ಬೆಂಗಳೂರು: ‘ಆಲ್ ಐಸ್ ಆನ್ ಚಿತ್ತಾಪುರ್ (ಎಲ್ಲರ ಕಣ್ಣು ಚಿತ್ತಾಪುರದತ್ತ)’ಎಂಬ ಹ್ಯಾಷ್‌ಟ್ಯಾಗ್ ಮಾಡಿ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಇದನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಇದುವರೆಗೆ ವಿದೇಶಗಳಲ್ಲಿ ನಡೆಯುತ್ತಿದ್ದ ಆಲ್ ಐಸ್ ಆನ್ ಅಭಿಯಾನ ಕರ್ನಾಟಕಕ್ಕೂ ಕಾಲಿಟ್ಟಂತಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ, ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ ನಡೆಸಲು ಈಗಾಗಲೇ ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗೆ ಆರ್‌ಎಸ್‌ಎಸ್ ವತಿಯಿಂದ ಮನವಿ ಸಲ್ಲಿಸಲಾಗಿದೆ. ಸುಮಾರು 25 ಸಾವಿರ ಸ್ವಯಂ ಸೇವಕರನ್ನು ಸೇರಿಸಿ, ಶಕ್ತಿ ಪ್ರದರ್ಶಿಸಲು ಸಂಘ ಪರಿವಾರದ ನಾಯಕರು ತೀರ್ಮಾನಿಸಿದ್ದಾರೆ.

10:31 PM (IST) Oct 21
ಬೈಕ್‌ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ, ಕಲಬುರಗಿ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಸಾವು, ರಿಂಗ್ ರಸ್ತೆಯಲ್ಲಿ ಆ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.
09:41 PM (IST) Oct 21
Deepika Padukone Daughter Photos: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪಾಲಕರಾಗಿ ಬಡ್ತಿ ಪಡೆದು ಒಂದು ವರ್ಷವಾಗಿದೆ. ಕಳೆದ ಒಂದು ವರ್ಷದಿಂದ ಇವರಿಬ್ಬರು ಮಗಳ ಮುಖವನ್ನು ಪಬ್ಲಿಕ್‌ಗೆ ತೋರಿಸಿರಲಿಲ್ಲ. ಈಗ ಫೋಟೋ ಹಂಚಿಕೊಂಡಿದ್ದಾರೆ.
08:28 PM (IST) Oct 21
ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದ ನೇಪಾಳಿ ಮೂಲದ ನಾಲ್ವರ ಗ್ಯಾಂಗ್ ಅನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9 ಮೊಬೈಲ್ ಫೋನ್‌ಗಳು ಮತ್ತು ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾದೆ.
08:15 PM (IST) Oct 21
ಎಚ್-1ಬಿ ವೀಸಾಗೆ ಟ್ರಂಪ್ ಆಡಳಿತ ವಿಧಿಸಿದ್ದ ಭಾರಿ ಶುಲ್ಕ ಹೆಚ್ಚಳದಲ್ಲಿ ದೊಡ್ಡ ವಿನಾಯಿತಿಗಳನ್ನು ಘೋಷಿಸಲಾಗಿದೆ. ಈ ಹೊಸ ಪ್ರಕಟಣೆಯ ಪ್ರಕಾರ, ಈಗಾಗಲೇ ಎಚ್-1ಬಿ ವೀಸಾ ಹೊಂದಿರುವವರು ಮತ್ತು ನಿರ್ದಿಷ್ಟ ದಿನಾಂಕದ ಮೊದಲು ಅರ್ಜಿ ಸಲ್ಲಿಸುವವರಿಗೆ ಈ ಶುಲ್ಕ ಹೆಚ್ಚಳ ಅನ್ವಯಿಸುವುದಿಲ್ಲ.
07:35 PM (IST) Oct 21
06:35 PM (IST) Oct 21
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಜ್ಞಾನವಿಲ್ಲದ ಮಾತುಗಳಿಂದ ಕ್ಷೇತ್ರವು ನಗೆಪಾಟಲಿಗೀಡಾಗುತ್ತಿದೆ ಎಂದು ಸಂಸದ ಡಾ.ಕೆ. ಸುಧಾಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ಕಾಂಗ್ರೆಸ್ ಸರ್ಕಾರವು ಹಿಂದೂಗಳನ್ನು ಕೆರಳಿಸುತ್ತಾ, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
06:28 PM (IST) Oct 21
ನಟ ಜಗ್ಗೇಶ್ ಅವರು ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾದ ವಿಡಿಯೋ ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ತಾವು ಹುಟ್ಟಿಬೆಳೆದ ಗುಡಿಸಲಿನ ಫೋಟೋ ಶೇರ್ ಮಾಡಿ, ಬಡತನದಿಂದ ನವರಸನಾಯಕನಾಗಿ ಬೆಳೆದ ತಮ್ಮ ಗೆಲುವಿನ ಕಥೆಯನ್ನು ವಿವರಿಸಿ, ಕೊರಗುವವರಿಗೆ ಸ್ಫೂರ್ತಿದಾಯಕ ಪಾಠ ಹೇಳಿದ್ದಾರೆ.
06:22 PM (IST) Oct 21
ಚಿಕ್ಕೋಡಿ ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ, ಶಾಸಕ ರಾಜು ಕಾಗೆ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಣಗಳ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಸವದಿ ಬೆಂಬಲಿಗರು ಕಾಗೆ ವಿರುದ್ಧ "ಬೆನ್ನಿಗೆ ಚೂರಿ ಹಾಕಿದ್ದೀರಿ" ಎಂದು ಆರೋಪಿಸಿರುವ ಆಡಿಯೋ ವೈರಲ್ ಆಗಿದೆ.
05:47 PM (IST) Oct 21
Bigg Boss 19 Show: ಬಿಗ್ ಬಾಸ್ 19 ಶೋನಲ್ಲಿ ತಾನ್ಯಾ ಮಿತ್ತಲ್ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಾರೆ. ತಾನು ಆಗರ್ಭ ಶ್ರೀಮಂತೆ, ನಮ್ಮದು ತುಂಬ ಬ್ಯುಸಿನೆಸ್ ಇದೆ ಎಂದು ಹೇಳಿಕೊಳ್ಳುವ ಅವರು ದೊಡ್ಮನೆಯಲ್ಲಿ ನಿತ್ಯವೂ ಸೀರೆ ಧರಿಸುತ್ತಾರೆ.
05:42 PM (IST) Oct 21
ದುಷ್ಟ ಶಕ್ತಿ ಪಡೆಯಲು ಮಾಳವಿಕಾ, ಹಿತಾಳನ್ನು ಬ*ಲಿ ಕೊಡಲು ಸಿದ್ಧತೆ ನಡೆಸಿದ್ದಾಳೆ. ಇನ್ನೊಂದೆಡೆ, ಹಿತಾಳನ್ನು ಉಳಿಸಲು ದುರ್ಗಾ, ದೇವಿಯ ಕಳೆದುಹೋದ ಗೆಜ್ಜೆ, ಬಳೆಗಳನ್ನು ಹುಡುಕಿ ಇದೀಗ ಸಂಜೀವಿನಿ ಮೂಲಿಕೆಗಾಗಿ ಪರದಾಡುತ್ತಿದ್ದಾಳೆ. ಬ*ಲಿಗೂ, ಸಂಜೀವಿನಿ ಹುಡುಕಾಟಕ್ಕೂ ಕ್ಷಣಗಣನೆ ಆರಂಭವಾಗಿದೆ.
05:08 PM (IST) Oct 21
ಹಾಸನಾಂಬೆ ದೇವಿಯ ದರ್ಶನೋತ್ಸವದಲ್ಲಿ, ಮೈಸೂರಿನ ಮಹಿಳೆಯೊಬ್ಬರು ಕಳೆದುಕೊಂಡಿದ್ದ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಮತ್ತೊಬ್ಬ ಭಕ್ತರು ಪ್ರಾಮಾಣಿಕವಾಗಿ ಹಿಂತಿರುಗಿಸಿದ್ದಾರೆ. ಈ ಘಟನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
04:40 PM (IST) Oct 21
ಬ್ರಹ್ಮಗಂಟು ಸೀರಿಯಲ್‌ನಲ್ಲಿ, ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ಚಿರು ಮತ್ತು ದಿಶಾಳನ್ನು ಒಂದು ಮಾಡಲು ಸೌಂದರ್ಯ ಪ್ರಯತ್ನಿಸುತ್ತಿದ್ದಾಳೆ. ಆದರೆ, ದಿಶಾ ರೂಪದಲ್ಲಿರುವ ದೀಪಾ, 'ವಸ್ತ್ರದೀಪ' ಡಿಸೈನ್ ಮೂಲಕ ಮತ್ತು ತನ್ನ ವರ್ತನೆಯಿಂದ ಸೌಂದರ್ಯಳಿಗೆ ತಿರುಗೇಟು ನೀಡುತ್ತಿದ್ದಾಳೆ.
04:32 PM (IST) Oct 21
ಕೇವಲ ಐದು ತಿಂಗಳ ಹಿಂದೆ ವಿವಾಹವಾಗಿದ್ದ ಯುವಕನೊಬ್ಬ, ಪತ್ನಿಯಿಂದ ತೀವ್ರ ಕಿರುಕುಳ ತಾಳಲಾರದೆ ಬಿಡದಿ ಬಳಿ ರೈಲಿಗೆ ತಲೆಕೊಟ್ಟಿದ್ದಾನೆ. ಸಾವಿಗೂ ಮುನ್ನ ಆತ ಚಿತ್ರೀಕರಿಸಿದ ವಿಡಿಯೋದಲ್ಲಿ ತನ್ನ ಸಾವಿಗೆ ಪತ್ನಿಯೇ ಕಾರಣ ಎಂದು ಆರೋಪಿಸಿದ್ದು, ಈ ವಿಡಿಯೋ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.
04:01 PM (IST) Oct 21
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಂಧಿನಗರದಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ದಿನೇಶ್ ಗುಂಡೂರಾವ್ ಅವರನ್ನು ಶ್ಲಾಘಿಸಿ, ಬೆಂಗಳೂರು ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಡಿಸಿಎಂ ಜೊತೆಯಲ್ಲಿದ್ದರು.
03:58 PM (IST) Oct 21
ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದ ಹಿಂದಿನ ಸಂಚು ಬಯಲಾಗಬೇಕೆಂದು ಹೈಕೋರ್ಟ್ ಹೇಳಿದೆ. ತನಿಖಾ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಮುಚ್ಚಿದ ಕೋಣೆಯಲ್ಲಿ ವಿಚಾರಣೆ ನಡೆಸಿ, ಸ್ವಯಂಪ್ರೇರಿತವಾಗಿ ಹೊಸ ಪ್ರಕರಣ ದಾಖಲಿಸಿಕೊಂಡಿದೆ. ಇದು ಯೋಜಿತ ಕಳ್ಳತನ ಎಂದು ವಿಶೇಷ ತನಿಖಾ ತಂಡ ಖಚಿತಪಡಿಸಿದೆ.
03:54 PM (IST) Oct 21
Bigg Boss Show: ಬಿಗ್ ಬಾಸ್ ಕನ್ನಡ ಸೀಸನ್ 19ರಲ್ಲಿ ಭಾಗವಹಿಸಿರುವ ಶೆಹಬಾಜ್ ಅವರು, ತಮ್ಮ ಕಾಮಿಡಿಯಿಂದಲೇ ದೊಡ್ಮನೆಯಲ್ಲಿ ನಿತ್ಯವೂ ನಗು ತರಿಸುತ್ತಿದ್ದಾರೆ. ಇವರಿಂದಲೇ ಉಳಿದವರು ಕೂಡ ಸ್ವಲ್ಪ ಜಗಳ ಬಿಟ್ಟು, ನಗೋಕೆ ಆರಂಭಿಸಿದ್ದಾರೆ. ಕಾಮಿಡಿ ಮಾಡುತ್ತಿದ್ದ ಶೆಹಬಾಜ್‌ಗೆ ಈಗ ಚಪ್ಪಲಿ ಏಟು ಸಿಕ್ಕಿದೆ.
03:42 PM (IST) Oct 21
ರಿಯಲ್ ಸ್ಟಾರ್ ಉಪೇಂದ್ರ ವಿಧಾನಸೌಧದ ಬಾಗಿಲು ಹಾಕಿಸುವುದಾಗಿ ಶಿವರಾಜ್ ಕುಮಾರ್ ಜೊತೆಗಿನ ಹಳೆಯ ಸಂದರ್ಶನವೊಂದರಲ್ಲಿ ಹೇಳಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ಅವರು ಹೀಗೆ ಹೇಳಿದ್ಯಾಕೆ? ಅದಕ್ಕೆ ಕಾರಣವೇನು?
03:32 PM (IST) Oct 21
03:07 PM (IST) Oct 21
ಚಿತ್ತಾಪುರದಲ್ಲಿ ನವೆಂಬರ್ 2 ರಂದು ಆರ್‌ಎಸ್‌ಎಸ್ ಹಮ್ಮಿಕೊಂಡಿರುವ ಪಥಸಂಚಲನಕ್ಕೆ ಭೀಮ್ ಆರ್ಮಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆರ್‌ಎಸ್‌ಎಸ್‌ನ ನೋಂದಣಿ ಪ್ರಶ್ನಿಸಿರುವ ಭೀಮ್ ಆರ್ಮಿ, ಅದೇ ದಿನ ತಮಗೂ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದು, ಇದು ಸ್ಥಳೀಯವಾಗಿ ಸಂಘರ್ಷಕ್ಕೆ ಕಾರಣವಾಗಬಹುದು.
03:07 PM (IST) Oct 21
ತಬ್ಬಿಕೊಂಡು ಮುತ್ತಿಕ್ಕಿದ, ಮತ್ತೆ ಏನೇನೋ..,ಪರೀಕ್ಷೆ ನೆಪದಲ್ಲಿ ಕಿರುಕುಳ ನೀಡಿದ ಬೆಂಗಳೂರು ವೈದ್ಯ ಅರೆಸ್ಟ್ ಮಾಡಲಾಗಿದೆ. ವೈದ್ಯ ವಿರುದ್ದ ಕುಟುಂಬಸ್ಥರು ಭಾರಿ ಪ್ರತಿಭಟನೆ ನಡೆಸಿದ್ದರೆ, ಇತ್ತ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
02:59 PM (IST) Oct 21
02:41 PM (IST) Oct 21
ಸಚಿವ ಪ್ರಿಯಾಂಕ್ ಖರ್ಗೆಯವರ ಆರ್‌ಎಸ್‌ಎಸ್ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆದೇ ತೀರುತ್ತದೆ ಎಂದು ಸವಾಲು ಹಾಕಿದ್ದು, ಜೆಡಿಎಸ್ ಜೊತೆ ಸಮನ್ವಯ ಸಮಿತಿ ರಚಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
02:38 PM (IST) Oct 21
ಬೆಂಗಳೂರಿನ ಬನಶಂಕರಿಯಲ್ಲಿ, ಮಾಜಿ ಚಾಲಕನೇ ತನ್ನ ಸಹಚರರೊಂದಿಗೆ ಜೊಮೆಟೊ ಬಾಯ್ ವೇಷದಲ್ಲಿ ಬಂದು ವೃದ್ಧೆಯೊಬ್ಬರ ಮನೆ ದರೋಡೆ ಮಾಡಿದ್ದಾನೆ. ಚಾಕು ಇರಿತಕ್ಕೊಳಗಾದ ವೃದ್ಧೆ ಕನಕಪುಷ್ಪಮ್ಮ ಸತ್ತಂತೆ ನಟಿಸಿ ಪ್ರಾಣ ಉಳಿಸಿಕೊಂಡಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
02:33 PM (IST) Oct 21
Bigg Boss Kannada Season 12: ರಕ್ಷಿತಾ ಶೆಟ್ಟಿ ವಿರುದ್ಧ ಜಗಳ ಆಡಿ, ಬಾಯಿಗೆ ಬಂದ ಹಾಗೆ ಮಾತನಾಡಿ ಜಾಹ್ನವಿ, ಅಶ್ವಿನಿ ಗೌಡ ಅವರಿಗೆ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಅವರಿಗೆ ಹೊರಗಡೆ ಯಾವ ರೀತಿ ಜನರು ನಮ್ಮನ್ನು ನೋಡ್ತಿದ್ದಾರೆ ಎಂದು ಅರಿವಾಗಿದೆ.
02:04 PM (IST) Oct 21
ಬೆಂಗಳೂರಿನ ನಿವಾಸಿಯೊಬ್ಬರು ಅತ್ತಿಬೆಲೆಯಲ್ಲಿ ಖರೀದಿಸಿದ ಪಟಾಕಿಯ ಬಿಲ್ ವೈರಲ್ ಆಗಿದೆ. ಇದರಲ್ಲಿ 90% ರಿಯಾಯಿತಿ ನೀಡಿರುವುದು ಗ್ರಾಹಕರನ್ನು ಆಶ್ಚರ್ಯಗೊಳಿಸಿದ್ದು, ಗಡಿ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಪಟಾಕಿ ಸಿಗುವುದರ ಹಿಂದಿನ ಕಾರಣ ಏನು?
01:24 PM (IST) Oct 21
ಭಾರತೀಯ ಹವಾಮಾನ ಇಲಾಖೆಯು ಅಕ್ಟೋಬರ್ 22 ರಿಂದ ನಾಲ್ಕು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿನ ಹವಾಮಾನ ಬದಲಾವಣೆಗಳಿಂದಾಗಿ ದಕ್ಷಿಣ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
01:21 PM (IST) Oct 21
ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಗೆ 14 ವರ್ಷ ಪೂರ್ಣಗೊಂಡಿದೆ. 2011ರಲ್ಲಿ ಎಂಜಿ ರಸ್ತೆ – ಬೈಯಪ್ಪನಹಳ್ಳಿ ನಡುವೆ 6 ಕಿ.ಮೀ. ಮಾರ್ಗದಲ್ಲಿ ಆರಂಭವಾದ ಈ ಸೇವೆ, ಇಂದು ಚಲಘಟ್ಟದಿಂದ ಕಾಡುಗೋಡಿವರೆಗೆ ವಿಸ್ತರಿಸಿ ನಗರದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟುಮಾಡಿದೆ.
01:07 PM (IST) Oct 21
Pradeep Eshwar on BJP government: ನೈರುತ್ಯ ಮುಂಗಾರು ಪ್ರವಾಹ ಹಾನಿಗೆ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ. ರಾಜ್ಯದ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ಆರೆಸ್ಸೆಸ್ ಕುರಿತು ಜೆಡಿಎಸ್ ನಿಲುವು ಪ್ರಶ್ನಿಸಿದರು.
12:51 PM (IST) Oct 21
ಅಣ್ಣಯ್ಯ ಸೀರಿಯಲ್‌ನಲ್ಲಿ ಪಾರು ಗರ್ಭಿಣಿ ಎಂಬ ಸಿಹಿಸುದ್ದಿ ಹೊರಬಿದ್ದಿದೆ. ಈ ಸಂಭ್ರಮದ ನಡುವೆಯೇ, ನಾಗೇಗೌಡನ ಕುತಂತ್ರದಿಂದ ರಾಣಿ ಮತ್ತು ಮನು ಜೀವಕ್ಕೆ ಅಪಾಯ ಎದುರಾಗಿದ್ದು, ಅವರನ್ನು ರಾವಣನ ಗೊಂಬೆಗೆ ಕಟ್ಟಿಹಾಕಲಾಗಿದೆ.
12:50 PM (IST) Oct 21
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಸೂರಜ್ ಸಿಂಗ್ಎಂ ಟ್ರಿ ಕೊಟ್ಟಿದ್ದಾರೆ. ಕೆನಡಾದಲ್ಲಿ ಐಟಿ ಉದ್ಯೋಗಿಯಾಗಿದ್ದ ಇವರು, ಫಿಟ್ನೆಸ್ ಫ್ರೀಕ್ ಮತ್ತು ಮಾಡೆಲ್ ಆಗಿದ್ದು, ತಮ್ಮ ಸ್ಟೈಲಿಶ್ ಎಂಟ್ರಿ ಮೂಲಕವೇ ಗಮನ ಸೆಳೆದಿದ್ದಾರೆ. ಇವರು ಯಾರು, ಹಿನ್ನೆಲೆ ಏನು?
12:36 PM (IST) Oct 21
Actress Vaishnavi Gowda Photos: ನಟಿ ವೈಷ್ಣವಿ ಗೌಡ ಅವರಿಗೆ ಮದುವೆಯಾದಬಳಿಕ ಇದು ಮೊದಲ ದೀಪಾವಳಿ ಹಬ್ಬ. ಪತಿ ಅನುಕೂಲ್ ಮಿಶ್ರಾ ಜೊತೆಗೆ ಅವರು ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
12:35 PM (IST) Oct 21
ಚರ್ಮರೋಗ ತಜ್ಞೆ ಡಾ.ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ, ಪತಿ ಡಾ.ಮಹೇಂದ್ರ ರೆಡ್ಡಿ ಅರಿವಳಿಕೆ ಮದ್ದನ್ನು ಅತಿಯಾಗಿ ನೀಡಿ ಕೊಲೆ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ. ಆಸ್ತಿಗಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
12:32 PM (IST) Oct 21
hunusuru soldier death due to home loan debt ಹುಣಸೂರಿನಲ್ಲಿ, ಮನೆ ಕಟ್ಟಲು ಮಾಡಿದ ಸಾಲ ತೀರಿಸಲಾಗದೆ ಭಾರತೀಯ ಸೇನೆಯ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್, ಆರ್ಥಿಕ ಸಂಕಷ್ಟದಿಂದ ಈ ದುರಂತ ನಿರ್ಧಾರ.
12:12 PM (IST) Oct 21
Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ, ಗಿಲ್ಲಿ ಫ್ರೆಂಢ್ಸ್ ಆಗಿದ್ದರು. ಈಗ ರಷಾ ಬಂದ್ಮೇಲೆ ಗಿಲ್ಲಿ ನಟ ಅವರ ಜೊತೆಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾದರೆ ಮುಂದೆ ಏನಾಗುವುದು?
12:12 PM (IST) Oct 21
ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಈಗ ದಿಶಾ ಆಗಿ ಸೌಂದರ್ಯಳ ಸೊಕ್ಕಡಗಿಸುತ್ತಿದ್ದಾಳೆ. ಇದೀಗ ದೀಪಾ ಪಾತ್ರಧಾರಿ ದಿಯಾ ಮತ್ತು ಅರ್ಚನಾ ಪಾತ್ರಧಾರಿ ಸನ್ಮಿತಾ ಒಟ್ಟಿಗೆ ಡಾನ್ಸ್ ರೀಲ್ಸ್ ಮಾಡಿದ್ದು, ದೀಪಾ-ಅರ್ಚನಾ ಸ್ನೇಹ ಮತ್ತು ದಿಶಾ-ಅರ್ಚನಾ ಪ್ರೀತಿಯಲ್ಲಿ ಯಾವ ಜೋಡಿ ಇಷ್ಟ ಎಂದು ಪ್ರಶ್ನಿಸಿದ್ದಾರೆ.
12:08 PM (IST) Oct 21
ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆರೋಗ್ಯವೇ ಮನುಷ್ಯನಿಗೆ ದೊಡ್ಡ ಭಾಗ್ಯ ಎಂದು ತಿಳಿಸಿದರು. ಎಂ.ಎಂ.ಫೌಂಡೇಷನ್ ವತಿಯಿಂದ ಮಹಾಲಿಂಗೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದರು.
11:56 AM (IST) Oct 21
Wife Harassing Husband Case: ಪತ್ನಿಯ ಕಿರುಕುಳದಿಂದ ತಪ್ಪಿಸಿಕೊಳ್ಳಲು ಕಚೇರಿಯಲ್ಲೇ ಮಲಗಿದ್ದ ಉದ್ಯೋಗಿಯ ಮೇಲೆ ಆತನ ಪತ್ನಿ, ಸಾಕು ತಾಯಿ ಮತ್ತು ರೌಡಿಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಪತಿ, ಪತ್ನಿ ಮತ್ತು ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
11:32 AM (IST) Oct 21
ಬಿಗ್ಬಾಸ್ 12ರ ವೇದಿಕೆಯ ಮೇಲೆ ನಿರೂಪಕ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಕಾಣಿಸಿಕೊಂಡಿದ್ದು, ಮನೆಯೊಳಗೆ ಹೋಗಿಬರಲು ಸುದೀಪ್ ಕೇಳಿದ್ದಾರೆ. ಇದಕ್ಕೆ ಪ್ರಿಯಾ ಸುದೀಪ್ ಹೇಳಿದ್ದೇನು? ನಿಜಕ್ಕೂ ಅವರ ದೊಡ್ಮನೆಗೆ ಎಂಟ್ರಿ ಕೊಡ್ತಾರಾ?
11:30 AM (IST) Oct 21
ಮಾಜಿ ಸಂಸದ ರಮೇಶ ಕತ್ತಿ ಅವರು ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದನ್ನು ಖಂಡಿಸಿ ಗೋಕಾಕದಲ್ಲಿ ವಾಲ್ಮೀಕಿ ಸಮುದಾಯ ಮತ್ತು ದಲಿತಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು. ರಸ್ತೆ ತಡೆ ನಡೆಸಿ. ಕತ್ತಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
11:16 AM (IST) Oct 21
ಕೇಂದ್ರ ಸಚಿವ ವಿ. ಸೋಮಣ್ಣ ಅವರು, ಜಿಎಸ್‌ಟಿ ಕಡಿತವನ್ನು 'ದೀಪಾವಳಿ ಉಡುಗೊರೆ' ಎಂದು ಶ್ಲಾಘಿಸಿದ್ದಾರೆ. ಇದೇ ವೇಳೆ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಕೇಂದ್ರ ಮಟ್ಟದಲ್ಲಿ ಆಚರಿಸುವ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಕುರಿತು ತೀವ್ರ ವಾಗ್ದಾಳಿ ನಡೆಸಿದರು.