MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಗಂಡ- ಹೆಂಡ್ತಿ ಮನಸ್ಸು ಸೇರಾಯ್ತು: ಅಕ್ಕ-ತಮ್ಮ ಒಂದಾಗೋ ಹೊತ್ತೂ ಬಂದಾಗೋಯ್ತು!

Amruthadhaare Serial: ಗಂಡ- ಹೆಂಡ್ತಿ ಮನಸ್ಸು ಸೇರಾಯ್ತು: ಅಕ್ಕ-ತಮ್ಮ ಒಂದಾಗೋ ಹೊತ್ತೂ ಬಂದಾಗೋಯ್ತು!

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ಮನಸ್ಸುಗಳು ಒಂದಾಗಿದ್ದು, ಅವರ ಮುದ್ದಾದ ಜಗಳ ಮುಂದುವರೆದಿದೆ. ಇನ್ನೊಂದೆಡೆ, ಆಕಾಶ್ ಮತ್ತು ಬಾಲಕಿಯ ನಡುವೆ ಅಕ್ಕ-ತಮ್ಮನ ಬಾಂಧವ್ಯ ಬೆಳೆಯುತ್ತಿದ್ದು, ಜೈದೇವ್ ಮತ್ತು ಶಕುನಿ ಮಾಮ ಆಸ್ತಿಗಾಗಿ ಹೊಸ ಸಂಚು ರೂಪಿಸುತ್ತಿದ್ದಾರೆ.

1 Min read
Suchethana D
Published : Oct 24 2025, 02:32 PM IST
Share this Photo Gallery
  • FB
  • TW
  • Linkdin
  • Whatsapp
17
ಗಂಡ ಹೆಂಡ್ತಿ ಮನಸ್ಸು ಸೇರಾಗಿದೆ
Image Credit : zee5

ಗಂಡ-ಹೆಂಡ್ತಿ ಮನಸ್ಸು ಸೇರಾಗಿದೆ

ಅಮೃತಧಾರೆ (Amruthadhaare) ಸೀರಿಯಲ್​ನಲ್ಲಿ ಸದ್ಯ ಭೂಮಿಕಾ ಮತ್ತು ಗೌತಮ್​ ಮನಸ್ಸು ಸೇರಾಗಿದೆ. ತಾನು ಪತಿಯಿಂದ ದೂರ ಇದ್ದು ತಪ್ಪು ಮಾಡಿದ್ದೇನೆ ಎಂದು ಭೂಮಿಕಾಗೆ ಮನವರಿಕೆ ಆಗಿದೆ. ಆದರೂ ಅದನ್ನು ನೇರವಾಗಿ ಹೇಳದೇ ಒಳಗೊಳಗೇ ಒದ್ದಾಡುತ್ತಿದ್ದಾಳೆ.

27
ಗೌತಮ್​-ಭೂಮಿಕಾ ಕೋಳಿ ಜಗಳ
Image Credit : Zee Kannada

ಗೌತಮ್​-ಭೂಮಿಕಾ ಕೋಳಿ ಜಗಳ

ಅದೇ ಇನ್ನೊಂದೆಡೆ, ಗೌತಮ್​ ಮತ್ತು ಭೂಮಿಕಾ ನಡುವೆ ಕೋಳಿ ಜಗಳ ನಡೆಯುತ್ತಲೇ ಇರುತ್ತಿದೆ. ಈ ಕ್ಯೂಟ್​ ಜಗಳ ನೋಡೋದು ಎಂದರೆ ವೀಕ್ಷಕರಿಗೆ ಇನ್ನಿಲ್ಲದ ಪ್ರೀತಿ ಕೂಡ. ಹೊಸ ಜೋಡಿಯಂತೆ ಕದ್ದು ಕದ್ದು ಇಬ್ಬರೂ ಒಬ್ಬರನ್ನೊಬ್ಬರು ಕುಡಿನೋಟ ಬೀರುವುದೇ ವೀಕ್ಷಕರನ್ನು ರೋಮಾಂಚನಗೊಳಿಸುವುದು ಇದೆ.

Related Articles

Related image1
Bigg Boss ಮನೆಯಿಂದ ಸೀದಾ ಪೊಲೀಸ್​ ಸ್ಟೇಷನ್​ಗೆ Ashwini Gowda? ಮರುಕಳಿಸತ್ತಾ 10ನೇ ಸೀಸನ್​?
Related image2
Naa Ninna Bidalaare ಸೀರಿಯಲ್​ನಿಂದ ಹೊರನಡೆದು ವೀಕ್ಷಕರಿಗೆ ಶಾಕ್ ಕೊಟ್ಟ ನಟಿ​- ಕೋಳಿ ರಮ್ಯಾ ಎಂಟ್ರಿ
37
ಅಕ್ಕ-ತಮ್ಮ ಒಂದಾಗ್ತಾರಾ?
Image Credit : Instagram

ಅಕ್ಕ-ತಮ್ಮ ಒಂದಾಗ್ತಾರಾ?

ಈಗ ಏನಿದ್ದರೂ ಆಕಾಶ್​ಗೆ ಗೌತಮ್​ ತನ್ನ ಅಪ್ಪ ಎಂದು ಗೊತ್ತಾಗಬೇಕಿದೆ. ಇದರ ನಡುವೆಯೇ ಗೌತಮ್​ ಬಳಿ ಇರುವ ಬಾಲಕಿ ಮತ್ತು ಆಕಾಶ್​ ನಡುವೆ ಪ್ರೀತಿ ಹುಟ್ಟಬೇಕಿದೆ. ಇವರಿಬ್ಬರೂ ಅಕ್ಕ-ತಮ್ಮ ಹೌದೋ ಅಲ್ಲವೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಹಾಗೆ ನೋಡಿದರೆ ಈಗಲೂ ಇಬ್ಬರೂ ಅಕ್ಕ-ತಮ್ಮನೇ ಆಗಿದ್ದಾರೆ.

47
ಮಕ್ಕಳ ಆಟ ನೋಡ್ತಿರೋ ಬಾಲಕಿ
Image Credit : Instagram

ಮಕ್ಕಳ ಆಟ ನೋಡ್ತಿರೋ ಬಾಲಕಿ

ಆಕಾಶ್​ ತನ್ನ ಅಪ್ಪ ಗೌತಮ್​ನ ಗತ್ತಿನಂತೆ ಇಡೀ ವಠಾರದ ಮಕ್ಕಳ ಎದುರು ಯಜಮಾನನ ರೀತಿಯಲ್ಲಿ ವರ್ತಿಸುತ್ತಿದ್ದು, ಮಕ್ಕಳ ಆಟವನ್ನು ಬಾಲಕಿ ತನ್ನ ಮನೆಯ ಎದುರಿನಿಂದ ನೋಡುತ್ತಿದ್ದಾಳೆ.

57
ಹಿರಿಹಿರಿ ಹಿಗ್ಗಿದ ಭೂಮಿಕಾ
Image Credit : Instagram

ಹಿರಿಹಿರಿ ಹಿಗ್ಗಿದ ಭೂಮಿಕಾ

ಅವಳನ್ನು ನೋಡಿದ ಆಕಾಶ್​, ಆಟಕ್ಕೆ ಬರುತ್ತಿಯಾ ಎಂದು ಪ್ರಶ್ನಿಸಿದ್ದಾನೆ. ಹೇಳಿ ಕೇಳಿ ಪುಟಾಣಿಗಳು. ಬೇಡ ಅಂತಾರಾ? ಬಾಲಕಿ, ಆಕಾಶ್​ ಜೊತೆ ಆಡಲು ಹೋಗುವುದು ಒಂದೇ ಬಾಕಿ. ಹಾಗಾದರೆ ಇಬ್ಬರಲ್ಲಿಯೂ ಅಕ್ಕ-ತಮ್ಮನ ಪ್ರೀತಿ ಬೆಳೆಯುವುದರಲ್ಲಿ ಸಂದೇಹವೇ ಇಲ್ಲ. ಇದನ್ನು ನೋಡಿ ಭೂಮಿಕಾ ಹಿರಿಹಿರಿ ಹಿಗ್ಗುತ್ತಿದ್ದಾರೆ. 

67
ಗೌತಮ್​-ಭೂಮಿಕಾರ ಹುಡುಕಾಟದಲ್ಲಿ
Image Credit : zee5

ಗೌತಮ್​-ಭೂಮಿಕಾರ ಹುಡುಕಾಟದಲ್ಲಿ

ಅದೇ ಇನ್ನೊಂದೆಡೆ, ಜೈದೇವ್​ ಮತ್ತು ಶಕುಂತಲಾ ಭೂಮಿಕಾ ಮತ್ತು ಗೌತಮ್​ ಎಲ್ಲಿದ್ದಾರೆ ಎನ್ನುವ ಹುಡುಕಾಟ ನಡೆಸಿದ್ದಾರೆ. ಅವರ ಆಸ್ತಿಯನ್ನು ಮಾರಾಟ ಮಾಡಲು ಅವರಿಗೆ ಸಹಿಬೇಕಿದೆ. ಇದನ್ನು ಅವರೇ ಮನೆಯಿಂದ ಹೊರಕ್ಕೆ ಹಾಕಿರೋ ಶಕುನಿ ಮಾಮಾ ಕೇಳಿಸಿಕೊಂಡಿದ್ದಾನೆ.

77
ಶಕುನಿ ಮಾಮನ ಆಟ
Image Credit : zee5

ಶಕುನಿ ಮಾಮನ ಆಟ

ಈಗ ಆತ ಏನಿದ್ದರೂ ಥೇಟ್​ ಮಹಾಭಾರತದ ಶಕುನಿಯಂತೆ. ಕೌರವರ ಬಳಿ ಇದ್ದುಕೊಂಡೇ ಅವರ ವಿರುದ್ಧ ಸ್ಕೆಚ್​ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಇಡೀ ಸಂಚಿಕೆ ರೋಚಕ ರೀತಿಯಲ್ಲಿ ಸಾಗಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಸಂಬಂಧಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved