಲಿ, ಅಶ್ವಿನಿ ಗೌಡ ಮತ್ತು ಕಾಕ್ರೋಚ್ ಸುಧಿ ವಿರುದ್ಧ ಪ್ರೇಕ್ಷಕರ ಆಕ್ರೋಶ ಭುಗಿಲೆದ್ದಿದೆ. ಅವರ ಇಂಗ್ಲಿಷ್ ಬಳಕೆ, 'ಎಸ್ ಕೆಟಗರಿ' ಮತ್ತು 'ಸೆಡೆ' ಪದಗಳ ಪ್ರಯೋಗದ ಬಗ್ಗೆ ಕಿಚ್ಚ ಸುದೀಪ್ ಪ್ರಶ್ನಿಸಬೇಕೆಂದು ಜನತೆ ಆಗ್ರಹಿಸುತ್ತಿದ್ದಾರೆ.
04:58 PM (IST) Oct 24
ಸೀರೆಗೂ ಬ್ಲೌಸ್‌ಗೂ ಸಂಬಂಧ ಕಲ್ಪಿಸಬೇಡಿ ಅನ್ನುತ್ತಲೇ ಫ್ಯೂಜನ್ ಸ್ಟೈಲ್‌ನ ಮೊರೆ ಹೋಗಿದ್ದಾರೆ. ಬಿಡಿಬಿಡಿಯಾಗಿ ನೋಡಿದರೆ ಈ ಸೀರೆಗೂ, ಬ್ಲೌಸ್‌ಗೂ ತಾಳಮೇಳ ಸರಿಹೋಗುತ್ತಿಲ್ಲವಲ್ಲ ಅನಿಸುತ್ತೆ.
04:36 PM (IST) Oct 24
ಬಿಗ್ ಬಾಸ್ ಸೀಸನ್ 12ರಲ್ಲಿ ನಟಿ ಅಶ್ವಿನಿ ಗೌಡ ಅವರು ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರಿಗೆ ಇವಳು ‘ಎಸ್ ಕೆಟಗರಿ’ಗೆ ಸೇರಿದವಳು ಎಂದು ಹೇಳಿದ್ದರು. ಈ ಆಕ್ಷೇಪಾರ್ಹ ಪದಬಳಕೆ ವಿರುದ್ಧ ಹೈಕೋರ್ಟ್ ವಕೀಲರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಅಶ್ವಿನಿ ಗೌಡ ಜೈಲು ಸೇರಿದ್ದಾರೆ.
03:55 PM (IST) Oct 24
03:31 PM (IST) Oct 24
ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ದಲಿತ ನಾಯಕರನ್ನು ಬೆಳೆಯಲು ಬಿಡದ ಖರ್ಗೆ ಕುಟುಂಬದ ವಿರುದ್ಧವೂ ಅವರು ಗಂಭೀರ ಆರೋಪ ಮಾಡಿದ್ದಾರೆ.
03:31 PM (IST) Oct 24
03:02 PM (IST) Oct 24
Suraj Singh Rashika : ಬಿಗ್ ಬಾಸ್ ಮನೆ ಒಂದ್ಕಡೆ ಗಲಾಟೆ, ಜಗಳಗಳ ತಾಣವಾದ್ರೆ ಇನ್ನೊಂದು ಕಡೆ ಪ್ರೇಮಲೋಕ ಸೃಷ್ಟಿಸಿದೆ. ಇಷ್ಟು ದಿನ ಬರೀ ಗಿಲ್ಲಿ – ಕಾವ್ಯ ಮಾತಿತ್ತು ಈಗ ರಾಶಿಕಾ – ಸೂರಜ್ ಮಿಂಚುತ್ತಿದ್ದಾರೆ.
02:40 PM (IST) Oct 24
HC Mahadevappa statement on leadership:ಯತೀಂದ್ರ ಸಿದ್ದರಾಮಯ್ಯರವರ ಹೇಳಿಕೆಗೆ ಗರಂ ಆದ ಸಚಿವ ಎಚ್.ಸಿ. ಮಹದೇವಪ್ಪ, 'ವ್ಯವಸ್ಥೆಯಲ್ಲಿ ಯಾರೂ ಅನಿವಾರ್ಯರಲ್ಲ' ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವದ ಚರ್ಚೆಯನ್ನು ಹುಟ್ಟುಹಾಕಿದೆ.
02:32 PM (IST) Oct 24
02:12 PM (IST) Oct 24
ಬೆಂಗಳೂರಿನ ಇಸ್ಕಾನ್‌ನಲ್ಲಿ, ಶ್ರೀಕೃಷ್ಣನ ಗೋವರ್ಧನ ಲೀಲೆಯ ಸ್ಮರಣಾರ್ಥವಾಗಿ ಗೋವರ್ಧನ ಪೂಜೆಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಈ ಪಾವನ ಪರ್ವದಂದು, ಗೋವರ್ಧನ ಗಿರಿಯ ಪ್ರತಿಕೃತಿಯನ್ನು ನಿರ್ಮಿಸಿ, ಅದರ ಸುತ್ತ ವಿವಿಧ ಖಾದ್ಯಗಳ 'ಅನ್ನಕೂಟ'ವನ್ನು ಭಗವಂತನಿಗೆ ಅರ್ಪಿಸಲಾಯಿತು.
01:44 PM (IST) Oct 24
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವೈಯಕ್ತಿಕ ಟೀಕೆ ಹಾಗೂ ಅವಾಚ್ಯ ಪದಗಳನ್ನು ಬಳಸಿದ ಸಿಂಹ, ತಮ್ಮ ತಾಯಿಯ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಈ ರೀತಿ ಉತ್ತರಿಸಬೇಕಾಯಿತು ಎಂದು ಹೇಳಿದ್ದಾರೆ.
01:36 PM (IST) Oct 24
ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ದೊಡ್ಮನೆಯಿಂದ ಸೀದಾ ಪೊಲೀಸ್ ಠಾಣೆಗೆ ಹೋಗಬೇಕಾಗಿ ಬರಬಹುದು. ಮರುಕಳಿಸತ್ತಾ ಬಿಗ್ಬಾಸ್ 10ನೇ ಸೀಸನ್?
01:32 PM (IST) Oct 24
ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ಗಂಭೀರ ಮತಗಳ್ಳತನದ ಆರೋಪ ಮಾಡಿದ್ದಾರೆ. ಆಳಂದ ಕ್ಷೇತ್ರದ ಪ್ರಕರಣ ಉಲ್ಲೇಖಿಸಿ, ಎಸ್‌ಐಟಿ ತನಿಖೆ ಮುಗಿದ ನಂತರ ದಾಖಲೆ ಸಮೇತ ಎಲ್ಲವನ್ನೂ ಜನರ ಮುಂದಿಡುವುದಾಗಿ ಹೇಳಿದ್ದಾರೆ. ಚುನಾವಣೆ ಆಯೋಗವು ಒಂದು ಪಕ್ಷದ ಕಪಿಮುಷ್ಠಿಯಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.
01:24 PM (IST) Oct 24
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್ಡಿಎಲ್) 2024-25ನೇ ಸಾಲಿನ ಲಾಭಾಂಶವಾಗಿ 135 ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ಹಸ್ತಾಂತರಿಸಿದೆ. ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂ. ವಹಿವಾಟು ನಡೆಸಿ 451 ಕೋಟಿ ರೂ. ಲಾಭ ಗಳಿಸಿದ್ದು, ಇದು ಸಂಸ್ಥೆಯ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ.
01:22 PM (IST) Oct 24
01:11 PM (IST) Oct 24
ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಶೈಕ್ಷಣಿಕ ಅರ್ಹತೆ ಮತ್ತು ರಾಜಕೀಯ ಪ್ರಭಾವವನ್ನು ಪ್ರಶ್ನಿಸಿದ್ದಾರೆ. ಪಿಯುಸಿ ಫೇಲಾದ ಮಗನಿಗೆ ಪ್ರಮುಖ ಖಾತೆ ನೀಡಿ ಬೆಂಗಳೂರಿಗೆ ಕೆಟ್ಟ ಹೆಸರು ತರಲಾಗುತ್ತಿದೆ ಎಂದು ಆರೋಪಿಸಿದರು.
12:58 PM (IST) Oct 24
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಸೂರಜ್ ಸಿಂಗ್ ಅವರಿಗೆ ಅವರ ತಾಯಿ ಬೆಂಬಲ ಕೋರಿದ್ದಾರೆ. ಆದರೆ, ಸಹ ಸ್ಪರ್ಧಿ ಜೊತೆಗಿನ ಸೂರಜ್ ಅವರ ಬಾಂಧವ್ಯವನ್ನು ನೋಡಿದ ವೀಕ್ಷಕರು, 'ಅವಳಿಂದ ನಿಮ್ಮ ಮಗನನ್ನು ದೂರವಿರಿಸಿ' ಎಂದು ಸೂರಜ್ ತಾಯಿಗೆ ಸಲಹೆ ನೀಡುತ್ತಿದ್ದಾರೆ.
12:42 PM (IST) Oct 24
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಆರೋಪಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪಿ ಪ್ರದೂಷ್‌ಗೆ ತಂದೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನ್ಯಾಯಾಲಯವು ಅನುಮತಿ ನೀಡಿದೆ.
12:41 PM (IST) Oct 24
ಬೆಂಗಳೂರಿನಲ್ಲಿ ಅಕ್ಟೋಬರ್ 30 ರಂದು ದಕ್ಷಿಣ ಭಾರತದ ನಗರಾಭಿವೃದ್ಧಿ ಸಚಿವರ ಸಮ್ಮೇಳನ ನಡೆಯಲಿದ್ದು, ಕೇಂದ್ರ ಸಚಿವ ಮನೋಹರ ಲಾಲ್ ಖಟ್ಟರ್ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಅನುದಾನದ ಬೇಡಿಕೆ ಹಾಗೂ ಜಿಬಿಎ ವ್ಯಾಪ್ತಿಗೆ ಹೊಸ ಪ್ರದೇಶಗಳನ್ನು ಸೇರಿಸುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಚರ್ಚಿಸಲಿದ್ದಾರೆ.
12:24 PM (IST) Oct 24