ಬಿಗ್ ಬಾಸ್ ಕನ್ನಡ ಸೀಸನ್ 12ರ ಕಿಚ್ಚನ ಪಂಚಾಯಿತಿಯಲ್ಲಿ, ಅಶ್ವಿನಿ ಗೌಡ ಮತ್ತು ಕಾಕ್ರೋಚ್ ಸುಧಿ ವಿರುದ್ಧ ಪ್ರೇಕ್ಷಕರ ಆಕ್ರೋಶ ಭುಗಿಲೆದ್ದಿದೆ. ಅವರ ಇಂಗ್ಲಿಷ್ ಬಳಕೆ, 'ಎಸ್ ಕೆಟಗರಿ' ಮತ್ತು 'ಸೆಡೆ' ಪದಗಳ ಪ್ರಯೋಗದ ಬಗ್ಗೆ ಕಿಚ್ಚ ಸುದೀಪ್ ಪ್ರಶ್ನಿಸಬೇಕೆಂದು ಜನತೆ ಆಗ್ರಹಿಸುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೊದಲ ಫಿನಾಲೆ ಮುಗಿದು, ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ ಮೂಲಕ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. ಆದರೆ, ಈ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಮಾತಾಡ್ಬೇಕಿರೋ ಗರ್ಮಾಗರಂ ವಿಷ್ಯಗಳು ಯಾವುದು? ಎಂದು ಕಲರ್ಸ್ ಕನ್ನಡ ವಾಹಿನಿಯಿಂದ ಕೇಳಲಾದ ಪ್ರಶ್ನೆಗಳಿಗೆ ಜನರೇ ಸಾಕಷ್ಟು ಪ್ರಶ್ನೆಗಳನ್ನು ಕೇಳಿ, ಕಾಕ್ರೋಚ್ ಸುಧಿ ಹಾಗೂ ಅಶ್ವಿನಿ ಗೌಡ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಿಚ್ಚನ ಪಂಚಾಯಿತಿಯಲ್ಲಿ ಜನರು ಕೇಳುವಂತೆ ಆಗ್ರಹಿಸಿದ ವಿಷಯಗಳು:
- ಅಶ್ವಿನಿ ಅವರಿಗೆ ಇಡೀ ಮನೆಯಲ್ಲಿ, ಮನೆಯ ಸದಸ್ಯರ ಮೇಲೆ ಹಿರಿತನ, ಮದ್ಯಸ್ತಿಕೆ ವಹಿಸುವ ಜವಾಬ್ದಾರಿ ಬಿಗ್ ಬಾಸ್ ಕೊಟ್ಟಿದ್ದಾರಾ?
- ಗಿಲ್ಲಿಗೆ ರಕ್ಷಿತಾ ಅವರ ಪರವಾಗಿ ಮಾತಾಡಿದ್ದಕ್ಕೆ ಕಿಚ್ಚನ ಚಪ್ಪಾಳೆ ಸಿಕ್ತಾ ಅಥವಾ ಮಾನವೀಯತೆ ಮತ್ತು ವಾಸ್ತವಂಶ, ಸತ್ಯದ ಪರ ಮಾತಾಡಿದ್ದಕ್ಕೆ ಕಿಚ್ಚನ ಚಪ್ಪಾಳೆ ಸಿಕ್ತಾ?
- ಗಿಲ್ಲಿ ಮತ್ತು ಕಾವ್ಯ ಅವರ ಸ್ನೇಹದಲ್ಲಿ ಕಾಣುವ ನಿಷ್ಕಲ್ಮಶ, ಅಶ್ವಿನಿ ಮತ್ತು ಜಾನ್ವಿ ಅವರ ಸ್ನೇಹದಲ್ಲಿ ಯಾಕೆ ಕಾಣುವುದಿಲ್ಲ.
- ಕಿಚ್ಚನ ಚಪ್ಪಾಳೆ ಗಿಲ್ಲಿಗೆ ಕೊಟ್ಟಿದ್ದು ಅಶ್ವಿನಿ ಗೌಡಗೆ ಹೊಟ್ಟೆ ಉರಿ ಬಂದಿದೆ. ಇವಳಿಂದ ಸಿಕ್ಕಿರೋದು ಅಂತಾನು ಹೇಳಿದ್ದಾಳೆ. ಇದರ ಬಗ್ಗೆ ಕೇಳಬೇಕು.
ಅಶ್ವಿನಿ ಹಾಗೂ ಜಾನ್ವಿಗೆ ಆತ್ಮಾವಲೋಕನ ಮಾಡಿಸಿ:
ಕಳೆದ ವಾರ ವೈಲ್ಡ್ ಕಾರ್ಡ್ ಸ್ಪರ್ಧಿ ರಘು ಮಾತಾಡುವ ಬರದಲ್ಲಿ ಸ್ವಲ್ಪ ಆಂಗ್ಲ ಭಾಷೆಯಲ್ಲಿ ಮಾತನಾಡಿದಕ್ಕೆ ಅಶ್ವಿನಿ ಮತ್ತು ಜಾನ್ವಿ ಇಬ್ಬರೂ ರಘು ಮೇಲೆ ಜೋರಾಗಿ ಮನಸೋ ಇಚ್ಛೆಯಂತೆ ಮಾತನಾಡಿದರು. ಈಗ ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ಬೇರೆಯವರ ತಪ್ಪುಗಳನ್ನ ಮಾತ್ರ ಎತ್ತಿ ತೋರಿಸುತ್ತಾ ಎಲ್ಲರಗಿಂತಲೂ ಹೆಚ್ಚಾಗಿ ಆಂಗ್ಲ ಬಾಷೆಯನ್ನ ಉಪಯೋಗಿಸುತ್ತಾರೆ. ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಾವು ಸರಿ ಇದ್ದೀರೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬುದನ್ನು ಅಶ್ವಿನಿ ಹಾಗೂ ಜಾನ್ವಿ ರವರಿಗೆ ತಿಳಿಹೇಳಬೇಕು.
ಅಶ್ವಿನಿ ಗೌಡ ಇಂಗ್ಲೀಷ್‌ನಲ್ಲಿ ಮಾತಾಡಿದ ವಿಟಿ ಹಾಕಿ ತೋರಿಸಿ:
- ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಬಿಗ್ ಬಾಸ್ ಆರಂಭವಾಗಿ 3 ವಾರದಲ್ಲಿ ಎಷ್ಟು ಸಲ ಇಂಗ್ಲಿಷ್ ಪದ ಬಳಕೆ ಮಾಡ್ದಿದಾರೆ ಎಂಬುದು ವಿಡಿಯೋ ಟ್ರೇಲರ್ (ವಿಟಿ) ಹಾಕಿ ತೋರಿಸಿ.
- ರಕ್ಷಿತಾ ಶೆಟ್ಟಿಗೆ ಎಸ್ ಕೆಟಗರಿ ಎಂದಿರುವುದಕ್ಕೆ ಅಶ್ವಿನಿ ಗೌಡ ಮತ್ತು ಜಾಹ್ನವಿಗೆ ಕ್ಲಾಸ್ ತಗೋಬೇಕು.
- ಅಶ್ವಿನಿ ಅವರಿಗೆ ಬೇರೆಯವರ ವಿಷಯದಲ್ಲಿ ಮೂಗು ತೋರಿಸಿ ತಂದಿಡುವ ಬುದ್ಧಿ ಕಡಿಮೆ ಮಾಡಿಕೊಳ್ಳುವಂತೆ ಸೂಕ್ತ ತಿಳುವಳಿಕೆ ನೀಡಿ.
- ಕಾಕ್ರೋಚ್ ಸುಧಿಗೆ ಸೆಡೆ ಪದದ ಅರ್ಥದ ಬಗ್ಗೆ ಸ್ವಲ್ಪ ಜನತೆಯ ಮುಂದೆ ವಿವರಣೆ ಕೊಡಲು ಹೇಳಿ. ಒಳ್ಳೆಯ ಪದ ಆದಲ್ಲಿ ನಾಳೆಯಿಂದ ಅವರ ಹೆಸರು ಸೆಡೆ ಸುಧೀರ್ ಎಂದು ಬದಲಾಯಿಸಬಹುದು.
ಕೌಟುಂಬಿಕ ಕಾರ್ಯಕ್ರಮದ ಅರ್ಥವನ್ನ ಅರ್ಥ ಮಾಡಿಸಿ. S ಕ್ಯಾಟಗರಿ ಅಂದ್ರೇನು...? ಇವರ ಕನ್ನಡ ಪರ ಹೋರಾಟಗಳ ಅರ್ಥ ಏನು..? ಚಿಕ್ಕವಳು ಅಂದ್ರೆ ಮೂಲೆಗುಂಪು ಮಾಡಬಹುದೆ..? ನಾವೇ ಒಳ್ಳೆಯವರು ಅನ್ನುವವರ ಅಸಲಿ ಮುಖವಾಡಗಳು ಇನ್ನೂ ಕಳಚಬೇಕು. ಸೇಫ್ ಗೇಮ್ ಆಡುತ್ತಿರುವವರ ಬಗ್ಗೇನೂ ಪ್ರಸ್ತಾಪಿಸಿ ಎಂದು ಆಗ್ರಹಿಸಿದ್ದಾರೆ.
ಕಾಕ್ರೋಚ್ ಸುಧಿಗೆ ಸ್ವಲ್ಪ ಬಿಸಿ ಮುಟ್ಟಿಸಬೇಕು. ಸೆಡೆ ಅನ್ನೋ ಪದದ ಅರ್ಥ ತಿಳಿಸಬೇಕು ಅವನಿಗೆ. ಅವನ ವಾಯ್ಸ್ ಕೇಳಿದರೇನೇ ಸೆಡೆಯಿದ್ದಂಗೆ ಇದೆ. ಪಾಪ ಆ ಹುಡುಗಿಗೆ ಹಾಗೆ ಸೆಡೆ ಅಂತನಲ್ಲ. ಇನ್ನೂ ಅಶ್ವಿನಿ ವಿಚಾರಕ್ಕೆ ಬಂದರೆ ಅದೇನೋ ಪುಂಗಿದಾಳಲ್ಲ ಗಿಲ್ಲಿಗೆ, ಗಿಲ್ಲಿನ ಆಚೆ ಕಳಿಸಿನೇ ನಾನು ಆಚೆಗೆ ಹೋಗಬೇಕು ಅಂತ ಆ ಚಾಲೆಂಜ್‌ನ ಅವಳೇ ಸ್ವೀಕರಿಸಬೇಕು. ನಾವು ಇದ್ದೀವಿ, ನಾವು ಇದ್ದೀವಿ ನಮ್ಮ ಹಳ್ಳಿ ಹೈದ ಗಿಲ್ಲಿನ ಗೆಲ್ಲಿಸಿನೇ ಹೊರಗಡೆ ಕರ್ಕೊಂಡು ಬರೋದು.
