ಡಿಸಿಎಂ ಡಿಕೆ ಶಿವಕುಮಾರ್ ಅವರು ಜಲಸಂಪನ್ಮೂಲ ಮತ್ತು ಬಿಡಿಎ ಇಲಾಖೆಗಳಲ್ಲಿ ಬಾಕಿ ಇರುವ 61,846 ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸುವುದಾಗಿ ಘೋಷಿಸಿದ್ದಾರೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳು ಮತ್ತು ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಮೇಕೆದಾಟು ಯೋಜನೆಗೆ ಮತ್ತೆ ಡಿಪಿಆರ್ ಸಲ್ಲಿಕೆ ಸೇರಿದಂತೆ ಇಲಾಖೆಯ ವಿವಿಧ ವಿಷಯಗಳ ಬಗ್ಗೆ ‌ನಿರಂತರ ಸಭೆ ನಡೆಸಿರುವ ಡಿಸಿಎಂ ಡಿಕೆ ಶಿವಕುಮಾರ್ ವಕೀಲರು , ಇಲಾಖಾ ಅಧಿಕಾರಿಗಳು, ಸಚಿವರ ಸಭೆ‌ ಬಳಿಕ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಾಜ್ಯ ರಾಜಕೀಯದ ಕೆಲವೊಂದು ಹೇಳಿಕೆಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು. ಖರ್ಗೆ ಭೇಟಿ ಬಗ್ಗೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಒಂದೇ ಏರಿಯಾದಲ್ಲಿ ಇದ್ದೇವೆ. 100 ರಿಂದ 200 ಮೀಟರ್ ದೂರದಲ್ಲಿ ಇದ್ದೇವೆ. ಯಾವಾಗ ಬೇಕಿದ್ರು ಹೋಗಿ ಭೇಟಿಯಾಗುತ್ತೇನೆ ಎಂದರು.

ಇಲಾಖೆ ಕೇಸ್‌ಗಳಿಗೆ ಎಸ್ಐಟಿ ರಚನೆ

ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್, ಬೆಳಿಗ್ಗೆಯಿಂದ ಜಲಸಂಪನ್ಮೂಲ ಹಾಗೂ ಬಿಡಿಎ ಅಧಿಕಾರ ಸಭೆ ನಡೆಸಿದ್ದೇನೆ. ಇಲಾಖೆಯಲ್ಲಿ ಎಷ್ಟು ಕೇಸ್ ಇದೆ, ಯಾಕೆ ಕೇಸ್ ಮುಗಿದಿಲ್ಲ ಅನ್ನೋದರ ಬಗ್ಗೆ ಇಲಾಖೆಯಲ್ಲಿ ತನಿಖೆ ಮಾಡಿಸಿದ್ದೆ. ಸರ್ಕಾರದ ಮೇಲೆ ಬಹಳ ಹೊರೆ ಬರುವ ಸೂಚನೆ ನನಗೆ ಬಂದಿದೆ. ದೆಹಲಿಯ ಅಡ್ವೋಕೇಟ್ ಮೋಹನ್ ಕಾತರಕಿ ಸೇರಿ ಹಿರಿಯ ವಕೀಲರ‌ ಜೊತೆ ಝೂಮ್ ಲೈವ್ ನಲ್ಲೂ ಮಾತಾಡಿದ್ದೇನೆ. Land acquisition ವಿಚಾರದಲ್ಲಿ ಕೆಬಿಜೆಯಲ್ಲಿ ಒಂದು ನಿರ್ಧಾರ ತಗೊಂಡೆವು. ಸುಮಾರು 75 ಸಾವಿರ ಕೋಟಿ‌ ಹಣ ರೈತರಿಗೆ ನೀಡಲು ಬಾಕಿ ಇದೆ. ಒಟ್ಟಾರೆ 61,846 ಕೇಸ್ ಗಳು ಬಾಕಿ ಇವೆ. ಮಾಹಿತಿ ಪ್ರಕಾರ ಬಹಳ ಕೇಸ್ ಗಳಿವೆ. ಅಧಿಕಾರಿಗಳು , ಲೀಗಲ್ ಟೀಮ್ ಸೇರಿ‌ ಹಲವರು ನಿಯಮಿತಿ ಸಮಯದಲ್ಲಿ ಅಪ್ಲೈ ಮಾಡಿಲ್ಲ. ನವೆಂಬರ್ 10ರಂದು ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಇದೆ. ಇದರ‌ ಜೊತೆಗೆ ಎಸ್ಐಟಿ ಕೂಡ ನೇಮಕ ಮಾಡುತ್ತೇವೆ. ಆಫೀಸರ್ ಗಳ ಮೇಲೆ ಇಲಾಖಾ ವಿಚಾರಣೆ ನಡೆಸ್ತೇವೆ. ಯಾವ ವಕೀಲರು ಸರಿಯಾಗಿ ಕೋರ್ಟ್ ಗೆ ಇನ್ ಟೈಮ್ ಗೆ ಸಬ್ ಮಿಟ್ ಮಾಡಿಲ್ಲ ಅವರನ್ನ ಕೈಬಿಡ್ತೇವೆ ಎಂದರು.

ಹೊಸ ಆಯೋಗ ರಚನೆ

ನಿವೃತ್ತ ನ್ಯಾಯಮೂರ್ತಿ , ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗವನ್ನು ರಚಿಸುತ್ತೇವೆ. ಈ ಬಗ್ಗೆ ಅಂತಿಮ ತೀರ್ಮಾನ ಮಾಡ್ತೇವೆ. ಯಾವುದೇ ಅನುಕಂಪ ತೋರದೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ತೇವೆ. ನಮ್ಮ ಇಲಾಖೆಯವರನ್ನೇ ಪಾರ್ಟಿ ಮಾಡಿಲ್ಲ. ಹೀಗಾಗಿ ಹೈಕೋರ್ಟ್ ನಲ್ಲಿ ಮತ್ತೆ ರಿಟ್ ಪಿಟೀಷನ್ ಹಾಕ್ತೇವೆ. ಅನಗತ್ಯ ವಿಳಂಬ ಆಗಿದೆ. ಸರ್ಕಾರದ ಕಾನೂನು ರಕ್ಷಣೆಗಾಗಿ‌ ಅಮೆಂಡ್ ಮೆಂಟ್ ತರಲು ಚಿಂತನೆ ನಡೆದಿದೆ. ಪ್ರತ್ಯೇಕ‌ ಲೀಗಲ್ ಸೆಲ್ ಬಗ್ಗೆ ಚಿಂತನೆ ನಡೆದಿದೆ. ನಮ್ಮ ಲಾಯರ್ ಗಳು ಮಾಡುವ ವಾದವನ್ನ ರೆಕಾರ್ಡ್ ಮಾಡಿಸಲಾಗುವುದು. ಈ ವೇಳೆ ನಮ್ಮ ಅಧಿಕಾರಿಗಳು ಹೋಗಿದ್ದಾರಾ? ಇಲ್ವಾ? ಈ ಬಗ್ಗೆ ಕೂಡ ರಿಪೋರ್ಟ್ ತಯಾರಿಸಲಾಗುವುದು ಎಂದರು.

ಬ್ಯುಸಿನೆಸ್ ಕಾರಿಡಾರ್ ಗೆ ಆದಷ್ಟು ಬೇಗ ಪರಿಹಾರ

ಸುಪ್ರೀಂ ಕೋರ್ಟ್ ನಲ್ಲಿ ಎಸ್ ಎಲ್ ಪಿ ಹಾಕ್ತಿದೇವೆ. ಈ ಸಂಬಂಧ ಇದಕ್ಕೂ ಪ್ರತ್ಯೇಕ ಸೆಲ್ ಮಾಡ್ತೇವೆ. ಜಲಸಂಪನ್ಮೂಲ & ಬಿಡಿಎ ಎರಡೂ‌ ಕಡೆ ಇದೇ ರೀತಿ ಮಾನಿಟರಿಂಗ್ ಮಾಡ್ತೇವೆ. ಹಾಸನ ಸೇರಿ‌ ಹಲವೆಡೆ 9 ಲಕ್ಷ ಅವಾರ್ಡ್ ಆಗಿದ್ರೆ ಅದು ಈಗ 9 ರಿಂದ 23 ಕೋಟಿ ಆಗಿದೆ. ಅವಾರ್ಡ್ ಅಮೌಂಟ್ ಜಾಸ್ತಿ ಆಗಿದೆ. ಹೀಗಾಗಿ ಇದರ ಮಾನಿಟರಿಂಗ್ ಮಾಡ್ತೇವೆ. ಬ್ಯುಸಿನೆಸ್ ಕಾರಿಡಾರ್ ಗೆ ಆದಷ್ಟು ಬೇಗ ಪರಿಹಾರ ಒದಗಿಸ್ತೇವೆ. ರೈತರಿಗೂ ನಾವು‌ ಮಾಹಿತಿ ಕೊಡಬೇಕಿದೆ. ಐದಾರು ತಿಂಗಳಲ್ಲಿ ಇದನ್ನು ಮುಗಿಸ್ತೇವೆ. ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದ್ದೇವೆ. ಇತಿಹಾಸದಲ್ಲಿ ಇದೊಂದು ಐತಿಹಾಸಿಕ ತೀರ್ಮಾನ ಎಂದರು.

ಶೀಘ್ರವೇ ಸರ್ಪಪಕ್ಷ ಸಭೆ

ಮೇಕೆದಾಟು ಯೋಜನೆ ಸಂಬಂಧ ಕೆಲಸ ಮಾಡಿದ ಎಲ್ಲಾ ವಕೀಲರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಸರ್ವಪಕ್ಷ ಸಭೆ ಕರೆಯಬೇಕಾಗಿದೆ. ಈ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡಿ, ಇಲ್ಲಿ ಕರಿಯಬೇಕಾ? ದೆಹಲಿಯಲ್ಲಿ ಕರೆಯಬೇಕಾ? ಎಂದು ನಿರ್ಧಾರ ಮಾಡುತ್ತೇವೆ. ರಾಜ್ಯದ ಡ್ಯಾಮಗಳ ಹಣೆ ಬರಹ ನಮ್ಮ ಮುಂದೆನೇ ಇದೆ. ನಮ್ಮ ನೀರು ನಮ್ಮ ಹಕ್ಕು ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಈ ವೇಳೆ ಹೇಳಿದರು.