Akhanda Movie: ನಂದಮೂರಿ ಬಾಲಕೃಷ್ಣ ಸಿನಿಮಾಕ್ಕೆ ಸಾಥ್ ನೀಡಿದ ಶಿವರಾಜ್‌ಕುಮಾರ್
ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ 2 ಸಿನಿಮಾದ ಸೀಕ್ವೆಲ್ ಟ್ರೇಲರ್ ರಿಲೀಸ್ ಆಗಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿಯ ಚಿನ್ನಸಂದ್ರ ಬಳಿ ಟ್ರೇಲರ್ ರಿಲೀಸ್ ಮಾಡಲಾಯಿತು. ನಟ ಶಿವರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಭಾಗಿ ಬಾಲಯ್ಯ ಸಿನಿಮಾಕ್ಕೆ ಶುಭ ಹಾರೈಸಿದರು.

ನಮ್ಮ ಬ್ರದರ್ ಸಿನಿಮಾ
ಟ್ರೇಲರ್ ಬಿಡುಗಡೆ ಬಳಿಕ ಶಿವಣ್ಣ ಮಾತನಾಡಿ, "ನಮ್ಮ ಬ್ರದರ್ ಸಿನಿಮಾದ ಟ್ರೇಲರ್ ಲಾಂಚ್ ಇವೆಂಟ್‌ಗೆ ಬಂದಿದ್ದೇನೆ. ನಾವು ಒಂದೇ ಕುಟುಂಬ. ಇವರ ತಂದೆ ನನಗೆ ದೊಡ್ಡಪ್ಪ. ಬಾಲಯ್ಯ ನನಗೆ ಅಣ್ಣ. ಇವರ ಕಾರ್ಯಕ್ರಮಕ್ಕೆ ಬರುವುದು ನಮಗೆ ಖುಷಿಯಾಗುತ್ತದೆ" ಎಂದರು.
ಅಖಂಡ ಸಿನಿಮಾ ಬಿಡುಗಡೆ
ನಟ ನಂದಮೂರಿ ಬಾಲಕೃಷ್ಣ ಮಾತನಾಡಿ, ‘ಕನ್ನಡ ಜನತೆಗೆ ನಮಸ್ಕಾರ. ನನ್ನ ತಮ್ಮ ಶಿವಣ್ಣ, ನನ್ನ ಅಭಿಮಾನಿಗಳಿಗೆ ಹಾಗೆ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿರುವವರಿಗೆ ಹೃದಯಪೂರ್ವಕ ಅಭಿನಂದನೆಗಳು. ಅಖಂಡ ಸಿನಿಮಾ ಬಿಡುಗಡೆಯಾಗುತ್ತಿದೆ. ಅಖಂಡ ಸಿನಿಮಾ ಕೇವಲ ತೆಲುಗು, ಕನ್ನಡ ಸಿನಿಮಾವಲ್ಲ. ಇದು ಪ್ಯಾನ್ ಇಂಡಿಯಾ ಸಿನಿಮಾ’ ಎಂದು ಹೇಳಿದರು.
ಡೈಲಾಗ್ ಹೇಳಿದ ಶಿವಣ್ಣ
ಆ ಬಳಿಕ ಶಿವಣ್ಣ ತಮ್ಮದೇ ಚಿತ್ರದ ಡೈಲಾಗ್ ಹೇಳಿದರು. ನಂತರ ಬಾಲಯ್ಯ ಅವರು ತಮ್ಮ ಸ್ಟೈಲ್ನಲ್ಲಿ ಡೈಲಾಗ್ ಹೊಡೆದಿದ್ದಾರೆ.
ಬೋಯಪಾಟಿ ಶ್ರೀನು ನಿರ್ದೇಶನ
ಬೋಯಪಾಟಿ ಶ್ರೀನು ನಿರ್ದೇಶನವಿದೆ. ಇದು ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ. ತಮನ್ ಮ್ಯೂಸಿಕ್ ನೀಡಿದ್ದಾರೆ. ಅಖಂಡ 2 ಸಿನಿಮಾ ಪ್ರತಿಷ್ಠಿತ ‘14 ರೀಲ್ಸ್ ಪ್ಲಸ್’ ಬ್ಯಾನರ್ ಮೂಲಕ ನಿರ್ಮಾಣವಾಗಿದೆ. ರಾಮ್ ಅಚಂತ, ಗೋಪಿಚಂದ್ ಅಚಂತ ಅವರು ನಿರ್ಮಾಣ ಮಾಡಿದ್ದಾರೆ. ಎಂ ತೇಜಸ್ವಿನಿ ನಂದಮೂರಿ ಅವರು ಈ ಸಿನಿಮಾವನ್ನು ಪ್ರಸ್ತುತಪಡಿಸಿದ್ದಾರೆ.
ಈ ಸಿನಿಮಾದಲ್ಲಿ ಯಾರಿದ್ದಾರೆ?
ಬಾಲಯ್ಯಗೆ ಜೋಡಿಯಾಗಿ ಸಂಯುಕ್ತಾ ನಟಿಸುತ್ತಿದ್ದಾರೆ. ಆದಿ ಪಿನಿಸೆಟ್ಟಿ ಅವರು ಈ ಸಿನಿಮಾಗೆ ಖಳನಾಯಕ. ಸಿ. ರಾಮಪ್ರಸಾದ್, ಸಂತೋಷ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಎ.ಎಸ್. ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ಡಿಸೆಂಬರ್ 5ರಂದು ರಿಲೀಸ್ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

