ಮೆಣಸಿನ ಪುಡಿಯಲ್ಲಿ ಕಲಬೆರಕೆ ಆಗಿದ್ಯಾ? ಮನೆಯಲ್ಲೇ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಸುಲಭದ ವಿಧಾನ
ಇಂದಿನ ಕಲಬೆರಕೆ ಯುಗದಲ್ಲಿ, ಹಣದ ದುರಾಸೆಗಾಗಿ ಮೆಣಸಿನ ಪುಡಿಯಲ್ಲಿಯೂ ಅಪಾಯಕಾರಿ ವಸ್ತುಗಳನ್ನು ಬೆರೆಸಲಾಗುತ್ತಿದೆ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಲೇಖನದಲ್ಲಿ, ನೀರಿನ ಸಹಾಯದಿಂದ, ಕೈಗಳಿಂದ ಉಜ್ಜುವ ಮೂಲಕ ಸುಲಭವಾಗಿ ಪತ್ತೆ ಹಚ್ಚುವುದು ಹೇಗೆಂದು ವಿವರಿಸಲಾಗಿದೆ.

ಎಲ್ಲೆಲ್ಲೂ ಕಲಬೆರಕೆ
ಇದು ಕಲಬೆರಕೆಯ ಯುಗ. ಆಹಾರ ಪದಾರ್ಥ ಸೇರಿದಂತೆ ಎಲ್ಲದರಲ್ಲಿಯೂ ಕಲಬೆರಕೆ ಆಗುತ್ತಲೇ ಇರುತ್ತದೆ. ಹಣ ಮಾಡುವ ದುರುದ್ದೇಶದಿಂದ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವುದರಿಂದಲೇ ಇಂದು ಕ್ಯಾನ್ಸರ್ನಂಥ ಮಹಾಮಾರಿ, ಹೃದಯಾಘಾತದಂಥ ಸಮಸ್ಯೆ ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಅದರಲ್ಲಿಯೂ ದಿನನಿತ್ಯ ಬಳಸುವ ಮೆಣಸಿನ ಪುಡಿಯಲ್ಲಿ ಕಲಬೆರಕೆ ಹೆಚ್ಚಿನ ಪ್ರಮಾಣದಲ್ಲಿಯೇ ಆಗುತ್ತಿದೆ. ಇದನ್ನು ಸೇವಿಸುವ ಕಾರಣದಿಂದ ಹಲವಾರು ರೀತಿಯ ಸಮಸ್ಯೆಗಳು ಕಾಡುತ್ತವೆ. ಹಾಗಿದ್ದರೆ ಇವುಗಳನ್ನು ಹೇಗೆಲ್ಲಾ ಪತ್ತೆ ಹಚ್ಚಬಹುದು ಎನ್ನುವ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ನೀರಿನ ಸಹಾಯದಿಂದ ಮಾಹಿತಿ
ಖಾರದ ಪುಡಿಗೆ ಕಲರ್ ಹಾಕಿದ್ದರೆ ಅದನ್ನು ಕೇವಲ ನೀರಿನ ಸಹಾಯದಿಂದ ತಿಳಿಯಬಹುದು. ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದರಲ್ಲಿ ಖಾರದ ಪುಡಿಯನ್ನು ಹಾಕಿ. ಸ್ವಲ್ಪ ಸಮಯದ ಬಳಿಕ ಅದು ಸಂಪೂರ್ಣವಾಗಿ ನೀರಿನ ತಳಕ್ಕೆ ಹೋದರೆ ಅದು ಅಸಲಿ. ನಕಲಿಯಾಗಿದ್ದರೆ ಅದು ಸಂಪೂರ್ಣ ನೀರನ್ನು ಕೆಂಪಗೆ ಮಾಡುತ್ತದೆ.
ಇದರ ಬಗ್ಗೆ ತಿಳಿಯಲು ಈ ಕೆಳಗೆ ಕ್ಲಿಕ್ ಮಾಡಿ.
https://www.instagram.com/reel/DI6xW_fhkyu/?utm_source=ig_web_copy_link
ಇಟ್ಟಿಗೆ ಸುಣ್ಣ
ಇನ್ನೂ ಒಂದು ವಿಧಾನವಿದೆ. ಅದೇನೆಂದರೆ, ಪುಡಿಗೆ ಕಲರ್ ಬರುವುದಕ್ಕಾಗಿ ಇಟ್ಟಿಗೆ ಸುಣ್ಣದ ಬಳಕೆಯಾಗುತ್ತಿದೆ. ಈ ಕಲಬೆರಕೆಯನ್ನು ಪರೀಕ್ಷಿಸಲು ನೀವು ಒಂದು ಗ್ಲಾಸ್ನಲ್ಲಿ ಸ್ವಲ್ಪ ಮೆಣಸಿನ ಪುಡಿ ಸೇರಿಸಿ ಬೆರಳುಗಳಿಂದ ಉಜ್ಜಿ. ಇಟ್ಟಿಗೆ ಸುಣ್ಣದ ಬಳಕೆಯಾಗಿದ್ದರೆ, ಬೆರಳು ಒರಟು ಒರಟು ಎನ್ನಿಸುತ್ತದೆ. ಅಂಥ ಸಂದರ್ಭದಲ್ಲಿ ಅದು ನಕಲಿ. ಹಾಗೆ ಆದರಲ್ಲಿ ಕೂಡಲೇ ಕೈಯನ್ನು ಚೆನ್ನಾಗಿ ಸೋಪಿನಿಂದ ವಾಷ್ ಮಾಡಿಕೊಳ್ಳಿ.
ಬಣ್ಣಕ್ಕಾಗಿ ಪೌಡರ್ ಬಳಕೆ
ಮೆಣಸಿನ ಪುಡಿಗೆ ಬಣ್ಣ ಬರಲು ಉಪ್ಪು ಮತ್ತು ಮುಖಕ್ಕೆ ಹಚ್ಚುವ ಪೌಡರ್ ಕೂಡ ಸೇರಿಸಲಾಗುತ್ತದೆ. ಇದನ್ನು ಪರೀಕ್ಷೆ ಮಾಡಲು ಒಂದು ಗ್ಲಾಸ್ನಲ್ಲಿ ಅರ್ಧ ಗ್ಲಾಸ್ ನೀರು ಹಾಕಿ ಒಂದು ಚಮಚ ಮೆಣಸಿನಪುಡಿಯನ್ನು ಸೇರಿಸಿ. ಅಡಿಭಾಗದಲ್ಲಿ ಶೇಖರಣೆಯಾದ ಖಾರದ ಪೌಡರ್ ಅನ್ನು ತೆಗೆದು ಅಂಗೈಗಳ ಮೇಲೆ ಉಜ್ಜಿದಾಗ ಬಣ್ಣವು ಕಂದು ಬಣ್ಣಕ್ಕೆ ತಿರುಗಿದರೆ ಅಥವಾ ಒರಟಾಗಿ ಕಂಡುಬಂದರೆ ಅದು ಕಲಬೆರಕೆ ಆಗಿದೆ ಎಂದರ್ಥ.
ಬಿಳಿ ಬಣ್ಣ ಕಂಡುಬಂದರೆ...
ಮೇಲಿನಂತೆ ಮಾಡಿದ ಸಂದರ್ಭದಲ್ಲಿ ಅಂಗೈನಲ್ಲಿ ಉಜ್ಜಿದಾಗ ನಿಮ್ಮ ಕೈಗಳ ಮೇಲೆ ಬಿಳಿ ಬಣ್ಣ ಕಂಡುಬಂದರೆ, ಅದಕ್ಕೆ ಪೌಡರ್ ಬೆರಕೆ ಆಗಿದೆ ಎಂದೇ ಅರ್ಥ.
ಮನೆಯಲ್ಲಿಯೇ ಮಾಡಿ
ಆದ್ದರಿಂದ ಮೆಣಸಿನಕಾಯಿಯನ್ನು ಖರೀದಿಸಿ ಮನೆಯಲ್ಲಿಯೇ ಬೇಕಾದಷ್ಟು ಪೌಡರ್ ಮಾಡಿಕೊಳ್ಳುವುದು ಇಲ್ಲವೇ ಮಿಲ್ಗಳಲ್ಲಿ ನೀವೇ ಪೌಡರ್ ಮಾಡಿಸುವುದು ಉತ್ತಮ