ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಇಂದು ರಾಜ್ಯದೆಲ್ಲೆಡೆ ಯೋಗಾಭ್ಯಾಸ ನಡೆಸಲಾಗುತ್ತಿದೆ. ವಿಧಾನಸೌಧ ಮುಂಭಾಗದ ಮೆಟ್ಟಿಲಲ್ಲಿ 12 ನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಆಯುಷ್ ಇಲಾಖೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದ್ದಾರೆ. ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಪರಮೇಶ್ವರ ,ಯು ಟಿ ಖಾದರ್,ಸೇರಿದಂತೆ ಹಲವು ಗಣ್ಯರು. ಭಾಗಿಯಾಗಿದ್ದಾರೆ..ಸುಧಾರಾಣಿ,ವಶಿಷ್ಠ ಸಿಂಹ ,ಹರಿಪ್ರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಲ್ಲಿ ಭಾಗಿಯಾಗಿದ್ದಾರೆ.

10:07 PM (IST) Jun 21
ಅಯೋಗ್ಯ 2 ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗದ ಏಕತೆ ಬಗ್ಗೆ ಮಾತನಾಡಿದ್ದಾರೆ. ಸಣ್ಣಪುಟ್ಟ ಜಗಳ, ಮುನಿಸು ಮರೆತು ಸಿನಿಮಾಗಾಗಿ ಒಂದಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದ್ದಾರೆ.
08:54 PM (IST) Jun 21
Mallikarjun Kharge: ಬಿ.ಕೆ. ಹರಿಪ್ರಸಾದ್ ಪದಗ್ರಹಣ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಪರ ಘೋಷಣೆಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದಾರೆ. ವ್ಯಕ್ತಿಪೂಜೆ ಬೇಡ, ಪಕ್ಷದ ಶಿಸ್ತು ಕಾಪಾಡಿ ಎಂದು ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
08:22 PM (IST) Jun 21
Nora Fatehi: ಫಿಫಾ ವಿಶ್ವಕಪ್ 2026ರ ಉದ್ಘಾಟನಾ ಸಮಾರಂಭದಲ್ಲಿ ನೀಡಿದ ಭರ್ಜರಿ ಪ್ರದರ್ಶನದ ಬಳಿಕ ನೋರಾ ಫತೇಹಿ ಜಾಗತಿಕ ಮಟ್ಟದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಗೂಗಲ್ ಟ್ರೆಂಡ್ಸ್‌ನಲ್ಲಿ ಬಾಲಿವುಡ್ ತಾರೆಯರನ್ನು..
06:42 PM (IST) Jun 21
ಇಷ್ಟು ವರ್ಷಗಳ ಕಾಲ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿಯ ಆಟ ನೋಡಿದ್ದ ವೀಕ್ಷಕರಿಗೆ ಈಗ ವೈಭವ್ ಸೂರ್ಯವಂಶಿ ಆರ್ಭಟ ನೋಡುವ ಸಮಯ ಸಿಕ್ಕಿದೆ. ಕೇವಲ 15 ವರ್ಷದ ಹುಡುಗನೊಬ್ಬ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‌ನ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಸಾಮಾನ್ಯ ಪ್ರತಿಭೆ ಅಲ್ಲ.
06:20 PM (IST) Jun 21
Shankhpushpi or aparajita gardening tips india: ಅಪರಾಜಿತಾ ಗಿಡವನ್ನು ಸರಿಯಾದ ಮಣ್ಣು, ಬಿಸಿಲು ಮತ್ತು ಆರೈಕೆಯಿಂದ ಬೆಳೆಸಬಹುದು. ಆದರೆ, ಇದರಲ್ಲಿ ಹೂಗಳು ಹೆಚ್ಚಾಗಿ ಬರಲು ಟೀ ಪುಡಿ ಮತ್ತು ಫಿಟ್ಕರಿ (ಪಟಿಕ) ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
06:02 PM (IST) Jun 21
Fathers Day Kannada movie: ELEVEN ELEMENTS ಸಂಸ್ಥೆ ಲಾಂಛನದಲ್ಲಿ ರಾಜಾರಾಮ್ ರಾಜೇಂದ್ರನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಚಿತ್ರ "ಫಾದರ್ಸ್ ಡೇ". ತಂದೆ - ಮಗನ ಬಾಂಧವ್ಯ ಸಾರುವ ಈ ಚಿತ್ರದ ಟ್ರೇಲರ್ ಫಾದರ್ಸ್ ಡೇ ದಿನದಂದೆ ಬಿಡುಗಡೆಯಾಗಿದೆ.
05:46 PM (IST) Jun 21
Yash Movies: ಕಳೆದ 4 ವರ್ಷಗಳಿಂದ ದೊಡ್ಡ ಪರದೆಯಿಂದ ದೂರವಿದ್ದ ಯಶ್, ತಮ್ಮ 'ಟಾಕ್ಸಿಕ್' ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. 2026-27ರಲ್ಲಿ ಅವರ ಹಲವು ದೊಡ್ಡ ಸಿನಿಮಾಗಳು ತೆರೆಗೆ ಬರಲಿವೆ. ಪೂರ್ತಿ ಡೀಟೇಲ್ಸ್ ಇಲ್ಲಿದೆ.
05:22 PM (IST) Jun 21
05:06 PM (IST) Jun 21
Sreeleela: ಅಂತರಾಷ್ಟ್ರೀಯ ಯೋಗ ದಿನದಂದು ನಟಿ ಶ್ರೀಲೀಲಾ ಯೋಗದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಇಂದಿನ ಒತ್ತಡ ಮತ್ತು ಆತಂಕದ ಬದುಕಿನಲ್ಲಿ ಯೋಗ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು ಎಂದು ಅವರು ಕರೆ ನೀಡಿದ್ದಾರೆ.
04:56 PM (IST) Jun 21
04:48 PM (IST) Jun 21
Gangavathi ತಾಲೂಕಿನ ತಿಮಲಾಪುರ ಗ್ರಾಮದ ಪುರಾತನ ಲಕ್ಷ್ಮೀ ದೇಗುಲದಲ್ಲಿ ನಿಧಿಗಾಗಿ ಕಳ್ಳರು ಶೋಧನೆ ನಡೆಸಲು ಯತ್ನಿಸಿದ್ದಾರೆ. ವಿಜಯನಗರ ಕಾಲದ ದೇಗುಲದಲ್ಲಿ ನಿಧಿ ಇದೆ ಎಂಬ ಅನುಮಾನದಿಂದ ದೇಗುಲಕ್ಕೆ ಹಾನಿ ಮಾಡಲಾಗಿದೆ.
04:35 PM (IST) Jun 21
Bhavya Gowda Sister Divya Gowda: ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಭವ್ಯಾ ಗೌಡ ಭಾಗವಹಿಸಿದ್ದರು. ಈಗ ಧಾರಾವಾಹಿಯಲ್ಲಿ ನಟಿಸುತ್ತಿರುವ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರು ಮದುವೆ ಆಗಲು ರೆಡಿ ಆಗಿದ್ದಾರೆ. ಹೂ ಮುಡಿಸೋ ಶಾಸ್ತ್ರ ಕೂಡ ಆಗಿದೆ.
04:13 PM (IST) Jun 21
Bigg Boss Gilli Nata New Movie: ಗಿಲ್ಲಿ ನಟ ಅವರಿಗೆ ಇಂದು ಜನ್ಮದಿನದ ವಿಶೇಷ. ಈ ದಿನವೇ ಅವರ ‘ಪಳಾರ್’ ಸಿನಿಮಾ ಘೋಷಣೆ ಆಗಿದೆ. ಈ ಹಿಂದೆ ಬಿಗ್ ಬಾಸ್ ಶೋನಲ್ಲಿದ್ದಾಗ ಗಿಲ್ಲಿ ನಟ ಅವರಿಗೆ ಪಳಾರ್ ಗಿಲ್ಲಿ ಎಂಬ ಬಿರುದು ಸಿಕ್ಕಿತ್ತು. ಈಗ ಈ ಹೆಸರಿನಲ್ಲೇ ಸಿನಿಮಾ ಅವಕಾಶ ಸಿಕ್ಕಿದೆ.
03:51 PM (IST) Jun 21
19ರ ಹರೆಯದ ಅಮೂಲ್ಯ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಘಟನೆ ಬಳಿಕ ಪತಿ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಅಮೂಲ್ಯ ಬಾಳಲ್ಲಿ ಏನಾಯಿತು?
02:39 PM (IST) Jun 21
02:09 PM (IST) Jun 21
ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್ ಉಂಟಾಗಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ನಿಲ್ದಾಣದ ಹೊರಗೆ ಅಳವಡಿಸಿದ್ದ ನೇಮ್ ಬೋರ್ಡ್‌ನಲ್ಲಿನ ಬೆಂಕಿ ಕಾಣಿಸಿಕೊಂಡಿದೆ.
01:51 PM (IST) Jun 21
01:44 PM (IST) Jun 21
ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರನ್ನು ಒಂದೇ ಫ್ರೇಮ್‌ನಲ್ಲಿ ನೋಡುವುದೇ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಹಬ್ಬದಂತಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರ ಈ ಪ್ರಾಜೆಕ್ಟ್ ಸದ್ಯಕ್ಕೆ ಇಂಡಿಯನ್ ಸಿನೆಮಾ ಇಂಡಸ್ಟ್ರಿಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳ ಪಟ್ಟಿಯಲ್ಲಿದೆ.
01:43 PM (IST) Jun 21
Darshan Thoogudeepa: ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗಾಗಿ ವಿಶೇಷ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಯೋಗ ದಿನಾಚರಣೆಯಲ್ಲಿ ಭಾಗಿ ಆಗಿದ್ದಾರೆ.
12:50 PM (IST) Jun 21
12:46 PM (IST) Jun 21
12:28 PM (IST) Jun 21
ನೆಲಮಂಗಲ ಬಳಿ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ. ಪರಿಣಾಮ ಇದೇ ರೈಲಿನಲ್ಲಿ ಸಾಗುತ್ತಿದ್ದ ನೀಟ್ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇತ್ತ ಬೇರೆ ರೈಲಿಗೆ ಮಾರ್ಗವಿಲ್ಲದೆ ಸಂಚಾರ ಅಸ್ತವ್ಯಸ್ತಗೊಂಡಿದೆ.
12:19 PM (IST) Jun 21
12:11 PM (IST) Jun 21
11:56 AM (IST) Jun 21
ಇಲ್ಲಿ ಹೇಳಹೊರಟಿರುವುದು ಮದುವೆ ಆಗಬೇಕೋ ಬೇಡವೋ, ಪೋಷಕರು ಸರಿಯೋ ಅಥವಾ ಮಕ್ಕಳು ಸರಿಯೋ ಎಂಬ ಚರ್ಚೆಯಲ್ಲ. ಆದರೆ, ಮದುವೆ ಆದವರಿಗೂ ಆಗದಿರುವವರಿಗೂ ಇರುವ ವ್ಯತ್ಯಾಸ.. ಏನೆಲ್ಲಾ ಇದೆ? ತುಂಬಾ ಆಸಕ್ತಿಕರವಾಗಿದೆ ನೋಡಿ..
11:48 AM (IST) Jun 21
ವಿಜಯಪುರ ಜಿಲ್ಲೆಯ ಘೋಣಸಗಿ ಗ್ರಾಮದಲ್ಲಿ ಸೂರ್ಯನ ಸುತ್ತ ಬಂಗಾರದ ಉಂಗುರಾಕಾರದ ವಿಸ್ಮಯ ಕಂಡುಬಂದಿದೆ. 'ಸನ್ ಹ್ಯಾಲೋ' ಎಂದು ಕರೆಯಲ್ಪಡುವ ಈ ಪ್ರಕೃತಿ ವಿಸ್ಮಯವು ವಾತಾವರಣದಲ್ಲಿನ ನೀರಿನ ಕಣಗಳಿಂದ ಉಂಟಾಗುತ್ತದೆ.
10:47 AM (IST) Jun 21
ಹೊರ ರಾಜ್ಯಗಳಿಂದ ಬರುವ ಹಾಲಿನ ಗುಣಮಟ್ಟವನ್ನು ಗಡಿಯಲ್ಲಿಯೇ ಪರೀಕ್ಷಿಸಲಾಗುತ್ತಿದ್ದು, ಕಲಬೆರಕೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ. ಜೊತೆಗೆ, ಕಬಾಬ್‌ನಂತಹ ಆಹಾರ ಪದಾರ್ಥಗಳಲ್ಲಿ ವಿಷಕಾರಿ ಬಣ್ಣ ಬಳಸದಂತೆ ಎಚ್ಚರಿಸಿದರು.
10:21 AM (IST) Jun 21
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಿಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಹಿಂದೆ ಪ್ರಕಟಿಸಿದ ಅಂತಿಮ ಮತದಾರ ಪಟ್ಟಿಗೆ ತಡೆ ನೀಡಲಾಗಿದೆ.
09:37 AM (IST) Jun 21
ಹಾಡಹಾಗಲೇ ಮನೆಗೆ ಏಕಾಏಕಿ ನುಗ್ಗಿ ಕಬ್ಬಿಣ್ಣದ ರಾಡ್ ನಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳ ದೋಚಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಕಾರು, ಸ್ಕೂಟರ್, ಐಫೋನ್ ಕಸಿದು ಪರಾರಿಯಾಗಿದ್ದಾರೆ. 8 ಮಂದಿ ವಿರುದ್ದ ಕೇಸ್ ದಾಖಲಾಗಿದೆ.
09:04 AM (IST) Jun 21
ಜೂನ್ 21 ರಂದು ಆಚರಿಸಲಾಗುವ ವಿಶ್ವ ಯೋಗ ದಿನದ ಇತಿಹಾಸ, ಮಹತ್ವ ಮತ್ತು ಭಾರತದ ಪುರಾತನ ಜೀವನಶೈಲಿಯಾದ ಯೋಗದ ಅರ್ಥವನ್ನು ಈ ಲೇಖನ ವಿವರಿಸುತ್ತದೆ. ಇದು ಪತಂಜಲಿ ಮಹರ್ಷಿಗಳ ಅಷ್ಟಾಂಗ ಯೋಗವನ್ನು ಪರಿಚಯಿಸಿ, ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯ ವೃದ್ಧಿಸುವ ಯೋಗದ ಹಲವಾರು ಪ್ರಯೋಜನ ತಿಳಿಯಿರಿ.
08:58 AM (IST) Jun 21
ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಮುಂದೇನು..? ಈ ಸ್ಟೋರಿ ನೋಡಿ..
08:42 AM (IST) Jun 21
International Yoga Day 2026: ಯೋಗವು ಕೇವಲ ಆಸನ ಅಥವಾ ದೇಹದ ಭಂಗಿಗಳಲ್ಲ. ವ್ಯಾಯಾಮ ಮತ್ತು ಆಸನಗಳು ಯೋಗದ ಒಂದು ಭಾಗವಾಗಿರುವುದು ನಿಜ. ಆದರೆ ಯೋಗವನ್ನು ಕೇವಲ ವ್ಯಾಯಾಮ ಎಂದು ಸೀಮಿತಗೊಳಿಸಬಾರದು ಇದು ಮಾನವ ಜೀವನದ ಸಮಗ್ರ ಬೆಳವಣಿಗೆ ಸಂಪರ್ಕವಾಗಿದೆ. ಯೋಗವು ಒಂದು ಸಂಪೂರ್ಣ ವಿಜ್ಞಾನ.
08:23 AM (IST) Jun 21
ನೀರು ಕುಡಿಯಲು ಬಂದ ಕಾಡೆಮ್ಮೆಯನ್ನು ಹುಲಿ ಬೇಟೆಯಾಡಿದ ಅಪರೂಪದ ದೃಶ್ಯ ಸೆರೆಯಾಗಿದೆ. ಬಂಡಿಪುರದ ಸಫಾರ ವೇಳೆ ಈ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯದಲ್ಲಿ ಈ ವಿಡಿಯೋ ವೈರಲ್ ಆಗಿದೆ.
07:57 AM (IST) Jun 21
‘ಡೀಸೆಲ್ ದರದ 40 ರೂಪಾಯಿ ವ್ಯಾತ್ಯಾಸ ನೋಡಿ ನನಗೇ ಗಾಬರಿ ಆಯ್ತು’ ಸಿಎಂ ಡಿಕೆ ಶಿವವಕುಮಾರ್ ಹೇಳಿಕೆ ನೀಡಿದ ಹಿನ್ನೆಲೆ ಸಾರಿಗೆ ಬಸ್ಸುಗಳ ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ನಿಗಮಗಳ ಉಳಿವು ಹೂ ಜನರ ಹಿತ ಎರಡನ್ನೂ ಗಮನದಲ್ಲಿಟ್ಕೊಂಡು ತೀರ್ಮನಾ ಮಾಡಲಾಗುತ್ತೆ ಎಂದು ಸಿಎಂ ಹೇಳಿದ್ದಾರೆ.
07:55 AM (IST) Jun 21
ಪ್ರಧಾನಿ ನರೇಂದ್ರ ಮೋದಿಗೆ ವಿಶ್ವಮಟ್ಟದಲ್ಲಿ ಸಿಗುತ್ತಿರುವ ಮನ್ನಣೆ, ಜನಪ್ರಿಯತೆ ಕುರಿತು ಹೇಳುವ ಭರದಲ್ಲಿ ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾ ತಂಡ ಎಡವಟ್ಟು ಮಾಡಿದೆ. ಇದು ಭಾರಿ ಸದ್ದು ಮಾಡುತ್ತಿದೆ.
07:20 AM (IST) Jun 21
ಧಾರವಾಡದಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚರಣೆ ಹಿನ್ನಲೆಯಲ್ಲಿ ಅಕಾಡೆಮಿಯಿಂದ ಯೋಗಾಭ್ಯಾಸ ಪ್ರದರ್ಶನ ನೀಡಲಾಗಿದೆ. ಈ ವೇಳೆ ಯೋಗಪಟುಗಳ ಮಲ್ಲಕಂಭ ಪ್ರದರ್ಶನ ಎಲ್ಲರ ಗಮನಸೆಳೆದಿದೆ. ಏಳುಬಾರಿ ವಿಶ್ವದಾಖಲೆ ಮಾಡಿರುವ ಧಾರವಾಡ ಮಲ್ಲಗಂಭ ಅಕಾಡೆಮಿ ಈ ಪ್ರದರ್ಶನ ಆಯೋಜಿಸಿದೆ.