Bigg Boss Kannada Season 12: ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಶೈವ, ಗಿಲ್ಲಿ ಫ್ರೆಂಢ್ಸ್‌ ಆಗಿದ್ದರು. ಈಗ ರಿಷಾ ಬಂದ್ಮೇಲೆ ಗಿಲ್ಲಿ ನಟ ಅವರ ಜೊತೆಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾದರೆ ಮುಂದೆ ಏನಾಗುವುದು?

ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿರುವ ರಿಷಾ ಮೊದಲ ದಿನವೇ ಸೌಂಡ್‌ ಮಾಡಿದರು. ಗಿಲ್ಲಿ ನಟ ಹಾಗೂ ರಿಷಾ ಆತ್ಮೀಯತೆ ಮನೆಯವರ ಕಣ್ಣು ಕುಕ್ಕುತ್ತಿದೆ. ಇಷ್ಟುದಿನ ಕಾವ್ಯ ಎನ್ನುತ್ತಿದ್ದ ಗಿಲ್ಲಿ ಈಗ ರಿಷಾ ಎನ್ನುತ್ತಿದ್ದಾರೆ. ಹಾಗಾದರೆ ಮುಂದೆ ಕಥೆ ಏನು?

ಸಖತ್‌ ಆಗಿ ಕಾಣ್ತೀಯಾ!

ಬಿಗ್‌ ಬಾಸ್‌ ಮನೆಗೆ ರಿಷಾ ಎಂಟ್ರಿ ಕೊಟ್ಟಿದ್ದಾರೆ. ಬರುವಾಗಲೇ ಅವರು ಒಂದಿಷ್ಟು ಸ್ಪರ್ಧಿಗಳ ವಿರುದ್ಧ ಕಿಡಿಕಾರಿದ್ದರು. ಆದರೆ ಅವರು ಗಿಲ್ಲಿ ನಟನ ಹಿಂದೆ ಬಿದ್ದಿದ್ದರು. ಗಿಲ್ಲಿ ನಟ ಕೂಡ ಅವರ ಹಿಂದೆ ಇದ್ದರು. “ನಾಳೆಯಿಂದ ನೀನು ಕೂಡ ಸಖತ್‌ ಆಗಿ ಕಾಣುವಂತೆ ಮಾಡ್ತೀನಿ” ಎಂದು ಅವರು ಗಿಲ್ಲಿಗೆ ಮಾತು ಕೊಟ್ಟಿದ್ದಾರೆ.

ರಷಾ ಯಾರು?

ರಿಷಾ ಅವರು ಮಾಡೆಲ್‌, ಕ್ರೀಡಾಳು ಕೂಡ ಹೌದು. ಅವರು ಹದಿನಾರು ವರ್ಷಗಳ ಕಾಲ ರಾಷ್ಟ್ರ ಮಟ್ಟದಲ್ಲಿ ಆಟ ಆಡಿದ್ದರಂತೆ. ಆಮೇಲೆ ಮಾಡೆಲಿಂಗ್‌ಗೆ ಬಂದಿದ್ದರು. ಈ ಶೋನಿಂದ ಹೆಸರು ಪಡೆಯಬೇಕು ಎಂದು ಅವರು ಇಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ.

ಪ್ರೀತಿಪಾಠ ಮಾಡಿದ ರಷಾ

ಗಿಲ್ಲಿ ನಟ ಅವರು ಕಾವ್ಯ ಶೈವ ಅವರನ್ನು ಬಿಟ್ಟು ರಷಾ ಫ್ರೆಂಡ್‌ಶಿಪ್‌ ಮಾಡಿದ್ದಾರೆ. ಸಮಯ ಸಿಕ್ಕಾಗೆಲ್ಲ ಅವರು ರಷಾ ಶೋಲ್ಡರ್‌ ಮೇಲೆ ತಲೆಯಿಟ್ಟಿದ್ದರು. ಇನ್ನು ಇವರಿಬ್ಬರು ಕೂಡ ಡ್ಯಾನ್ಸ್‌ ಮಾಡಿದರು. ನನ್ನ ಪಾಠ, ಪ್ರವಚನ ಕೇಳಿದ್ರೆ ಎಲ್ಲರೂ ನಿಂಗೆ ಲವ್ವರ್ಸ್‌ ಆಗ್ತಾರೆ ಎಂದು ರಿಷಾ ಹೇಳಿದ್ದಾರೆ. ಆಮೇಲೆ ಎಲ್ಲರೂ ಸೇರಿಕೊಂಡು ಗಿಲ್ಲಿ ನಟನನ್ನು ಹಿಡಿದುಕೊಂಡಿದ್ದಾರೆ. ಕಾವ್ಯ ಅವರು ಗಿಲ್ಲಿಗೆ ರಾಖಿ ಕಟ್ಟಿದ್ದಾರೆ.

ರಿಲೇಶನ್‌ಶಿಪ್‌ ವಿಧಗಳು

ಇನ್ನು ಗಿಲ್ಲಿ ನಟ ಅವರು ಕಾಫಿ ಕಪ್‌ಗೆ ಮುತ್ತು ಕೊಟ್ಟು, ರಷಾಗೆ ಕಾಫಿ ಕುಡಿಸಿದ್ದಾರೆ. ಸಿಚ್ಯುವೇಶನ್‌ಶಿಪ್‌, ಸೀಸನ್‌ ಲವ್‌, ಲವ್‌ ಕ್ರಂಬ್ಲಿಂಗ್‌, ಗೋಸ್ಟಿಂಗ್‌, ಬೆಂಚಿಂಗ್ ಮುಂತಾದ ರಿಲೇಶನ್‌ಶಿಪ್‌ಗಳ ಪಾಠವನ್ನು ಮಾಡಿದ್ದಾರೆ.‌ ಎಷ್ಟು ಜನರನ್ನು ಲವ್‌ ಮಾಡಿದರೂ ಕೂಡ ಒಂದು ಬ್ಯಾಕಪ್‌ ಇಟ್ಟುಕೊಳ್ಳೋದು, ಗಿಫ್ಟ್‌ ಕೊಡೋದು, ಇಬ್ಬರು, ಮೂವರನ್ನು ಲವ್‌ ಮಾಡೋದು ಮುಂತಾದವುಗಳನ್ನು ಅವರು ವಿವರಣೆ ಮಾಡಿದ್ದಾರೆ.

ಗಿಲ್ಲಿ ನಟ, ಕಾವ್ಯ ದೂರ ದೂರ

ರಿಲೇಶನ್‌ಶಿಪ್‌ ವಿಚಾರದ ಬಗ್ಗೆ ರಷಾ ಮಾತನಾಡುವಾಗ ಗಿಲ್ಲಿ ನಟ, ಚಂದ್ರಪ್ರಭ ಅವರ ತೊಡೆ ಮೇಲೆ ಮಲಗಿದ್ದಾರೆ. ಇದನ್ನು ಕಂಡು ರಿಷಾ ಅವರು ಒಮ್ಮೆ ಅಯ್ಯೋ ಎಂದು ಕೂಗಿದ್ದಾರೆ, ಆಮೇಲೆ ನಕ್ಕಿದ್ದಾರೆ. ಇವರಿಬ್ಬರು ಕ್ಲೋಸ್‌ ಆಗಿರೋದು ಇಡೀ ಮನೆಯವರ ಕಣ್ಣಿಗೆ ಬಿದ್ದಿದ್ದಾರೆ. ರಷಾ ಸಿಕ್ಕಿದಳು ಎಂದು ಕಾವ್ಯಳನ್ನು ಬಿಟ್ಟ, ಪಾಪ ಕಾವ್ಯ ಎಂದು ಅಶ್ವಿನಿ ಗೌಡ ಅವರೇ ಮನೆಯಲ್ಲಿ ಮಾತನಾಡಿಕೊಂಡಿದ್ದಾರೆ.