- Home
- Entertainment
- TV Talk
- Bigg Boss, ಅವಳು ಸಂಸ್ಕಾರಿಯಲ್ಲ, Adut Toys ಮಾರಾಟ ಮಾಡಿದ್ಳು: ವೈಲ್ಡ್‌ಕಾರ್ಡ್‌ಎಂಟ್ರಿಯಿಂದ ಸತ್ಯ ಬಯಲು!
Bigg Boss, ಅವಳು ಸಂಸ್ಕಾರಿಯಲ್ಲ, Adut Toys ಮಾರಾಟ ಮಾಡಿದ್ಳು: ವೈಲ್ಡ್‌ಕಾರ್ಡ್‌ಎಂಟ್ರಿಯಿಂದ ಸತ್ಯ ಬಯಲು!
Bigg Boss 19 Show: ಬಿಗ್ ಬಾಸ್ 19 ಶೋನಲ್ಲಿ ತಾನ್ಯಾ ಮಿತ್ತಲ್ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಾರೆ. ತಾನು ಆಗರ್ಭ ಶ್ರೀಮಂತೆ, ನಮ್ಮದು ತುಂಬ ಬ್ಯುಸಿನೆಸ್ ಇದೆ ಎಂದು ಹೇಳಿಕೊಳ್ಳುವ ಅವರು ದೊಡ್ಮನೆಯಲ್ಲಿ ನಿತ್ಯವೂ ಸೀರೆ ಧರಿಸುತ್ತಾರೆ.

ತಾಜ್ ಮುಂದೆ ಕಾಫಿ ಕುಡಿಯೋದು
ನಾನು ಬ್ರಿಟನ್ ಬಿಸ್ಕತ್ ತಿಂತೀನಿ, ಕಾಫಿ ಕುಡಿಯಲು ತಾಜ್ ಮಹಲ್‌ಗೆ ಹೋಗ್ತೀನಿ ಎನ್ನುವ ತಾನ್ಯಾ ಅವರು ಸ್ವಂತ ಏರ್‌ಲೈನ್ಸ್ ಇದೆ ಎನ್ನುತ್ತಾರೆ. ವಿಶೇಷ ತಿಂಡಿ ಬೇಕು ಅಂದರೆ ದುಬೈಗೆ ಹೋಗಲಿದ್ದಾರಂತೆ.
ಲಕ್ಷುರಿ ಹುಚ್ಚು
ಯಾವಾಗಲೂ ಲಕ್ಷುರಿ ಜೀವನದ ಕನಸು ಕಾಣುವ ಇವರು, ವಾಸ್ತವದಲ್ಲಿ ಆ ರೀತಿ ಇಲ್ಲ, ಅಷ್ಟು ಶ್ರೀಮಂತರಲ್ಲ ಎಂದು ಹೇಳಲಾಗಿದೆ. ಈಗ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಮಾಲ್ತಿ ಚಾಹರ್ ಅವರು ತಾನ್ಯಾ ಹೇಗೆ ಎಂದು ಎಲ್ಲರಿಗೂ ಹೇಳಿದ್ದಾರೆ.
150 ಸೆಕ್ಯೂರಿಟಿ ಗಾರ್ಡ್ ಇದ್ದಾರಂತೆ
ತಾನ್ಯಾ ಮಿತ್ತಲ್ ಅವರು ತಾವು ಆಧ್ಯಾತ್ಮಿಕ ಗುರು ಎಂದು ಹೇಳಿಕೊಳ್ತಾರೆ. ಅಷ್ಟೇ ಅಲ್ಲದೆ ನಿತ್ಯವೂ ಶಿವನ ಪೂಜೆ ಮಾಡೋದಾಗಿ ಹೇಳಿಕೊಂಡಿದ್ದರು. ನನ್ನ ಬಳಿ 150 ಸೆಕ್ಯೂರಿಟಿ ಗಾರ್ಡ್‌ಗಳು ಇರೋದಾಗಿ ಹೇಳಿಕೊಂಡಿದ್ದರು. ಬ್ರೇಕಪ್ ವಿಚಾರವಾಗಿ ಕೂಡ ಮಾತನಾಡಿಕೊಂಡಿದ್ದರು.
ಅಡ*ಲ್ಟ್ ಟಾಯ್ಸ್ ಮಾರಾಟ
“ಈ ಹಿಂದೆ ತಾನ್ಯಾ ಮಿತ್ತಲ್ ಅಡ*ಲ್ಟ್ ಟಾಯ್ಸ್ ಮಾರಾಟ ಮಾಡುತ್ತಿದ್ದರು, ಈಗ ಅವರ ಹಲವು ವ್ಯವಹಾರಗಳು ನಿಂತುಹೋಗಿವೆ ಎಂದು ನಾನು ಕೇಳಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ವೈರಲ್ ಆಗ್ತಿದೆ” ಎಂದು ಹೇಳಿದ್ದಾರೆ.
ಫ್ಯಾಷನ್ ಸೆನ್ಸ್ ಚೆನ್ನಾಗಿಲ್ಲ
ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮುನ್ನವೇ, ಮಾಲ್ತಿ ಅವರು ತಾನ್ಯಾ ಮಿತ್ತಲ್ ಅವರ ಫ್ಯಾಷನ್ ಸೆನ್ಸ್, ಡ್ರೆಸ್ಸಿಂಗ್ ಶೈಲಿಯನ್ನು "ಕಳಪೆ" ಎಂದಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋದಕೂಡಲೇ ಹೇಗೆ ಕಾಣಿಸಿಕೊಳ್ತಾರೆ ಅಂತ ಆಶ್ಚರ್ಯವಾಗಿದೆ ಎಂದಿದ್ದರು. ಮಾಲ್ತಿ ಚಾಹರ್ ಹಾಗೂ ತಾನ್ಯಾ ಮಿತ್ತಲ್ ನಡುವೆ ಮನಸ್ತಾಪ ಇದೆ.