LIVE NOW
Published : Jan 22, 2026, 06:45 AM ISTUpdated : Jan 22, 2026, 09:30 AM IST

Karnataka News Live: ಬೆಂಗಳೂರು ನಗರದಲ್ಲಿ ಶೀಘ್ರವೇ ಪೇ ಆ್ಯಂಡ್‌ ಪಾರ್ಕ್‌ ಜಾರಿ

ಸಾರಾಂಶ

ಉರುಸು ಮೆರವಣಿಗೆ ವೇಳೆ ಹಿಂದೂ ಯುವತಿ ಬುರುಕಾ ಧರಿಸಿದ ವಿಚಾರಕ್ಕೆ ಹಿಂದೂ ಯುವಕರ ಮೇಲೆ ಮುಸ್ಲಿಂ ಹುಡುಗರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಬು ಸುಲ್ತಾನ್, ನೂರ್ ಅಹ್ಮದ್, ಮೊಹಮದ್ ನೈದ್, ಅಭಿದ್ ಅಹಮದ್ ಸೇರಿದಂತೆ 10 ಮುಸ್ಲಿಂ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪಟ್ಟಣದ ದರ್ಗಾದ ಮೈದಾನದಲ್ಲಿ ನಡೆಯುತ್ತಿರುವ ಉರುಸ್‌ನಲ್ಲಿ ಸುತ್ತಾಡಿಕೊಂಡು ಬರಲೆಂದು ಪಟ್ಟಣದ ದಿರೀಡ್‌ ನಗರದ ಹಿಂದೂ ಸಮುದಾಯದ ಮೂವರು ಹುಡುಗರು, ಒಬ್ಬ ಹುಡುಗಿ ಮತ್ತು ಮುಸ್ಲಿಂ ಸಮುದಾಯದ ಇಬ್ಬರು ಹುಡುಗ, ಹುಡುಗಿ ಒಟ್ಟಾಗಿ ಬಂದಿದ್ದರು. ಈ ವೇಳೆ 20 ಮುಸ್ಲಿಂ ಹುಡುಗರು ಏಕಾಏಕಿ ಬಂದು ಹಿಂದೂ ಹುಡುಗಿ ಹಾಕಿಕೊಂಡಿದ್ದ ಬುರುಕಾ ತೆಗೆಸಿ ನೀನು ಯಾವ ಜಾತಿ? ನಿನ್ನ ಆಧಾರ್ ಕಾರ್ಡ್ ತೋರಿಸು? ಎಂದು ಗಲಾಟೆ ಮಾಡಿದ್ದಾರೆ. ಆಗ ಜತೆಗಿದ್ದ ಹಿಂದೂ ಹುಡುಗರ ಮೇಲೆಯೂ ಈ ಪುಂಡರು ಹಲ್ಲೆ ಮಾಡಿದ್ದರಿಂದ ಸಾವಿರಾರು ಸಂಖ್ಯೆಯ ಜನರು ಜಮಾಯಿಸಿದರು. 

ಹಿಂದೂ ಜಾರಗಣೆ ವೇದಿಕೆಯ ಮುಖಂಡರು, ಭಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಜಮಾಯಿಸಿದ್ದರಿಂದ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತ್ತು. ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಕೆಜಿಎಫ್ ಎಸ್‌ಪಿ ಪರಿಸ್ಥಿತಿ ತಿಳಿಗೊಳಿಸಿದರು.

09:30 AM (IST) Jan 22

ಬೆಂಗಳೂರು ನಗರದಲ್ಲಿ ಶೀಘ್ರವೇ ಪೇ ಆ್ಯಂಡ್‌ ಪಾರ್ಕ್‌ ಜಾರಿ

ಇನ್ನು ಮುಂದೆ ನಗರದಲ್ಲಿ ಬೇಕಾಬಿಟ್ಟಿ ಬೈಕ್‌, ಕಾರು ಪಾರ್ಕಿಂಗ್‌ ಮಾಡಲು ಅವಕಾಶವಿರಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಲ್ಲ ನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿ ಎರಡು ರೀತಿಯ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿ ಪೇ ಆ್ಯಂಡ್ ಪಾರ್ಕ್ ಜೊತೆಗೆ ಟೋಯಿಂಗ್‌ಗೂ ಮುಂದಾಗಿದ್ದು, ಶೀಘ್ರ ಜಾರಿಗೆ ಬರಲಿದೆ.

Read Full Story

09:21 AM (IST) Jan 22

ರೀಲ್ಸ್‌ ಹುಚ್ಚಿಗೆ ತನ್ನದೇ ಟ್ರ್ಯಾಕ್ಟರ್‌ ಗಾಲಿಗೆ ಸಿಲುಕಿ ಕಲಬುರಗಿಯ 23 ವರ್ಷದ ರೈತ ಸಾವು

ಕಲಬುರಗಿಯಲ್ಲಿ ರೀಲ್ಸ್ ಮಾಡುವಾಗ ಯುವ ರೈತ ಟ್ರ್ಯಾಕ್ಟರ್‌ಗೆ ಸಿಲುಕಿ ಮೃತಪಟ್ಟರೆ, ಬೆಳಗಾವಿಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. 

Read Full Story

09:02 AM (IST) Jan 22

ಮರದಿಂದ ಬಿದ್ದವನಿಗೆ ಚಿಕಿತ್ಸೆ ಕೊಡಿಸದೇ ತಂತಿ ಕಟ್ಟಿ ಬಾವಿಗೆಸೆದ ಸ್ನೇಹಿತರಿಬ್ಬರ ಬಂಧನ

ನಾಪತ್ತೆಯಾಗಿದ್ದ ವಿನೋದ್ ಎಂಬ ಯುವಕನ ಶವ ಬಾವಿಯಲ್ಲಿ ಪತ್ತೆಯಾಗಿದೆ. ಹೊಸ ವರ್ಷದ ಪಾರ್ಟಿ ವೇಳೆ ಮರದಿಂದ ಬಿದ್ದು ಗಾಯಗೊಂಡಿದ್ದ ವಿನೋದ್‌ನನ್ನು, ಆಸ್ಪತ್ರೆಗೆ ಸೇರಿಸುವ ಭಯದಿಂದ ಆತನ ಸ್ನೇಹಿತರಾದ ಸುದೀಪ್ ಮತ್ತು ಪ್ರಜ್ವಲ್ ಕಲ್ಲಿಗೆ ಕಟ್ಟಿ ಬಾವಿಗೆ ಎಸೆದು ಕೊ*ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

Read Full Story

08:56 AM (IST) Jan 22

ಉಡುಪಿ ಪರ್ಯಾಯ ವೇಳೆ ಕೇಸರಿ ಧ್ವಜ ಹಿಡಿದ ಜಿಲ್ಲಾಧಿಕಾರಿ ಸ್ವರೂಪಾ ವಿರುದ್ಧ ಕಾಂಗ್ರೆಸ್ ದೂರು

ಉಡುಪಿ ಪರ್ಯಾಯ ಉತ್ಸವದ ವೇಳೆ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ ಅವರು ಕೇಸರಿ ಧ್ವಜ ಹಿಡಿದಿದ್ದಾರೆ ಎಂದು ಉಡುಪಿ ಕಾಂಗ್ರೆಸ್ ಘಟಕವು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ತಮ್ಮ ಭಾಗವಹಿಸುವಿಕೆ ಅಧಿಕೃತವಾಗಿದ್ದು, ರಾಜಕೀಯ ಪ್ರೇರಿತವಲ್ಲ ಎಂದಿದ್ದಾರೆ.

Read Full Story

08:43 AM (IST) Jan 22

ಮಂಗಳೂರು- ಕಾಸರಗೋಡು ಮಾರ್ಗದಲ್ಲಿ ಟೋಲ್ ವಸೂಲಿ ಮುನ್ನವೇ KSRTC ಟಿಕೆಟ್ ದರ ಹೆಚ್ಚಳ ಬರೆ!

KSRTC bus fare hike Mangaluru: ಮಂಗಳೂರು-ಕಾಸರಗೋಡು ಮಾರ್ಗದ ಕುಂಬಳೆಯಲ್ಲಿ ಅಧಿಕೃತ ಟೋಲ್ ವಸೂಲಿ ಆರಂಭವಾಗುವ ಮುನ್ನವೇ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ. 

Read Full Story

08:25 AM (IST) Jan 22

ಏನಿದು, ಯಾಕಿದು ವಾರಾಹಿ ನದಿಯ ಸಿದ್ಧಾಪುರ ಏತ ನೀರಾವರಿ ವಿವಾದ? ಅಡ್ಡಗಾಲು ಹಾಕಿದ್ಯಾರು?

ವಾರಾಹಿ ನದಿಯ ಸಿದ್ಧಾಪುರ ಏತ ನೀರಾವರಿ ಯೋಜನೆಯು ಸಾವಿರಾರು ರೈತರಿಗೆ ಅನುಕೂಲವಾಗುವ ನಿರೀಕ್ಷೆಯಲ್ಲಿದ್ದಾಗ ಸ್ಥಗಿತಗೊಂಡಿದೆ. ಖಾಸಗಿ ಜಲ ವಿದ್ಯುತ್ ಸ್ಥಾವರದ ಹಿತಾಸಕ್ತಿಗಾಗಿ ಈ ಯೋಜನೆಯನ್ನು ನಿಲ್ಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ರೈತರ ತೀವ್ರ ಹೋರಾಟಕ್ಕೆ ಕಾರಣವಾಗಿದೆ.
Read Full Story

08:12 AM (IST) Jan 22

Kodagu - ಕೊಡಗಿನ ಕಾಡು ಕಾಯಲು 'ಅಗ್ನಿ' ರಣತಂತ್ರ - ಬೆಂಕಿ ರೇಖೆ ನಿರ್ಮಾಣ ಕಾರ್ಯ ಬಿರುಸು

ಬೇಸಿಗೆಯಲ್ಲಿ ಸಂಭವಿಸಬಹುದಾದ ಕಾಡ್ಗಿಚ್ಚನ್ನು ತಡೆಯಲು ಕೊಡಗು ಅರಣ್ಯ ಇಲಾಖೆ ಸಜ್ಜಾಗಿದೆ. ಬೆಂಕಿ ರೇಖೆ ನಿರ್ಮಾಣ, ಫೈರ್ ವಾಚರ್‌ಗಳ ನೇಮಕ, ತಂತ್ರಜ್ಞಾನ ಬಳಕೆ ಹಾಗೂ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುವಂತಹ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
Read Full Story

07:38 AM (IST) Jan 22

ಲಕ್ಕುಂಡಿ ಉತ್ಖನನ 6ನೇ ದಿನ ಏನೆಲ್ಲಾ ಆಯ್ತು? 7 ತಲೆಯ ಹಾವು ಇರೋದು ನಿಜವೇ? ಬಯಲಾಯ್ತು ಬೆಚ್ಚಿಬೀಳಿಸೋ ಸತ್ಯ!

ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆಯ ಉತ್ಖನನದಲ್ಲಿ ಪ್ರಾಚೀನ ಎಲುಬಿನ ಚೂರುಗಳು ಮತ್ತು ಮಣ್ಣಿನ ಬಿಲ್ಲೆ ಪತ್ತೆಯಾಗಿವೆ. ಈ ಐತಿಹಾಸಿಕ ಸ್ಥಳವು ಶೈಕ್ಷಣಿಕ ಅಧ್ಯಯನ ಕೇಂದ್ರವಾಗಿ ಮಾರ್ಪಟ್ಟಿದ್ದು, ನಿಧಿ ಕುರಿತ ಮೂಢನಂಬಿಕೆಗಳು ಮತ್ತು ಸ್ಥಳೀಯರ ಹಕ್ಕುಗಳ ಬಗ್ಗೆ ಸಾಮಾಜಿಕ ಚರ್ಚೆಗೂ ಕಾರಣವಾಗಿದೆ.

Read Full Story

07:25 AM (IST) Jan 22

ಗ್ರೀನ್‌ಲ್ಯಾಂಡ್‌ನ ಬಳಿಕ ಹಿಂದು ಹಿಂದೂ ಮಹಾಸಾಗರಕ್ಕೆ ಟ್ರಂಪ್‌ ಕಣ್ಣು

ರಕ್ಷಣೆ ಮತ್ತು ಸಂಪನ್ಮೂಲದ ವಿಷಯದಲ್ಲಿ ಅತ್ಯಂತ ಮಹತ್ವವಿರುವ ಗ್ರೀನ್‌ಲ್ಯಾಂಡ್‌ ದ್ವೀಪ ವಶದ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಲೇ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕಣ್ಣು ಇದೀಗ ಹಿಂದೂ ಮಹಾಸಾಗರದಲ್ಲಿ ಪುಟ್ಟ ದ್ವೀಪದ ಡಿಯಾಗೋ ಗಾರ್ಸಿಯೋದ ಮೇಲೆ ಬಿದ್ದಿದೆ.

Read Full Story

07:25 AM (IST) Jan 22

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ₹4500 ಕೋಟಿ - ಸಚಿವ ಜಮೀರ್ ಅಹ್ಮದ್ ಖಾನ್

ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡವನ್ನು ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ವಸತಿ ಶಾಲೆಗಳಿಗೆ ಡಿಜಿಟಲ್ ಕ್ಲಾಸ್ ರೂಮ್ ಸೌಲಭ್ಯ ಹಾಗೂ 100 ಹೊಸ ಶಾಲೆಗಳ ಸ್ಥಾಪನೆಯನ್ನು ಘೋಷಿಸಿದರು.

Read Full Story

07:18 AM (IST) Jan 22

ಅಮೆರಿಕ-ಇಯು ತೆರಿಗೆ ಸಮರ - ವ್ಯಾಪಾರ ಒಪ್ಪಂದಕ್ಕೆ ಬ್ರೇಕ್‌

ಗ್ರೀನ್‌ಲ್ಯಾಂಡ್‌ ವಶ ಕುರಿತು ದಾವೋಸ್‌ ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಪುನರುಚ್ಚಾರ ಮಾಡಿದ ಬೆನ್ನಲ್ಲೇ, ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ ಮಾತುಕತೆ ಸ್ಥಗಿತಗೊಳಿಸಲು ಯುರೋಪಿಯನ್‌ ಸಂಸತ್‌ ನಿರ್ಧರಿಸಿದೆ.

Read Full Story

07:11 AM (IST) Jan 22

ಬೆಂಗಳೂರಿನಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಟಾಪ್ 10 ಉದ್ಯೋಗಗಳು - ಮೊದಲ ಸ್ಥಾನದಲ್ಲಿ ಎಐ ಎಂಜಿನಿಯರ್

ಲಿಂಕ್ಡ್‌ಇನ್‌ನ ‘ಜಾಬ್ಸ್ ಆನ್ ದಿ ರೈಸ್ 2026’ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಎಐ ಇಂಜಿನಿಯರ್ ಹುದ್ದೆಯು ಅತಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗವಾಗಿದೆ. ತಂತ್ರಜ್ಞಾನದ ಬದಲಾವಣೆಗೆ ಬೇಕಾದ ಕೌಶಲ್ಯಗಳ ಕೊರತೆ ಮತ್ತು ಹೆಚ್ಚುತ್ತಿರುವ ಪೈಪೋಟಿಯ ಬಗ್ಗೆ ಅನೇಕ ವೃತ್ತಿಪರರು ಆತಂಕ ವ್ಯಕ್ತಪಡಿಸಿದ್ದಾರೆ. 

Read Full Story

More Trending News