ತಬ್ಬಿಕೊಂಡು ಮುತ್ತಿಕ್ಕಿದ, ಮತ್ತೆ ಏನೇನೋ..,ಪರೀಕ್ಷೆ ನೆಪದಲ್ಲಿ ಕಿರುಕುಳ ನೀಡಿದ ಬೆಂಗಳೂರು ವೈದ್ಯ ಅರೆಸ್ಟ್ ಮಾಡಲಾಗಿದೆ. ವೈದ್ಯ ವಿರುದ್ದ ಕುಟುಂಬಸ್ಥರು ಭಾರಿ ಪ್ರತಿಭಟನೆ ನಡೆಸಿದ್ದರೆ, ಇತ್ತ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಬೆಂಗಳೂರು (ಅ.21) ಚರ್ಮ ರೋಗ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ಯುವತಿಗೆ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರು ವೈದ್ಯನ ಪೊಲೀಸರು ಬಂಧಿಸಿದ್ದಾರೆ. ಪ್ರತಿ ತಿಂಗಳು ತಂದೆ ಜೊತೆಗೆ ಕ್ಲಿನಿಕ್‌ಗೆ ತೆರಳುತ್ತಿದ್ದ ಯುವತಿ ಅಂದು ಅನಿವಾರ್ಯ ಕಾರಣಗಳಿಂದ ತಂದೆ ಜೊತೆ ತೆರಳಲು ಸಾಧ್ಯವಾಗಿರಲಿಲ್ಲ. ಇದೇ ಸಂದರ್ಭ ಬಳಸಿಕೊಂಡ 56 ವರ್ಷದ ಡರ್ಮಟಾಲಜಿಸ್ಟ್ ಕಿರುಕುಳ ನೀಡಲು ಆರಂಭಿಸಿದ್ದಾನೆ. ಯುವತಿ ವಿರೋಧದ ನಡುವೆಯೂ ತಬ್ಬಿಕೊಂಡು ಮುತ್ತಿಕ್ಕಿದ್ದಾನೆ. ವೈದ್ಯಕೀಯ ಪರೀಕ್ಷೆ ನೆಪವೊಡ್ಡಿ ವಿವಸ್ತ್ರಗೊಳಿಸಲು ಪ್ರಯತ್ನಿಸಿರುವುದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕ್ಲಿನಿಕ್‌ನಲ್ಲಿ ನಡೆದಿದ್ದೇನು?

ಬೆಂಗಳೂರಿನ ನಿವಾಸಿಯಾಗಿರುವ 21 ವರ್ಷದ ಯುವತಿ ಶನಿವಾರ ಚೆಕ್ ಅಪ್‌ಗಾಗಿ ವೈದ್ಯರ ಬಳಿ ತೆರಳಿದ್ದಾರೆ. ವೈದ್ಯರ ಕ್ಲಿನಿಕ್‌ಗೆ ತೆರಳಿ ಟೋಕನ್ ಪಡೆದು ವೈದ್ಯರ ಭೇಟಿಯಾಗಿದ್ದಾರೆ. ವೈದ್ಯ ಪ್ರವೀಣ್, ಸದ್ಯದ ವರದಿ ನೋಡಿದರೆ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಅಗತ್ಯವಿದೆ ಎಂದು ಹೇಳಿದ್ದಾರೆ. ಬಳಿಕ ಯುವತಿಯನ್ನು ಇಲ್ಲ ಸಲ್ಲದ ಕಡೆ ಮುಟ್ಟಿ ವೈದ್ಯಕೀಯ ಪರೀಕ್ಷೆ ಎಂದು ಬಿಂಬಿಸಲು ಪ್ರಯತ್ನ ಮಾಡಿದ್ದಾನೆ. ತಬ್ಬಿಕೊಂಡು ಮುತ್ತಿಟ್ಟಿದ್ದಾನೆ. ಏಕಾಏಕಿ ವೈದ್ಯರ ನಡೆಯಿಂದ ಯುವತಿ ಗಾಬರಿಗೊಂಡಿದ್ದಾಳೆ. ತಕ್ಷಣವೇ ವೈದ್ಯರ ನಡೆಯನ್ನು ವಿರೋಧಿಸಿದ್ದಾಳೆ. ಇತ್ತ ವಿವಸ್ತ್ರಗೊಳಿಸಿ ವೈದ್ಯಕೀಯ ಪರೀಕ್ಷೆ ನಡೆಸಲು ಪ್ರಯತ್ನಸಿದ ವೈದ್ಯನ ಮಾತನ್ನು ನಿರಾಕರಿಸಿದ ಯುವತಿ ತೀವ್ರ ಪ್ರತಿರೋಧ ಒಡ್ಡಿದ್ದಾಳೆ. ಹೊಟೆಲ್‌ನಲ್ಲಿ ರೂಂ ಮಾಡುವ ಕುರಿತು ಮಾತನಾಡಿದ್ದಾಳೆ ಎಂದು ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. 30 ನಿಮಿಷಗಳ ಕಾಲ ವೈದ್ಯ ಪ್ರವೀಣ್ ವೈದ್ಯಕೀಯ ಪರೀಕ್ಷೆ ನೆಪದಲ್ಲಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ.

ಪೋಷಕರಿಗೆ ಮಾಹಿತಿ ತಿಳಿಸಿದ ಯುವತಿ

ವೈದ್ಯಕೀಯ ಪರೀಕ್ಷೆ ಅರ್ಧಕ್ಕೆ ಮೊಟಕುಗೊಳಿಸಿ ಕ್ಲಿನಿಕ್‌ನಿಂದ ಹೊರಬಂದ ಯುವತಿ, ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಪೋಷಕರು ಹಾಗೂ ಕುಟುಂಬಸ್ಥರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಪೊಲೀಸರು ವೈದ್ಯನ ವಶಕ್ಕೆ ಪೆಡದು ನ್ಯಾಯಾಲದ ಮುಂದೆ ಹಾಜರುಪಡಿಸಿದ್ದಾರೆ. ಸದ್ಯ ವೈದ್ಯನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಪ್ಪಾಗಿ ಅರ್ಥೈಸಿದ್ದಾರೆ ಎಂದು ವೈದ್ಯ

ಆರೋಪ ನಿರಾಕರಿಸಿರುವ ವೈದ್ಯ ಪ್ರವೀಣ್, ವೈದ್ಯಕೀಯ ಪರೀಕ್ಷೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ಈ ರೀತಿಯ ಯಾವುದೇ ಘಟನೆ ನಡೆದಿಲ್ಲ. ಯುವತಿ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ವೈದ್ಯ ಪ್ರವೀಣ್ ಆರೋಪಗಳನ್ನು ನಿರಾಕರಿಸಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ವೈದ್ಯನ ಇತಿಹಾಸ ಸೇರಿದಂತೆ ಹಲವು ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.

ಯುವತಿ ಕುಟುಂಬಸ್ಥರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ವೈದ್ಯನಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲ ಈ ಪ್ರಕರಣ ಇಲ್ಲಿಗೆ ಅಂತ್ಯಗೊಳಿಸಿದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.