ಬೆಂಗಳೂರು (ನ.22): ಆಡಳಿತಾರೂಡ ಕಾಂಗ್ರೆಸ್ ಪಕ್ಷದ ಗುಂಪುಗಳ ಜಗಳ ಈಗ ಬೀದಿಗೆ ಬಂದಿದ್ದು, ಹಿರಿಯ ನಾಯಕರಿಗೆ ಮುಜುಗರ ಸೃಷ್ಟಿಸಿದೆ. ಕಾಂಗ್ರೆಸ್‌ನ ಬಣ ರಾಜಕೀಯ ಉಲ್ಭಣವಾಗಿರುವ ರೀತಿ ಕಂಡು ಹೈಕಮಾಂಡ್ ಕೂಡ ತಲ್ಲಣಗೊಂಡಿದೆ. ಸಿಎಂ ಹುದ್ದೆಗೆ ಡಿಕೆಶಿ ಬಣದಿಂದ ಒತ್ತಡ ಹೇರುವ ತಂತ್ರ ತಾರಕಕ್ಕೆ ಏರಿದ್ದರೆ, ಐದು ವರ್ಷವೂ ಸಿದ್ದು ಸಿಎಂಎ ಎನ್ನುವ ಮೂಲಕ ಸಿದ್ದು ಬಣ ಪತ್ರಿತಂತ್ರ ಹೂಡಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
11:14 PM (IST) Nov 22
ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ, 2 ಗಂಟೆಯಿಂದ ಪ್ರಯಾಣಿಕರ ಪರದಾಟ, ಮೈಸೂರಿನಿಂದ ಹೊರಟ ರೈಲು ಚನ್ನಪಟ್ಟಣ ಬಳಿ ಕೆಟ್ಟು ನಿಂತಿದೆ. ರೈಲ್ವೆ ಪೊಲೀಸರು ಭೇಟಿ ನೀಡಿದ್ದಾರೆ.
10:32 PM (IST) Nov 22
ಬಿಗ್ ಬಾಸ್ ಬೆನ್ನಲ್ಲೇ ಕಾಮಿಡಿ ಕಿಲಾಡಿಗಳಿಗೂ ಸಂಕಷ್ಟ, ಹಾಸ್ಯ ಶೋ-ವಾಹಿನಿ ವಿರುದ್ಧ ದೂರು ದಾಖಲು, ಈಗಾಗಲೇ ಬಿಗ್ ಬಾಸ್ ಶೋ ವಿರುದ್ದ ಹಲವು ಕಾರಣಗಳಿಂದ ದೂರು ದಾಖಲಾಗಿದೆ. ಇದೀಗ ಕಾಮಿಡಿ ಕಿಲಾಡಿ ಶೋ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ.
09:56 PM (IST) Nov 22
ನಿರ್ದೇಶಕ ರಾಜಮೌಳಿ ಒಂದು ಸಿನಿಮಾ ಮುಗಿದ ತಕ್ಷಣ ಮುಂದಿನ ಸಿನಿಮಾದ ಕಥೆಯನ್ನು ಹೇಗೆ ಶುರು ಮಾಡುತ್ತಾರೆ? ಸ್ಟೋರಿ ಐಡಿಯಾವನ್ನು ಮೊದಲು ಯಾರೊಂದಿಗೆ ಹಂಚಿಕೊಳ್ಳುತ್ತಾರೆ? ಈ ಬಗ್ಗೆ ವಿವರ ಇಲ್ಲಿದೆ.
09:19 PM (IST) Nov 22
ಇತ್ತೀಚೆಗೆ ಉಪಾಸನಾ ನೀಡಿದ ಹೇಳಿಕೆಯೊಂದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಕ್ಕಳನ್ನು ಹೊಂದುವ ಬಗ್ಗೆ ಮಹಿಳೆಯರಿಗೆ ಮೆಗಾ ಸೊಸೆ ಉಪಾಸನಾ ನೀಡಿದ ಸಲಹೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಅವರು ಹೇಳಿದ ಎಗ್ ಫ್ರೀಜಿಂಗ್ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯುತ್ತಿದೆ.
08:49 PM (IST) Nov 22
ಟಾಲಿವುಡ್‌ನಲ್ಲಿ ರಾಮ್ ಚರಣ್, ಎನ್‌ಟಿಆರ್, ಪ್ರಭಾಸ್ ಅವರಂತಹ ಹೀರೋಗಳು ಮಾಡುವ ಸಿನಿಮಾಗಳನ್ನೇ ಮಾಡಲು ನೀನ್ಯಾಕೆ ಇಂಡಸ್ಟ್ರಿಯಲ್ಲಿ ಇರಬೇಕು ಎಂಬ ಪ್ರಶ್ನೆ ಸ್ಟಾರ್ ನಟನ ಮಗನಿಗೆ ಎದುರಾಯಿತಂತೆ. ಆ ಹೀರೋ ಯಾರು? ಹಾಗೆ ಪ್ರಶ್ನಿಸಿದ್ದು ಯಾರು? ಈ ಲೇಖನದಲ್ಲಿ ತಿಳಿಯೋಣ.
08:39 PM (IST) Nov 22
ನವೆಂಬರ್ ಕ್ರಾಂತಿ ಡೆಡ್‌ಲೈನ್ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಭೇಟಿಯಾದ ಸಿಎಂ , ಸದಾಶಿವನಗರದಲ್ಲಿರುವ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ, ಮಹತ್ವದ ಮಾತುಕತೆಗೆ ಮುಂದಾಗಿದ್ದಾರೆ.
08:29 PM (IST) Nov 22
ಹೇಮಂತ್ ಎಂ ರಾವ್ ಅವರ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದೆ. ಆದರೆ ಅದು ಇಷ್ಟು ಬೇಗ ನೆರವೇರುತ್ತದೆ ಅಂತ ಭಾವಿಸಿರಲಿಲ್ಲ ನಟಿ ಎಂದು ಪ್ರಿಯಾಂಕ ಮೋಹನ್ ಹೇಳಿಕೊಂಡಿದ್ದಾರೆ.
08:12 PM (IST) Nov 22
ಡಿಕೆ ಶಿವಕುಮಾರ್‌ಗೆ ಸಿಗುತ್ತಾ ಮುಖ್ಯಮಂತ್ರಿ ಸ್ಥಾನ? ಕಾರ್ಯಕರ್ತರ ಎಂಟ್ರಿಯಿಂದ ಹೊಸ ತಿರುವು, ಒಂದೆಡೆ ನಾಯಕರು ಡಿಕೆ ಶಿವಕುಮಾರ್ ಪರ ಲಾಭಿ ಆರಂಭಿಸಿದ್ದರೆ, ಇದೀಗ ಕಾರ್ಯಕರ್ತರು ಹೊಸ ದಾಳ ಉರುಳಿಸಿದ್ದಾರೆ.
07:48 PM (IST) Nov 22
ನಾನು ಬೇರೆ ಭಾಷೆಗಳಲ್ಲಿ ತುಂಬಾ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈ ಆಂಧ್ರ ಕಿಂಗ್ ತಾಲೂಕ ಚಿತ್ರ ಒಪ್ಪಿಕೊಳ್ಳುವುದಕ್ಕೆ ಕಾರಣ ಸೂರ್ಯ ಕುಮಾರ್ ಎನ್ನುವ ಪಾತ್ರ ಎಂದರು ರಿಯಲ್ ಸ್ಟಾರ್ ಉಪೇಂದ್ರ.
07:45 PM (IST) Nov 22
ಡಿಸಿಎಂ ಡಿಕೆ ಶಿವಕುಮಾರ್ ಅವರು ಜಲಸಂಪನ್ಮೂಲ ಮತ್ತು ಬಿಡಿಎ ಇಲಾಖೆಗಳಲ್ಲಿ ಬಾಕಿ ಇರುವ 61,846 ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸುವುದಾಗಿ ಘೋಷಿಸಿದ್ದಾರೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳು ಮತ್ತು ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
07:36 PM (IST) Nov 22
ಕರ್ಣ ಸೀರಿಯಲ್ ಖ್ಯಾತಿಯ ನಿಧಿ ಅಲಿಯಾಸ್ ಭವ್ಯಾ ಗೌಡ, 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯಲ್ಲಿ ತಮ್ಮ ಸಹೋದರಿಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಇಂಟಿರಿಯರ್ ಡಿಸೈನರ್ ಆಗಿರುವ ಅಕ್ಕ ವರ್ಷಿಣಿ ಮತ್ತು ಮೇಕಪ್ ಆರ್ಟಿಸ್ಟ್ ಆಗಿರುವ ತಂಗಿ ದಿವ್ಯಾ ಜೊತೆಗೂಡಿ, ಕುಟುಂಬದ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ.
07:32 PM (IST) Nov 22
ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾವನ್ನೇ ಶೇಕ್ ಮಾಡಿದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ಟಾಲಿವುಡ್ ಮೇಲೆ ಕಣ್ಣಿಟ್ಟಿದ್ದಾರೆ. ತೆಲುಗಿನ ಸ್ಟಾರ್ ಹೀರೋಗೆ ಕಥೆ ಹೇಳಿ ಗ್ರೀನ್ ಸಿಗ್ನಲ್ ಕೂಡ ಪಡೆದಿದ್ದಾರಂತೆ. ಅಷ್ಟಕ್ಕೂ ರಿಷಬ್ ಶೆಟ್ಟಿ ನಿರ್ದೇಶಿಸಲಿರುವ ಆ ಪ್ಯಾನ್ ಇಂಡಿಯಾ ಹೀರೋ ಯಾರು ಗೊತ್ತಾ?
07:10 PM (IST) Nov 22
ನನಗಿಂತ ಜಾಸ್ತಿ ಸಿನಿಮಾ ಪ್ರೀತಿಯುಳ್ಳ ನಿರ್ದೇಶಕ, ನಿರ್ಮಾಪಕ ವೇದ್‌ಗುರು ಅವರಿಗೆ ಈ ಸಿನಿಮಾದಿಂದ ಒಳ್ಳೆಯದಾಗಲಿ. ಇದೊಂದು ಒಳ್ಳೆಯ ಪ್ರಯತ್ನ, ಈ ಚಿತ್ರಕ್ಕೆ ಎಲ್ಲರ ಪ್ರೀತಿ- ಬೆಂಬಲ ಅಗತ್ಯವಿದೆ ಹೀಗೆ ಹೇಳಿದ್ದು ಅಜಯ್ ರಾವ್.
06:59 PM (IST) Nov 22
ಪಣಪಿಲದಲ್ಲಿ ನಡೆದ 16ನೇ ವರ್ಷದ ಜಯ-ವಿಜಯ ಕಂಬಳವು ವಿದೇಶಿ ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸಿತು. ಇದೇ ವೇಳೆ, ರಾಜ್ಯ ಕಂಬಳ ಅಸೋಸಿಯೇಷನ್ ಸರ್ಕಾರದಿಂದ 5 ಕೋಟಿ ರೂ. ಅನುದಾನಕ್ಕೆ ಬೇಡಿಕೆಯಿಟ್ಟಿದ್ದು, ಹೊಸ ನಿಯಮಗಳ ಬಗ್ಗೆಯೂ ಪ್ರಸ್ತಾಪಿಸಿದೆ.
06:53 PM (IST) Nov 22
ಶ್ರೀಕೃಷ್ಣನಿಗೆ (Sri Krishna) ಅಷ್ಟಮಹಿಷಿಯರು ಎಂಬ ಎಂಟು ಮುಖ್ಯ ಪತ್ನಿಯರಿದ್ದರು. ಇದರ ಜೊತೆಗೆ ನರಕಾಸುರನಿಂದ ಪಾರುಮಾಡಿದ 16,100 ಮಹಿಳೆಯರನ್ನು ಕೃಷ್ಣನು ವಿವಾಹವಾದ. ಆದರೆ ಇದರ ಹಿಂದಿನ ರಹಸ್ಯವೇನು?
06:35 PM (IST) Nov 22
ದುನಿಯಾ ವಿಜಯ್, ಶ್ರೇಯಸ್ ಮಂಜು ನಟನೆಯ, ಎಸ್. ನಾರಾಯಣ್ ನಿರ್ದೇಶನದ ಹಾಗೂ ಕೆ. ಮಂಜು, ರಮೇಶ್ ಯಾದವ್ ನಿರ್ಮಾಣದ ‘ಮಾರುತ’ ಸಿನಿಮಾ ನ.21ರಂದು ತೆರೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿ ಬೃಂದಾ ಆಚಾರ್ಯ ಮಾತನಾಡಿದ್ದಾರೆ.
06:19 PM (IST) Nov 22
ವಾರಣಾಸಿ ವಿವಾದದ ಬಗ್ಗೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ. ರಾಜಮೌಳಿಗೆ ಬೆಂಬಲ ನೀಡುತ್ತಲೇ, ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದಾರೆ. ಬಹಳ ದಿನಗಳ ನಂತರ ವರ್ಮಾ ತಮ್ಮ ಮಾರ್ಕ್ ಕಾಮೆಂಟ್‌ಗಳಿಂದ ಸದ್ದು ಮಾಡಿದ್ದಾರೆ.
06:07 PM (IST) Nov 22
ಯಾರು ಕೆಟ್ಟ ಕೆಲಸ ಮಾಡುತ್ತಿರುತ್ತಾರೋ ಇದ್ದಕ್ಕಿದ್ದಂತೆ ಅವರ ಸಾವು ಸಂಭವಿಸುತ್ತಿರುತ್ತದೆ. ಯಾರು ಕೊಲೆ ಮಾಡುತ್ತಿರುವವರು ಎಂದು ಕುತೂಹಲದಿಂದ ಕಾಯುವಷ್ಟರಲ್ಲಿಯೇ ಒಬ್ಬ ವ್ಯಕ್ತಿ ಆ ಕೊಲೆ ಮಾಡುತ್ತಿರುವುದು ತಾನೇ ಎಂದು ಸರೆಂಡರ್ ಆಗಿ ಬಿಡುತ್ತಾನೆ.
05:57 PM (IST) Nov 22
05:51 PM (IST) Nov 22
ಒಂದು ಸುಂದರ ಮಲೆನಾಡು. ಎಲ್ಲಿ ನೋಡಿದರಲ್ಲಿ ಹಸಿರು. ಅಲ್ಲೊಂದು ಪ್ರೇಮತಾಪದ ಜೋಡಿ. ಹೀರೋ ಅಕ್ಕಪಕ್ಕ ತರಲೆ ಪೋಲಿ ಗೆಳೆಯರು. ಹಸಿರು ಬೆಟ್ಟದ ಮೇಲೆ ಸುಂದರ ಡಾನ್ಸು. ಲಂಗ ದಾವಣಿಯ ಸಹನಟಿಯರು. ಪಂಚೆ ತೊಟ್ಟಿರುವ ಸಹ ನಟರು.
05:44 PM (IST) Nov 22
ಒಂದು ಐಟಿ ಕಂಪನಿ. ಅಲ್ಲಿ ಕೆಲಸ ಮಾಡುತ್ತಿರುವ ತನು ಮತ್ತು ರಕ್ಷಿ ನಡುವೆ ಸ್ನೇಹ, ನಂತರ ಪ್ರೀತಿ ಹುಟ್ಟಿಕೊಳ್ಳುತ್ತದೆ. ತನ್ನ ಪ್ರೀತಿಯನ್ನು ಹೇಳಿಕೊಳ್ಳುವ ಹೊತ್ತಿಗೆ ತನು ಒಂದು ಷರತ್ತು ಹಾಕುತ್ತಾಳೆ. ಈಗ ಸಿರಿ ಎಂಟ್ರಿ ಆಗುತ್ತಾಳೆ.
05:42 PM (IST) Nov 22
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಸಂಚರಿಸುತ್ತಿದ್ದ ಕಾರು ಅಪಘಾತ , ಕ್ಕೋಡಿ ತಾಲೂಕಿನ ನಾಗರಮುನ್ನೂಳಿ ಹೊರವಲಯದಲ್ಲಿ ಅಪಘಾತ ಸಂಭವಿಸಿದೆ. ರೈತ ಮುಖಂಡರ ಭೇಟಿ ವೇಳೆ ಅಪಘಾತವಾಗಿದೆ.
05:42 PM (IST) Nov 22
ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆಯ ಕ್ಷಣವನ್ನು ರಾಳ ಕಲಾವಿದೆ ಹರ್ಷಿತಾ ಅವರು ಒಂದು ಸುಂದರ ಕಲಾಕೃತಿಯಲ್ಲಿ ಸೆರೆಹಿಡಿದಿದ್ದಾರೆ. ಈ ಚಿತ್ರದಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಅನುಶ್ರೀ ಮತ್ತು ರೋಷನ್ ದಂಪತಿಗೆ ಆಶೀರ್ವಾದಿಸುತ್ತಿರುವಂತೆ ಚಿತ್ರಿಸಲಾಗಿದೆ.
05:40 PM (IST) Nov 22
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಿಧನರಾದಂತೆ ತೋರಿಸಲಾಗಿದ್ದ ಬಂಗಾರಮ್ಮ ಮತ್ತು ಸ್ನೇಹಾ ಪಾತ್ರಧಾರಿಗಳು ಇದೀಗ ಮತ್ತೆ ಒಂದಾಗಿದ್ದಾರೆ. ನಟಿಯರಾದ ಮಂಜು ಭಾಷಿಣಿ ಮತ್ತು ಸಂಜನಾ ಬುರ್ಲಿ ಅವರು ಹೊಸ ಧಾರಾವಾಹಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಕಥೆಗೆ ಹೊಸ ತಿರುವು ನೀಡಿದ್ದಾರೆ.
05:11 PM (IST) Nov 22
ಮದುವೆ ಫಿಕ್ಸ್ ಆಗಿದೆ, ಪ್ರೀವೆಡ್ಡಿಂಗ್ ಫೋಟೋಶೂಟ್ ನಡೀತಿದೆ, ಈ ನಡುವೆ ಮದುಮಗಳಿಗೆ ಫೋಟೋಗ್ರಾಫರ್ ಮೇಲೇ ಆಕರ್ಷಣೆ ಆಗಿದೆ. ಮುಂದ? ಹೀಗೊಂದು ಒನ್‌ಲೈನ್‌ನೊಂದಿಗೆ ಪ್ರೇಕ್ಷಕನಿಗೆ ಮುಖಾಮುಖಿಯಾಗುವ ಸಿನಿಮಾ‘ಫುಲ್ ಮೀಲ್ಸ್’.
04:46 PM (IST) Nov 22
ಮುಧೋಳದಲ್ಲಿ ನಡೆದ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಸಂತೋಷ್ ಲಾಡ್ ಭಾಗವಹಿಸಿದ್ದರು. ಈ ವೇಳೆ ಸೈಕ್ಲಿಂಗ್ ಪಟುವೊಬ್ಬರು ಸಚಿವರ ಹೆಸರನ್ನೇ ಕೇಳಿದ ಸ್ವಾರಸ್ಯಕರ ಘಟನೆ ನಡೆದರೆ, ಬಳಿಕ ಲಾಡ್ ಅಂಬೇಡ್ಕರ್ ಅವರ ಹಿಂದೂ ಕೋಡ್ ಬಿಲ್ ಬಗ್ಗೆ ಮಾತನಾಡಿದರು.
04:39 PM (IST) Nov 22
ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ 2 ಸಿನಿಮಾದ ಸೀಕ್ವೆಲ್ ಟ್ರೇಲರ್ ರಿಲೀಸ್ ಆಗಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿಯ ಚಿನ್ನಸಂದ್ರ ಬಳಿ ಟ್ರೇಲರ್ ರಿಲೀಸ್ ಮಾಡಲಾಯಿತು. ನಟ ಶಿವರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಭಾಗಿ ಬಾಲಯ್ಯ ಸಿನಿಮಾಕ್ಕೆ ಶುಭ ಹಾರೈಸಿದರು.
04:37 PM (IST) Nov 22
ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ತಮ್ಮ ವ್ಯಂಗ್ಯ ಮಾತುಗಳಿಂದಲೇ ಸದ್ದು ಮಾಡುತ್ತಿದ್ದಾರೆ. ಇದೀಗ ಸಹ ಸ್ಪರ್ಧಿಯೊಬ್ಬರು, ಗಿಲ್ಲಿ ನಟನಿಗೆ ಹೆದರಿಸಿ ಶಾಕ್ ಕೊಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಕುತೂಹಲ ಮೂಡಿಸಿದೆ.
04:36 PM (IST) Nov 22
ಕಾರನ್ನು ಫಾಲೋ ಮಾಡಿಕೊಂಡು ಬಂದ ಗ್ಯಾಂಗ್ ಸಿನಿಮಾ ಸ್ಟೈಲ್ ನಲ್ಲಿ ಬಂಡೀಪುರದ ಅರಣ್ಯದಲ್ಲಿ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಚಿನ್ನ ದರೋಡೆ ಮಾಡಿ ಹೋಗಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
03:43 PM (IST) Nov 22
ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರಾ ಅಮಿತ್ ಶಾ? ಸ್ಪಷ್ಟನೆ ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರ ಚರ್ಚೆಗಳ ಬೆನ್ನಲ್ಲೇ ಬಿಜೆಪಿ ಸಂಪರ್ಕದ ವರದಿಗಳ ಹರಿದಾಡುತ್ತಿದೆ.
03:37 PM (IST) Nov 22
ಜೆಡಿಎಸ್ ಪಕ್ಷದ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಶ್ಲಾಘಿಸಿದರು. ಸಿದ್ದರಾಮಯ್ಯನವರನ್ನು ಟೀಕಿಸಿದ ಅವರು, ಕುಮಾರಸ್ವಾಮಿಯವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ಘೋಷಿಸಿದರು.
03:33 PM (IST) Nov 22
ಬಿಗ್‌ಬಾಸ್ ಮನೆಯಲ್ಲಿ 'ಉತ್ತಮ' ಪದಕ ಪಡೆದ ಸೂರಜ್ ಪಕ್ಕ ನಿಂತ 'ಗಿಲ್ಲಿ ನಟ'ನನ್ನು ಜಾನ್ವಿ 'ಗೆದ್ದಿತ್ತಿನ ಬಾಲ ಹಿಡಿಯೋ ಸ್ಪರ್ಧಿ' ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ, ಈ ಹಿಂದಿನ ಜಗಳ ಮರೆತು ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿಯ ಆಟವನ್ನು ಮೆಚ್ಚಿ 'ಉತ್ತಮ' ಸ್ಪರ್ಧಿ ಎಂದು ಹೇಳಿದ್ದಾರೆ.
02:58 PM (IST) Nov 22
Annayya Kannada Serial: ಧಾರಾವಾಹಿಗಳಲ್ಲಿ ಹೀರೋ, ಹೀರೋಯಿನ್ ಪೋಷಕ ಪಾತ್ರಗಳಿಂದ ಹಿಡಿದು ಬದಲಾವಣೆ ಆಗುತ್ತಿರುತ್ತದೆ. ಕೆಲವರು ಮಾತ್ರ ಆರಂಭದಿಂದ ಅಂತ್ಯದವರೆಗೂ ಅವರ ಪಾತ್ರಕ್ಕೆ ಜೀವ ತುಂಬೋದುಂಟು. ಈಗ ಅಣ್ಣಯ್ಯ ಸೀರಿಯಲ್‌ನಿಂದ ಓರ್ವ ನಟಿ ಹೊರಬಂದಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
02:35 PM (IST) Nov 22
ಇಷ್ಟು ವಾರಗಳಿಂದ ಸ್ವಲ್ಪ ಸಮಾಧಾನದಿಂದ ಬಿಗ್ ಬಾಸ್ ಕನ್ನಡ 12 ಶೋನಲ್ಲಿ ವೀಕೆಂಡ್ ಎಪಿಸೋಡ್ ನಿರೂಪಣೆ ಮಾಡುತ್ತಿದ್ದ ಕಿಚ್ಚ ಸುದೀಪ್ ಈ ಬಾರಿ ಸ್ಪರ್ಧಿಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇವತ್ತು ನಾನು ಮುಖಕ್ಕೆ ಹೊಡೆದಂತೆ ಮಾತಾಡ್ತೀನಿ ಎಂದು ಅವರು ಮೊದಲೇ ಎಚ್ಚರಿಕೆ ಕೊಟ್ಟಿದ್ದರು.
02:22 PM (IST) Nov 22
ಬಿಗ್‌ಬಾಸ್ ಸ್ಪರ್ಧಿಯ ಬಾಲ್ಯದ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ, ಅವರು ತಮ್ಮ ತಂದೆಯ ಹೆಗಲ ಮೇಲೆ ಕುಳಿತಿರುವುದು ಕಂಡುಬಂದಿದೆ. ಈ ಲೇಖನವು ಅವರ ಬಿಗ್‌ಬಾಸ್ ಪಯಣ ಮತ್ತು ವೈರಲ್ ಆದ ಫೋಟೋದ ಕುರಿತು ವಿವರಿಸುತ್ತದೆ.
02:21 PM (IST) Nov 22
02:21 PM (IST) Nov 22
01:54 PM (IST) Nov 22
ಬಿಜೆಪಿ ಎಂಎಲ್‌ಸಿ ಎಚ್ ವಿಶ್ವನಾಥ್ ಅವರು ಕಾಂಗ್ರೆಸ್ ಸರ್ಕಾರದ ಅಧಿಕಾರ ಹಂಚಿಕೆ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಡಿಕೆಶಿ ಅವರಿಗೆ ನೀಡಿದ ಮಾತನ್ನು ಸಿದ್ದರಾಮಯ್ಯ ಉಳಿಸಿಕೊಳ್ಳಬೇಕು, ವಚನಭ್ರಷ್ಟರಾಗಬಾರದು. ಈ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.
01:39 PM (IST) Nov 22
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಘು ಅವರು ಅಶ್ವಿನಿ ಎಂದು ಕರೆದರು, ಏನು ಕಿತ್ತಾಕಿದ್ದೀರಾ ಅಂತ ಹೇಳಿದರು ಎಂದು ಬೇಸರ ಮಾಡಿಕೊಂಡ ಅಶ್ವಿನಿ ಗೌಡ ಅವರು ಎರಡು ದಿನಗಳ ಕಾಲ ಊಟ ಬಿಟ್ಟಿದ್ದರು. ಇವರ ವಿಚಾರದಲ್ಲಿ ಬಿಗ್ ಬಾಸ್ ಮಾನವೀಯತೆ ತೋರಿಸಿದೆ.
01:18 PM (IST) Nov 22
ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಿಂಗ್‌ಪಿನ್ ಎಕ್ಸೇವಿಯರ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರಿಗೆ ಸಿಎಂಎಸ್ ಸಿಬ್ಬಂದಿಯೇ ಸಹಾಯ ಮಾಡಿದ್ದಾರೆ.